Print Friendly, PDF & Email

[Mission 2022] ದೈನಂದಿನ ಪ್ರಚಲಿತ ಘಟನೆಗಳು ದಿನಾಂಕ – 21ನೇ ಆಗಸ್ಟ್ 2021

 

 

ಪರಿವಿಡಿ:

ಸಾಮಾನ್ಯ ಅಧ್ಯಯನ ಪತ್ರಿಕೆ 1:

1. ಮಹಾರಾಜ ರಂಜಿತ್ ಸಿಂಗ್.

2. 1921 ರ ಮಲಬಾರ್ ದಂಗೆ.

 

ಸಾಮಾನ್ಯ ಅಧ್ಯಯನ ಪತ್ರಿಕೆ 2:

1. PM-KUSUM ಯೋಜನೆ.

2. ಕರ್ನಾಟಕ ರಾಜ್ಯ ಮಾನಸಿಕ ಆರೋಗ್ಯ ಪ್ರಾಧಿಕಾರ.

3. ಚೀನಾದ ಮೂರು ಮಕ್ಕಳ ನೀತಿ.

 

ಸಾಮಾನ್ಯ ಅಧ್ಯಯನ ಪತ್ರಿಕೆ 3:

1. 1989 ರ ಮಾಂಟ್ರಿಯಲ್ ಪ್ರೋಟೋಕಾಲ್ ಮತ್ತು ಕಿಗಾಲಿ ತಿದ್ದುಪಡಿ

2. ‘ಐತಿಹಾಸಿಕ’ ಪರಮಾಣು ಸಮ್ಮಿಳನದಲ್ಲಿ ಯಶಸ್ಸನ್ನು ಸಾಧಿಸಲಾಗಿದೆ.

 

ಪೂರ್ವಭಾವಿ ಪರೀಕ್ಷೆಗೆ ಸಂಬಂಧಿಸಿದ ವಿದ್ಯಮಾನಗಳು:

1. ಅಫ್ಘಾನಿಸ್ತಾನದ ಹಜಾರಾಗಳು

2. ಬಿಜು ಸ್ವಾಸ್ಥ್ಯ ಕಲ್ಯಾಣ ಯೋಜನೆ.

 


ಸಾಮಾನ್ಯ ಅಧ್ಯಯನ ಪತ್ರಿಕೆ : 1


 

ವಿಷಯಗಳು: ಆಧುನಿಕ ಭಾರತದ ಇತಿಹಾಸ ಸುಮಾರು ಹದಿನೆಂಟನೆಯ ಶತಮಾನದ ಮಧ್ಯಭಾಗದಿಂದ ಇಂದಿನವರೆಗೆ- ಮಹತ್ವದ ಘಟನೆಗಳು, ವ್ಯಕ್ತಿತ್ವಗಳು, ಸಮಸ್ಯೆಗಳು.

ಮಹಾರಾಜ ರಂಜಿತ್ ಸಿಂಗ್:


ಸಸಂದರ್ಭ:

ಸಿಖ್ ಸಾಮ್ರಾಜ್ಯದ ಸ್ಥಾಪಕ ಮಹಾರಾಜ ರಂಜಿತ್ ಸಿಂಗ್ (Maharaja Ranjit Singh) ಅವರ ಒಂಬತ್ತು ಅಡಿ ಎತ್ತರದ   ಕುದುರೆ ಸವಾರಿಯ ಕಂಚಿನ ಪ್ರತಿಮೆಯನ್ನು ಈ ವಾರದ ಆರಂಭದಲ್ಲಿ ಲಾಹೋರ್  ಕೋಟೆಯಲ್ಲಿ ಧ್ವಂಸ ಮಾಡಲಾಗಿದೆ.

 1. ಪಾಕಿಸ್ತಾನದ ಅಲ್ಪಸಂಖ್ಯಾತರ ಮೇಲಿನ ಹಿಂಸಾಚಾರದ ಘಟನೆಗಳು “ಆತಂಕಕಾರಿ ದರದಲ್ಲಿ” ಹೆಚ್ಚುತ್ತಿವೆ ಎಂದು ಹೇಳುವ ಮೂಲಕ ಭಾರತವು ಇತ್ತೀಚಿನ ಬೆಳವಣಿಗೆಗಳ ಬಗ್ಗೆ ಕಳವಳ ವ್ಯಕ್ತಪಡಿಸಿದೆ.

ರಂಜಿತ್ ಸಿಂಗ್ ಮತ್ತು ಲಾಹೋರ್:

 1. ಮಹಾರಾಜ ರಂಜಿತ್ ಸಿಂಗ್ (1780-1839) 1799 ರಲ್ಲಿ ಹಿಂದೂ, ಮುಸ್ಲಿಂ ಮತ್ತು ಸಿಖ್ ಗಣ್ಯರು ಲಾಹೋರ್ ನಗರವನ್ನು ಆಳ್ವಿಕೆ ಮಾಡುವಂತೆ ಆಹ್ವಾನಿಸಿದ ನಂತರ ಲಾಹೋರ್ ಅನ್ನು ವಶಪಡಿಸಿಕೊಂಡರು.
 2. ಅವರು ಲಾಹೋರ್‌ಗೆ ಶಾಂತಿ ಮತ್ತು ಭದ್ರತೆಯನ್ನು ತಂದರು ಮತ್ತು ಅದರ ಆರ್ಥಿಕ ಮತ್ತು ಸಾಂಸ್ಕೃತಿಕ ವೈಭವವನ್ನು ಪುನರುಜ್ಜೀವನಗೊಳಿಸಿದರು.
 3. ಅವರು 1801 ರಲ್ಲಿ ತಮ್ಮನ್ನು ತಾವು ಪಂಜಾಬಿನ ಮಹಾರಾಜರೆಂದು ಘೋಷಿಸಿಕೊಂಡರು ಮತ್ತು ಸಿಖ್ಖರಲ್ಲದ ಇತರ ಸಮುದಾಯಗಳ ಬಗ್ಗೆಯೂ ಧಾರ್ಮಿಕ ಸಹಿಷ್ಣುತೆಯೊಂದಿಗೆ ಆಳ್ವಿಕೆ ಮಾಡಲು ಪ್ರಾರಂಭಿಸಿದರು.
 4. ಅವರು, ಚಕ್ರವರ್ತಿ ಅಕ್ಬರ್ ನಿರ್ಮಿಸಿದ್ದ ಲಾಹೋರ್ ಕೋಟೆಯ ರಿಪೇರಿ ಕೆಲಸಗಳನ್ನು ಕೈಗೊಂಡರು.

 

ಮಹಾರಾಜ ರಂಜಿತ್ ಸಿಂಗ್ ಕುರಿತು:

 1. ರಂಜಿತ್ ಸಿಂಗ್ ನವೆಂಬರ್ 13, 1780 ರಂದು ಪ್ರಸ್ತುತ ಪಾಕಿಸ್ತಾನದಲ್ಲಿರುವ ಗುಜ್ರಾನ್ ವಾಲಾದಲ್ಲಿ ಜನಿಸಿದರು. ಆ ಸಮಯದಲ್ಲಿ, ಪಂಜಾಬ್ ಅನ್ನು ಪ್ರಬಲ ನಗರ ಮುಖ್ಯಸ್ಥರು ಆಳ್ವಿಕೆ ಮಾಡುತ್ತಿದ್ದರು, ಅವರು ಈ ಪ್ರದೇಶವನ್ನು ಮಿಸ್ಲ್ (Misls) ಗಳಾಗಿ ವಿಭಜಿಸಿದ್ದರು.
 2. ರಣಜಿತ್ ಸಿಂಗ್ ಅವರು ಸಮಸ್ಯಾತ್ಮಕವಾದ ಈ ಮಿಸ್ಲ್ (Misls) ಗಳನ್ನು ಉರುಳಿಸಿದರು ಮತ್ತು 1799 ರಲ್ಲಿ ಲಾಹೋರ್ ಅನ್ನು ವಶಪಡಿಸಿಕೊಂಡ ನಂತರ ಏಕೀಕೃತ ಸಿಖ್ ಸಾಮ್ರಾಜ್ಯವನ್ನು ಸ್ಥಾಪಿಸಿದರು.
 3. ಲಾಹೋರ್‌ನಲ್ಲಿ ಅಫ್ಘಾನ್ ದಾಳಿಕೋರರ ಉಪಟಳವನ್ನು ತಡೆದ ಕಾರಣ ಆತನಿಗೆ ಪಂಜಾಬ್‌ನ ಸಿಂಹ (ಷೇರ್-ಇ-ಪಂಜಾಬ್ Sher-e-Punjab) ಎಂಬ ಬಿರುದನ್ನು ನೀಡಲಾಯಿತು, ಲಾಹೋರ್ ರಣಜಿತ್ ಸಿಂಗ್ ರವರ ಮರಣದವರೆಗೂ ಅವರ ರಾಜಧಾನಿಯಾಗಿ ಉಳಿಯಿತು.
 4. ಆತನ ಸೇನಾಧಿಪತಿ ಹರಿ ಸಿಂಗ್ ನಲ್ವಾ, ವಿದೇಶಿ ಆಡಳಿತಗಾರರು ಭಾರತದ ಮೇಲೆ ದಾಳಿ ಮಾಡಲು ಸಾಗಿದ ಮಾರ್ಗವಾದ ಖೈಬರ್ ಪಾಸ್ ನ ಮುಖಭಾಗದಲ್ಲಿ ಜಮರುದ್ ಕೋಟೆಯನ್ನು (Fort of Jamrud) ನಿರ್ಮಿಸಿದನು.
 5. ಅವರ ಮರಣದ ಸಮಯದಲ್ಲಿ, ಅವರು ಭಾರತದಲ್ಲಿ ಉಳಿದಿರುವ ಏಕೈಕ ಸಾರ್ವಭೌಮ ನಾಯಕ, ಉಳಿದವರೆಲ್ಲರೂ ಯಾವುದೋ ಒಂದು ರೀತಿಯಲ್ಲಿ ಈಸ್ಟ್ ಇಂಡಿಯಾ ಕಂಪನಿಯ ನಿಯಂತ್ರಣಕ್ಕೆ ಒಳಗಾಗಿದ್ದರು.

ಆಡಳಿತ:

 1. ಅವನು ತನ್ನ ಸೈನ್ಯಕ್ಕೆ ತರಬೇತಿ ನೀಡಲು ಹೆಚ್ಚಿನ ಸಂಖ್ಯೆಯ ಯುರೋಪಿಯನ್ ಅಧಿಕಾರಿಗಳನ್ನು, ವಿಶೇಷವಾಗಿ ಫ್ರೆಂಚ್ ಅಧಿಕಾರಿಗಳನ್ನು ನೇಮಿಸಿಕೊಂಡನು.
 2. ಅವರು ತಮ್ಮ ಸೇನೆಯನ್ನು ಆಧುನೀಕರಿಸಲು ಫ್ರೆಂಚ್ ಜನರಲ್ ಜೀನ್ ಫ್ರಾಂಕಿಸ್ ಅಲ್ಲಾರ್ಡ್ (French General Jean Franquis Allard) ಅವರನ್ನು ನೇಮಿಸಿದರು.

 

ಅವರ ಸಾಮ್ರಾಜ್ಯವು ಹಿಂದಿನ ಮೊಘಲ್ ಪ್ರಾಂತ್ಯಗಳಾದ ಲಾಹೋರ್ ಮತ್ತು ಮುಲ್ತಾನ್ ಅನ್ನು ಕಾಬೂಲ್ ಮತ್ತು ಇಡೀ ಪೇಶಾವರದ ಭಾಗವನ್ನು ಒಳಗೊಂಡಿತ್ತು. ಅವನ ರಾಜ್ಯದ ಗಡಿಗಳು ಲಡಾಖ್‌ ವರೆಗೆ ವಿಸ್ತರಿಸಿದ್ದವು – ಜಮ್ಮುವಿನಿಂದ ಜನರಲ್ ಆಗಿದ್ದ ಜೋರಾವರ್ ಸಿಂಗ್ ರಣಜಿತ್ ಸಿಂಗ್ ರವರ ಹೆಸರಿನಲ್ಲಿ ಈಶಾನ್ಯದಲ್ಲಿ ಲಡಾಖ್ ಅನ್ನು ವಶಪಡಿಸಿಕೊಂಡಿದ್ದನು. ವಾಯುವ್ಯದಲ್ಲಿ ಕೈಬರ್ ಪಾಸ್, ಮತ್ತು ದಕ್ಷಿಣದಲ್ಲಿ ಪಂಜಾಬ್‌ನ ಐದು ನದಿಗಳು ಸಿಂಧೂ ನದಿಯನ್ನು ಸೇರುವ ಪಂಜನಾಡ್ ವರೆಗೆ ವಿಸ್ತರಿಸಿತ್ತು.

ವಾಸ್ತುಶಿಲ್ಪಕ್ಕೆ ಕೊಡುಗೆಗಳು:

 1. ಅವರು ಅಮೃತಸರದಲ್ಲಿನ ಹರಿಮಂದಿರ್ ಸಾಹಿಬ್ ಅನ್ನು ಚಿನ್ನದ ಹೊದಿಕೆಯ ಮೂಲಕ ಗೋಲ್ಡನ್ ಟೆಂಪಲ್ /ಸುವರ್ಣ ಮಂದಿರ ಆಗಿ ಪರಿವರ್ತಿಸಿದರು.
 2. ಮಹಾರಾಷ್ಟ್ರದ ನಾಂದೇಡ್‌ನಲ್ಲಿರುವ ಗುರು ಗೋವಿಂದ್ ಸಿಂಗ್ ಅವರ ಅಂತಿಮ ವಿಶ್ರಾಂತಿ ಸ್ಥಳದಲ್ಲಿ ಹಜೂರ್ ಸಾಹಿಬ್ ಗುರುದ್ವಾರಕ್ಕೆ (Hazoor Sahib gurudwara) ಧನಸಹಾಯ ನೀಡಿದ ಕೀರ್ತಿಯೂ ಅವರಿಗೆ ಸಲ್ಲುತ್ತದೆ.

 

ವಿಷಯಗಳು: ಆಧುನಿಕ ಭಾರತದ ಇತಿಹಾಸ ಸುಮಾರು ಹದಿನೆಂಟನೆಯ ಶತಮಾನದ ಮಧ್ಯಭಾಗದಿಂದ ಇಂದಿನವರೆಗೆ- ಮಹತ್ವದ ಘಟನೆಗಳು, ವ್ಯಕ್ತಿತ್ವಗಳು, ಸಮಸ್ಯೆಗಳು.

1921 ರ ಮಲಬಾರ್ ದಂಗೆ:

(Malabar rebellion of 1921)

ಸಂದರ್ಭ:

ಆಗಸ್ಟ್ 20, ಮಲಬಾರ್ ದಂಗೆಯ ಶತಮಾನೋತ್ಸವದ ದಿನವಾಗಿದೆ, ಇದನ್ನು ಮೊಪ್ಲಾ (ಮುಸ್ಲಿಂ Moplah -Muslim) ದಂಗೆ ಎಂದೂ ಕರೆಯುತ್ತಾರೆ.

 1. ಇದನ್ನು ಸಾಮಾನ್ಯವಾಗಿ ದಕ್ಷಿಣ ಭಾರತದ ಮೊದಲ ರಾಷ್ಟ್ರೀಯತಾವಾದಿ ದಂಗೆಗಳಲ್ಲಿ ಒಂದೆಂದು ಪರಿಗಣಿಸಲಾಗಿದೆ.
 2. ಆದಾಗ್ಯೂ, ಮಲಬಾರ್ ಪ್ರದೇಶದಲ್ಲಿ ನೂರಾರು ಹಿಂದೂಗಳ ಸಾವಿಗೆ ಕಾರಣವಾದ ಈ ದಂಗೆಯು ಇತಿಹಾಸಕಾರರಲ್ಲಿ ಇನ್ನೂ ಚರ್ಚೆಯ ವಿಷಯವಾಗಿದೆ.

ಮಾಪಿಳ್ಳೆ ದಂಗೆ ಎಂದರೇನು?

1921 ರ ಮಾಪಿಳ್ಳೆ ದಂಗೆ ಅಥವಾ ಮೊಪ್ಲಾ ದಂಗೆ (ಮೊಪ್ಲಾ ಗಲಭೆಗಳು) (Mapilla rebellion or Moplah Rebellion (Moplah Riots)  19 ನೇ ಮತ್ತು 20 ನೇ ಶತಮಾನದ ಆರಂಭದಲ್ಲಿ ಮಲಬಾರ್ (ಉತ್ತರ ಕೇರಳ) ನಲ್ಲಿ ಬ್ರಿಟಿಷರು ಮತ್ತು ಹಿಂದೂ ಭೂಮಾಲೀಕರ / ಜಮೀನ್ದಾರರ ವಿರುದ್ಧ ಮೊಪ್ಲಾಗಳು (ಮಲಬಾರಿನ ಮುಸ್ಲಿಮರು) ನಡೆಸಿದ ಸರಣಿ ಗಲಭೆಗಳ ಪರಾಕಾಷ್ಠೆಯಾಗಿದೆ.

 1. 2021 ರ ವರ್ಷವು ದಂಗೆಯ 100 ನೇ ವಾರ್ಷಿಕೋತ್ಸವವನ್ನು ಆಚರಿಸುತ್ತದೆ.

 

ಮಾಪಿಳ್ಳೆ ದಂಗೆಗೆ ಕಾರಣಗಳು ಮತ್ತು ಪರಿಣಾಮಗಳು:

 1. ಬ್ರಿಟಿಷ್ ವಸಾಹತುಶಾಹಿ ಆಡಳಿತ ಮತ್ತು ಊಳಿಗಮಾನ್ಯ ವ್ಯವಸ್ಥೆಯ ವಿರುದ್ಧ ಆರಂಭವಾದ ಪ್ರತಿರೋಧವು ನಂತರ ಹಿಂದೂ ಮತ್ತು ಮುಸ್ಲಿಮರ ನಡುವೆ ಕೋಮುಗಲಭೆಯಾಗಿ ಪರ್ಯಾವಸನ ಗೊಂಡಿತು.
 2. ಗಾಂಧೀಜಿಯವರು ಭಾರತದ ಖಿಲಾಫತ್ ಚಳುವಳಿಯ ನಾಯಕರಾದ ಶೌಕತ್ ಅಲಿಯೊಂದಿಗೆ ಆಗಸ್ಟ್ 1920 ರಲ್ಲಿ ಕ್ಯಾಲಿಕಟ್ ಗೆ ಭೇಟಿ ನೀಡಿ ಅಸಹಕಾರ ಚಳುವಳಿ ಮತ್ತು ಖಿಲಾಫತ್ ನ ಸಂಯೋಜಿತ ಸಂದೇಶವನ್ನು ಮಲಬಾರ್ ನಿವಾಸಿಗಳಲ್ಲಿ ಹರಡಿದರು.
 3. ಗಾಂಧೀಜಿಯವರ ಕರೆಗೆ ಓಗೊಟ್ಟು, ಮಲಬಾರಿನಲ್ಲಿ ಖಿಲಾಫತ್ ಸಮಿತಿಯನ್ನು ರಚಿಸಲಾಯಿತು ಮತ್ತು ಮಾಪಿಳ್ಳೆಗಳು ಅವರ ಧಾರ್ಮಿಕ ಮುಖ್ಯಸ್ಥ ಪೊನ್ನಾನಿಯ ಮಹದುಮ್ ತಂಗಳ ಅವರ ನೇತ್ರತ್ವದಲ್ಲಿ ಅಸಹಕಾರ ಚಳುವಳಿಗೆ ಬೆಂಬಲವನ್ನು ನೀಡುವ ಪ್ರತಿಜ್ಞೆ ಮಾಡಿದರು.
 4. ಬಹುತೇಕ ಬಾಡಿಗೆದಾರರ ಕುಂದುಕೊರತೆಗಳು ವ್ಯವಸಾಯ ಮಾಡುವ ಭೂಮಿಯ ಮೇಲೆ ಕಾಲಮಿತಿಯ ಭದ್ರತೆ, ಹೆಚ್ಚಿನ ಬಾಡಿಗೆಗಳು, ನವೀಕರಣ ಶುಲ್ಕಗಳು ಮತ್ತು ಭೂಮಾಲೀಕರ ಇತರ ಅನ್ಯಾಯದ ಶೋಷಣೆಗಳಿಗೆ ಸಂಬಂಧಿಸಿವೆ.
 5. ಆದರೆ ಬ್ರಿಟಿಷ್ ಸರ್ಕಾರವು ಮಾಪಿಳ್ಳೆ ದಂಗೆಗೆ ಆಕ್ರಮಣಕಾರಿ ರೀತಿಯಲ್ಲಿ ಪ್ರತಿಕ್ರಿಯಿಸಿತು, ಮತ್ತು ಈ ದಂಗೆಯನ್ನು ನಿಗ್ರಹಿಸಲು ಗೂರ್ಖಾ ರೆಜಿಮೆಂಟ್‌ಗಳನ್ನು ಬಳಸಿದಷ್ಟೇ ಅಲ್ಲದೆ ಮತ್ತು ಮಾರ್ಷಿಯಲ್ ಕಾನೂನನ್ನು ವಿಧಿಸಿತು.

 

ವ್ಯಾಗನ್ ದುರಂತ:

ಬ್ರಿಟೀಷರ ದಮನಕಾರಿ ನೀತಿಯ ಒಂದು ಗಮನಾರ್ಹ ಘಟನೆಯೆಂದರೆ ವ್ಯಾಗನ್ ದುರಂತ. ಈ ವ್ಯಾಗನ್ ದುರಂತದಲ್ಲಿ ಸುಮಾರು 60 ಮಾಪಿಳ್ಳೆ ಖೈದಿಗಳನ್ನು ಜೈಲಿಗೆ ಕರೆದೊಯ್ಯುವ ಸಮಯದಲ್ಲಿ ಅವರನ್ನು ಮುಚ್ಚಿದ ರೈಲ್ವೇ ಗೂಡ್ಸ್ ವ್ಯಾಗನ್‌ನಲ್ಲಿ ಬಂಧಿಸಿದ್ದರ ಪರಿಣಾಮವಾಗಿ ಅವರು ಉಸಿರುಗಟ್ಟಿ ಸಾವನ್ನಪ್ಪಿದರು.

current affairs

 


ಸಾಮಾನ್ಯ ಅಧ್ಯಯನ ಪತ್ರಿಕೆ : 2


 

ವಿಷಯಗಳು: ಸರ್ಕಾರದ ನೀತಿಗಳು ಮತ್ತು ವಿವಿಧ ಕ್ಷೇತ್ರಗಳಲ್ಲಿನ ಅಭಿವೃದ್ಧಿಯ ಅಡಚಣೆಗಳು ಮತ್ತು ಅವುಗಳ ವಿನ್ಯಾಸ ಮತ್ತು ಅನುಷ್ಠಾನದಿಂದ ಉಂಟಾಗುವ ಸಮಸ್ಯೆಗಳು.

PM-KUSUM ಯೋಜನೆ:


(PM-KUSUM Scheme)

ಸಂದರ್ಭ:

ಇತ್ತೀಚೆಗೆ, ‘ಪ್ರಧಾನ ಮಂತ್ರಿ ಕಿಸಾನ್ ಉರ್ಜಾ ಸುರಕ್ಷಾ ಎವಂ ಉತ್ತನ್ ಮಹಾಭಿಯಾನ್’ (Pradhan Mantri Kisan Urja Suraksha evem Utthan Mahabhiyan / PPM-KUSUM) ಪಿಎಂ-ಕುಸುಮ್’ ಯೋಜನೆಯ ಅನುಷ್ಠಾನದ ಪ್ರಗತಿಯನ್ನು ಕೇಂದ್ರ ವಿದ್ಯುತ್ ಮತ್ತು ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವರು ಪರಿಶೀಲಿಸಿದ್ದಾರೆ.

ಪರಿಶೀಲನೆಯ ಸಮಯದಲ್ಲಿ, ಪ್ರಧಾನ ಮಂತ್ರಿ-ಕುಸುಮ್ ಯೋಜನೆ ಯ ಪ್ರಾಮುಖ್ಯತೆಯ ಕುರಿತು ಒತ್ತು ನೀಡಿದರು. ಇದು ರೈತರಿಗೆ ನೀರಾವರಿ ಚಟುವಟಿಕೆಗಳಿಗಾಗಿ ಹಗಲಿನ ಸಮಯದಲ್ಲಿ ವಿಶ್ವಾಸಾರ್ಹ ವಿದ್ಯುತ್ ಮೂಲವನ್ನು ಒದಗಿಸಲು ಮತ್ತು ಅವರ ಆದಾಯವನ್ನು ಹೆಚ್ಚಿಸಲು ಒತ್ತು ನೀಡುತ್ತದೆ.

 

‘ಪ್ರಧಾನ ಮಂತ್ರಿ-ಕುಸುಮ್ ಯೋಜನೆ’ (PM-KUSUM) ಯ ಕುರಿತು:

ಈ ಯೋಜನೆಯು ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವಾಲಯದ (Ministry of New and Renewable Energy) ಉಪಕ್ರಮವಾಗಿದೆ.

 1. ಈ ಯೋಜನೆಯಡಿ, ರೈತರಿಗಾಗಿ ದೇಶಾದ್ಯಂತ ಸೋಲಾರ್ ಪಂಪ್‌ಗಳು ಮತ್ತು ಗ್ರಿಡ್ ಸಂಪರ್ಕಿತ ಸೌರ ವಿದ್ಯುತ್ ಮತ್ತು ಇತರ ನವೀಕರಿಸಬಹುದಾದ ವಿದ್ಯುತ್ ಸ್ಥಾವರಗಳನ್ನು ಸ್ಥಾಪಿಸಲಾಗುವುದು.
 2. ಫೆಬ್ರವರಿ 2019 ರಲ್ಲಿ ಅನುಮೋದಿತವಾದ ಈ ಯೋಜನೆಯು ಆರ್ಥಿಕ ಮತ್ತು ನೀರಿನ ಭದ್ರತೆಯನ್ನು ಒದಗಿಸುವ ಗುರಿಯನ್ನು ಹೊಂದಿದೆ.
 3. 2022 ರ ವೇಳೆಗೆ ದೇಶದ ವಿದ್ಯುತ್ ಕ್ಷೇತ್ರದಲ್ಲಿ 25,750 MW ಸೌರ ವಿದ್ಯುತ್ ಮತ್ತು ಇತರ ನವೀಕರಿಸಬಹುದಾದ ಶಕ್ತಿ ಸಾಮರ್ಥ್ಯವನ್ನು ಸೇರಿಸುವುದು ಈ ಯೋಜನೆಯ ಗುರಿಯಾಗಿದೆ.

kusum, current affairs

 

ಯೋಜನೆಯ ಪ್ರಮುಖ ಲಕ್ಷಣಗಳು:

 1. ‘ಪ್ರಧಾನ ಮಂತ್ರಿ-ಕುಸುಮ್ ಯೋಜನೆ’ಯ ನಿಬಂಧನೆಗಳ ಪ್ರಕಾರ, ಗ್ರಿಡ್‌ಗೆ ಸಂಪರ್ಕ ಹೊಂದಿದ ಕೃಷಿ ಪಂಪ್‌ಗಳನ್ನು ಸೌರಶಕ್ತಿಯಿಂದ ನಡೆಸಲಾಗುತ್ತದೆ, ಇದಕ್ಕಾಗಿ ಕೇಂದ್ರ ಮತ್ತು ರಾಜ್ಯದಿಂದ 30% ಸಬ್ಸಿಡಿ ನೀಡಲಾಗುತ್ತದೆ ಮತ್ತು ರೈತರ ಕೊಡುಗೆ 40% ಆಗಿರುತ್ತದೆ.
 2. ಯೋಜನೆಯಡಿ, ಸೋಲಾರ್‌ಸೈಸೇಶನ್ ಅನ್ನು ಫೀಡರ್ ಮಟ್ಟದಲ್ಲಿ ಸೇರಿಸಲಾಗುವುದು. ಅಥವಾ ಈ ಯೋಜನೆಯು ಫೀಡರ್ ಮಟ್ಟದ ಸೋಲಾರ್‌ಸೈಸೇಶನ್ ಅನ್ನು ಒಳಗೊಂಡಿರುತ್ತದೆ.

 

ಯೋಜನೆಯ ಅನುಷ್ಠಾನ:

ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವಾಲಯದ (MNRE) ರಾಜ್ಯ ನೋಡಲ್ ಏಜೆನ್ಸಿಗಳು  ​​ (State Nodal Agencies) ಈ ಯೋಜನೆಯ ಅನುಷ್ಠಾನಕ್ಕಾಗಿ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳು, ಡಿಸ್ಕಾಮ್‌ಗಳು ಮತ್ತು ರೈತರೊಂದಿಗೆ ಸಮನ್ವಯ ಸಾಧಿಸುತ್ತವೆ.

 

ಈ ಯೋಜನೆಯ ಪ್ರಯೋಜನಗಳು:

 1. ಈ ಯೋಜನೆಯೊಂದಿಗೆ, ಗ್ರಾಮೀಣ ಭೂ ಮಾಲೀಕರಿಗೆ ಅವರ ಒಣ/ಕೃಷಿಯಲ್ಲದ ಭೂಮಿಯ ಬಳಕೆಯಿಂದ 25 ವರ್ಷಗಳ ಅವಧಿಗೆ ಶಾಶ್ವತ ಮತ್ತು ನಿರಂತರ ಆದಾಯದ ಮೂಲವು ಲಭ್ಯವಿರುತ್ತದೆ.
 2. ಸೌರ ವಿದ್ಯುತ್ ಯೋಜನೆಗಳನ್ನು ಸ್ಥಾಪಿಸಲು ಕಷಿ ಭೂಮಿಯನ್ನು ಆರಿಸಿದರೆ, ರೈತರು ತಮ್ಮ ಹೊಲಗಳಲ್ಲಿ ಬೆಳೆಗಳನ್ನು ಬೆಳೆಯುವುದನ್ನು ಮುಂದುವರಿಸಬಹುದು ಏಕೆಂದರೆ ಸೌರ ಫಲಕಗಳನ್ನು ರೈತರು ಬೆಳೆದ ಬೆಳೆಗಳ ಕನಿಷ್ಠ ಎತ್ತರದಲ್ಲಿ ಅಳವಡಿಸಲಾಗುತ್ತದೆ.
 3. ಸೋಲಾರ್ ಪಂಪ್‌ಗಳು, ಡೀಸೆಲ್-ಚಾಲಿತ ಪಂಪ್‌ಗಳನ್ನು ಚಾಲನೆ ಮಾಡುವಲ್ಲಿ ಆಗುತ್ತಿದ್ದ ಡೀಸೆಲ್ ಮೇಲಿನ ವೆಚ್ಚವನ್ನು ಉಳಿಸುತ್ತವೆ ಮತ್ತು ಡೀಸೆಲ್ ಪಂಪ್‌ಗಳಿಂದ ಉಂಟಾಗುವ ಹಾನಿಕಾರಕ ಮಾಲಿನ್ಯವನ್ನು ತಡೆಗಟ್ಟಲಾಗುತ್ತದೆ ಮತ್ತು ಸೋಲಾರ್ ಪಂಪ್‌ಗಳ ಮೂಲಕ ರೈತರಿಗೆ ನೀರಾವರಿಯ ವಿಶ್ವಾಸಾರ್ಹ ಮೂಲವನ್ನು ಒದಗಿಸಲಾಗುತ್ತದೆ.

 

ವಿಷಯಗಳು: ಆರೋಗ್ಯ, ಶಿಕ್ಷಣ, ಸಾಮಾಜಿಕ ವಲಯ / ಸೇವೆಗಳ ಅಭಿವೃದ್ಧಿ ಮತ್ತು ನಿರ್ವಹಣೆಗೆ ಸಂಬಂಧಿಸಿದ ಮಾನವ ಸಂಪನ್ಮೂಲ ಸಂಬಂಧಿತ ವಿಷಯಗಳು.

ಕರ್ನಾಟಕ ರಾಜ್ಯ ಮಾನಸಿಕ ಆರೋಗ್ಯ ಪ್ರಾಧಿಕಾರ:


(Karnataka State Mental Health Authority)

ಸಂದರ್ಭ:

ಕರ್ನಾಟಕ ರಾಜ್ಯ ಮಾನಸಿಕ ಆರೋಗ್ಯ ಪ್ರಾಧಿಕಾರದ ರಚನೆ ಪ್ರಕ್ರಿಯೆ ಜಾರಿಯಲ್ಲಿದೆ.

ಮಾನಸಿಕ ಆರೋಗ್ಯ ಎಂದರೇನು?

ವಿಶ್ವ ಆರೋಗ್ಯ ಸಂಸ್ಥೆಯ (WHO) ಪ್ರಕಾರ, ಮಾನಸಿಕ ಆರೋಗ್ಯವು  (MENTAL HEALTH) ಒಬ್ಬ ವ್ಯಕ್ತಿಯು ತನ್ನ ಸ್ವಂತ ಸಾಮರ್ಥ್ಯಗಳನ್ನು ಅರಿತುಕೊಳ್ಳುವ, ಜೀವನದ ಸಾಮಾನ್ಯ ಒತ್ತಡಗಳನ್ನು ನಿಭಾಯಿಸುವ, ಉತ್ಪಾದಕವಾಗಿ ಕೆಲಸ ಮಾಡುವ ಮತ್ತು ಅವನ ಅಥವಾ ಅವಳ ಸಮುದಾಯಕ್ಕೆ ಕೊಡುಗೆ ನೀಡಲು ಸಮರ್ಥವಾಗಿರುವ ಯೋಗಕ್ಷೇಮದ ಆರೋಗ್ಯಪೂರ್ಣ ಸ್ಥಿತಿಯಾಗಿದೆ.

current affairs

 

ಪ್ರಸ್ತುತ ಮಾನಸಿಕ ಆರೋಗ್ಯ ಪ್ರಾಧಿಕಾರದ ಅವಶ್ಯಕತೆ:

 1. COVID-19 ಸಾಂಕ್ರಾಮಿಕ ರೋಗದ ನಂತರದ ಮಾನಸಿಕ ಆರೋಗ್ಯ ಸಮಸ್ಯೆಗಳು ‘ಸಾಮಾನ್ಯ’ ಜನರು ‘ಅಸಾಧಾರಣ ಸನ್ನಿವೇಶಗಳಿಗೆ’ ಒಡ್ಡಿಕೊಳ್ಳುವುದರಿಂದ ಉಂಟಾಗುತ್ತಿರುವುದು ಕಂಡುಬರುತ್ತಿದೆ.
 2. ಇಂತಹ ಪ್ರಕರಣಗಳು ಅಸಂಖ್ಯಾತವಾಗಿದ್ದು, ಇದರಲ್ಲಿ ಆತಂಕ, ಖಿನ್ನತೆಯಂತಹ ಭಾವನಾತ್ಮಕ ಸಮಸ್ಯೆಗಳು, ನಿದ್ರಾಹೀನತೆ, ಹಸಿವಾಗದಿರುವಿಕೆಯಂತಹ ಜೈವಿಕ ಪರಿಣಾಮಗಳು, ಮಾದಕ ಪದಾರ್ಥಗಳ ದುರ್ಬಳಕೆ ಮತ್ತು  ಆಘಾತಕಾರಿ ನೋವುಗಳನ್ನು ಒಳಗೊಂಡಿದೆ.
 3. ಕೌಟುಂಬಿಕ ದೌರ್ಜನ್ಯವನ್ನು ಎದುರಿಸುತ್ತಿರುವ ಮಹಿಳೆಯರು, ಮಕ್ಕಳು ಮತ್ತು ವೃದ್ಧರಂತಹ ದುರ್ಬಲರಿಗೆ ಸವಾಲುಗಳು ಸಂಕೀರ್ಣವಾಗಿವೆ, ಕಾರಣ ಹೆಚ್ಚಿದ ಸಾಮಾಜಿಕ ಅಂತರ, ಹೆಚ್ಚಿದ ಪರದೆಯ ಸಮಯ ಮತ್ತು ಬಡತನವು ಅವರ ಮಾನಸಿಕ ಆರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮ ಬೀರಿದೆ.

 

ಭಾರತದಲ್ಲಿ ಮಾನಸಿಕ ಆರೋಗ್ಯದ ಬಗ್ಗೆ ಗಮನಾರ್ಹ ಸಂಗತಿಗಳು:

WHO (2020) ಪ್ರಕಾರ:

 1. ಜಾಗತಿಕವಾಗಿ ಸಂಭವಿಸುವ ಆತ್ಮಹತ್ಯೆಗಳಲ್ಲಿ ಭಾರತದ ಪಾಲು ಶೇ .36.6 ರಷ್ಟು.
 2. ಸುಮಾರು 7.5 ಪ್ರತಿಶತ ಭಾರತೀಯರು ಕೆಲವು ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದಾರೆ ಮತ್ತು 2020 ರ ಅಂತ್ಯದ ವೇಳೆಗೆ ಈ ಸಂಖ್ಯೆಯು ಸರಿಸುಮಾರು 20 ಪ್ರತಿಶತದಷ್ಟು ತೀವ್ರತರವಾಗಿ ಹೆಚ್ಚಾಗುವ ಸಾಧ್ಯತೆಗಳಿವೆ.
 3. ಅಂಕಿ-ಸಂಖ್ಯೆಗಳ ಪ್ರಕಾರ, 56 ಮಿಲಿಯನ್ ಭಾರತೀಯರು ಖಿನ್ನತೆಯಿಂದ ಬಳಲುತ್ತಿದ್ದಾರೆ ಮತ್ತು 38 ಮಿಲಿಯನ್ ಭಾರತೀಯರು ಆತಂಕದ ಅಸ್ವಸ್ಥತೆಗಳಿಂದ ಬಳಲುತ್ತಿದ್ದಾರೆ.
 4. ಅಂಗವೈಕಲ್ಯ ಸರಿಹೊಂದಿಸಿದ ಜೀವನ ವರ್ಷ (DALYs-Disability adjusted life year) ಗಳನ್ನು ಉಲ್ಲೇಖಿಸಿ ಭಾರತದ ಒಟ್ಟು ರೋಗದ ಹೊರೆಗೆ ಮಾನಸಿಕ ಅಸ್ವಸ್ಥತೆಗಳ ಕೊಡುಗೆ 1990 ರಲ್ಲಿ 2.5% ರಿಂದ 2017 ರಲ್ಲಿ 4.7% ಕ್ಕೆ ಏರಿದೆ.
 5. ಆದರೆ, ಪ್ರತಿ 100,000 ಜನಸಂಖ್ಯೆಗೆ ಮನೋವೈದ್ಯರು (0.3), ದಾದಿಯರು (0.12), ಮನಶ್ಶಾಸ್ತ್ರಜ್ಞರು (0.07) ಮತ್ತು ಸಾಮಾಜಿಕ ಕಾರ್ಯಕರ್ತರು (0.07), ಆದರೆ ಅಪೇಕ್ಷಣೀಯ ಸಂಖ್ಯೆ 100,000 ಜನಸಂಖ್ಯೆಗೆ 3 ಮನೋವೈದ್ಯರು ಮತ್ತು ಮನಶ್ಶಾಸ್ತ್ರಜ್ಞರಿಗಿಂತ ಹೆಚ್ಚಾಗಿರ ಬೇಕೆಂಬುದಾಗಿದೆ.

 

ಮಾನಸಿಕ ಆರೋಗ್ಯಕ್ಕಾಗಿ ಸಾಂವಿಧಾನಿಕ ಮತ್ತು ಶಾಸನಾತ್ಮಕ ಆದೇಶಗಳು:

ಅನುಚ್ಛೇದ 21 ರ ಪ್ರಕಾರ – ಘನತೆಯಿಂದ ಬದುಕುವ ಹಕ್ಕು ಮಾನಸಿಕ ಆರೋಗ್ಯ ರಕ್ಷಣೆಯನ್ನು ಪಡೆಯುವ ಹಕ್ಕನ್ನು ಒಳಗೊಂಡಿದೆ. (ಇದನ್ನು ಮಾನಸಿಕ ಆರೋಗ್ಯ ರಕ್ಷಣೆ ಕಾಯ್ದೆ 2017 ರ ಅಡಿಯಲ್ಲಿ ಗುರುತಿಸಲಾಗಿದೆ).

ವಿಧಿ 47 ರ ಪ್ರಕಾರ ಸಾರ್ವಜನಿಕರ ಪೌಷ್ಟಿಕತೆಯ ಮಟ್ಟ ಮತ್ತು ಜೀವನ ಮಟ್ಟವನ್ನು ಹೆಚ್ಚಿಸುವುದು ಮತ್ತು ಸಾರ್ವಜನಿಕ ಆರೋಗ್ಯವನ್ನು ಸುಧಾರಿಸುವುದು ರಾಜ್ಯದ ಕರ್ತವ್ಯವಾಗಿದೆ.

ಮಾನಸಿಕ ಅಸ್ವಸ್ಥತೆ ಹೊಂದಿರುವ ಪ್ರತಿಯೊಬ್ಬ ವ್ಯಕ್ತಿಯೂ ಘನತೆಯಿಂದ ಬದುಕುವ ಹಕ್ಕನ್ನು ಹೊಂದಿರಬೇಕು ಎಂಬ ತನ್ನ ತೀರ್ಪನ್ನು ಇತ್ತೀಚಿಗೆ ವರಿಷ್ಠ ನ್ಯಾಯಾಲಯವು  ಪುನರುಚ್ಚರಿಸಿದೆ.

 

ಮಾನಸಿಕ ಆರೋಗ್ಯ ರಕ್ಷಣೆ ಕಾಯಿದೆ, 2017:

 1. ಪ್ರಾಧಿಕಾರದ ರಚನೆ– ಕೇಂದ್ರ ಮಾನಸಿಕ ಆರೋಗ್ಯ ಪ್ರಾಧಿಕಾರ ಮತ್ತು ರಾಜ್ಯ ಮಾನಸಿಕ ಆರೋಗ್ಯ ಪ್ರಾಧಿಕಾರದ ಸ್ಥಾಪನೆ.
 2. ಮಂಡಳಿಯ ರಚನೆ: ರಾಜ್ಯ ಪ್ರಾಧಿಕಾರದಿಂದ ಮಾನಸಿಕ ಆರೋಗ್ಯ ಪರಿಶೀಲನಾ ಮಂಡಳಿಯ ರಚನೆ.
 3. ಆತ್ಮಹತ್ಯೆಯ ನಿರಪರಾಧೀಕರಣ– ಆತ್ಮಹತ್ಯೆಗೆ ಯತ್ನಿಸುವ ವ್ಯಕ್ತಿಯು ಆ ಸಮಯದಲ್ಲಿ ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದನೆಂದು ಭಾವಿಸಲಾಗುತ್ತದೆ ಮತ್ತು ಭಾರತೀಯ ದಂಡ ಸಂಹಿತೆಯ ಅಡಿಯಲ್ಲಿ ಶಿಕ್ಷೆಗೆ ಒಳ ಪಡಿಸಲಾಗುವುದಿಲ್ಲ.
 4. ಎಲೆಕ್ಟ್ರೋ-ಕನ್ವಲ್ಸಿವ್ ಥೆರಪಿಯನ್ನು ನಿಷೇಧಿಸುವುದು- ಎಲೆಕ್ಟ್ರೋ-ಕನ್ವಲ್ಸಿವ್ ಥೆರಪಿಯನ್ನು (Electroconvulsive therapy / ECT) ಸ್ನಾಯು ಸಡಿಲಗೊಳಿಸುವಿಕೆ ಮತ್ತು ಅರಿವಳಿಕೆ ಬಳಕೆಯೊಂದಿಗೆ ಮಾತ್ರ ಅನುಮತಿಸಲಾಗುತ್ತದೆ. ಅಪ್ರಾಪ್ತ ವಯಸ್ಕರಿಗೆ ಎಲೆಕ್ಟ್ರೋ-ಕನ್ವಲ್ಸಿವ್ ಚಿಕಿತ್ಸೆಯನ್ನು ನಿಷೇಧಿಸಲಾಗಿದೆ.
 5. ಅಡ್ವಾನ್ಸ್ ಡೈರೆಕ್ಟಿವ್– ಈ ಕಾಯಿದೆಯು ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿರುವ ವ್ಯಕ್ತಿಗೆ ಆತ/ಅವಳು ತನ್ನ ಅನಾರೋಗ್ಯಕ್ಕೆ ಹೇಗೆ ಚಿಕಿತ್ಸೆ ನೀಡಬೇಕೆಂದು  ಬಯಸುತ್ತಾನೆ ಎಂಬುದನ್ನು ತಿಳಿಸುವ ಮುಂಗಡ ನಿರ್ದೇಶನವನ್ನು (advance directive) ನೀಡಲು ಅಧಿಕಾರ ನೀಡುತ್ತದೆ.
 6. ವಿಮೆ: ಕಾಯಿದೆಯು ಪ್ರತಿ ವಿಮಾದಾರನು ದೈಹಿಕ ಅನಾರೋಗ್ಯದ ಚಿಕಿತ್ಸೆಗೆ ಲಭ್ಯವಿರುವ ಅದೇ ಆಧಾರದಲ್ಲಿಯೇ ಮಾನಸಿಕ ಅಸ್ವಸ್ಥತೆಯ ಚಿಕಿತ್ಸೆಗೂ ಸಹ ವೈದ್ಯಕೀಯ ವಿಮೆಯನ್ನು ಒದಗಿಸುವುದನ್ನು ಕಡ್ಡಾಯಗೊಳಿಸಲಾಗಿದೆ ಎಂದು ತಿಳಿಸುತ್ತದೆ.

 

ಮಾನಸಿಕ ಅಸ್ವಸ್ಥತೆ ಹೊಂದಿರುವ ವ್ಯಕ್ತಿಗಳ ಹಕ್ಕುಗಳು:

 1. ಪ್ರತಿಯೊಬ್ಬ ವ್ಯಕ್ತಿಯು ಸರ್ಕಾರದಿಂದ ನಡೆಸಲ್ಪಡುವ ಅಥವಾ ಧನಸಹಾಯ ನೀಡುವ ಸೇವೆಗಳಿಂದ ಮಾನಸಿಕ ಆರೋಗ್ಯ ರಕ್ಷಣೆ ಮತ್ತು ಚಿಕಿತ್ಸೆ ಪಡೆಯುವ ಹಕ್ಕನ್ನು ಹೊಂದಿರುತ್ತಾರೆ.
 2. ಅಮಾನವೀಯ ಮತ್ತು ಅವಹೇಳನಕಾರಿ ಚಿಕಿತ್ಸೆಯಿಂದ ರಕ್ಷಣೆ.
 3. ವ್ಯಕ್ತಿಯ ಮಾನಸಿಕ ಆರೋಗ್ಯಕ್ಕೆ ಸಂಬಂಧಿಸಿದಂತೆ ಗೌಪ್ಯತೆಯ ಹಕ್ಕು.

ಈ ಸಮಯದ ಅವಶ್ಯಕತೆ:

 1. ಒಟ್ಟಾರೆ ಆರೋಗ್ಯ ಬಜೆಟ್ ನಲ್ಲಿ ಮಾನಸಿಕ ಆರೋಗ್ಯ ರಕ್ಷಣೆಗಾಗಿ ಮಾಡುವ ವೆಚ್ಚದ ಪ್ರಮಾಣವನ್ನು ಹೆಚ್ಚಿಸಬೇಕು.
 2. ತರಬೇತಿ ಪಡೆದ ಮಾನಸಿಕ ಆರೋಗ್ಯ ಕಾರ್ಯಕರ್ತರ ಸಂಖ್ಯೆಯನ್ನು ಹೆಚ್ಚಿಸುವುದು.
 3. ‘ಸ್ವಚ್ಛ ಮಾನಸಿಕತಾ ಅಭಿಯಾನ’ (Swach Mansikta Abhiyan) ದಂತಹ ಕಾರ್ಯಕ್ರಮಗಳ ಮೂಲಕ ಮಾನಸಿಕ ಅಸ್ವಸ್ಥತೆಗೆ ಸಂಬಂಧಿಸಿದ ಕಳಂಕವನ್ನು ನಿಭಾಯಿಸಲು ಬೃಹತ್ ಜಾಗೃತಿ ಮತ್ತು ಸೂಕ್ಷ್ಮತೆಯನ್ನು ಹೆಚ್ಚಿಸುವುದು.

current affairs

 

ವಿಷಯಗಳು:ಅನಿವಾಸಿ ಭಾರತೀಯರು ಮತ್ತು ಭಾರತದ ಹಿತಾಸಕ್ತಿಗಳ ಮೇಲೆ ಅಭಿವೃದ್ಧಿ ಹೊಂದಿದ ಮತ್ತು ಅಭಿವೃದ್ಧಿ ಹೊಂದುತ್ತಿರುವ ದೇಶಗಳ ನೀತಿಗಳು ಮತ್ತು ರಾಜಕೀಯದ ಪರಿಣಾಮಗಳು.

ಚೀನಾದ ಮೂರು ಮಕ್ಕಳ ನೀತಿ:


(China’s three-child policy)

ಸಂದರ್ಭ:

ಚೀನಾದ ಶಾಸಕಾಂಗವು ಔಪಚಾರಿಕವಾಗಿ ದೇಶದ ಕುಟುಂಬ ಯೋಜನಾ ನಿಯಮಗಳನ್ನು ತಿದ್ದುಪಡಿ ಮಾಡಿ ದಂಪತಿಗಳಿಗೆ ಮೂರು ಮಕ್ಕಳನ್ನು ಹೊಂದಲು ಅನುವು ಮಾಡಿಕೊಡುತ್ತದೆ, ಜೊತೆಗೆ ಕುಸಿಯುತ್ತಿರುವ ಜನನ ಪ್ರಮಾಣವನ್ನು ಹೆಚ್ಚಿಸುವ ಉದ್ದೇಶದಿಂದ ಹಲವಾರು ನೀತಿ ನಿರೂಪಣ ಕ್ರಮಗಳನ್ನು ಘೋಷಿಸಿದೆ.

ಚೀನಾ ಈ ಕ್ರಮ ಕೈಗೊಳ್ಳಲು ಕಾರಣವೇನು?

ಚೀನಾದಲ್ಲಿ ಹತ್ತು ವರ್ಷಕ್ಕೊಮ್ಮೆ ನಡೆಯುವ ಜನಗಣತಿಯ ಹಿನ್ನೆಲೆಯಲ್ಲಿ ಈ ಬದಲಾವಣೆಗಳು ಕಂಡು ಬಂದಿವೆ, ಇದು ಕಳೆದ ಒಂದು ದಶಕದಲ್ಲಿ ಆ ದೇಶದಲ್ಲಿ ಜನನ ದರಗಳು ಕ್ಷೀಣಿಸುತ್ತಿರುವ ಕುರಿತು ಮಾಹಿತಿ ನೀಡುತ್ತದೆ.

 1. ನ್ಯಾಷನಲ್ ಬ್ಯೂರೊ ಆಫ್ ಸ್ಟ್ಯಾಟಿಸ್ಟಿಕ್ಸ್ ಕಳೆದ ವರ್ಷ 12 ಮಿಲಿಯನ್ ಶಿಶುಗಳು ಜನಿಸಿವೆ, ಆದರೆ ಇದು 1961 ರ ನಂತರದ ಅತ್ಯಂತ ಕಡಿಮೆ ಜನನ ಸಂಖ್ಯೆಯಾಗಿದೆ ಎಂದು ತಿಳಿಸಿದೆ.

 

ಮೊದಲನೆಯದಾಗಿ, ಚೀನಾದಲ್ಲಿ ಒಂದು ಮಗುವಿನ ನೀತಿಯನ್ನು ಏಕೆ ಜಾರಿಗೊಳಿಸಲಾಯಿತು?

ಚೀನಾ, ಒಂದು ಮಗು ನೀತಿ’ ಯನ್ನು 1980 ರಲ್ಲಿ ಪರಿಚಯಿಸಿತು, ಆ ಸಮಯದಲ್ಲಿ ಚೀನಾದ ಜನಸಂಖ್ಯೆಯು ಒಂದು ಶತಕೋಟಿ ಸಮೀಪಿಸುತ್ತಿತ್ತು ಮತ್ತು ದೇಶದ ಹೆಚ್ಚುತ್ತಿರುವ ಜನಸಂಖ್ಯೆಯು ಆರ್ಥಿಕ ಪ್ರಗತಿಗೆ ಅಡ್ಡಿಯಾಗುತ್ತದೆ ಎಂದು ಕಮ್ಯುನಿಸ್ಟ್ ಪಕ್ಷವು ಕಳವಳ ವ್ಯಕ್ತಪಡಿಸಿತು.

 1. ಈ ನೀತಿಯನ್ನು ಜಾರಿಗೆ ತರಲು ಹಲವಾರು ವಿಧಾನಗಳನ್ನು ಅಳವಡಿಸಿಕೊಳ್ಳಲಾಯಿತು, ಇದರಲ್ಲಿ ಒಂದು ಮಗುವನ್ನು ಹೊಂದುವ ಕುಟುಂಬಗಳಿಗೆ ಆರ್ಥಿಕ ಪ್ರೋತ್ಸಾಹ ನೀಡುವುದು, ಗರ್ಭನಿರೋಧಕಗಳನ್ನು ವ್ಯಾಪಕವಾಗಿ ಲಭ್ಯವಾಗುವಂತೆ ಮಾಡುವುದು ಮತ್ತು ನೀತಿ ಉಲ್ಲಂಘಿಸುವವರ ವಿರುದ್ಧ ನಿರ್ಬಂಧಗಳನ್ನು ವಿಧಿಸುವುದು ಇತ್ಯಾದಿ.

ಈ ನೀತಿಗೆ ಸಂಬಂಧಿಸಿದ ಟೀಕೆಗಳು:

ಈ ನೀತಿಯನ್ನು ಚೀನಾದ ಅಧಿಕಾರಿಗಳು ದೀರ್ಘಕಾಲದವರೆಗೆ ಯಶಸ್ವಿಯಾಗಿಸಿದ್ದಾರೆ ಮತ್ತು ಈ ನೀತಿಯು ಸುಮಾರು 400 ಮಿಲಿಯನ್ ಜನರು ಜನಿಸುವುದನ್ನು ತಡೆದಿದ್ದು ಆ ಮೂಲಕ ದೇಶವನ್ನು  ತೀವ್ರವಾದ ಆಹಾರ ಮತ್ತು ನೀರಿನ ಕೊರತೆಯಂತಹ ಸಮಸ್ಯೆಗಳಿಂದ ಪಾರಾಗಲು ಸಹಾಯ ಮಾಡಿದೆ ಎಂದು ಹೇಳಲಾಗಿದೆ.

ಆದಾಗ್ಯೂ, ಮಗುವನ್ನು ಹೊಂದುವ ಮಿತಿಯು ದೇಶದಲ್ಲಿ ಅಸಮಾಧಾನಕ್ಕೆ ಕಾರಣವಾಗಿದೆ, ಉದಾಹರಣೆಗೆ:

 1. ಇದಕ್ಕಾಗಿ ಬಲವಂತದ ಗರ್ಭಪಾತ ಮತ್ತು ಸಂತಾನಹರಣ ಶಸ್ತ್ರಚಿಕಿತ್ಸೆಯಂತಹ ಕ್ರೂರ ತಂತ್ರಗಳನ್ನು ರಾಜ್ಯವು ಬಳಸಿಕೊಂಡಿತು.
 2. ಈ ನೀತಿಯು ಬಡ ಚೀನೀಯರಿಗೆ ಸಾಕಷ್ಟು ಅನ್ಯಾಯಕರವಾಗಿತ್ತು, ಏಕೆಂದರೆ ಶ್ರೀಮಂತರು ನೀತಿಯನ್ನು ಉಲ್ಲಂಘಿಸಿದ್ದಕ್ಕಾಗಿ ಆರ್ಥಿಕ ನಿರ್ಬಂಧಗಳನ್ನು ಪಾವತಿಸಬಹುದಾಗಿತ್ತು ಆದರೆ ಬಡವರಿಗೆ, ಶಿಕ್ಷೆಯಾಗಿತ್ತು.
 3. ಈ ನೀತಿಯ ಅನುಷ್ಠಾನದ ಸಮಯದಲ್ಲಿ ಮಾನವ ಹಕ್ಕುಗಳನ್ನು ಉಲ್ಲಂಘಿಸಲಾಗಿದೆ.
 4. ಇದು ಸಾಮಾಜಿಕ ನಿಯಂತ್ರಣದ ಸಾಧನವಾಗಿ ಸಂತಾನೋತ್ಪತ್ತಿ ಮಿತಿಗಳನ್ನು ಜಾರಿಗೊಳಿಸಲು ದಾರಿಮಾಡಿಕೊಟ್ಟಿತು.
 5. ಇದು ಪುರುಷರ ಪರವಾಗಿ ಲಿಂಗ ಅನುಪಾತದ ಮೇಲೆ ಪರಿಣಾಮ ಬೀರಿತು.(ಅಂದರೆ ಪುರುಷರ ಸಂಖ್ಯೆಯಲ್ಲಿ ಹೆಚ್ಚಳ).
 6. ಇದು ಹೆಣ್ಣು ಭ್ರೂಣಗಳ ಗರ್ಭಪಾತದ ಹೆಚ್ಚಳಕ್ಕೆ ಕಾರಣವಾಯಿತು ಮತ್ತು ಅದೇ ರೀತಿ ಅನಾಥಾಶ್ರಮಗಳಲ್ಲಿ ಇರಿಸಲ್ಪಟ್ಟ ಹುಡುಗಿಯರ ಸಂಖ್ಯೆಯೂ ಹೆಚ್ಚಾಯಿತು.
 7. ಈ ಕಾರಣದಿಂದಾಗಿ, ಚೀನಾದಲ್ಲಿ ವೃದ್ಧರ ಸಂಖ್ಯೆ ಇತರ ದೇಶಗಳಿಗಿಂತ ವೇಗವಾಗಿ ಹೆಚ್ಚಾಗಿದೆ, ಇದು ದೇಶದ ಅಭಿವೃದ್ಧಿ ಸಾಮರ್ಥ್ಯದ ಮೇಲೆ ಪರಿಣಾಮ ಬೀರಿತು.

ಈ ನೀತಿಯನ್ನು ಏಕೆ ನಿಲ್ಲಿಸಲಾಯಿತು?

ವೇಗವಾಗಿ ಹೆಚ್ಚುತ್ತಿರುವ ವಯಸ್ಸಾದ ಜನಸಂಖ್ಯೆಯಿಂದಾಗಿ ಆರ್ಥಿಕ ಅಭಿವೃದ್ಧಿಗೆ ಹಾನಿಯಾಗಬಹುದೆಂಬ ಭಯದಿಂದ ಆಡಳಿತಾರೂಢ  ಕಮ್ಯುನಿಸ್ಟ್ ಪಕ್ಷವು ಪ್ರತಿ ವಿವಾಹಿತ ದಂಪತಿಗಳಿಗೆ ಇಬ್ಬರು ಮಕ್ಕಳನ್ನು ಹೊಂದಲು ಅನುವು ಮಾಡಿಕೊಡುವ ಉದ್ದೇಶದಿಂದ ‘ಒಂದು-ಮಗು ನೀತಿ’ ಯನ್ನು ಸ್ಥಗಿತಗೊಳಿಸಿತು.

 

ಮುಂದಿನ ಸುಧಾರಣೆಗಳ ಅಗತ್ಯವೇನು?

‘ಒಂದು ಮಗು ನೀತಿ’ಗೆ ವಿನಾಯಿತಿ ನೀಡಿದ್ದರಿಂದಾಗಿ ದೇಶದ ಯುವಜನರ ಪ್ರಮಾಣದಲ್ಲಿ ಸ್ವಲ್ಪ ಸುಧಾರಣೆಯನ್ನು ತಂದಿದ್ದರೂ,’ ಸನ್ನಿಹಿತವಾದ ಜನಸಂಖ್ಯಾ ಬಿಕ್ಕಟ್ಟನ್ನು ‘ತಪ್ಪಿಸಲು ಈ ನೀತಿ ಬದಲಾವಣೆಯು ಸಾಕಷ್ಟಿಲ್ಲ(ಅಪರಿಪೂರ್ಣ)ವೆಂದು ಪರಿಗಣಿಸಲಾಗಿದೆ.

ಮುಂದೆ ಇರುವ ಸವಾಲುಗಳು:

ಸಂತಾನೋತ್ಪತ್ತಿ ಹಕ್ಕುಗಳ ಮೇಲಿನ ಮಿತಿಗಳ ಸಡಿಲಗೊಳಿಸುವಿಕೆಯೊಂದೇ ಸನ್ನಿಹಿತವಾದ ಅನಗತ್ಯ ಜನಸಂಖ್ಯಾ ಬದಲಾವಣೆಯನ್ನು ತಪ್ಪಿಸಲು ಹೆಚ್ಚು ಸಹಾಯ ಮಾಡುವುದಿಲ್ಲ ಎಂದು ತಜ್ಞರು ಹೇಳುತ್ತಾರೆ.

 

ಪ್ರಸ್ತುತ ಕಡಿಮೆ ಮಕ್ಕಳು ಜನಿಸಲು ಈ ಕೆಳಗಿನವುಗಳು ಮುಖ್ಯ ಕಾರಣಗಳಾಗಿವೆ:

 1. ಹೆಚ್ಚುತ್ತಿರುವ ಜೀವನ ವೆಚ್ಚ, ಶಿಕ್ಷಣ ಮತ್ತು ವಯಸ್ಸಾದ ಪೋಷಕರ ನಿರ್ವಹಣೆ.
 2. ದೇಶದಲ್ಲಿ ಇರುವ ಸುದೀರ್ಘ ಸಮಯದವರೆಗೆ ಕೆಲಸ ಮಾಡುವ ಸಂಸ್ಕೃತಿ.
 3. ಅನೇಕ ದಂಪತಿಗಳು ಒಂದು ಮಗು ಸಾಕು ಎಂಬ ಭಾವನೆ ಹೊಂದಿದ್ದಾರೆ, ಮತ್ತು ಕೆಲವರು ಮಕ್ಕಳನ್ನು ಹೊಂದಲು ಯಾವುದೇ ಆಸಕ್ತಿಯನ್ನು ತೋರಿಸುತ್ತಿಲ್ಲ.

 


ಸಾಮಾನ್ಯ ಅಧ್ಯಯನ ಪತ್ರಿಕೆ : 3


 

ವಿಷಯಗಳು: ಸಂರಕ್ಷಣೆ, ಪರಿಸರ ಮಾಲಿನ್ಯ ಮತ್ತು ಅವನತಿ, ಪರಿಸರ ಪ್ರಭಾವದ ಮೌಲ್ಯಮಾಪನ.

1989 ರ ಮಾಂಟ್ರಿಯಲ್ ಪ್ರೋಟೋಕಾಲ್ ಮತ್ತು ಕಿಗಾಲಿ ತಿದ್ದುಪಡಿ:


(Kigali Amendment to the 1989 Montreal Protoco)

1989 ರ ಮಾಂಟ್ರಿಯಲ್ ಪ್ರೋಟೋಕಾಲ್.

ಸಂದರ್ಭ:

ಇತ್ತೀಚಿಗೆ ಕೇಂದ್ರ ಸಚಿವ ಸಂಪುಟವು ಹೈಡ್ರೋಫ್ಲೋರೋ ಕಾರ್ಬನ್ ನ ಬಳಕೆಯನ್ನು ಹಂತಹಂತವಾಗಿ ನಿಲ್ಲಿಸಲು ನಿರ್ಧರಿಸಿದೆ. ಓಜೋನ್ ಪದರವನ್ನು ನಾಶಪಡಿಸುವ ವಸ್ತುಗಳಿಗೆ ಸಂಬಂಧಿಸಿದ ಮಾಂಟ್ರಿಯಲ್ ಪ್ರೋಟೋಕಾಲ್‌ನ ಪ್ರಮುಖ ತಿದ್ದುಪಡಿಯಾದ ಕಿಗಾಲಿ ತಿದ್ದುಪಡಿಯನ್ನು (Kigali Amendment, a key amendment to the Montreal Protocol)ಅಂಗೀಕರಿಸಲು ಭಾರತ ನಿರ್ಧರಿಸಿದೆ.

ಏನಿದು ಕಿಗಾಲಿ ತಿದ್ದುಪಡಿ?

 1. ಈ ತಿದ್ದುಪಡಿಯನ್ನು ಅಕ್ಟೋಬರ್ 2016 ರಲ್ಲಿ ಮಾಂಟ್ರಿಯಲ್ ಪ್ರೋಟೋಕಾಲ್‌ಗೆ ಸೇರಿಸಲಾಯಿತು. ರುವಾಂಡಾದ ರಾಜಧಾನಿ ಕಿಗಾಲಿಯಲ್ಲಿ ನಡೆದ ಮಾಂಟ್ರಿಯಲ್ ಪ್ರೋಟೋಕಾಲ್ ಗೆ ಸಂಬಂಧಿಸಿದ ಪಕ್ಷಗಳ 28 ನೇ ಸಭೆಯಲ್ಲಿ ಇದನ್ನು ಅಳವಡಿಸಿಕೊಳ್ಳಲಾಯಿತು.
 2. ಈ ತಿದ್ದುಪಡಿ ಈಗಾಗಲೇ 2019 ರ ಆರಂಭದಿಂದಲೇ ಜಾರಿಗೆ ಬಂದಿದೆ.
 3. ಕಿಗಾಲಿ ತಿದ್ದುಪಡಿಯ ಅಡಿಯಲ್ಲಿ, ಹವಾನಿಯಂತ್ರಣ, ಶೈತ್ಯೀಕರಣ ಮತ್ತು ಫೋರ್ಮಿಂಗ್ ಫೋಮ್ ಉದ್ಯಮದಲ್ಲಿ ವ್ಯಾಪಕವಾಗಿ ಬಳಸಲಾಗುವ ರಾಸಾಯನಿಕಗಳ ಕುಟುಂಬವಾದ ಹೈಡ್ರೋಫ್ಲೋರೋಕಾರ್ಬನ್‌ಗಳು ಅಥವಾ HFC ಗಳ ಬಳಕೆಯನ್ನು ಕ್ರಮೇಣವಾಗಿ ಹಂತ ಹಂತ ವಾಗಿ -ಕಡಿಮೆ ಗೊಳಿಸುವ ನಿಬಂಧನೆಗಳನ್ನು ಮಾಡಲಾಗಿದೆ.

 

ಕಿಗಾಲಿ ತಿದ್ದುಪಡಿಯ ಅಡಿಯಲ್ಲಿ ಗುರಿಗಳು:

 1. ಈ ಶತಮಾನದ ಮಧ್ಯದ ಮೊದಲು, ಪ್ರಸ್ತುತ ಎಚ್‌ಎಫ್‌ಸಿ ಗಳ ಬಳಕೆಯನ್ನು ಕನಿಷ್ಠ ಶೇಕಡಾ 85 ರಷ್ಟು ಕಡಿತಗೊಳಿಸಬೇಕು. ಈ ಗುರಿಯನ್ನು ಸಾಕಾರ ಮಾಡಲು ವಿವಿಧ ದೇಶಗಳು ವಿಭಿನ್ನ ಕಾಲಮಿತಿಗಳನ್ನು ಅಳವಡಿಸಿಕೊಂಡಿವೆ.
 2. 2047 ರ ವೇಳೆಗೆ ಭಾರತವು ಈ ಗುರಿಯನ್ನು ಸಾಧಿಸಬೇಕು ಆದರೆ ಅಭಿವೃದ್ಧಿ ಹೊಂದಿದ ದೇಶಗಳು 2036 ರ ವೇಳೆಗೆ ಅದನ್ನು ಸಾಧಿಸಬೇಕು. ಚೀನಾ ಮತ್ತು ಇತರ ಕೆಲವು ದೇಶಗಳು 2045 ರ ಗುರಿಯನ್ನು ಹೊಂದಿವೆ.
 3. ಶ್ರೀಮಂತ ದೇಶಗಳು HFC ಗಳ ಕಡಿತವನ್ನು ತಕ್ಷಣವೇ ಆರಂಭವಾಗಬೇಕಾದರೂ, ಭಾರತ ಮತ್ತು ಇತರ ಕೆಲವು ದೇಶಗಳು ತಮ್ಮ HFC ಬಳಕೆಯನ್ನು 2031 ರಿಂದ ಮಾತ್ರ ಕಡಿತಗೊಳಿಸಬೇಕಾಗಿದೆ.

 

ಮಹತ್ವ ಮತ್ತು ನಿರೀಕ್ಷಿತ ಫಲಿತಾಂಶಗಳು:

 1. ಕಿಗಾಲಿ ತಿದ್ದುಪಡಿಯ ನಿಯಮಗಳು ಯಶಸ್ವಿಯಾಗಿ ಅನುಷ್ಠಾನಗೊಂಡರೆ, ಈ ಶತಮಾನದ ಅಂತ್ಯದ ವೇಳೆಗೆ ಜಾಗತಿಕ ತಾಪಮಾನದಲ್ಲಿ 0.5 ° C ಏರಿಕೆಯನ್ನು ತಡೆಯಲು ಸಾಧ್ಯವಾಗುತ್ತದೆ.
 2. ಪ್ರಸ್ತಾವಿತ ಪ್ರಯೋಜನಗಳು ಮತ್ತು ಅನುಷ್ಠಾನದ ಸುಲಭದ ದೃಷ್ಟಿಯಿಂದ, ಹಸಿರುಮನೆ ಅನಿಲ ಹೊರಸೂಸುವಿಕೆಯನ್ನು ಕಡಿತಗೊಳಿಸಲು ಯಾವುದೇ ಏಕೈಕ ಹಸ್ತಕ್ಷೇಪವು ‘ಕಿಗಾಲಿ ತಿದ್ದುಪಡಿಯ’ ನಿಬಂಧನೆಗಳ ಹತ್ತಿರ ಬರುವುದಿಲ್ಲ.
 3. ಆದ್ದರಿಂದ, ಪ್ಯಾರಿಸ್ ಒಪ್ಪಂದದಲ್ಲಿ ನಿಗದಿಪಡಿಸಿದ ‘ಕೈಗಾರಿಕಾ ಪೂರ್ವ ಕಾಲದಿಂದ 2 ° C ಒಳಗೆ ತಾಪಮಾನ ಏರಿಕೆಯನ್ನು ನಿರ್ಬಂಧಿಸುವ’ ಗುರಿಯನ್ನು ಸಾಧಿಸುವುದು ನಿರ್ಣಾಯಕ ಎಂದು ಪರಿಗಣಿಸಲಾಗಿದೆ.
 4. ತಾಪಮಾನ ಏರಿಕೆಯನ್ನು 2 ° C ಒಳಗೆ ಕೈಗಾರಿಕಾ ಪೂರ್ವ ಕಾಲದಿಂದ ಸೀಮಿತಗೊಳಿಸುವ ಪ್ಯಾರಿಸ್ ಒಪ್ಪಂದದ ಗುರಿಯನ್ನು ಸಾಧಿಸಲು ಇದು ನಿರ್ಣಾಯಕವೆಂದು ಪರಿಗಣಿಸಲಾಗಿದೆ.

 

ಹೈಡ್ರೋಫ್ಲೋರೋಕಾರ್ಬನ್‌ಗಳು ಯಾವುವು?

ಎಚ್‌ಎಫ್‌ಸಿಗಳು (HCFCs- hydrochlorofluorocarbons) ಜಾಗತಿಕ ತಾಪಮಾನದ ಏರಿಕೆಯನ್ನು ಉಂಟುಮಾಡುವಲ್ಲಿ ಇಂಗಾಲದ ಡೈಆಕ್ಸೈಡ್‌ಗಿಂತ ಕೆಟ್ಟದಾಗಿದೆ ಎಂದು ಪರಿಗಣಿಸಲಾಗಿದೆ.

ವಾಸ್ತವವಾಗಿ, ವಿಶ್ವಸಂಸ್ಥೆಯ ಪರಿಸರ ಕಾರ್ಯಕ್ರಮ (UNEP) ಪ್ರಕಾರ, ಕಾರ್ಬನ್ ಡೈಆಕ್ಸೈಡ್‌ನೊಂದಿಗೆ ಹೋಲಿಸಿದರೆ ಹೆಚ್ಚುಬಳಸಲಾದ 22 ಎಚ್‌ಎಫ್‌ಸಿಗಳು ಸರಾಸರಿ ಜಾಗತಿಕ ತಾಪಮಾನ ಏರಿಕೆಗೆ ಕಾರ್ಬನ್ ಡೈಯಾಕ್ಸೈಡ್ ಗಿಂತ ಸುಮಾರು 2,500 ಪಟ್ಟು ಹೆಚ್ಚು ಕೊಡುಗೆ ನೀಡಿವೆ.

ಮಾಂಟ್ರಿಯಲ್ ಪ್ರೋಟೋಕಾಲ್ ಬಗ್ಗೆ:

 1. 1989 ಮಾಂಟ್ರಿಯಲ್ ಪ್ರೋಟೋಕಾಲ್ ನ ಉದ್ದೇಶವು  ವಾತಾವರಣದಲ್ಲಿನ ಓಝೋನ್ ಪದರವನ್ನು ರಕ್ಷಿಸುವುದಾಗಿದೆ.
 2. ಈ ಪ್ರೋಟೋಕಾಲ್ ಅಡಿಯಲ್ಲಿ, ಕ್ಲೋರೋಫ್ಲೋರೋಕಾರ್ಬನ್ (CFC ಗಳು) ಮತ್ತು ಇತರ ಓಜೋನ್-ಸವಕಳಿ ಪದಾರ್ಥಗಳನ್ನು (ozone-depleting substances – ODS) ಸಂಪೂರ್ಣವಾಗಿ ತೆಗೆಯುವುದನ್ನು ಕಡ್ಡಾಯಗೊಳಿಸಲಾಗಿದೆ. ಈ ಪ್ರೋಟೋಕಾಲ್ ಕಳೆದ ಮೂರು ದಶಕಗಳಿಂದ ತನ್ನ ನಿಬಂಧನೆಗಳನ್ನು ಅನುಷ್ಠಾನಗೊಳಿಸುವಲ್ಲಿ ಯಶಸ್ವಿಯಾಗಿದೆ.

 

ಪ್ರಸ್ತುತದ ಕಾಳಜಿಗಳೇನು?

 1. ಕ್ಲೋರೋಫ್ಲೋರೋಕಾರ್ಬನ್‌ಗಳನ್ನು (CFCs) ಕ್ರಮೇಣವಾಗಿ ಹೈಡ್ರೋಕ್ಲೋರೋಫ್ಲೋರೋಕಾರ್ಬನ್ಸ್ (Hydrochlorofluorocarbons HCFCs) ನಿಂದ ಬದಲಾಯಿಸಲಾಗುತ್ತಿದೆ, ಮತ್ತು ಕೆಲವು ಸಂದರ್ಭಗಳಲ್ಲಿ, ಇದನ್ನು ‘ಹೈಡ್ರೋಫ್ಲೋರೋಕಾರ್ಬನ್ಸ್’ (HFCs) ನಿಂದ ಬದಲಾಯಿಸಲಾಗುತ್ತಿದೆ, ಇದು ಓಝೋನ್ ಪದರದ ಮೇಲೆ ಕಡಿಮೆ ಪರಿಣಾಮ ಬೀರುತ್ತದೆ.
 2. ಇನ್ನೂ ಹಲವು ದೇಶಗಳಲ್ಲಿ,ವಿಶೇಷವಾಗಿ ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ‘ಹೈಡ್ರೋಕ್ಲೋರೋಫ್ಲೋರೋಕಾರ್ಬನ್ಸ್’ ಅನ್ನು ‘ಹೈಡ್ರೋಫ್ಲೋರೋಕಾರ್ಬನ್ಸ್’ ಗೆ ಬದಲಾಯಿಸಲಾಗುತ್ತಿದೆ.
 3. HFC ಗಳು, ಓಜೋನ್ ಪದರಕ್ಕೆ ಅಷ್ಟೊಂದು ಹಾನಿಕರವಲ್ಲದಿದ್ದರೂ, ಅವು ಇನ್ನೂ ಅತ್ಯಂತ ಶಕ್ತಿಯುತ ಹಸಿರುಮನೆ ಅನಿಲಗಳಾಗಿವೆ.
 4. ಈ HFC ಗಳನ್ನು ಪರಿಶೀಲಿಸದೆ ಹಾಗೇಯೇ ಬಿಟ್ಟರೆ, ವಾರ್ಷಿಕ ಹಸಿರುಮನೆ ಅನಿಲ ಹೊರಸೂಸುವಿಕೆಗೆ ಅವುಗಳ ಕೊಡುಗೆ 2050 ರ ವೇಳೆಗೆ 19% ವರೆಗೆ ತಲುಪುವ ನಿರೀಕ್ಷೆಯಿದೆ.

 

ವಿಷಯಗಳು: ವಿಜ್ಞಾನ ಮತ್ತು ತಂತ್ರಜ್ಞಾನ- ಬೆಳವಣಿಗೆಗಳು ಮತ್ತು ಅವುಗಳ ಅನ್ವಯಗಳು ಮತ್ತು ದೈನಂದಿನ ಜೀವನದಲ್ಲಿ ಅವುಗಳ ಪರಿಣಾಮಗಳು ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ಭಾರತೀಯರ ಸಾಧನೆಗಳು; ತಂತ್ರಜ್ಞಾನದ ದೇಶೀಕರಣ ಮತ್ತು ಹೊಸ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸುವುದು.

‘ಐತಿಹಾಸಿಕ’ ಪರಮಾಣು ಸಮ್ಮಿಳನದಲ್ಲಿ ಯಶಸ್ಸನ್ನು ಸಾಧಿಸಲಾಗಿದೆ:


(‘Historic’ Nuclear Fusion Breakthrough acheived)

Nuclear Fusion

ಸಂದರ್ಭ:

ಕ್ಯಾಲಿಫೋರ್ನಿಯಾದ ಭೌತವಿಜ್ಞಾನಿಗಳು, ಮೂರು ಫುಟ್ಬಾಲ್ ಮೈದಾನಗಳ ಗಾತ್ರದ ಲೇಸರ್‌ಗಳನ್ನು ಬಳಸಿ, ಸಮ್ಮಿಳನದಿಂದ ದೊಡ್ಡ ಪ್ರಮಾಣದ ಶಕ್ತಿಯನ್ನು ಉತ್ಪಾದಿಸುವಲ್ಲಿ ಯಶಸ್ವಿಯಾಗಿದ್ದಾರೆ.

 1. ಇದು ಹೊಸ ಶುದ್ಧ ಇಂಧನ ಮೂಲದ ಅಭಿವೃದ್ಧಿಯ ಭರವಸೆಯನ್ನು ನೀಡುತ್ತದೆ.

ಪ್ರಯೋಗವನ್ನು ಹೇಗೆ ನಡೆಸಲಾಯಿತು ಮತ್ತು ಫಲಿತಾಂಶಗಳು ಯಾವುವು?

 1. ತಜ್ಞರು ತಮ್ಮ ದೈತ್ಯ ಶ್ರೇಣಿಯನ್ನು ಸುಮಾರು 200 ಲೇಸರ್ ಕಿರಣಗಳನ್ನು ಒಂದು ಸಣ್ಣ ಸ್ಥಳಕ್ಕೆ ಕೇಂದ್ರೀಕರಿಸಿದ್ದಾರೆ – ಇದು ಶಕ್ತಿಯ ಮೆಗಾ ಬ್ಲಾಸ್ಟ್ ಅನ್ನು ಸೃಷ್ಟಿಸುತ್ತದೆ – ಹಿಂದೆಂದೂ ಮಾಡಿದ್ದಕ್ಕಿಂತ ಎಂಟು ಪಟ್ಟು ಹೆಚ್ಚು.
 2. ಆದಾಗ್ಯೂ, ಪ್ರಯೋಗದಲ್ಲಿ ಉತ್ಪತ್ತಿಯಾಗುವ ಶಕ್ತಿಯು ಬಹಳ ಕಡಿಮೆ ಅವಧಿಯವರೆಗೆ ಅಂದರೆ ಒಂದು ಸೆಕೆಂಡಿನ ಅವಧಿಯ 100 ಟ್ರಿಲಿಯನ್ಗಳ ಭಾಗ ಮಾತ್ರ ಇದ್ದರೂ ವಿಜ್ಞಾನಿಗಳು ತಾವು ಬಳಸುವುದಕ್ಕಿಂತ ಹೆಚ್ಚಿನ ಶಕ್ತಿಯನ್ನು ಸೃಷ್ಟಿಸಲು ಸಾಧ್ಯವಾಯಿತು.
 3. ಈ ಪ್ರಯೋಗದಲ್ಲಿ, ವಿಜ್ಞಾನಿಗಳು ಹೈಡ್ರೋಜನ್‌ನ ಎರಡು ಐಸೊಟೋಪ್‌ಗಳನ್ನು ಬಳಸಿದರು, ಹೀಲಿಯಂ ಅನ್ನು ಹುಟ್ಟುಹಾಕಿದರು.

ವಿದಳನ ಪ್ರಕ್ರಿಯೆಗಿಂತ ಸಮ್ಮಿಳನ ಪ್ರಕ್ರಿಯೆಯು ಏಕೆ ಉತ್ತಮವಾಗಿದೆ?

 1. ವಿದಳನವು (fission) ಕೈಗೊಳ್ಳಲು ಸುಲಭವಾದ ಪ್ರಕ್ರಿಯೆಯಾಗಿದ್ದರೂ, ಅದು ಹೆಚ್ಚಿನ ಪ್ರಮಾಣದ ಪರಮಾಣು ತ್ಯಾಜ್ಯವನ್ನು ಉತ್ಪಾದಿಸುತ್ತದೆ.
 2. ವಿದಳನ ಪ್ರಕ್ರಿಯೆಗಿಂತ ಭಿನ್ನವಾಗಿ, ಸಮ್ಮಿಳನ (Fusion) ಪ್ರಕ್ರಿಯೆಯು ಹಸಿರುಮನೆ ಅನಿಲಗಳನ್ನು ಹೊರಸೂಸುವುದಿಲ್ಲ ಮತ್ತು ಅಪಘಾತಗಳ ಕಡಿಮೆ ಅಪಾಯವನ್ನು ಹೊಂದದಿರುವ ಸುರಕ್ಷಿತ ಪ್ರಕ್ರಿಯೆ ಎಂದು ಪರಿಗಣಿಸಲಾಗುತ್ತದೆ. ಇದನ್ನು ಕೆಲವು ವಿಜ್ಞಾನಿಗಳು ಭವಿಷ್ಯದ ಸಂಭವನೀಯ ಶಕ್ತಿ (ಇಂಧನ) ಎಂದು ಪರಿಗಣಿಸುತ್ತಾರೆ.
 3. ಒಂದು ಸಲ ಸಮ್ಮಿಳನ ಪ್ರಕ್ರಿಯೆಯ ನಿಯಂತ್ರಣವನ್ನು ಸಾಧಿಸಿದ ನಂತರ, ಪರಮಾಣು ಸಮ್ಮಿಳನವು ಅನಿಯಮಿತ ಶುದ್ಧ ಶಕ್ತಿಯನ್ನು ಮತ್ತು ಕಡಿಮೆ ವೆಚ್ಚದಲ್ಲಿ ಒದಗಿಸುತ್ತದೆ.
 4. ಅಣುವಿದ್ಯುತ್ ಸ್ಥಾವರಗಳಲ್ಲಿ ಪ್ರಸ್ತುತ ಬಳಸುತ್ತಿರುವ ತಂತ್ರಜ್ಞಾನದ ಸಮ್ಮಿಳನವು ಪರಮಾಣು ವಿದಳನದಿಂದ ಭಿನ್ನವಾಗಿದೆ.ವಿದಳನ (fission) ಪ್ರಕ್ರಿಯೆಯಲ್ಲಿ, ನ್ಯೂಕ್ಲಿಯಸ್‌ನ ಬಂಧಗಳನ್ನು ಮುರಿಯುವ ಮೂಲಕ ಭಾರವಾದ ಪರಮಾಣುಗಳು (Nuclear fission) ಶಕ್ತಿಯನ್ನು ಬಿಡುಗಡೆ ಮಾಡಲಾಗುತ್ತದೆ.
 5. ಸಮ್ಮಿಳನ ಪ್ರಕ್ರಿಯೆಯಲ್ಲಿ, ಭಾರವಾದ ಒಂದನ್ನು ರಚಿಸಲು ಎರಡು ಲಘು ಪರಮಾಣು ನ್ಯೂಕ್ಲಿಯಸ್‌ಗಳನ್ನು “ಸಂಯೋಜಿಸಲಾಗುತ್ತದೆ”. ಇದು ನಮ್ಮ ಸೂರ್ಯ ಸೇರಿದಂತೆ ನಕ್ಷತ್ರಗಳಲ್ಲಿ ಕೆಲಸ ಮಾಡುವ ಪ್ರಕ್ರಿಯೆಯಾಗಿದೆ.
 6. ಸಮ್ಮಿಳನವು (Fusion) ಸೂರ್ಯ ಮತ್ತು ಇತರ ನಕ್ಷತ್ರಗಳ ಶಕ್ತಿಯ ಮೂಲವಾಗಿದೆ. ಈ ನಕ್ಷತ್ರಾಕಾರದ ದೇಹಗಳ ಮಧ್ಯದಲ್ಲಿರುವ ವಿಪರೀತ ಶಾಖ ಮತ್ತು ಗುರುತ್ವಾಕರ್ಷಣೆಯಿಂದಾಗಿ, ಹೈಡ್ರೋಜನ್ ನ್ಯೂಕ್ಲಿಯಸ್‌ಗಳು ಒಂದಕ್ಕೊಂದು ಡಿಕ್ಕಿ ಹೊಡೆಯುತ್ತವೆ, ಇದರ ಪರಿಣಾಮವಾಗಿ ಹೈಡ್ರೋಜನ್ ನ್ಯೂಕ್ಲಿಯಸ್‌ಗಳು ಬೆಸೆದು ಭಾರವಾದ ಹೀಲಿಯಂ ಅಣುಗಳನ್ನು ರೂಪಿಸುತ್ತವೆ.ಈ ಪ್ರಕ್ರಿಯೆಯಲ್ಲಿ ಒಂದು ದೊಡ್ಡ ಪ್ರಮಾಣದ ಶಕ್ತಿಯು ಬಿಡುಗಡೆಯಾಗುತ್ತದೆ.

 


ಪೂರ್ವಭಾವಿ ಪರೀಕ್ಷೆಗೆ ಸಂಬಂಧಿಸಿದ ವಿದ್ಯಮಾನಗಳು:


ಅಫ್ಘಾನಿಸ್ತಾನದ ಹಜಾರಾಗಳು:

 1. ಹಜಾರಾಗಳು, ಪರ್ಷಿಯನ್ ಮಾತನಾಡುವ ಜನಾಂಗೀಯ ಗುಂಪಾಗಿದ್ದು, ಮುಖ್ಯವಾಗಿ ಮಧ್ಯ ಅಫ್ಘಾನಿಸ್ತಾನದ ಹಜರಾಜತ್ (Hazarajat) ಪರ್ವತ ಪ್ರದೇಶದಲ್ಲಿ ಕಂಡುಬರುತ್ತಾರೆ.
 2. ಅವರು ಮಂಗೋಲ್ ಸಾಮ್ರಾಜ್ಯದ ಸ್ಥಾಪಕರಾದ ಗೆಂಘಿಸ್ ಖಾನ್ (Genghis Khan)ಮತ್ತು ಅವರ ಸೈನ್ಯದ ವಂಶಸ್ಥರು ಎಂದು ನಂಬಲಾಗಿದೆ, ಅದು 13 ನೇ ಶತಮಾನದಲ್ಲಿ ಇಡೀ ಪ್ರದೇಶವನ್ನು ಆಕ್ರಮಿಸಿಕೊಂಡಿತ್ತು.
 3. ಅವರ ವಿಭಿನ್ನ ಏಷಿಯಾಟಿಕ್ ಲಕ್ಷಣಗಳು ಮತ್ತು ಹಜರಗಿ (Hazaragi) ಎಂಬ ಪರ್ಷಿಯನ್ ಉಪಭಾಷೆಯ ಬಳಕೆಯು ಅವರನ್ನು ದೇಶದ ಉಳಿದ ಭಾಗಗಳಿಂದ ಪ್ರತ್ಯೇಕಿಸುತ್ತದೆ.
 4. ಹಜಾರಾ ಜನಾಂಗೀಯ ಗುಂಪನ್ನು ಅಫ್ಘಾನಿಸ್ತಾನದ ಅತ್ಯಂತ ತುಳಿತಕ್ಕೊಳಗಾದ ಗುಂಪುಗಳಲ್ಲಿ ಒಂದು ಎಂದು ಪರಿಗಣಿಸಲಾಗಿದೆ.

ಸುದ್ದಿಯಲ್ಲಿರಲು ಕಾರಣ?

ಇತ್ತೀಚಿಗೆ ಅಪಘಾನಿಸ್ತಾನವನ್ನು ಆಕ್ರಮಿಸಿಕೊಂಡಿರುವ ತಾಲಿಬಾನಿಗಳು ಈ ಹಜಾರಾಗಳ ವಿರುದ್ಧ ದಮನಕಾರಿ ನೀತಿಯನ್ನು ಅನುಸರಿಸುತ್ತಿದ್ದಾರೆ.

 

 

ಬಿಜು ಸ್ವಾಸ್ಥ್ಯ ಕಲ್ಯಾಣ ಯೋಜನೆ:

(Biju Swasthya Kalyan Yojana)

 1. ಒಡಿಶಾ ಸರ್ಕಾರವು ಬಿಜು ಸ್ವಾಸ್ಥ್ಯ ಕಲ್ಯಾಣ ಯೋಜನೆ (BSKY) ಎಂಬ ಸ್ಮಾರ್ಟ್ ಕಾರ್ಡ್ ಯೋಜನೆಯನ್ನು ಆರಂಭಿಸಿದೆ.
 2. ಈ ಯೋಜನೆಯು ರಾಜ್ಯದ ಸುಮಾರು 96 ಲಕ್ಷ ಕುಟುಂಬಗಳಿಗೆ 5 ಲಕ್ಷದವರೆಗೆ ನಗದುರಹಿತ ಆರೋಗ್ಯ ರಕ್ಷಣೆಯ ಭರವಸೆ ನೀಡುತ್ತದೆ. BSKY ಅಡಿಯಲ್ಲಿ ಮಹಿಳಾ ಫಲಾನುಭವಿಗಳಿಗೆ ನೀಡಲಾಗುವ ಆರೋಗ್ಯ ವೆಚ್ಚದ ಮಿತಿ 10 ಲಕ್ಷ ರೂ.ಗಳಾಗಿದೆ.
 3. ಸ್ಮಾರ್ಟ್ ಕಾರ್ಡ್ ಹೊಂದಿರುವವರು ರಾಜ್ಯದ 200 ಕ್ಕೂ ಹೆಚ್ಚು ಸಂಯೋಜಿತ ಆಸ್ಪತ್ರೆಗಳಲ್ಲಿ ನಗದುರಹಿತ ಆರೋಗ್ಯ ರಕ್ಷಣೆಯನ್ನು / ಸೇವೆಯನ್ನು ಪಡೆಯುತ್ತಾರೆ.

 • Join our Official Telegram Channel HERE for Motivation and Fast Updates
 • Subscribe to our YouTube Channel HERE to watch Motivational and New analysis videos