Print Friendly, PDF & Email

[ ದೈನಂದಿನ ಪ್ರಚಲಿತ ಘಟನೆಗಳು ] ದಿನಾಂಕ – 5ನೇ ಆಗಸ್ಟ್ 2021

 

ಪರಿವಿಡಿ:

ಸಾಮಾನ್ಯ ಅಧ್ಯಯನ ಪತ್ರಿಕೆ 2:

1. ವಿಚಾರಣೆಯಿಂದ ನ್ಯಾಯಾಧೀಶರ ಹಿಂದೆ ಸರಿಯುಯುವಿಕೆ ಎಂದರೇನು?

2. ಅಸಭ್ಯ ವರ್ತನೆಗಾಗಿ ಸಂಸದರ ಅಮಾನತು.

3. ಫಾಸ್ಟ್ ಟ್ರ್ಯಾಕ್ ವಿಶೇಷ ನ್ಯಾಯಾಲಯಗಳು (FTSC).

4. MPLAD ಯೋಜನೆ ಎಂದರೇನು?

5. ಸೀಮಿತ ಹೊಣೆಗಾರಿಕೆ ಸಹಭಾಗಿತ್ವ (ತಿದ್ದುಪಡಿ) ಮಸೂದೆ 2021.

 

ಸಾಮಾನ್ಯ ಅಧ್ಯಯನ ಪತ್ರಿಕೆ 3:

1. ಕಾನೂನುಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯಿದೆ.

2. ರಾಷ್ಟ್ರೀಯ ರಾಜಧಾನಿ ಪ್ರದೇಶ ಮತ್ತು ಅದರ ಅಕ್ಕ-ಪಕ್ಕದ ಪ್ರದೇಶಗಳಲ್ಲಿನ ವಾಯು ಗುಣಮಟ್ಟ ನಿರ್ವಹಣೆ ಆಯೋಗದ ಮಸೂದೆ, 2021.

 

ಪೂರ್ವಭಾವಿ ಪರೀಕ್ಷೆಗೆ ಸಂಬಂಧಿಸಿದ ವಿದ್ಯಮಾನಗಳು:

1. ಅಣ್ಣಾಮಲೈ ಹಾರುವ ಕಪ್ಪೆ.

2. ಭಾರತೀಯ ಕಂಪ್ಯೂಟರ್ ತುರ್ತು ಪ್ರತಿಕ್ರಿಯೆ ತಂಡ (CERT-In).

 


ಸಾಮಾನ್ಯ ಅಧ್ಯಯನ ಪತ್ರಿಕೆ : 2


 

ವಿಷಯಗಳು: ಸರ್ಕಾರದ ವಿವಿಧ ಅಂಗಗಳ ನಡುವೆ ಅಧಿಕಾರ ವಿಭಜನೆ, ವಿವಾದ ಪರಿಹಾರ ಕಾರ್ಯವಿಧಾನಗಳು ಮತ್ತು ಸಂಸ್ಥೆಗಳು.

ವಿಚಾರಣೆಯಿಂದ ನ್ಯಾಯಾಧೀಶರ ಹಿಂದೆ ಸರಿಯುಯುವಿಕೆ ಎಂದರೇನು?


(What is Recusal of Judges?)

ಸಂದರ್ಭ:

ಇತ್ತೀಚೆಗೆ, ಭಾರತದ ಮುಖ್ಯ ನ್ಯಾಯಮೂರ್ತಿ ಎನ್.ವಿ.ರಮಣ (N.V. Ramana) ಅವರು ಆಂಧ್ರಪ್ರದೇಶ ಮತ್ತು ತೆಲಂಗಾಣದ ನಡುವಿನ ಕೃಷ್ಣಾ ಜಲ ವಿವಾದದ ಅರ್ಜಿಯ ವಿಚಾರಣೆಯಿಂದ ಹಿಂದೆ ಸರಿದರು. ತೆಲಂಗಾಣದ ವಿರುದ್ಧ ಒಂದು ಅರ್ಜಿಯನ್ನು ಸಲ್ಲಿಸಿರುವ ಆಂಧ್ರಪ್ರದೇಶ ರಾಜ್ಯವು, ತೆಲಂಗಾಣವು ತನ್ನ ರಾಜ್ಯದ ನಿವಾಸಿಗಳಿಗೆ ಕುಡಿಯುವ ಮತ್ತು ನೀರಾವರಿ ಉದ್ದೇಶಗಳಿಗಾಗಿ ಕೃಷ್ಣಾ ನದಿ ನೀರಿನ ನ್ಯಾಯಸಮ್ಮತವಾಗಿ ಸಿಗಬೇಕಾದ ಪಾಲನ್ನು ಕಸಿದುಕೊಳ್ಳುತ್ತಿದೆ ಎಂದು ಆರೋಪಿಸಿದೆ.

 

ವಿಚಾರಣೆಯಿಂದ ನ್ಯಾಯಾಧೀಶರ ಹಿಂದೆ ಸರಿಯುಯುವಿಕೆಗೆ ಕಾರಣ:

ಕೃಷ್ಣಾ ನದಿ ನೀರು ಹಂಚಿಕೆ (Krishna River Dispute Case) ಸಂಬಂಧಪಟ್ಟು ಆಂಧ್ರಪ್ರದೇಶ (Andhra Pradesh) ಮತ್ತು ತೆಲಂಗಾಣ(Telangana ದ ನಡುವೆ ಎದ್ದಿರುವ ವಿವಾದದ ವಿಚಾರಣೆಯನ್ನು ನಾನು ಮಾಡುವುದಿಲ್ಲವೆಂದು ಸುಪ್ರೀಂಕೋರ್ಟ್ (Supreme Court) ಮುಖ್ಯ ನ್ಯಾಯಮೂರ್ತಿ ಎನ್​.ವಿ.ರಮಣ (NV Ramana) ಹೇಳಿದ್ದಾರೆ. ನಾನು ಎರಡೂ ರಾಜ್ಯಗಳಿಗೆ ಸೇರಿದ್ದೇನೆ. ಹಾಗಾಗಿ ಕಾನೂನು ಬದ್ಧವಾಗಿ ನಾನು ಈ ವಿಚಾರಣೆ ಕೈಗೆತ್ತಿಕೊಳ್ಳುವುದಿಲ್ಲ. ಮಧ್ಯಸ್ಥಿಕೆ ಮೂಲಕ ಎರಡೂ ರಾಜ್ಯಗಳು ಪ್ರಸ್ತುತ ವಿಚಾರವನ್ನು ಬಗೆಹರಿಸಿಕೊಳ್ಳಲು ಸಾಧ್ಯವಾದರೆ, ಅದನ್ನೇ ಮಾಡಿ. ನಾವು ಅದಕ್ಕೆ ಸಹಕಾರ ನೀಡುತ್ತೇವೆ. ಹಾಗೊಮ್ಮೆ ವಿಚಾರಣೆ ನಡೆಸಲೇಬೇಕು ಎಂದರೆ ಪ್ರಕರಣವನ್ನು ಸುಪ್ರೀಂಕೋರ್ಟ್​ನ ಮತ್ತೊಂದು ಪೀಠಕ್ಕೆ ನಾನು ವರ್ಗಾಯಿಸುತ್ತೇನೆ ಎಂದು ಹೇಳುವ ಮೂಲಕ ವಿಚಾರಣೆಯಿಂದ ಹಿಂದೆ ಸರಿದರು.

 

ಏನಿದು ಪ್ರಕರಣ?

ಆಂಧ್ರಪ್ರದೇಶ ಮರುಸಂಘಟನೆ ಕಾಯಿದೆ 2014’ರ ಅಡಿಯಲ್ಲಿ ರಚಿಸಲಾದ ಉನ್ನತ ಮಂಡಳಿ (Apex Council) ತೆಗೆದುಕೊಂಡ ‘ನದಿ ನೀರು ನಿರ್ವಹಣೆ’ ಕುರಿತ ನಿರ್ಧಾರಗಳನ್ನು ಅನುಸರಿಸಲು ತೆಲಂಗಾಣ ನಿರಾಕರಿಸಿದೆ ಎಂದು ಆಂಧ್ರಪ್ರದೇಶ ಆರೋಪಿಸಿದೆ. 2014 ರ ಕಾಯಿದೆ ಮತ್ತು ಕೇಂದ್ರ ಸರ್ಕಾರದ ನಿರ್ದೇಶನದ ಅಡಿಯಲ್ಲಿ ರಚಿಸಲಾದ ಕೃಷ್ಣಾ ನದಿ ನಿರ್ವಹಣಾ ಮಂಡಳಿ’  (Krishna River Management Board – KRMB) ನಿರ್ದೇಶನಗಳನ್ನು ತೆಲಂಗಾಣವು ನಿರ್ಲಕ್ಷಿಸುತ್ತಿದೆ ಎಂದು ಆಂಧ್ರಪ್ರದೇಶ ಹೇಳುತ್ತದೆ.

ಆಂಧ್ರಪ್ರದೇಶದಿಂದ ತೆಲಂಗಾಣ ಬೇರ್ಪಟ್ಟ ಬಳಿಕ 2015ರಲ್ಲಿ ಕೃಷ್ಣಾ ನದಿ ನೀರು ಹಂಚಿಕೆ ಸಂಬಂಧ ಎರಡೂ ರಾಜ್ಯಗಳ ಮಧ್ಯೆ ಒಪ್ಪಂದ ಏರ್ಪಟ್ಟಿದೆ. ಆದರೆ ಈ ಒಪ್ಪಂದದ ನಿಯಮಗಳನ್ನು ತೆಲಂಗಾಣ ಉಲ್ಲಂಘಿಸಿದೆ. ಅದರ ವಿದ್ಯುತ್​ ಉತ್ಪಾದನಾ ಅವಶ್ಯಕತೆಗಳಿಗಾಗಿ, ಕೃಷ್ಣಾ ನದಿ ನೀರನ್ನು ಅತ್ಯಂತ ಹೆಚ್ಚಿನ ಪ್ರಮಾಣದಲ್ಲಿ, ಮನಸಿಗೆ ಬಂದಂತೆ ಬಳಕೆ ಮಾಡಿಕೊಳ್ಳುತ್ತಿದೆ. ಇದರಿಂದ ನಮ್ಮ ನೀರಾವರಿ ಯೋಜನೆ ಮೇಲೆ ದೊಡ್ಡ ಹೊಡೆತ ಬಿದ್ದಿದೆ ಎಂದು ಆಂಧ್ರಪ್ರದೇಶ ಆರೋಪಿಸಿದೆ.

ಈ ಮಧ್ಯೆ ಎರಡೂ ರಾಜ್ಯಗಳಿಗೂ ಸಾಮಾನ್ಯವಾಗಿ ಇರುವ ಶ್ರೀಶೈಲ, ನಾಗಾರ್ಜುನ, ಸಾಗರ ಮತ್ತು ಪುಲಿಚಿಂತಲಾ ಜಲಾಶಯಗಳನ್ನು ನಿಯಂತ್ರಣಕ್ಕೆ ಪಡೆಯುವಂತೆ ಕೇಂದ್ರ ಜಲಶಕ್ತಿ ಸಚಿವಾಲಯಕ್ಕೆ ನಿರ್ದೇಶನ ನೀಡಿ ಎಂದು ಆಂಧ್ರಪ್ರದೇಶ ಸುಪ್ರೀಂಕೋರ್ಟ್​ಗೆ ಅರ್ಜಿ ಸಲ್ಲಿಸಿದೆ. ಇವಿಷ್ಟೂ ಜಲಾಶಯಗಳಿಂದ ತೆಲಂಗಾಣ ಅಳತೆ ಮೀರಿ ನೀರು ಸೆಳೆದುಕೊಳ್ಳುತ್ತಿದೆ ಎಂಬುದು ಆಂಧ್ರದ ಆರೋಪ.

ಕೃಷ್ಣಾ ಮತ್ತು ಗೋದಾವರಿ ನದಿಗಳು ಆಂಧ್ರ ಹಾಗೂ ತೆಲಂಗಾಣ ಮೂಲಕ ಹರಿಯುತ್ತವೆ. ಆಂಧ್ರಪ್ರದೇಶ ವಿಭಜನೆ ಆದಾಗಿನಿಂದಲೂ ಈ ನದಿಗಳ ನೀರು ಹಂಚಿಕೆ ವಿಚಾರದಲ್ಲಿ ಪದೇಪದೆ ಘರ್ಷಣೆ ಆಗುತ್ತಲೇ ಇದೆ. ಈಗ ಎರಡೂ ರಾಜ್ಯಗಳ ಗಡಿಯಲ್ಲಿರುವ ಶ್ರೀಶೈಲ ಅಣೆಕಟ್ಟಿಗೆ ಸಂಬಂಧಪಟ್ಟ ವಿಚಾರದಲ್ಲಿ ವಿವಾದ ಎದ್ದಿದೆ. ಕೃಷ್ಣಾ ನದಿಗೆ ಒಟ್ಟು ಆರು ಅಣೆಕಟ್ಟು ಕಟ್ಟಲಾಗಿದೆ. ಈ ನದಿ ನೀರು ಹಂಚಿಕೆ ತೆಲಂಗಾಣ ಮತ್ತು ಆಂಧ್ರಪ್ರದೇಶಕ್ಕೆ 34:66 ಪ್ರಮಾಣದಲ್ಲಿ ಇರಬೇಕು ಎಂದು ತಾತ್ಕಾಲಿಕ ಒಪ್ಪಂದ ಹೇಳುತ್ತದೆ. ಅಂದರೆ ತೆಲಂಗಾಣಕ್ಕೆ 299 ಟಿಎಂಸಿ ನೀರು ಹಾಗೂ ಆಂಧ್ರಪ್ರದೇಶಕ್ಕೆ 512 ಟಿಎಂಸಿ ನೀರು ಸೇರಬೇಕು. ಆದರೆ ಈ ಅನುಪಾತವನ್ನು ಮೀರಿ ತೆಲಂಗಾಣ ನೀರು ಪಡೆಯುತ್ತದೆ ಎಂಬುದು ಆಂಧ್ರದ ಆರೋಪ.

 

‘ನ್ಯಾಯಾಂಗ ಅನರ್ಹತೆ’ ಅಥವಾ ‘ವಿಚಾರಣೆಯ ನಿರಾಕರಣೆ’ ಎಂದರೇನು?

(What is Judicial Disqualification or Recusal?)

ಹಿತಾಸಕ್ತಿಯ ಸಂಘರ್ಷದಿಂದಾಗಿ ವಿಚಾರಣೆಯ ಪೀಠ ಅಲಂಕರಿಸುವ ನ್ಯಾಯಾಂಗ ಅಧಿಕಾರಿ ಅಥವಾ ಆಡಳಿತಾಧಿಕಾರಿಯು ಯಾವುದೇ ನ್ಯಾಯಾಂಗ ವಿಚಾರಣೆಯಲ್ಲಿ ಅಥವಾ ಅಧಿಕೃತ ಕ್ರಿಯೆಯಲ್ಲಿ ಭಾಗವಹಿಸುವಿಕೆಯಿಂದ ದೂರವಿರುವುದನ್ನು ಅಥವಾ ಹಿಂದೆ ಸರಿಯುವುದನ್ನು ನ್ಯಾಯಾಂಗ ಅನರ್ಹತೆ (Judicial disqualification), ‘ವಿಚಾರಣೆಯ ನಿರಾಕರಣೆ’ ಅಥವಾ ‘ಮರುಪಡೆಯುವಿಕೆ’ (Recusal) ಎಂದು ಕರೆಯಲಾಗುತ್ತದೆ.

ಯಾವುದೇ ಪ್ರಕರಣದ ವಿಚಾರಣೆಯಿಂದ ನ್ಯಾಯಮೂರ್ತಿಗಳು ಹಿಂದೆ ಸರಿಯುವುದಕ್ಕೆ ಇಂಗ್ಲಿಷ್‌ನಲ್ಲಿ ‘Recuse’ (ರೆಕ್ಯೂಸ್) ಎಂದು ಕರೆಯುತ್ತಾರೆ. ‘ಪ್ರಕರಣದ ಬಗ್ಗೆ ಪರ– ವಿರುದ್ಧದ ನಿಲುವು ಹೊಂದಿದ್ದರೆ ಅವುಗಳ ವಿಚಾರಣೆ ನಿರಾಕರಿಸಬೇಕು’ ಎಂಬುದು ಇದರರ್ಥ.

 

‘ವಿಚಾರಣೆಯ ನಿರಾಕರಣೆ’ಗೆ ಸಾಮಾನ್ಯ ಆಧಾರಗಳು:

 1. ನ್ಯಾಯಾಧೀಶರು ಒಂದು ಪಕ್ಷದ ಬಗ್ಗೆ ಉತ್ತಮ ನಂಬಿಕೆ, ಅಥವಾ ಇತರ ಪಕ್ಷದ ಬಗ್ಗೆ ಪ್ರತಿಕೂಲ ಧೋರಣೆ ಹೊಂದಿದ್ದರೆ ಅಥವಾ ನ್ಯಾಯಾಧೀಶರು ಯಾರೋ ಒಬ್ಬರ ಬಗ್ಗೆ ಸಮಂಜಸವಾಗಿ ಪಕ್ಷಪಾತ ಹೊಂದಿರಬಹುದು ಎಂದು ನಿಷ್ಪಕ್ಷಪಾತ ಅಥವಾ ವಸ್ತುನಿಷ್ಠ ವೀಕ್ಷಕನು ಭಾವಿಸಿದರೆ.
 2. ನ್ಯಾಯಾಧೀಶರು ಪ್ರಕರಣದಲ್ಲಿ ವೈಯಕ್ತಿಕ ಹಿತಾಸಕ್ತಿಯನ್ನು ಹೊಂದಿದ್ದರೆ ಅಥವಾ ಪ್ರಕರಣದಲ್ಲಿ ವೈಯಕ್ತಿಕ ಹಿತಾಸಕ್ತಿಯನ್ನು ಹೊಂದಿರುವ ಯಾವುದೇ ವ್ಯಕ್ತಿಯೊಂದಿಗೆ ಸಂಬಂಧ ಹೊಂದಿದ್ದರೆ.
 3. ನ್ಯಾಯಾಧೀಶರ ಹಿನ್ನೆಲೆ ಅಥವಾ ಅನುಭವ, ಉದಾಹರಣೆಗೆ ನ್ಯಾಯಾಧೀಶರಾಗುವುದಕ್ಕಿಂತ ಮುಂಚೆ ವಕೀಲರಾಗಿ ಮಾಡಿದ ಕೆಲಸ.
 4. ವಾದಿ ಮತ್ತು ಪ್ರತಿವಾದಿಗಳ ಕುರಿತು ಹೊಂದಿರುವ ವೈಯಕ್ತಿಕ ತಿಳುವಳಿಕೆ ಅಥವಾ ಪ್ರಕರಣದ ಸಂಗತಿಗಳ ಕುರಿತ ಜ್ಞಾನ.
 5. ವಕೀಲರು ಅಥವಾ ವಕೀಲರಲ್ಲದವರೊಂದಿಗೆ ಏಕಪಕ್ಷೀಯ/ಖಾಸಗಿ ಸಂವಾದ.
 6. ನ್ಯಾಯಾಧೀಶರ ತೀರ್ಪುಗಳು, ಪ್ರತಿಕ್ರಿಯೆಗಳು ಅಥವಾ ನಡವಳಿಕೆ.

 

ಈ ನಿಟ್ಟಿನಲ್ಲಿ ಯಾವುದೇ ಕಾನೂನುಗಳಿವೆಯೇ?

ನ್ಯಾಯಾಧೀಶರು ‘ವಿಚಾರಣೆಯನ್ನು ನಿರಾಕರಿಸಲು’ ಅಥವಾ ವಿಚಾರಣೆಯಿಂದ ಹಿಂದೆ ಸರಿಯಲು ಯಾವುದೇ ನಿರ್ದಿಷ್ಟ ನಿಯಮಗಳಿಲ್ಲ.

 1. ಆದಾಗ್ಯೂ, ಸುಪ್ರೀಂ ಕೋರ್ಟ್ ಮತ್ತು ಹೈಕೋರ್ಟ್‌ಗಳ ನ್ಯಾಯಾಧೀಶರು ಪ್ರಮಾಣವಚನ ಸ್ವೀಕರಿಸುವ ಸಮಯದಲ್ಲಿ,ತಮ್ಮ ಕರ್ತವ್ಯಗಳನ್ನು ನಿರ್ವಹಿಸಲು, ನ್ಯಾಯದಾನ ಮಾಡಲು, ಭಯ ಅಥವಾ ಅನುಗ್ರಹವಿಲ್ಲದೆ, ವಾತ್ಸಲ್ಯ ಅಥವಾ ಬಾಂಧವ್ಯಕ್ಕೆ ಒಳಗಾಗದೆ ಅಥವಾ ತಿರಸ್ಕಾರವಿಲ್ಲದೆ ಅಥವಾ ಯಾವುದೇ ದುರುದ್ದೇಶವಿಲ್ಲದೆ ತಮ್ಮ ಕರ್ತವ್ಯಗಳನ್ನು ಪ್ರಾಮಾಣಿಕವಾಗಿ ಮತ್ತು ನಿಷ್ಪಕ್ಷಪಾತವಾಗಿ ನಿರ್ವಹಿಸುವ ವಚನವನ್ನು ನೀಡುತ್ತಾರೆ.

 

ಈ ಕುರಿತು ಸುಪ್ರೀಂ ಕೋರ್ಟ್ ಹೇಳಿರುವುದೇನು ?

ರಂಜಿತ್ ಠಾಕೂರ್ VS ಯೂನಿಯನ್ ಆಫ್ ಇಂಡಿಯಾ (1987) ಪ್ರಕರಣದಲ್ಲಿ, ಪಕ್ಷದ ಮನಸ್ಸಿನಲ್ಲಿರುವ ಆತಂಕವನ್ನು ಗಮನದಲ್ಲಿಟ್ಟುಕೊಂಡು ಪಕ್ಷಪಾತದ ಸಾಧ್ಯತೆಯ ಬಗ್ಗೆ ತನಿಖೆ ಸಮರ್ಥನೀಯ ಮತ್ತು ಸಮಂಜಸವಾಗಿದೆ ಎಂದು ಸುಪ್ರೀಂ ಕೋರ್ಟ್ ಅಭಿಪ್ರಾಯಪಟ್ಟಿದೆ. ನ್ಯಾಯಾಧೀಶರು ತಮ್ಮ ಮುಂದೆ ನಿಂತಿರುವ ಪಕ್ಷದ ಮನಸ್ಸಿನಲ್ಲಿ ನಡೆಯುತ್ತಿರುವ ಆಲೋಚನೆಗಳನ್ನು ಗಮನಿಸಬೇಕು ಮತ್ತು ಅವರು ಪಕ್ಷಪಾತ ಹೊಂದಿದ್ದಾರೆಯೇ ಅಥವಾ ಇಲ್ಲವೇ ಎಂಬುದನ್ನು ನಿರ್ಧರಿಸಬೇಕು.

ನ್ಯಾಯಮೂರ್ತಿ ಜೆ. ಚೆಲಮೇಶ್ವರ್ ಅವರು ಸುಪ್ರೀಂ ಕೋರ್ಟ್ ಅಡ್ವೊಕೇಟ್ಸ್-ಆನ್-ರೆಕಾರ್ಡ್ ಅಸೋಸಿಯೇಶನ್ VS ಯೂನಿಯನ್ ಆಫ್ ಇಂಡಿಯಾ (2015) ಪ್ರಕರಣದ ತೀರ್ಪು ನೀಡುವಾಗ ನ್ಯಾಯಾಧೀಶರು “ಆರ್ಥಿಕ ಹಿತಾಸಕ್ತಿಯನ್ನು ಹೊಂದಿರುವುದು ಕಂಡು ಬಂದರೆ ಅದು ಪಕ್ಷಪಾತದ ಕುರಿತ ‘ನಿಜವಾದ ಅಪಾಯ’ ಅಥವಾ ಆಗ ‘ಸಮಂಜಸವಾದ ಅನುಮಾನ’ ಇದೆಯೇ ಎಂಬ ಬಗ್ಗೆ ಹೆಚ್ಚಿನ ತನಿಖೆ ನಡೆಸುವ ಅಗತ್ಯವಿಲ್ಲ” ಎಂದು ಅಭಿಪ್ರಾಯಪಟ್ಟಿದ್ದಾರೆ.

 

ವಿಚಾರಣೆಯಿಂದ ಹಿಂದೆ ಸರಿಯುವಿಕೆಗೆ ಸಂಬಂಧಿಸಿದ ಕಾಳಜಿಗಳು ಅಥವಾ ಸಮಸ್ಯೆಗಳು:

 1. ನ್ಯಾಯಾಧೀಶರು ‘ವಿಚಾರಣೆಯಿಂದ ಹಿಂದೆ ಸರಿಯುವುದು’ ನ್ಯಾಯ ಬಯಸಿ ಬಂದ ಪಕ್ಷಗಳಿಗೆ ತಮ್ಮ ಆಯ್ಕೆಯ ನ್ಯಾಯಾಂಗ ಪೀಠವನ್ನು ಆಯ್ಕೆ ಮಾಡಿಕೊಳ್ಳಲು ಅವಕಾಶವನ್ನು ನೀಡುತ್ತದೆ, ಇಲ್ಲವಾದರೆ, ಇದು ನ್ಯಾಯಾಂಗದ ನಿಷ್ಪಕ್ಷಪಾತದ ಉಲ್ಲಂಘನೆಗೆ ಕಾರಣವಾಗಬಹುದು.
 2. ಇದು ನ್ಯಾಯಾಧೀಶರ ಸ್ವಾತಂತ್ರ್ಯವನ್ನು ದುರ್ಬಲಗೊಳಿಸುತ್ತದೆ ಮತ್ತು ನ್ಯಾಯಾಧೀಶರ ನಿಷ್ಪಕ್ಷಪಾತದ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ.
 3. ನ್ಯಾಯಾಧೀಶರು ‘ವಿಚಾರಣೆಯನ್ನು ನಿರಾಕರಿಸಲು’ ಅಥವಾ ವಿಚಾರಣೆಯಿಂದ ಹಿಂದೆ ಸರಿಯಲು ಯಾವುದೇ ನಿರ್ದಿಷ್ಟ ನಿಯಮಗಳಿಲ್ಲ.ಈ ಸಂದರ್ಭದಲ್ಲಿ, ಒಂದೇ ಸನ್ನಿವೇಶದ ವಿಭಿನ್ನ ವ್ಯಾಖ್ಯಾನಗಳು ಮಾತ್ರ ಇವೆ.
 4. ನ್ಯಾಯಾಧೀಶರು ‘ವಿಚಾರಣೆಯಿಂದ ಹಿಂದೆ ಸರಿಯುವುದರಿಂದ’ ನ್ಯಾಯಾಲಯದ ವಿಚಾರಣೆಗೆ ಅಡ್ಡಿಯಾಗಬಹುದು ಮತ್ತು ವಿಚಾರಣೆಗಳನ್ನು ವಿಳಂಬ ಗೊಳಿಸಬಹುದು.

 

ವಿಷಯಗಳು: ವಿವಿಧ ಸಾಂವಿಧಾನಿಕ ಹುದ್ದೆಗಳಿಗೆ ನೇಮಕಾತಿ,ವಿವಿಧ ಸಾಂವಿಧಾನಿಕ ಸಂಸ್ಥೆಗಳ ಅಧಿಕಾರಗಳು, ಕಾರ್ಯಗಳು ಮತ್ತು ಜವಾಬ್ದಾರಿಗಳು.

ಅಸಭ್ಯ ವರ್ತನೆಗಾಗಿ ಸಂಸದರ ಅಮಾನತು:


(Suspension of MPs for disorderly conduct)

ಸಂದರ್ಭ:

ಇತ್ತೀಚೆಗೆ, ಪೆಗಾಸಸ್ ಗೂಢಚರ್ಯೆ ಕುರಿತು ಚರ್ಚೆ ನಡೆಸಬೇಕು ಎಂದು ರಾಜ್ಯಸಭೆಯಲ್ಲಿ ಫಲಕ ಹಿಡಿದು ಪ್ರತಿಭಟನೆ ನಡೆಸಿದ ಟಿಎಂಸಿಯ ಆರು ಸಂಸದರನ್ನು ದಿನದ ಮಟ್ಟಿಗೆ ಸದನದಿಂದ ಅಮಾನತು ಮಾಡಿ ರಾಜ್ಯಸಭೆಯ ಅಧ್ಯಕ್ಷರು ಆದೇಶಿಸಿದರು.

ರಾಜ್ಯಸಭೆಯ ಕಾರ್ಯವಿಧಾನ ಮತ್ತು ವ್ಯವಹಾರದ ಬಗ್ಗೆ ಸಾಮಾನ್ಯ ‘ನಿಯಮ 255’:

ರಾಜ್ಯಸಭೆಯ ಅಧ್ಯಕ್ಷರು ಈ ಸಂಸದರನ್ನು ಅಮಾನತುಗೊಳಿಸುವ ಸಲುವಾಗಿ, ರಾಜ್ಯಸಭೆಯಲ್ಲಿ ಸಾಮಾನ್ಯ ನಿಯಮಗಳು ಮತ್ತು ವ್ಯವಹಾರದ ನಡವಳಿಕೆಯ ನಿಯಮಗಳ ನಿಯಮ 255 ಅನ್ನು ಜಾರಿಗೊಳಿಸಿದರು.

ರಾಜ್ಯಸಭೆಯಲ್ಲಿ ಕಾರ್ಯವಿಧಾನ ಮತ್ತು ವ್ಯವಹಾರದ ನಿಯಮಗಳ ನಿಯಮ 255 ರ ಪ್ರಕಾರ (ಸದನದಿಂದ ಸದಸ್ಯರ ನಿರ್ಗಮನ) – “ಅಧ್ಯಕ್ಷರು ತಮ್ಮ ಅಭಿಪ್ರಾಯದಲ್ಲಿ ಸದನವನ್ನು ಸಂಪೂರ್ಣವಾಗಿ ಅಸ್ತವ್ಯಸ್ತಗೊಳಿಸಿದ್ದಾರೆ ಎಂದು ಮನಗಂಡರೆ ಯಾವುದೇ ಸದಸ್ಯರನ್ನು ರಾಜ್ಯಸಭೆಯಿಂದ ಹೊರಹೋಗುವಂತೆ ನಿರ್ದೇಶಿಸಬಹುದು. ಮತ್ತು ನಿರ್ಗಮಿಸಲು ಆದೇಶಿಸಲ್ಪಟ್ಟ ಸದಸ್ಯರು ತಕ್ಷಣವೇ ಸದನದಿಂದ ನಿರ್ಗಮಿಸಬೇಕು ಮತ್ತು ಆ ದಿನದ ಉಳಿದ ಅವಧಿಗೆ ಗೈರುಹಾಜರಾಗಬೇಕು.”

 ನಿಯಮ 255’ರ ಅಡಿಯಲ್ಲಿ ಅಮಾನತು ಹೇಗೆ ‘ನಿಯಮ 256’ ಅಡಿಯಲ್ಲಿನ ಅಮಾನತ್ತಿಗಿಂತ ಭಿನ್ನವಾಗಿದೆ?

ರಾಜ್ಯಸಭೆಯ ಕಾರ್ಯವಿಧಾನ ಮತ್ತು ವ್ಯವಹಾರದ ಬಗ್ಗೆ ಸಾಮಾನ್ಯ ನಿಯಮ 256’ ರಲ್ಲಿ ‘ಒಬ್ಬ ಸದಸ್ಯನ ಅಮಾನತು’ಗೆ ಅವಕಾಶ ನೀಡುತ್ತದೆ; ಆದರೆ ‘ನಿಯಮ 255’ ಕಡಿಮೆ ಶಿಕ್ಷೆಯನ್ನು ಒದಗಿಸುತ್ತದೆ.

 1. ನಿಯಮ 256 ರ ಅಡಿಯಲ್ಲಿ, “ರಾಜ್ಯಸಭೆಯ ಅಧ್ಯಕ್ಷರು ಅಗತ್ಯವೆಂದು ಭಾವಿಸಿದರೆ, ಪ್ರಸ್ತುತ ಅಧಿವೇಶನದ ಉಳಿದ ಅವಧಿಯನ್ನು ಮೀರದಂತೆ ಯಾವುದೇ ಸದಸ್ಯರನ್ನು ಸದನದಿಂದ ಅಮಾನತುಗೊಳಿಸಬಹುದು.”

 

ಲೋಕಸಭೆಯ ಸಭಾಪತಿ ಮತ್ತು ರಾಜ್ಯಸಭೆಯ ಅಧ್ಯಕ್ಷರು ಅಧಿಕಾರದ ನಡುವಿನ ವ್ಯತ್ಯಾಸ:

ಲೋಕಸಭೆಯ ಸ್ಪೀಕರ್‌ನಂತೆ, ರಾಜ್ಯಸಭೆಯ ಅಧ್ಯಕ್ಷರು, ರಾಜ್ಯಸಭೆಯಲ್ಲಿನ ನಿಯಮ ಕೈಪಿಡಿಯ ಕಾರ್ಯವಿಧಾನ ಮತ್ತು ವ್ಯವಹಾರ ನಡವಳಿಕೆಯ ನಿಯಮ ಸಂಖ್ಯೆ 255 ರ ಅಡಿಯಲ್ಲಿ, ರಾಜ್ಯಸಭೆಯ “ಯಾವುದೇ ಸದಸ್ಯನ ನಡವಳಿಕೆ, ಅವರ ಅಭಿಪ್ರಾಯದಲ್ಲಿ, ಸಂಪೂರ್ಣವಾಗಿ ಅಸ್ತವ್ಯಸ್ತವಾಗಿದೆ, ಎಂದು ಕಂಡುಬಂದರೆ ತಕ್ಷಣವೇ ರಾಜ್ಯಸಭೆಯಿಂದ ಹೊರನಡೆಯುವಂತೆ” ನಿರ್ದೇಶನ ನೀಡುವ ಅಧಿಕಾರವನ್ನು ಹೊಂದಿದ್ದಾರೆ.

ಆದರೆ, ಲೋಕಸಭೆಯ ಸಭಾಪತಿ ಗಳಂತೆ ರಾಜ್ಯಸಭೆಯ ಅಧ್ಯಕ್ಷರಿಗೆ ಸದಸ್ಯರನ್ನು ಅಮಾನತುಗೊಳಿಸುವ ಅಧಿಕಾರವಿಲ್ಲ.

 

ರಾಜ್ಯಸಭೆಯ ಸದಸ್ಯರನ್ನು ಅಮಾನತು ಮಾಡಲು ಅನುಸರಿಸಬೇಕಾದ ವಿಧಾನ:

 1. ರಾಜ್ಯಸಭೆಯ ಅಧ್ಯಕ್ಷರು,ಸಭಾ ಪೀಠದ ಅಧಿಕಾರವನ್ನು ನಿರ್ಲಕ್ಷಿಸುವ ಅಥವಾ ರಾಜ್ಯಸಭೆಯ ವ್ಯವಹಾರ ನಿಯಮಗಳನ್ನು ದುರುಪಯೋಗಪಡಿಸಿಕೊಳ್ಳುವ  ಮತ್ತು ಪದೇ ಪದೇ ಹಾಗೂ ಉದ್ದೇಶಪೂರ್ವಕವಾಗಿ ತಡೆಯುವ ಮೂಲಕ ರಾಜ್ಯಸಭೆಯ ನಿಯಮಗಳನ್ನು ದುರುಪಯೋಗಪಡಿಸಿಕೊಳ್ಳುವ ಸದಸ್ಯರನ್ನು ಹೆಸರಿಸಬಹುದು.
 2. ಹೀಗೆ ಒಬ್ಬ ಸದಸ್ಯನನ್ನು ಅಧ್ಯಕ್ಷರು ಹೆಸರಿಸಿದರೆ, ಅವರು, ತಿದ್ದುಪಡಿ, ಮುಂದೂಡಿಕೆ ಅಥವಾ ಚರ್ಚೆಯಿಲ್ಲದೆ, ಪ್ರಸಕ್ತ ಅಧಿವೇಶನದ ಉಳಿದ ಅವಧಿಗೆ ಆ ಸದಸ್ಯನನ್ನು ರಾಜ್ಯಸಭೆಯ ಸೇವೆಯಿಂದ ಅಮಾನತುಗೊಳಿಸುವ ಪ್ರಸ್ತಾವನೆಯನ್ನು ಸದನವು ಅಂಗೀಕರಿಸಬಹುದು.
 3. ರಾಜ್ಯಸಭೆಯು ಯಾವುದೇ ಸಮಯದಲ್ಲಿ, ಒಂದು ನಿಲುವಳಿ ಯನ್ನು ಮಂಡಿಸುವ ಮೂಲಕ ಅಮಾನತು ಆದೇಶವನ್ನು ರದ್ದುಗೊಳಿಸಬಹುದು.

 

ಸದನದಲ್ಲಿ ಸುವ್ಯವಸ್ಥೆ ಕಾಪಾಡುವ ಪ್ರಯತ್ನಗಳು:

ರಾಜ್ಯಸಭೆಯ ಅಧ್ಯಕ್ಷರಾಗಿ, ಉಪರಾಷ್ಟ್ರಪತಿ ಅನ್ಸಾರಿ ಅವರು ಸದನದಲ್ಲಿ ಆದೇಶವನ್ನು ತರಲು ಹಲವಾರು ಕ್ರಮಗಳನ್ನು ಜಾರಿಗೆ ತರಲು ಪ್ರಯತ್ನಿಸಿದ್ದರು. 2013 ರಲ್ಲಿ, ಅವರು ಸದನದಲ್ಲಿ ಶಿಸ್ತನ್ನು ನಿರ್ವಹಿಸಲು ಹಲವಾರು ಕ್ರಾಂತಿಕಾರಿ ಪರಿಹಾರಗಳನ್ನು ಪ್ರಸ್ತುತಪಡಿಸಿದರು. ಅವುಗಳು ಇಂತಿವೆ.

 1. ರಾಜ್ಯಸಭೆಯ ನಿಯಮಗಳನ್ನು ಉಲ್ಲಂಘಿಸುವ ಸಂಸದರ ಹೆಸರನ್ನು ರಾಜ್ಯಸಭಾ ಬುಲೆಟಿನ್ ನಲ್ಲಿ ಪ್ರಕಟಿಸುವುದು ಮತ್ತು ಅವಮಾನಿಸುವುದು.
 2. ಅಧ್ಯಕ್ಷರ ಪೀಠದ ಮುಂದೆ ಇರುವ ಬಾವಿಗೆ ಬಂದು ಫಲಕಗಳನ್ನು ಪ್ರದರ್ಶಿಸುವ ಅಥವಾ ಅಸಭ್ಯ ನಡವಳಿಕೆಯನ್ನು ತೋರುವ ಸದಸ್ಯರ ಹೆಸರನ್ನು ರಾಜ್ಯಸಭೆಯ ಬುಲೆಟಿನ್ ನಲ್ಲಿ ಸೇರಿಸುವುದು.
 3. ಸದನದಲ್ಲಿ ಅಸ್ವಸ್ಥತೆಯ ದೃಶ್ಯಗಳನ್ನು ಸಾರ್ವಜನಿಕವಾಗಿ ಪ್ರಕಟಿಸುವುದನ್ನು ತಡೆಯಲು ‘ಸದನದ ಪ್ರಕ್ರಿಯೆಗಳ’ ಪ್ರಸಾರವನ್ನು ಮುಂದೂಡುವುದು.

 

ಸಂಸದರ ಅಮಾನತ್ತಿನ ಸಮರ್ಥನೆ ಹೇಗೆ? ಇದು ಅಶಿಸ್ತಿನ ನಡವಳಿಕೆಯನ್ನು ನಿಲ್ಲಿಸಲು ತೆಗೆದುಕೊಂಡ ತೀವ್ರತರದ ಕ್ರಮವಲ್ಲವೇ?

ಸಂಸದರ ಅಶಿಸ್ತಿನ ವರ್ತನೆಗೆ ಪರಿಹಾರವು ದೀರ್ಘಕಾಲೀನ ಮತ್ತು ಪ್ರಜಾಪ್ರಭುತ್ವ ಮೌಲ್ಯಗಳಿಗೆ ಅನುಗುಣವಾಗಿರಬೇಕು.

 1. ಸದನದಲ್ಲಿ ವಿಚಾರಣೆಯ ಸುಗಮ ನಡವಳಿಕೆಗಾಗಿ, ಪ್ರಿಸೈಡಿಂಗ್ ಅಧಿಕಾರಿಯ ಅತ್ಯುನ್ನತ ಅಧಿಕಾರವನ್ನು ಜಾರಿಗೊಳಿಸುವುದು ಅತ್ಯಗತ್ಯ ಎಂಬುದರಲ್ಲಿ ಸಂದೇಹವಿಲ್ಲ.
 2. ಆದಾಗ್ಯೂ, ಪೀಠಾಧಿಕಾರಿಯು ಸಮತೋಲನವನ್ನು ಕಾಯ್ದುಕೊಳ್ಳಬೇಕು. ಪೀಠಾಧಿಕಾರಿಯ ಕಾರ್ಯವು ಸದನವನ್ನು ನಡೆಸುವುದೇ ಹೊರತು ಅದನ್ನು ಆಳುವುದಲ್ಲ ಎಂಬುದನ್ನು ನೆನಪಿನಲ್ಲಿಡಬೇಕು.

 

ವಿಷಯಗಳು: ಕೇಂದ್ರ ಮತ್ತು ರಾಜ್ಯಗಳಿಂದ  ದುರ್ಬಲ ವರ್ಗದ ಜನಸಮುದಾಯದವರಿಗೆ ಇರುವ ಕಲ್ಯಾಣ ಯೋಜನೆಗಳು ಮತ್ತು ಈ ಯೋಜನೆಗಳ ಕಾರ್ಯಕ್ಷಮತೆ; ಕಾರ್ಯವಿಧಾನಗಳು,ಕಾನೂನುಗಳು, ಸಂಸ್ಥೆಗಳು ಮತ್ತು ಈ ದುರ್ಬಲ ವಿಭಾಗಗಳ ರಕ್ಷಣೆ ಮತ್ತು ಸುಧಾರಣೆಗಾಗಿ ರಚಿಸಲಾದ ಸಂಸ್ಥೆಗಳು.

ಫಾಸ್ಟ್ ಟ್ರ್ಯಾಕ್ ವಿಶೇಷ ನ್ಯಾಯಾಲಯಗಳು (FTSC):


(Fast Track Special Courts (FTSCs)

 

ಸಂದರ್ಭ:

ಇತ್ತೀಚೆಗೆ, ಕೇಂದ್ರ ಕ್ಯಾಬಿನೆಟ್ ಮುಂದಿನ ಎರಡು ವರ್ಷಗಳವರೆಗೆ 1,023 ಫಾಸ್ಟ್ ಟ್ರ್ಯಾಕ್ ವಿಶೇಷ ನ್ಯಾಯಾಲಯಗಳನ್ನು (Fast Track Special Courts – FTSCs) (ಕೇಂದ್ರ ಪ್ರಾಯೋಜಿತ ಯೋಜನೆಯ ರೂಪದಲ್ಲಿ) ಮುಂದುವರಿಸಲು ಅನುಮೋದನೆ ನೀಡಿದೆ. ಇದಕ್ಕಾಗಿ ₹ 1,572.86 ಕೋಟಿ ವೆಚ್ಚ ಮಾಡಲಾಗುವುದು.

ಈ ಯೋಜನೆಯಡಿ, ಕೇಂದ್ರ ಪಾಲು ಮೊತ್ತವಾದ,  ₹ 971.70 ಕೋಟಿ,ಯನ್ನು ನಿರ್ಭಯಾ ನಿಧಿಯಿಂದ ನೀಡಲಾಗುವುದು.

 

ಯೋಜನೆಯ ಬಗ್ಗೆ:

 1.  ಈ ಯೋಜನೆಯನ್ನು ಅಕ್ಟೋಬರ್ 2019 ರಲ್ಲಿ ಪ್ರಾರಂಭಿಸಲಾಯಿತು.
 2. ‘ತ್ವರಿತಗತಿಯ ವಿಶೇಷ ನ್ಯಾಯಾಲಯಗಳನ್ನು’ (FTSCs) ‘ಮಹಿಳೆಯರ ರಕ್ಷಣೆಗಾಗಿನ ರಾಷ್ಟ್ರೀಯ ಅಭಿಯಾನ’ದ (National Mission for Safety of Women – NMSW) ಭಾಗವಾಗಿ ಸ್ಥಾಪಿಸಲಾಗುತ್ತಿದೆ.
 3. ಕಾನೂನು ಮತ್ತು ನ್ಯಾಯ ಸಚಿವಾಲಯದ ಅಧೀನದ ನ್ಯಾಯಾಂಗ ಇಲಾಖೆಯು ಈ ಯೋಜನೆಯನ್ನು ಜಾರಿಗೊಳಿಸುತ್ತಿದೆ.
 4. ಇದು ಕೇಂದ್ರ ಪ್ರಾಯೋಜಿತ ಯೋಜನೆಯಾಗಿದೆ ಮತ್ತು 2012 ರಲ್ಲಿ ‘ಲೈಂಗಿಕ ದೌರ್ಜನ್ಯದಿಂದ ಮಕ್ಕಳ ರಕ್ಷಣೆ ಕಾಯ್ದೆ’ (POCSO) ಅಡಿಯಲ್ಲಿ ಮಕ್ಕಳ ವಿರುದ್ಧ ಬಾಕಿ ಇರುವ ಅತ್ಯಾಚಾರ ಮತ್ತು ಅಪರಾಧಗಳ ಪ್ರಕರಣಗಳ ತ್ವರಿತ ವಿಚಾರಣೆ ಮತ್ತು ವಿಲೇವಾರಿ ಮಾಡುವ ಗುರಿಯನ್ನು ಇದು ಹೊಂದಿದೆ.

 

ಫಾಸ್ಟ್-ಟ್ರ್ಯಾಕ್ ವಿಶೇಷ ನ್ಯಾಯಾಲಯಗಳು’ (FTSC) ಯೋಜನೆಯ ವೈಶಿಷ್ಟ್ಯಗಳು:

 1. ಯೋಜನೆಯನ್ನು ಒಂದು ವರ್ಷ ಮೀರಿ ವಿಸ್ತರಿಸುವ ನಿರ್ಧಾರವು ಬಾಹ್ಯ ಮೌಲ್ಯಮಾಪನದಲ್ಲಿ ಮಾಡಲಾದ ಶಿಫಾರಸುಗಳನ್ನು ಅವಲಂಬಿಸಿರುತ್ತದೆ.
 2. ಈ ಯೋಜನೆಯು ಯಾವುದೇ ಶಾಶ್ವತ ಮೂಲಸೌಕರ್ಯ ಸೌಲಭ್ಯಗಳನ್ನು ಸೃಷ್ಟಿಸುವ ಉದ್ದೇಶವನ್ನು ಹೊಂದಿಲ್ಲ. ಸಂಬಂಧಿತ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳು ಮತ್ತು ಹೈಕೋರ್ಟ್‌ಗಳು ನಿರ್ಧರಿಸಿದಂತೆ ‘ಫಾಸ್ಟ್-ಟ್ರ್ಯಾಕ್ ವಿಶೇಷ ನ್ಯಾಯಾಲಯಗಳು’ ಗುತ್ತಿಗೆ ಪಡೆದ ಸ್ಥಳ ಅಥವಾ ಸೂಕ್ತ ಆವರಣದಲ್ಲಿ ಕಾರ್ಯನಿರ್ವಹಿಸುತ್ತವೆ.
 3. ಫಾಸ್ಟ್-ಟ್ರ್ಯಾಕ್ ವಿಶೇಷ ನ್ಯಾಯಾಲಯಗಳ’ ಸಂಯೋಜನೆ: ಪ್ರತಿ ಎಫ್‌ಟಿಎಸ್‌ಸಿ ನ್ಯಾಯಾಂಗ ಅಧಿಕಾರಿ ಮತ್ತು ಏಳು ಸಿಬ್ಬಂದಿಯನ್ನು ಹೊಂದಿರುತ್ತದೆ. ಸಾಕಷ್ಟು ಮಾನವಶಕ್ತಿ ಲಭ್ಯವಿಲ್ಲದ ಸ್ಥಳಗಳಲ್ಲಿ, ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳು ನ್ಯಾಯಾಂಗ ಅಧಿಕಾರಿಗಳು ಮತ್ತು ನ್ಯಾಯಾಲಯದ ಸಿಬ್ಬಂದಿಯನ್ನು ಒಪ್ಪಂದದ ಆಧಾರದ ಮೇಲೆ ನೇಮಿಸಬಹುದು. ಸೂಕ್ತ ಅನುಭವ ಹೊಂದಿರುವ ನಿವೃತ್ತ ನ್ಯಾಯಾಂಗ ಅಧಿಕಾರಿಗಳ ಸೇವೆಯನ್ನು ‘ತ್ವರಿತಗತಿಯ ವಿಶೇಷ ನ್ಯಾಯಾಲಯಗಳಲ್ಲಿ’ ಪ್ರಕರಣಗಳ ಇತ್ಯರ್ಥಕ್ಕೆ ತೆಗೆದುಕೊಳ್ಳಬಹುದು.

 

ಈ ಯೋಜನೆಯ ಪ್ರಯೋಜನಗಳು ಮತ್ತು ಮಹತ್ವ:

 1. ಈ ಯೋಜನೆಯಡಿ, 389 ‘ಫಾಸ್ಟ್-ಟ್ರ್ಯಾಕ್ ವಿಶೇಷ ನ್ಯಾಯಾಲಯಗಳನ್ನು’ ಪೊಕ್ಸೊ ಪ್ರಕರಣಗಳ ವಿಚಾರಣೆ ಮತ್ತು ವಿಲೇವಾರಿಗಾಗಿ ಪ್ರತ್ಯೇಕವಾಗಿ ಸ್ಥಾಪಿಸಲಾಗಿದೆ.
 2. ಪ್ರತಿ ತ್ವರಿತಗತಿಯ ವಿಶೇಷ ನ್ಯಾಯಾಲಯವು ಪ್ರತಿ ತ್ರೈಮಾಸಿಕದಲ್ಲಿ 41-42 ಪ್ರಕರಣಗಳನ್ನು ಮತ್ತು ಒಂದು ವರ್ಷದಲ್ಲಿ ಕನಿಷ್ಠ 165 ಪ್ರಕರಣಗಳನ್ನು ಇತ್ಯರ್ಥಗೊಳಿಸುವ ನಿರೀಕ್ಷೆಯಿದೆ.
 3. ಯೋಜನೆಯನ್ನು ಪ್ರಾರಂಭಿಸುವ ಸಮಯದಲ್ಲಿ, ವಿವಿಧ ನ್ಯಾಯಾಲಯಗಳಲ್ಲಿ ಬಾಕಿ ಇರುವ 1,66,882 ಅತ್ಯಾಚಾರ ಪ್ರಕರಣಗಳನ್ನು ಮತ್ತು ಪೋಕ್ಸೊ ಕಾಯ್ದೆಯಡಿ ಬಾಕಿ ಇರುವ ಪ್ರಕರಣಗಳನ್ನು ಇತ್ಯರ್ಥಪಡಿಸುವ ಗುರಿಯನ್ನು ಸರ್ಕಾರ ಹೊಂದಿತ್ತು.

 

ಯೋಜನೆಯ ಕಾರ್ಯಕ್ಷಮತೆ:

ಈ ಯೋಜನೆಯಡಿ ಒಟ್ಟು 1,023 ತ್ವರಿತ ಟ್ರ್ಯಾಕ್ ನ್ಯಾಯಾಲಯಗಳನ್ನು ಸ್ಥಾಪಿಸಲಾಗಿದ್ದು, ಅದರಲ್ಲಿ ಇದುವರೆಗೆ ಕೇವಲ 597 ತ್ವರಿತ ನ್ಯಾಯಾಲಯಗಳನ್ನು ಸ್ಥಾಪಿಸಲಾಗಿದೆ. ಯೋಜನೆ ಜಾರಿ ವಿಳಂಬದ ಬಗ್ಗೆ ಸಂಸದೀಯ ಸಮಿತಿಯಿಂದ ಕಳವಳ ವ್ಯಕ್ತವಾಗಿದೆ.

 

ಇದರ ಅಗತ್ಯತೆ:

ಮಹಿಳೆಯರು ಮತ್ತು ಮಕ್ಕಳ ಮೇಲಿನ ಅತ್ಯಾಚಾರ ಮತ್ತು ಸಾಮೂಹಿಕ ಅತ್ಯಾಚಾರದಂತಹ ಅಪರಾಧಗಳನ್ನು ಪರಿಣಾಮಕಾರಿಯಾಗಿ ಪರಿಶೀಲಿಸಲು ಲೈಂಗಿಕ ಅಪರಾಧಗಳಿಗೆ ಸಂಬಂಧಿಸಿದ ಪ್ರಕರಣಗಳ ತ್ವರಿತವಾಗಿ ಮತ್ತು ಕಾಲಮಿತಿಯಲ್ಲಿ ವಿಲೇವಾರಿ ಮಾಡುವ ಅಗತ್ಯವಿದೆ.

 

ವಿಷಯಗಳು: ಸಂಸತ್ತು ಮತ್ತು ರಾಜ್ಯ ಶಾಸಕಾಂಗಗಳು – ರಚನೆ, ಕಾರ್ಯವೈಖರಿ, ವ್ಯವಹಾರದ ನಡಾವಳಿಗಳು, ಅಧಿಕಾರಗಳು ಮತ್ತು ಸವಲತ್ತುಗಳು ಮತ್ತು ಇವುಗಳಿಂದ ಉಂಟಾಗುವ ಸಮಸ್ಯೆಗಳು.

MPLAD ಯೋಜನೆ ಎಂದರೇನು?


(What is MPLAD Scheme?)

ಸಂದರ್ಭ:

ಇತ್ತೀಚೆಗೆ, ಮಾಹಿತಿ ನೀಡುವಾಗ, ಕೇಂದ್ರ ಸರ್ಕಾರವು 2021 ಮತ್ತು 2122 ರ ಹಣಕಾಸು ವರ್ಷದ ‘ಸಂಸತ್  ಸದಸ್ಯರ ಸ್ಥಳೀಯ ಪ್ರದೇಶ ಅಭಿವೃದ್ಧಿ ಯೋಜನೆ’ (MP Local Area Development Scheme – MPLADS) ಅಡಿಯಲ್ಲಿ ನಿಧಿಯನ್ನು ಮರುಸ್ಥಾಪಿಸಿ ಜಾರಿಗೊಳಿಸುವ ಯಾವುದೇ ಪ್ರಸ್ತಾಪವನ್ನು ಸರ್ಕಾರವು ಪರಿಗಣಿಸುತ್ತಿಲ್ಲ ಎಂದು ಹೇಳಿದೆ.

ಹಿನ್ನೆಲೆ:

2020-21 ಮತ್ತು 2021-22 ಹಣಕಾಸು ವರ್ಷಗಳಿಗೆ ‘ಸಂಸದರ ಸ್ಥಳೀಯ ಪ್ರದೇಶ ಅಭಿವೃದ್ಧಿ ಯೋಜನೆ’ (MPLADS) ಜಾರಿ ಮಾಡದಿರಲು ಸರ್ಕಾರವು ಏಪ್ರಿಲ್, 2020 ರಲ್ಲಿ ನಿರ್ಧಾರ ತೆಗೆದುಕೊಂಡಿತು; ಮತ್ತು ಈ ಎರಡು ವರ್ಷಗಳಲ್ಲಿ MPLADS ಯೋಜನೆಯಡಿ ಬಿಡುಗಡೆಯಾಗುವ ಮೊತ್ತವನ್ನು ಜನರ ತುರ್ತು ಅಗತ್ಯಗಳನ್ನು ಪೂರೈಸಲು ಹಣಕಾಸು ಸಚಿವಾಲಯದ ನಿಯಂತ್ರಣದಲ್ಲಿ ಇರಿಸಲಾಗಿತ್ತು.

2018-19ರ ಆರ್ಥಿಕ ವರ್ಷದಲ್ಲಿ, ಈ ಯೋಜನೆಯಡಿ ₹ 5,012 ಕೋಟಿಗಳನ್ನು ಖರ್ಚು ಮಾಡಿದ್ದರೆ, 2019-20ರ ಆರ್ಥಿಕ ವರ್ಷದಲ್ಲಿ ಕೇವಲ ₹ 2,491.45 ಕೋಟಿಗಳನ್ನು ಈ ಯೋಜನೆಯಡಿ ಖರ್ಚು ಮಾಡಲಾಗಿದೆ.

ಕೇಂದ್ರ ಸರ್ಕಾರವು, ವಿಪತ್ತು ನಿರ್ವಹಣಾ ಕಾಯ್ದೆಯನ್ನು ಬಳಸಿ ಸಂಸತ್ ಸದಸ್ಯರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆ (MPLADS) ಯನ್ನು  2020 ರ ಏಪ್ರಿಲ್‌ನಲ್ಲಿ ಅಮಾನತುಗೊಳಿಸಿತ್ತು.

ಈ ನಿಧಿಯನ್ನು ಬಳಕೆ ಮಾಡಲಾದ ವಿಧಾನ:

ಸರ್ಕಾರದ ಪ್ರಕಾರ, MPLAD ಯೋಜನೆಯಿಂದ ಉಳಿಸಿದ ಹಣವನ್ನು ಆರೋಗ್ಯ ಮೂಲಸೌಕರ್ಯವನ್ನು ಸುಧಾರಿಸಲು, ನಿಧಿಯ ಹಂಚಿಕೆಯನ್ನು ಹೆಚ್ಚಿಸಲು, ಪ್ರಧಾನ ಮಂತ್ರಿ ಗರಿಬ್ ಕಲ್ಯಾಣ್ ಯೋಜನೆಯಡಿ ಉಚಿತ ಪಡಿತರವನ್ನು ಒದಗಿಸಲು ಮತ್ತು ಜನರಿಗೆ ಉಚಿತ ಲಸಿಕೆಯನ್ನು ನೀಡಲು ಬಳಸಲಾಗಿದೆ.

 

MPLADS ಯೋಜನೆಯ ಕುರಿತು:

 1. ಈ ಯೋಜನೆಯನ್ನು1993 ರ ಡಿಸೆಂಬರ್‌ನಲ್ಲಿ ಪ್ರಾರಂಭಿಸಲಾಯಿತು.
 2. ಇದರ ಉದ್ದೇಶ, ಸಂಸತ್ತಿನ ಸದಸ್ಯರಿಗೆ ಸ್ಥಳೀಯ ಅಗತ್ಯಗಳ ಆಧಾರದ ಮೇಲೆ ಸಮುದಾಯ ಮೂಲಸೌಕರ್ಯ ಸೇರಿದಂತೆ ಬಾಳಿಕೆ ಬರುವ ಸಮುದಾಯ ಸ್ವತ್ತುಗಳನ್ನು ರಚಿಸಲು ಮತ್ತು ಮೂಲಭೂತ ಸೌಲಭ್ಯಗಳನ್ನು ಒದಗಿಸಲು ಅಭಿವೃದ್ಧಿ ಸ್ವಭಾವದ ಕಾರ್ಯಗಳನ್ನು ಶಿಫಾರಸು ಮಾಡಲು ಯಾಂತ್ರಿಕ ವ್ಯವಸ್ಥೆಯನ್ನು ಒದಗಿಸಲು ಪ್ರಯತ್ನಿಸುವುದಾಗಿದೆ.
 3. MPLADS ಎಂಬುದು ಭಾರತ ಸರ್ಕಾರದಿಂದ ಸಂಪೂರ್ಣವಾಗಿ ಧನಸಹಾಯ ಪಡೆದ ಯೋಜನೆ ಯೋಜನೆಯಾಗಿದೆ.
 4. ಇದರಡಿಯಲ್ಲಿ, ಪ್ರತಿ ಸಂಸತ್ ಸದಸ್ಯರ ಕ್ಷೇತ್ರಕ್ಕೆ ವಾರ್ಷಿಕವಾಗಿ ₹.5 ಕೋಟಿಗಳ MPLADS ನಿಧಿಯನ್ನು ನೀಡಲಾಗುತ್ತದೆ.

 

ವಿಶೇಷ ಫೋಕಸ್:

ಸಂಸತ್ತಿನ ಸದಸ್ಯರು ತಮ್ಮ ಮತಕ್ಷೆತ್ರದಲ್ಲಿನ ಪರಿಶಿಷ್ಟ ಜಾತಿ ಮತ್ತು ಪಂಗಡಗಳು ವಾಸಿಸುವ ಪ್ರದೇಶದ ಅಭಿವೃದ್ಧಿಗೆ ಪ್ರತಿವರ್ಷ ಸಂಸತ್ ಸದಸ್ಯರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆ (MPLADS)ಯ ನಿಧಿಯಿಂದ ಕ್ರಮವಾಗಿ ಕನಿಷ್ಠ ಶೇ 15ರಷ್ಟು ಮತ್ತು ಶೇ 7.5ರಷ್ಟು ಹಣವನ್ನು ಅಭಿವೃದ್ಧಿ ಕಾರ್ಯಗಳಿಗಾಗಿ ವಿನಿಯೋಗಿಸುವುದು ಕಡ್ಡಾಯವಾಗಿದೆ.

ಬುಡಕಟ್ಟು ಜನರ ಸುಧಾರಣೆಗಾಗಿ ಟ್ರಸ್ಟ್‌ಗಳು ಮತ್ತು ಸಂಘಗಳನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಯೋಜನೆಯ ಮಾರ್ಗಸೂಚಿಗಳಲ್ಲಿ ನಿಗದಿಪಡಿಸಿದ ಷರತ್ತುಗಳಿಗನುಗುಣವಾಗಿ 75 ಲಕ್ಷ ರೂ ವಿನಿಯೋಗಿಸಬೇಕು.

 

ನಿಧಿಯ ಬಿಡುಗಡೆ:

 1. ಈ ಯೋಜನೆಯಡಿಯಲ್ಲಿ MPLADS ಅನ್ನು ಅನುದಾನದ (Grants- in-Aid) ರೂಪದಲ್ಲಿ ನೇರವಾಗಿ ಜಿಲ್ಲಾ ಅಧಿಕಾರಿಗಳಿಗೆ ಹಣವನ್ನು ಬಿಡುಗಡೆ ಮಾಡಲಾಗುತ್ತದೆ.
 2. ಯೋಜನೆಯಡಿ ಬಿಡುಗಡೆಯಾದ ಹಣವು ಒಂದು ವೇಳೆ ಅದೇ ವರ್ಷ ವಿನಿಯೋಗ ವಾಗದಿದ್ದರೆ (Non-Lapsable). ಅದನ್ನು ಮುಂದಿನ ವರ್ಷದಲ್ಲಿ ಬಳಸಿಕೊಳ್ಳಬಹುದು.
 3. ಒಂದು ನಿರ್ದಿಷ್ಟ ವರ್ಷದಲ್ಲಿ ನಿಧಿಯನ್ನು ಬಿಡುಗಡೆ ಮಾಡದಿದ್ದರೆ, ಹೊಣೆಗಾರಿಕೆಯ ಅರ್ಹತೆಗೆ ಒಳಪಟ್ಟು ಮುಂದಿನ ವರ್ಷಗಳಲ್ಲಿ ಬಿಡುಗಡೆ ಮಾಡಲಾಗುತ್ತದೆ.
 4. ಯೋಜನೆಯಡಿ ಸಂಸದರು ಶಿಫಾರಸು ಮಾಡುವ ಪಾತ್ರವನ್ನು ಹೊಂದಿದ್ದಾರೆ.
 5. ಪೂರ್ಣಗೊಂಡ ಕಾಮಗಾರಿಗಳ ಅರ್ಹತೆಯನ್ನು ಪರೀಕ್ಷಿಸಲು, ನಿಧಿಯನ್ನು ಮಂಜೂರು ಮಾಡಲು ಮತ್ತು ಅನುಷ್ಠಾನಗೊಳಿಸುವ ಏಜೆನ್ಸಿಗಳನ್ನು ಆಯ್ಕೆ ಮಾಡಲು, ಕಾರ್ಯಗಳಿಗೆ ಆದ್ಯತೆ ನೀಡಲು, ಒಟ್ಟಾರೆ ಕಾರ್ಯಾನುಷ್ಠಾನವನ್ನು ಮೇಲ್ವಿಚಾರಣೆ ಮಾಡಲು ಮತ್ತು ಯೋಜನೆಯನ್ನು ತಳಮಟ್ಟದಲ್ಲಿ ಮೇಲ್ವಿಚಾರಣೆ ಮಾಡಲು ಜಿಲ್ಲಾ ಪ್ರಾಧಿಕಾರವು ಅಧಿಕಾರವನ್ನು ಹೊಂದಿದೆ.
 6. ಜಿಲ್ಲೆಯಲ್ಲಿ ಪ್ರತಿ ವರ್ಷ ಅನುಷ್ಠಾನದ ಹಂತದಲ್ಲಿರುವ ಕಾಮಗಾರಿಗಳಲ್ಲಿ ಕನಿಷ್ಠ 10% ಯೋಜನೆಗಳನ್ನು ಜಿಲ್ಲಾ ಪ್ರಾಧಿಕಾರ ಪರಿಶೀಲಿಸಬೇಕು.

 

ಕಾರ್ಯಗಳಿಗಾಗಿ ಶಿಫಾರಸು:

 1. ಲೋಕಸಭಾ ಸದಸ್ಯರು ತಮಗೆ ಸಂಬಂಧಿಸಿದ ಕ್ಷೇತ್ರಗಳಲ್ಲಿ ಮಾಡಬೇಕಾಗಿರುವ ಕೆಲಸಗಳನ್ನು ಶಿಫಾರಸು ಮಾಡಬಹುದು.
 2. ರಾಜ್ಯಸಭೆಯ ಚುನಾಯಿತ ಸದಸ್ಯರು ತಾವು ಚುನಾಯಿತರಾದ ರಾಜ್ಯದ ಎಲ್ಲಿಯಾದರೂ ಮಾಡಬೇಕಾದ ಕಾಮಗಾರಿಗಳನ್ನು ಶಿಫಾರಸು ಮಾಡಬಹುದು.
 3. ಲೋಕಸಭೆ ಮತ್ತು ರಾಜ್ಯಸಭೆಯ ನಾಮನಿರ್ದೇಶಿತ ಸದಸ್ಯರು ದೇಶದಲ್ಲಿ ಎಲ್ಲಿಯಾದರೂ ಅನುಷ್ಠಾನಕ್ಕೆ ಕೆಲಸಗಳನ್ನು ಆಯ್ಕೆ ಮತ್ತು ಶಿಫಾರಸ್ಸು ಮಾಡಬಹುದು.

 

ವಿಷಯಗಳು: ಸರ್ಕಾರದ ನೀತಿಗಳು ಮತ್ತು ವಿವಿಧ ಕ್ಷೇತ್ರಗಳಲ್ಲಿನ ಅಭಿವೃದ್ಧಿಯ ಅಡಚಣೆಗಳು ಮತ್ತು ಅವುಗಳ ವಿನ್ಯಾಸ ಮತ್ತು ಅನುಷ್ಠಾನದಿಂದ ಉಂಟಾಗುವ ಸಮಸ್ಯೆಗಳು.

ಸೀಮಿತ ಹೊಣೆಗಾರಿಕೆ ಸಹಭಾಗಿತ್ವ (ತಿದ್ದುಪಡಿ) ಮಸೂದೆ 2021:


(The Limited Liability Partnership (Amendment) Bill 2021)

 

ಸಂದರ್ಭ:

ಇತ್ತೀಚೆಗೆ, ‘ಸೀಮಿತ ಹೊಣೆಗಾರಿಕೆ ಪಾಲುದಾರಿಕೆ (ತಿದ್ದುಪಡಿ) ಮಸೂದೆ’ 2021 (The Limited Liability Partnership (Amendment) Bill 2021) ಅನ್ನು ರಾಜ್ಯಸಭೆಯಲ್ಲಿ ಅಂಗೀಕರಿಸಲಾಯಿತು. ಈ ಮಸೂದೆಯಲ್ಲಿ, ‘ಸೀಮಿತ ಹೊಣೆಗಾರಿಕೆ ಪಾಲುದಾರಿಕೆ ಕಾಯ್ದೆ’ (LLP ಕಾಯಿದೆ), 2008 ಕ್ಕೆ ತಿದ್ದುಪಡಿಯನ್ನು ತರಲು ಪ್ರಸ್ತಾಪಿಸಲಾಗಿದೆ.

ಮೂಲ ಉದ್ದೇಶಗಳು, ಪ್ರಮುಖ ನಿಬಂಧನೆಗಳು ಮತ್ತು ಮಸೂದೆಯ ಗಮನ:

 1. ಈ ಮಸೂದೆಯು ‘ಈಸ್ ಆಫ್ ಡೂಯಿಂಗ್ ಬ್ಯುಸಿನೆಸ್’ ಅನ್ನು ಸುಗಮ ಗೊಳಿಸುವುದು ಮತ್ತು ದೇಶಾದ್ಯಂತ ಸ್ಟಾರ್ಟ್ಅಪ್‌ಗಳನ್ನು ಪ್ರೋತ್ಸಾಹಿಸುವ ಉದ್ದೇಶವನ್ನು ಹೊಂದಿದೆ.
 2. ಪ್ರಸ್ತುತದ ಕಾನೂನಿನಲ್ಲಿ, 24 ದಂಡನಾತ್ಮಕ ವಿಧಿಗಳು, 21 ಸಂಯುಕ್ತ ಅಪರಾಧಗಳು (compoundable offences) ಮತ್ತು 3 ಸಂಯುಕ್ತವಲ್ಲದ (non-compoundable) ಅಪರಾಧಗಳಿವೆ. ಈ 12 ಅಪರಾಧಗಳನ್ನು ಉದ್ದೇಶಿತ ಮಸೂದೆಯಲ್ಲಿ ಅಪರಾಧವಲ್ಲವೆಂದು ಘೋಷಿಸಲು ಅವಕಾಶ ನೀಡಲಾಗಿದೆ.
 3. ಅಧಿಕಾರಿಗಳ ನಿರ್ಣಯ (Adjudicating Officers):

ಈ ಅಧಿಕಾರಿಗಳನ್ನು ಕೇಂದ್ರ ಸರ್ಕಾರವು, ಈ ಕಾಯ್ದೆ ಅಡಿಯಲ್ಲಿ ದಂಡ ವಿಧಿಸಲು ನೇಮಕ ಮಾಡುತ್ತದೆ ಮತ್ತು ಕೇಂದ್ರ ಸರ್ಕಾರದ ಅಧಿಕಾರಿಗಳಾದ ಇವರು ರಿಜಿಸ್ಟ್ರಾರ್ ಶ್ರೇಣಿಗಿಂತ ಕೆಳಗಿನ ಶ್ರೇಣಿಯನ್ನು ಹೊಂದಿರುವುದಿಲ್ಲ.ಈ ಅಧಿಕಾರಿಗಳು ನೀಡುವ ಆದೇಶದ ವಿರುದ್ಧ ಪ್ರಾದೇಶಿಕ ನಿರ್ದೇಶಕರ ಮುಂದೆ ಮೇಲ್ಮನವಿ ಸಲ್ಲಿಸಬಹುದು.

 1. ವಿಶೇಷ ನ್ಯಾಯಾಲಯಗಳು: ಕಾಯ್ದೆಯ ಅಡಿಯಲ್ಲಿ ಅಪರಾಧಗಳ ತ್ವರಿತ ವಿಚಾರಣೆಯನ್ನು ಖಚಿತಪಡಿಸಿಕೊಳ್ಳಲು ವಿಶೇಷ ನ್ಯಾಯಾಲಯಗಳನ್ನು ಸ್ಥಾಪಿಸಲು ಮಸೂದೆಯು ಕೇಂದ್ರ ಸರ್ಕಾರವನ್ನು ಅನುಮತಿಸುತ್ತದೆ.
 2. ಮೇಲ್ಮನವಿ ನ್ಯಾಯಮಂಡಳಿಗೆ ಮೇಲ್ಮನವಿ ಸಲ್ಲಿಸುವುದು: ಕಾಯ್ದೆಯಡಿಯಲ್ಲಿ, ರಾಷ್ಟ್ರೀಯ ಕಂಪನಿ ಕಾನೂನು ಮೇಲ್ಮನವಿ ನ್ಯಾಯಾಧಿಕರಣದ (NCLAT) ಮುಂದೆ ರಾಷ್ಟ್ರೀಯ ಕಂಪನಿ ಕಾನೂನು ನ್ಯಾಯಮಂಡಳಿಯು ನೀಡಿದ (NCLT) ಆದೇಶಗಳ ವಿರುದ್ಧ ಮೇಲ್ಮನವಿ ಸಲ್ಲಿಸಬಹುದು. ಮಸೂದೆಯ ಪ್ರಕಾರ, ಎರಡೂ ಪಕ್ಷಗಳ ಒಪ್ಪಿಗೆಯೊಂದಿಗೆ ಅಂಗೀಕರಿಸಲಾದ ಆದೇಶದ ವಿರುದ್ಧ ಮೇಲ್ಮನವಿ ಸಲ್ಲಿಸುವುದು ಸಾಧ್ಯವಿಲ್ಲ, ಮತ್ತು NCLT ಆದೇಶ ನೀಡಿದ 60 ದಿನಗಳ ಒಳಗೆ ಮೇಲ್ಮನವಿ ಸಲ್ಲಿಸಬೇಕು (ಇನ್ನೊಂದು ಸಲ 60 ದಿನಗಳವರೆಗೆ ವಿಸ್ತರಿಸಬಹುದು).
 3. ಮಸೂದೆಯು ಸಣ್ಣ ‘ಸೀಮಿತ ಹೊಣೆಗಾರಿಕೆ ಪಾಲುದಾರಿಕೆ’ (LLPs) ರಚನೆಗೆ ಒದಗಿಸುತ್ತದೆ: ಇದರಲ್ಲಿ (i) ಪಾಲುದಾರರ ಕೊಡುಗೆ ರೂ. 25 ಲಕ್ಷದವರೆಗೆ (ರೂ. 5 ಕೋಟಿಯವರೆಗೆ ವಿಸ್ತರಿಸಬಹುದು), (ii) ಹಿಂದಿನ ಹಣಕಾಸು ವರ್ಷದ ವಹಿವಾಟು ರೂ .40 ಲಕ್ಷದವರೆಗೆ (ರೂ .50 ಕೋಟಿಯವರೆಗೆ ವಿಸ್ತರಿಸಬಹುದು).
 4. ಸ್ಟಾರ್ಟ್ ಅಪ್ ‘LLPs’: ಕೇಂದ್ರ ಸರ್ಕಾರವು ಕೆಲವು ಎಲ್‌ಎಲ್‌ಪಿಗಳನ್ನು ಸ್ಟಾರ್ಟ್ ಅಪ್ ಎಲ್‌ಎಲ್‌ಪಿಗಳಾಗಿ ಅಧಿಸೂಚಿಸಬಹುದು.
 5. ಲೆಕ್ಕಪರಿಶೋಧನೆಯ ಮಾನದಂಡಗಳು: ಕೇಂದ್ರ ಸರ್ಕಾರವು ರಾಷ್ಟ್ರೀಯ ಹಣಕಾಸು ವರದಿ ಪ್ರಾಧಿಕಾರದೊಂದಿಗೆ ಸಮಾಲೋಚಿಸಿ, ಎಲ್‌ಎಲ್‌ಪಿ ವರ್ಗಗಳ ಲೆಕ್ಕಪತ್ರ ನಿರ್ವಹಣೆ ಮತ್ತು ಲೆಕ್ಕಪರಿಶೋಧನೆಗೆ ಸಂಬಂಧಿಸಿದ ಮಾನದಂಡಗಳನ್ನು ಸೂಚಿಸಬಹುದು.

 

LLP ಎಂದರೇನು?

 ಸೀಮಿತ ಹೊಣೆಗಾರಿಕೆ ಪಾಲುದಾರಿಕೆಗಳು– (Limited Liability Partnerships- LLPs) ವ್ಯಾಪಾರ ಸಂಘಟನೆಯ ಒಂದು ರೂಪವಾಗಿದ್ದು, ಇದರಲ್ಲಿ ಪ್ರತಿ ಪಾಲುದಾರರ ಹೊಣೆಗಾರಿಕೆ ಕಾನೂನುಬದ್ಧವಾಗಿ ಸೀಮಿತವಾಗಿರುತ್ತದೆ. ಆದ್ದರಿಂದ, ಇದು ಪಾಲುದಾರಿಕೆ ಮತ್ತು ನಿಗಮಗಳ ಅಂಶಗಳನ್ನು ಪ್ರತಿಬಿಂಬಿಸುತ್ತದೆ.

LLP ಯಲ್ಲಿ, ಒಬ್ಬ ಪಾಲುದಾರ ಇನ್ನೊಬ್ಬ ಪಾಲುದಾರನ ದುಷ್ಕೃತ್ಯ ಅಥವಾ ನಿರ್ಲಕ್ಷ್ಯಕ್ಕೆ ಜವಾಬ್ದಾರನಾಗಿರುವುದಿಲ್ಲ.

 

 LLP ಯ ಪ್ರಮುಖ ಲಕ್ಷಣಗಳು:

ಎಲ್‌ಎಲ್‌ಪಿ ಎನ್ನುವುದು ಸಂಸ್ಥೆಯ ಪಾಲುದಾರರಿಂದ ಪ್ರತ್ಯೇಕವಾಗಿರುವ ಒಂದು ಸಾಂಸ್ಥಿಕ (Body Corporate)  ಮತ್ತು ಕಾನೂನು ಘಟಕವಾಗಿದೆ ಮತ್ತು ಇದು ಶಾಶ್ವತ / ನಿರಂತರ ಅನುಕ್ರಮವನ್ನು ಹೊಂದಿದೆ.

ಇದೊಂದು ಪ್ರತ್ಯೇಕ ಶಾಸನವೇ ಆಗಿರುವುದರಿಂದ (ಅಂದರೆ ಎಲ್ ಎಲ್ ಪಿ ಆಕ್ಟ್, 2008), ಭಾರತೀಯ ಪಾಲುದಾರಿಕೆ ಕಾಯ್ದೆ, 1932 ರ ನಿಬಂಧನೆಗಳು ಎಲ್‌ಎಲ್‌ಪಿ ಗೆ ಅನ್ವಯಿಸುವುದಿಲ್ಲ ಮತ್ತು ಇದನ್ನು ಪಾಲುದಾರರ ನಡುವಿನ(contractual agreement) ಒಪ್ಪಂದಗಳಿಂದ ನಿಯಂತ್ರಿಸಲಾಗುತ್ತದೆ.

ಪ್ರತಿಯೊಂದು “ಸೀಮಿತ ಹೊಣೆಗಾರಿಕೆ ಪಾಲುದಾರಿಕೆ” ಅಥವಾ ಅದರ ಸಂಕ್ಷಿಪ್ತ “LLP” ಅನ್ನು ಪ್ರತಿ ಸೀಮಿತ ಹೊಣೆಗಾರಿಕೆ ಪಾಲುದಾರರು ಅವರ ಹೆಸರಿನ ಕೊನೆಯಲ್ಲಿ ಬಳಸಬೇಕು.

 

ಸಂಯೋಜನೆ:

ಪ್ರತಿ ಎಲ್‌ಎಲ್‌ಪಿಯು ಕನಿಷ್ಠ ಇಬ್ಬರು ಪಾಲುದಾರರನ್ನು ಹೊಂದಿರಬೇಕು ಮತ್ತು ಕನಿಷ್ಠ ಇಬ್ಬರು ವ್ಯಕ್ತಿಗಳನ್ನು ನಿಯೋಜಿತ ಪಾಲುದಾರರಾಗಿ ಹೊಂದಿರಬೇಕು, ಅವರಲ್ಲಿ ಕನಿಷ್ಠ ಒಬ್ಬರು ಭಾರತದ ನಿವಾಸಿಯಾಗಿರಬೇಕು ಮತ್ತು ಎಲ್ಲಾ ಪಾಲುದಾರರು ‘ಸೀಮಿತ ಹೊಣೆಗಾರಿಕೆ ಪಾಲುದಾರಿಕೆಯ’ ಪ್ರತಿನಿಧಿಗಳಾಗಿರುತ್ತಾರೆ.

 

LLP ಯ ಅವಶ್ಯಕತೆ ಮತ್ತು ಮಹತ್ವ:

 1. ಎಲ್ ಎಲ್ ಪಿ ಸ್ವರೂಪವು ಪರ್ಯಾಯ ಕಾರ್ಪೊರೇಟ್ ವ್ಯವಹಾರ ಆವೃತ್ತಿಯಾಗಿದೆ, ಇದರಲ್ಲಿ ಕಂಪನಿಯ ಸೀಮಿತ ಹೊಣೆಗಾರಿಕೆ ಪ್ರಯೋಜನವನ್ನು ಒದಗಿಸಲಾಗುತ್ತದೆ, ಆದರೆ ಪಾಲುದಾರಿಕೆ ಸಂಸ್ಥೆಯಂತೆ ಅದರ ಸದಸ್ಯರಿಗೆ ಪರಸ್ಪರ ಒಪ್ಪಿಗೆಯ ಆಧಾರದ ಮೇಲೆ ಆಂತರಿಕ ನಿರ್ವಹಣೆಯನ್ನು ಸಂಘಟಿಸಲು ಅವಕಾಶವಿದೆ.
 2. ಸಾಮಾನ್ಯವಾಗಿ, ಈ ಸ್ವರೂಪವು ಸಣ್ಣ ಮತ್ತು ಮಧ್ಯಮ ಉದ್ಯಮಗಳಿಗೆ ಮತ್ತು ವಿಶೇಷವಾಗಿ ಸೇವಾ ವಲಯದ ಉದ್ಯಮಗಳಿಗೆ ಬಹಳ ಉಪಯುಕ್ತವಾಗಿರುತ್ತದೆ.
 3. ಅಂತರರಾಷ್ಟ್ರೀಯ ಮಟ್ಟದಲ್ಲಿ, ಸೀಮಿತ ಹೊಣೆಗಾರಿಕೆ ಸಹಭಾಗಿತ್ವ (LLP) ಒಂದು ಜನಪ್ರಿಯ ಸ್ವರೂಪವಾಗಿದೆ, ವಿಶೇಷವಾಗಿ ಸೇವಾ ಉದ್ಯಮಕ್ಕೆ ಅಥವಾ ವೃತ್ತಿಪರರಿಗೆ ಸಂಬಂಧಿಸಿದ ಚಟುವಟಿಕೆಗಳನ್ನು ಹೊಂದಿರುವ ವ್ಯವಹಾರಗಳಿಗೆ ಆದ್ಯತೆಯ ಆವೃತ್ತಿಯಾಗಿದೆ.

 


ಸಾಮಾನ್ಯ ಅಧ್ಯಯನ ಪತ್ರಿಕೆ : 3


 

ವಿಷಯಗಳು: ಆಂತರಿಕ ಭದ್ರತೆಗೆ ಸವಾಲನ್ನು ಒಡ್ಡುವ ಆಡಳಿತ ವಿರೋಧಿ ಅಂಶಗಳ ಪಾತ್ರ.

ಕಾನೂನುಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯಿದೆ.


(Unlawful Activities (Prevention) Act)

 ಸಂದರ್ಭ:

ಜಮ್ಮು ಮತ್ತು ಕಾಶ್ಮೀರ (J & K) ಆಡಳಿತವು 2019 ನೇ ವರ್ಷದಿಂದ, 2,300 ಕ್ಕೂ ಹೆಚ್ಚು ವ್ಯಕ್ತಿಗಳನ್ನು, 1,200 ಕ್ಕೂ ಹೆಚ್ಚು ಪ್ರಕರಣಗಳಲ್ಲಿ ಕಾನೂನುಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯಿದೆಯ (Unlawful Activities (Prevention) Act – UAPA) ಅಡಿಯಲ್ಲಿ ಬಂಧಿಸಿದೆ ಮತ್ತು 954 ಜನರ ವಿರುದ್ಧ ‘ಸಾರ್ವಜನಿಕ ಸುರಕ್ಷತಾ ಕಾಯ್ದೆ’ (Public Safety Act – PSA) ಅಡಿಯಲ್ಲಿ ಪ್ರಕರಣಗಳನ್ನು ದಾಖಲಿಸಲಾಗಿದೆ. 2015 ರಲ್ಲಿನ 897 UAPA ಪ್ರಕರಣಗಳಿಗೆ ಹೋಲಿಸಿದರೆ ಇದು ತೀವ್ರಗತಿಯ ಏರಿಕೆಯಾಗಿದೆ.

ಇವರಲ್ಲಿ, ಕಾನೂನುಬಾಹಿರ ಚಟುವಟಿಕೆಗಳ (ತಡೆ) ಕಾಯ್ದೆ (UAPA) ಅಡಿಯಲ್ಲಿ ಬಂಧಿಸಲಾದ ಶೇಕಡಾ 46 ರಷ್ಟು ಜನರು ಮತ್ತು  ‘ಸಾರ್ವಜನಿಕ ಸುರಕ್ಷತಾ ಕಾಯ್ದೆ’ (PSA) ಅಡಿಯಲ್ಲಿ ಈ ಕಾಯಿದೆಯಡಿ ಬಂಧಿತರಾಗಿರುವ ಶೇ .30 ರಷ್ಟು ವ್ಯಕ್ತಿಗಳು ಇನ್ನೂ ಜಮ್ಮು ಮತ್ತು ಕಾಶ್ಮೀರದ ಒಳಗಿನ ಮತ್ತು ಹೊರಗಿನ ಜೈಲುಗಳಲ್ಲಿ ಬಂಧಿತರಾಗಿದ್ದಾರೆ.

 

ಕಾನೂನುಬಾಹಿರ ಚಟುವಟಿಕೆಗಳ (ತಡೆ) ಕಾಯ್ದೆ ಕುರಿತು:

1967 ರಲ್ಲಿ ಅಂಗೀಕರಿಸಲ್ಪಟ್ಟ ಈ ಕಾನೂನು (the Unlawful Activities (Prevention) Act) ಭಾರತದಲ್ಲಿ ಕಾನೂನುಬಾಹಿರ ಚಟುವಟಿಕೆಗಳನ್ನು ನಡೆಸುವ ಗುಂಪುಗಳನ್ನು ಪರಿಣಾಮಕಾರಿಯಾಗಿ ತಡೆಗಟ್ಟುವ ಗುರಿಯನ್ನು ಹೊಂದಿದೆ.

 ಈ ಕಾಯಿದೆಯು ಕೇಂದ್ರ ಸರ್ಕಾರಕ್ಕೆ ಸಂಪೂರ್ಣ ಅಧಿಕಾರವನ್ನು ನೀಡುತ್ತಿದ್ದು ಅದರ ಮೂಲಕ ಕೇಂದ್ರವು ಒಂದು ಚಟುವಟಿಕೆಯನ್ನು ಕಾನೂನುಬಾಹಿರವೆಂದು ಭಾವಿಸಿದರೆ ಸರ್ಕಾರವು ಅಧಿಕೃತ ಗೆಜೆಟ್ ಮೂಲಕ ಅದನ್ನು ಘೋಷಿಸಬಹುದು.

 

 1. ಮರಣದಂಡನೆ ಮತ್ತು ಜೀವಾವಧಿ ಶಿಕ್ಷೆಯನ್ನು ಗರಿಷ್ಠ ಶಿಕ್ಷೆಯಾಗಿ ನೀಡಬಹುದಾಗಿದೆ.

ಮುಖ್ಯ ಅಂಶಗಳು:

 1. UAPA ಅಡಿಯಲ್ಲಿ, ಭಾರತೀಯ ಮತ್ತು ವಿದೇಶಿ ಪ್ರಜೆಗಳು, ಇಬ್ಬರನ್ನು ಬಂಧಿಸಿ ವಿಚಾರಣೆಗೊಳಪಡಿಸಬಹುದು.
 2. ಭಾರತದ ಹೊರಗಿನ ವಿದೇಶಿ ನೆಲದಲ್ಲಿ ಅಪರಾಧ ನಡೆದರೂ ಅಪರಾಧಿಗಳಿಗೆ ಈ ಕಾಯ್ದೆಯು ಭಾರತೀಯ ಮತ್ತು ವಿದೇಶಿ ಅಪರಾಧಿಗಳಿಗೆ ಸಮಾನವಾಗಿ ಅನ್ವಯಿಸುತ್ತದೆ.
 3. ಯುಎಪಿಎ ಅಡಿಯಲ್ಲಿ, ತನಿಖಾ ಸಂಸ್ಥೆಯು ಬಂಧನದ ನಂತರ ಗರಿಷ್ಠ 180 ದಿನಗಳಲ್ಲಿ ಚಾರ್ಜ್‌ಶೀಟ್ ಸಲ್ಲಿಸಬಹುದು ಮತ್ತು ನ್ಯಾಯಾಲಯಕ್ಕೆ ಮಾಹಿತಿ ನೀಡಿದ ನಂತರ ಅವಧಿಯನ್ನು ಇನ್ನಷ್ಟು ವಿಸ್ತರಿಸಬಹುದು.

 

2019 ರ ತಿದ್ದುಪಡಿಗಳ ಪ್ರಕಾರ:

 1. NIA ಯಿಂದ ಪ್ರಕರಣದ ತನಿಖೆ ನಡೆದಾಗ ಆಸ್ತಿಯನ್ನು ವಶಪಡಿಸಿಕೊಳ್ಳಲು ಅಥವಾ ಲಗತ್ತಿಸಲು ಅನುಮತಿ ನೀಡಲು ರಾಷ್ಟ್ರೀಯ ತನಿಖಾ ಸಂಸ್ಥೆಯ (NIA) ಮಹಾನಿರ್ದೇಶಕರಿಗೆ ಈ ಕಾಯಿದೆ ಅಧಿಕಾರ ನೀಡುತ್ತದೆ.
 2. DSP ಅಥವಾ ACP ಅಥವಾ ರಾಜ್ಯದ ಉನ್ನತ ಶ್ರೇಣಿಯ ಅಧಿಕಾರಿಯೊಬ್ಬರು ತನಿಖೆ ನಡೆಸಿದ ಪ್ರಕರಣಗಳಿಗೆ ಹೆಚ್ಚುವರಿಯಾಗಿ ಭಯೋತ್ಪಾದನೆ ಪ್ರಕರಣಗಳ ತನಿಖೆ ನಡೆಸಲು ಇನ್ಸ್‌ಪೆಕ್ಟರ್ ಅಥವಾ ಹೆಚ್ಚಿನ ಹುದ್ದೆಯ NIA ಅಧಿಕಾರಿಗಳಿಗೆ ಈ ಕಾಯ್ದೆ ಅಧಿಕಾರ ನೀಡುತ್ತದೆ.
 3. ಒಬ್ಬ ವ್ಯಕ್ತಿಯನ್ನು ಭಯೋತ್ಪಾದಕನೆಂದು ಘೋಷಿಸುವ ಅವಕಾಶವೂ ಇದರಲ್ಲಿ ಸೇರಿದೆ. ಈ ತಿದ್ದುಪಡಿಗೆ ಮುಂಚಿತವಾಗಿ ಕೇವಲ ಸಂಘಟನೆಗಳನ್ನು ಮಾತ್ರ ಭಯೋತ್ಪಾದಕ ಸಂಘಟನೆಗಳು ಎಂದು ಗುರುತಿಸಬಹುದಾಗಿತ್ತು.

 

UAPA ಕುರಿತು ದೆಹಲಿ ಉಚ್ಚ ನ್ಯಾಯಾಲಯದ ವ್ಯಾಖ್ಯಾನ:

ಕಾನೂನುಬಾಹಿರ ಚಟುವಟಿಕೆಗಳು (ತಡೆಗಟ್ಟುವಿಕೆ) ಕಾಯ್ದೆ, 1967, (UAPA) ಯ “ಅಸ್ಪಷ್ಟ” ಸೆಕ್ಷನ್ 15 ರ ಬಾಹ್ಯರೇಖೆಗಳನ್ನು ( Section 15 of the Unlawful Activities (Prevention) Act, 1967) ವ್ಯಾಖ್ಯಾನಿಸುವ ತೀರ್ಪನ್ನು ನೀಡುವ ಸಂದರ್ಭದಲ್ಲಿ,ದೆಹಲಿ ಹೈಕೋರ್ಟ್‌ನ ವಿಭಾಗೀಯ ಪೀಠವು ಕಾಯಿದೆಯ ಸೆಕ್ಷನ್ 15, 17 ಮತ್ತು 18 ರ ಮೇಲೆ ಕೆಲವು ಪ್ರಮುಖ ತತ್ವಗಳನ್ನು ವಿಧಿಸಿದೆ.

 

ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆಯ 15, 17 ಮತ್ತು 18ನೇ ವಿಭಾಗಗಳು(ಸೆಕ್ಷನ್ ಗಳು):

 1. ಕಾಯ್ದೆಯ ಸೆಕ್ಷನ್. 15 ‘ಭಯೋತ್ಪಾದಕ ಕೃತ್ಯ’ದ ಅಪರಾಧವನ್ನು ಮಾಡಲಾಗುತ್ತದೆ.
 2. ಸೆಕ್ಷನ್. 17 ಭಯೋತ್ಪಾದಕ ಕೃತ್ಯ ಎಸಗಲು ಹಣವನ್ನು ಸಂಗ್ರಹಿಸಿದ್ದಕ್ಕಾಗಿ ಶಿಕ್ಷೆಯನ್ನು ವಿಧಿಸುತ್ತದೆ.
 3. ಸೆಕ್ಷನ್.18ರ ಅಡಿಯಲ್ಲಿ, ‘ಭಯೋತ್ಪಾದಕ ಕೃತ್ಯ ಎಸಗಲು ಸಂಚು ಅಥವಾ ಭಯೋತ್ಪಾದಕ ಕೃತ್ಯ ಎಸಗಲು ಯಾವುದೇ ಪೂರ್ವಸಿದ್ಧತೆಯಲ್ಲಿನ’ ಕೃತ್ಯ ಎಂಬ ಅಪರಾಧವನ್ನು ಹೊರಿಸಲಾಗುತ್ತದೆ.

 

ನ್ಯಾಯಾಲಯ ಮಾಡಿದ ಪ್ರಮುಖ ಅವಲೋಕನಗಳು:

 1. “ಭಯೋತ್ಪಾದಕ ಕಾಯ್ದೆ”ಗಳನ್ನು ಕ್ಷುಲ್ಲಕಗೊಳಿಸಲು ಲಘುವಾಗಿ ಪರಿಗಣಿಸಬಾರದು.
 2. ಭಯೋತ್ಪಾದಕ ಚಟುವಟಿಕೆಯೆಂದರೆ ಸಾಮಾನ್ಯ ದಂಡನೆ ಕಾನೂನಿನಡಿಯಲ್ಲಿ ವ್ಯವಹರಿಸಲು ಕಾನೂನು ಜಾರಿ ಸಂಸ್ಥೆಗಳ ಸಾಮರ್ಥ್ಯವನ್ನು ಮೀರಿ ವ್ಯವಹರಿಸುತ್ತದೆ. ಹಿತೇಂದ್ರ ವಿಷ್ಣು ಠಾಕೂರ್ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ನೀಡಿದ ತೀರ್ಪನ್ನು ಈ ನ್ಯಾಯಾಲಯವು ಆಧಾರವಾಗಿ ಉಲ್ಲೇಖಿಸಿದೆ.
 3. ಹಿತೇಂದ್ರ ವಿಷ್ಣು ಠಾಕೂರ್ ತೀರ್ಪಿನಲ್ಲಿ ಸರ್ವೋಚ್ಚ ನ್ಯಾಯಾಲಯವು ಪ್ರತಿಯೊಬ್ಬ ಭಯೋತ್ಪಾದಕನು ಅಪರಾಧಿಯಾಗಬಹುದು ಆದರೆ ಪ್ರತಿಯೊಬ್ಬ ಅಪರಾಧಿಯನ್ನು ಭಯೋತ್ಪಾದಕ ಎಂದು ಹಣೆಪಟ್ಟಿ ಕಟ್ಟಲಾಗುವುದಿಲ್ಲ ಎಂದು ತೀರ್ಪು ನೀಡಿದೆ.
 4. ಭಯೋತ್ಪಾದಕ ಕೃತ್ಯಗಳನ್ನು ರಾಜ್ಯದ ಸಾಮಾನ್ಯ ಕಾನೂನು ಸುವ್ಯವಸ್ಥೆಯ ಸಮಸ್ಯೆಯೊಂದಿಗೆ ಸಮೀಕರಿಸಬಾರದು.
 5. “ಭಯೋತ್ಪಾದಕ ಕಾಯ್ದೆ”ಯನ್ನು, ಭಾರತೀಯ ದಂಡ ಸಂಹಿತೆ ಅಡಿಯಲ್ಲಿ ಸಾಂಪ್ರದಾಯಿಕ ಅಪರಾಧಗಳ ಅಡಿಯಲ್ಲಿ ಬರುವ ಪ್ರಕರಣಗಳಿಗೆ ಸಾಮಾನ್ಯವಾಗಿ ಅನ್ವಯಿಸಲು ಬರುವುದಿಲ್ಲ.
 6. ಸರ್ಕಾರ ಅಥವಾ ಸಂಸತ್ತಿನ ನಡೆಗಳ ಬಗ್ಗೆ ವ್ಯಾಪಕ ವಿರೋಧ ಇದ್ದಾಗ ಆಕ್ರೋಶಭರಿತ ಭಾಷಣಗಳು, ರಸ್ತೆ ತಡೆಯಂತಹ ಕೃತ್ಯಗಳು ಅಸಾಮಾನ್ಯ ಏನಲ್ಲ. ಸರ್ಕಾರ ಅಥವಾ ಸಂಸತ್ತಿನ ನಡವಳಿಕೆಯ ವಿರುದ್ಧ ಪ್ರತಿಭಟನೆ ನಡೆಸುವುದು ಕಾನೂನುಬಾಹಿರವೂ ಅಲ್ಲ. ಇಂತಹ ಪ್ರತಿಭಟನೆಗಳು ಶಾಂತಿಯುತವಾಗಿ, ಅಹಿಂಸಾತ್ಮಕವಾಗಿ ಇರಬೇಕು. ಆದರೆ, ಪ್ರತಿಭಟನಕಾರರು ಕಾನೂನಿನ ಮಿತಿಯನ್ನು ಮೀರುವುದೂ ಅಸಾಮಾನ್ಯ ಅಲ್ಲ ಎಂದು ನ್ಯಾಯಾಲಯವು ಹೇಳಿದೆ.
 7. ಈಗಿನ ಪ್ರಕರಣದಲ್ಲಿ, ಆಕ್ರೋಶಭರಿತ ಭಾಷಣ ಮಾಡಲಾಗಿದೆ, ಮಹಿಳಾ ಪಪ್ರತಿಭಟನಕಾರರಿಗ ಕುಮ್ಮಕ್ಕು ನೀಡಲಾಗಿದೆ ಎಂದು ವಾದಕ್ಕೆ ಒಪ್ಪಿಕೊಂಡು, ಸಂವಿಧಾನವು ನೀಡಿದ ಪ್ರತಿಭಟನೆಯ ಮಿತಿಯನ್ನು ಇದು ಮೀರಿದೆ ಎಂದು ಭಾವಿಸಿದರೂ ಇದನ್ನು ಕಾನೂನುಬಾಹಿರ ಕೃತ್ಯಗಳ ತಡೆ ಕಾಯ್ದೆಯಲ್ಲಿ ವಿವರಿಸಿರುವ ಭಯೋತ್ಪಾದನಾ ಕೃತ್ಯ ಅಥವಾ ಷಡ್ಯಂತ್ರ ಎಂದು ಪರಿಗಣಿಸಲು ಸಾಧ್ಯವಿಲ್ಲ’ ಎಂದು ಪೀಠವು ವಿವರಿಸಿದೆ.
 8. ಆರೋಪಿಗಳ ಮೇಲೆ ಹೊರಿಸಲಾಗಿರುವ ಆರೋಪಗಳಿಗೂ ಆರೋಪಪಟ್ಟಿ ಮತ್ತು ಅದರ ಜತೆಗೆ ಇರಿಸಿದ್ದ ದಾಖಲೆಗಳಿಗೂ ಯಾವುದೇ ಸಂಬಂಧ ಇರುವುದು ಮೇಲ್ನೋಟಕ್ಕೆ ಕಾಣಿಸುತ್ತಿಲ್ಲ ಎಂದೂ ಪೀಠವು ಹೇಳಿದೆ.
 9. ಭಿನ್ನಮತವನ್ನು ದಮನಿಸುವ ಕಾತರ ಮತ್ತು ಪರಿಸ್ಥಿತಿಯು ಕೈಮೀರಿ ಹೋಗಬಹುದು ಎಂಬ ಅನಾರೋಗ್ಯಕರ ಭೀತಿಯಿಂದಾಗಿ, ಸಂವಿಧಾನವು ಖಾತರಿಪಡಿಸಿರುವ ಪ್ರತಿಭಟನೆಯ ಹಕ್ಕು ಮತ್ತು ಭಯೋತ್ಪಾದನೆಯ ನಡುವಣ ರೇಖೆಯನ್ನು ಸರ್ಕಾರವು ಮಸುಕಾಗಿಸಿದೆ. ಈ ಮನಸ್ಥಿತಿಯೇ ಗಟ್ಟಿಗೊಂಡರೆ ಅದು ಪ್ರಜಾಪ್ರಭುತ್ವಕ್ಕೆ ವಿಷಾದದ ದಿನ ಎಂದು ಹೇಳದೆ ವಿಧಿಯಿಲ್ಲ ಎಂದು ಪೀಠವು ಹೇಳಿದೆ.

 

ಈ ತೀರ್ಪಿನ ಪರಿಣಾಮಗಳು:

 1. ಈ ತೀರ್ಪಿನೊಂದಿಗೆ, UAPA ಅಡಿಯಲ್ಲಿ ಭಯೋತ್ಪಾದನೆ ಕೃತ್ಯದ ಆರೋಪದ ಮೇಲೆ ವ್ಯಕ್ತಿಯನ್ನು ಬಂಧಿಸಲು ನಿರ್ಬಂಧವನ್ನು ನ್ಯಾಯಾಲಯವು ಹೆಚ್ಚಿಸಿದೆ.
 2. “ಭಯೋತ್ಪಾದನೆ” ಪ್ರಕರಣಗಳ ವಿಭಾಗದಲ್ಲಿ ಅಗತ್ಯವಾಗಿ ಬರದ ಪ್ರಕರಣಗಳಲ್ಲಿ ಸಹ ವ್ಯಕ್ತಿಗಳ ವಿರುದ್ಧ UAPA ಅನ್ನು ದುರ್ಬಳಕೆ ಮಾಡಿಕೊಳ್ಳಲಾಗಿದೆ ಎಂದು ನ್ಯಾಯಾಲಯವು ಗಮನಸೆಳೆದಿದೆ.
 3. ಛತ್ತೀಸಗಡದ ಬುಡಕಟ್ಟು ಜನಾಂಗದವರ ವಿರುದ್ಧ, ಜಮ್ಮು ಮತ್ತು ಕಾಶ್ಮೀರದ ಪ್ರಾಕ್ಸಿ ಸರ್ವರ್‌ಗಳ ಮೂಲಕ ಸಾಮಾಜಿಕ ಮಾಧ್ಯಮವನ್ನು ಬಳಸುತ್ತಿರುವವರ ವಿರುದ್ಧ ಮತ್ತು ಮಣಿಪುರದ ಪತ್ರಕರ್ತರ ವಿರುದ್ಧ ರಾಜ್ಯವು ಈ ನಿಬಂಧನೆಯನ್ನು ವ್ಯಾಪಕ ಶ್ರೇಣಿಯ ಅಪರಾಧಗಳಲ್ಲಿ ಬಳಸಿರುವುದರಿಂದ ಈ ಎಚ್ಚರಿಕೆಯು ಗಮನಾರ್ಹವಾಗಿದೆ.

 

ವಿಷಯಗಳು: ಸಂರಕ್ಷಣೆ, ಪರಿಸರ ಮಾಲಿನ್ಯ ಮತ್ತು ಅವನತಿ, ಪರಿಸರ ಪ್ರಭಾವದ ಮೌಲ್ಯಮಾಪನ.

ರಾಷ್ಟ್ರೀಯ ರಾಜಧಾನಿ ಪ್ರದೇಶ ಮತ್ತು ಅದರ ಅಕ್ಕ-ಪಕ್ಕದ ಪ್ರದೇಶಗಳಲ್ಲಿನ ವಾಯು ಗುಣಮಟ್ಟ ನಿರ್ವಹಣೆ ಆಯೋಗದ ಮಸೂದೆ, 2021:


(The Commission for Air Quality Management in the National Capital Region and Adjoining Areas Bill, 2021)

ಸಂದರ್ಭ:

ಇತ್ತೀಚೆಗೆ,‘ರಾಷ್ಟ್ರೀಯ ರಾಜಧಾನಿ ಪ್ರದೇಶ ಮತ್ತು ಅದರ ಅಕ್ಕ-ಪಕ್ಕದ  ಪ್ರದೇಶಗಳಲ್ಲಿನ ವಾಯು ಗುಣಮಟ್ಟ ನಿರ್ವಹಣೆ ಆಯೋಗದ ಮಸೂದೆ, 2021’(‘The Commission for Air Quality Management in National Capital Region and Adjoining Areas Bill, 2021’) ಅನ್ನು ಲೋಕಸಭೆಯು ಅನುಮೋದಿಸಿದೆ.

 1. ಮಸೂದೆಯು ಆಯೋಗವನ್ನು ಸ್ಥಾಪಿಸುತ್ತದೆ ಮತ್ತು ಕಳೆದ ವರ್ಷ ಘೋಷಿಸಿದ ಸುಗ್ರೀವಾಜ್ಞೆಯನ್ನು ಬದಲಾಯಿಸುತ್ತದೆ.
 2. ಮಸೂದೆಯಲ್ಲಿ, ಹಲವಾರು ಸುತ್ತಿನ ಮಾತುಕತೆಗಳ ನಂತರ, ಕಠಿಣ ದಂಡ ಮತ್ತು ಕೃಷಿ ತ್ಯಾಜ್ಯದ ಸುಡುವಿಕೆಗೆ ಜೈಲು ಶಿಕ್ಷೆ ವಿಧಿಸುವ ಬಗ್ಗೆ ರೈತರ ಕಳವಳವನ್ನು ಗಣನೆಗೆ ತೆಗೆದುಕೊಳ್ಳಲಾಗಿದೆ.

 

ಅನ್ವಯವಾಗುವುದು:

ಈ ಮಸೂದೆಯು ರಾಷ್ಟ್ರೀಯ ರಾಜಧಾನಿ ಪ್ರದೇಶ(NCR) ಮತ್ತು NCR ಗೆ ಹೊಂದಿಕೊಂಡಿರುವ ಪ್ರದೇಶಗಳಾದ ಹರಿಯಾಣ, ಪಂಜಾಬ್, ರಾಜಸ್ಥಾನ ಮತ್ತು ಉತ್ತರ ಪ್ರದೇಶಗಳಿಗೆ ಅನ್ವಯಿಸುತ್ತದೆ, NCR ನ ಗಾಳಿಯ ಗುಣಮಟ್ಟದ ಮೇಲೆ ಪ್ರತಿಕೂಲ ಪರಿಣಾಮ ಬೀರುವ ಯಾವುದೇ ಮಾಲಿನ್ಯದ ಮೂಲವಿರುವ ಪ್ರದೇಶಕ್ಕೆ ಈ ಮಸೂದೆಯು ಅನ್ವಯಿಸುತ್ತದೆ.

ಮಸೂದೆಯಲ್ಲಿ ಮಾಡಿದ ಪ್ರಸ್ತಾವಗಳು:

 1. ಮಸೂದೆಯು ರಾಷ್ಟ್ರೀಯ ರಾಜಧಾನಿ ಪ್ರದೇಶ(NCR) ಮತ್ತು NCR ಗೆ ಹೊಂದಿಕೊಂಡಿರುವ ಪ್ರದೇಶಗಳಲ್ಲಿ ಆಯೋಗವನ್ನು ಸ್ಥಾಪಿಸುತ್ತದೆ ಮತ್ತು ಕಳೆದ ವರ್ಷ ಘೋಷಿಸಿದ ಸುಗ್ರೀವಾಜ್ಞೆಯನ್ನು ಬದಲಾಯಿಸುತ್ತದೆ.
 2. ಆಯೋಗಕ್ಕೆ ಸಹಾಯ ಮಾಡಲು ಮೂರು ಉಪ ಸಮಿತಿಗಳು,ಮೇಲ್ವಿಚಾರಣೆ ಮತ್ತು ಗುರುತಿಸುವಿಕೆಯ ಉಪ ಸಮಿತಿ ಸೇರಿದಂತೆ; ಸಂರಕ್ಷಣೆ ಮತ್ತು ಜಾರಿಗೊಳಿಸುವ ಉಪ ಸಮಿತಿ; ಮತ್ತು ಸಂಶೋಧನೆ ಮತ್ತು ಅಭಿವೃದ್ಧಿಯ ಉಪ ಸಮಿತಿಗಳ ಸ್ಥಾಪನೆ.

 

ವಿಧೇಯಕದ ಅಗತ್ಯತೆ:

ನಿರ್ದಿಷ್ಟವಾಗಿ ಎನ್‌ಸಿಆರ್‌ನಲ್ಲಿ ವಾಯುಮಾಲಿನ್ಯದ ಮೂಲಗಳು ಸ್ಥಳೀಯ ಮಿತಿಗಳನ್ನು ಮೀರಿದ ವಿವಿಧ ಅಂಶಗಳನ್ನು ಒಳಗೊಂಡಿರುತ್ತವೆ.ಆದ್ದರಿಂದ, ವಿದ್ಯುತ್, ಕೃಷಿ, ಸಾರಿಗೆ, ಉದ್ಯಮ, ವಸತಿ ಮತ್ತು ನಿರ್ಮಾಣ ಸೇರಿದಂತೆ ವಿವಿಧ ಆರ್ಥಿಕ ವಲಯಗಳಿಗೆ ಸಂಬಂಧಿಸಿದ ವಾಯುಮಾಲಿನ್ಯದ ಎಲ್ಲಾ ಮೂಲಗಳ ಮೇಲೆ ವಿಶೇಷ ಗಮನ ಹರಿಸುವ ಅಗತ್ಯವಿದೆ.

 1. ವಾಯು ಮಾಲಿನ್ಯವು ಸ್ಥಳೀಯ ವಿದ್ಯಮಾನವಲ್ಲದ ಕಾರಣ, ಇದರ ಪರಿಣಾಮವು ಮೂಲದಿಂದ ದೂರದಲ್ಲಿರುವ ಪ್ರದೇಶಗಳಲ್ಲಿ ಕೂಡ ಕಂಡುಬರುತ್ತದೆ, ಹೀಗಾಗಿ ಬಹು-ವಲಯದ ಸಿಂಕ್ರೊನೈಸೇಶನ್ ಜೊತೆಗೆ ಅಂತರ-ರಾಜ್ಯ ಮತ್ತು ಅಂತರ್-ನಗರ ಸಮನ್ವಯದ ಮೂಲಕ ಪ್ರಾದೇಶಿಕ ಮಟ್ಟದ ಉಪಕ್ರಮಗಳ ಅಗತ್ಯವನ್ನು ಇದು ಸೃಷ್ಟಿಸುತ್ತದೆ.

 

‘ವಾಯು ಗುಣಮಟ್ಟ ನಿರ್ವಹಣಾ ಆಯೋಗ’ ಕುರಿತು:

2020 ರ ಅಕ್ಟೋಬರ್‌ನಲ್ಲಿ ‘ರಾಷ್ಟ್ರೀಯ ರಾಜಧಾನಿ ಪ್ರದೇಶ ಮತ್ತು ಅದರ ಪಕ್ಕದ ಪ್ರದೇಶಗಳಲ್ಲಿ ವಾಯು ಗುಣಮಟ್ಟ ನಿರ್ವಹಣೆಗೆ ಸುಗ್ರೀವಾಜ್ಞೆ’, 2020  (‘Commission for Air Quality Management in National Capital Region and Adjoining Areas Ordinance’) ಅಡಿಯಲ್ಲಿ ವಾಯು ಗುಣಮಟ್ಟ ನಿರ್ವಹಣಾ ಆಯೋಗವನ್ನು (CAQM) ರಚಿಸಲಾಯಿತು.

ಈ ಹಿಂದೆ ಅಸ್ತಿತ್ವದಲ್ಲಿದ್ದ ಪರಿಸರ ಮಾಲಿನ್ಯ (ತಡೆಗಟ್ಟುವಿಕೆ ಮತ್ತು ನಿಯಂತ್ರಣ) ಪ್ರಾಧಿಕಾರ, (Environment Pollution (Prevention and Control) Authority, or EPCA) ವನ್ನು ವಾಯು ಗುಣಮಟ್ಟ ನಿರ್ವಹಣಾ ಆಯೋಗದ ಸ್ಥಾಪನೆಗೆ ಅನುವು ಮಾಡಿಕೊಡಲು ವಿಸರ್ಜಿಸಲಾಯಿತು.

ಈ ಆಯೋಗವು ‘ಶಾಸನಬದ್ಧ ಪ್ರಾಧಿಕಾರ’ ಆಗಿರುತ್ತದೆ.

ಇದು ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ ಮತ್ತು ದೆಹಲಿ, ಪಂಜಾಬ್, ಹರಿಯಾಣ, ಉತ್ತರ ಪ್ರದೇಶ ಮತ್ತು ರಾಜಸ್ಥಾನದ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಗಳನ್ನು ರದ್ದು ಪಡಿಸುತ್ತದೆ.

ಸಂರಚನೆ:

ಅಧ್ಯಕ್ಷರು: ಇದರ ನೇತೃತ್ವವನ್ನು ಭಾರತ ಸರ್ಕಾರದ ಕಾರ್ಯದರ್ಶಿ ಅಥವಾ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ವಹಿಸಲಿದ್ದಾರೆ.

 1. ಇದು ಶಾಶ್ವತ ನಿಕಾಯ ವಾಗಲಿದ್ದು, 20 ಕ್ಕೂ ಹೆಚ್ಚು ಸದಸ್ಯರನ್ನು ಹೊಂದಿರುತ್ತದೆ.
 2. ‘ಅಧ್ಯಕ್ಷರು’ ಮೂರು ವರ್ಷಗಳ ಅವಧಿಗೆ ಅಥವಾ ಅವರಿಗೆ 70 ವರ್ಷ ತುಂಬುವವರೆಗೆ ಅಧಿಕಾರದಲ್ಲಿ ಮುಂದುವರೆಯುತ್ತಾರೆ.
 3. ಆಯೋಗವು ವಿವಿಧ ಸಚಿವಾಲಯಗಳ ಪ್ರತಿನಿಧಿಗಳು ಮತ್ತು ಮಧ್ಯಸ್ಥಗಾರ ರಾಜ್ಯಗಳ ಪ್ರತಿನಿಧಿಗಳನ್ನು ಒಳಗೊಂಡಿರುತ್ತದೆ.
 4. ಇದರಲ್ಲಿ ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ (CPCB), ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO) ಮತ್ತು ನಾಗರಿಕ ಸಮಾಜದ ತಜ್ಞರು ಸಹ ಸದಸ್ಯರಾಗಿ ಭಾಗವಹಿಸಲಿದ್ದಾರೆ.

 

ಅಧಿಕಾರಗಳು ಮತ್ತು ಕಾರ್ಯಗಳು:

 1.  ವಾಯುಮಾಲಿನ್ಯಕ್ಕೆ ಸಂಬಂಧಿಸಿದ ವಿಷಯಗಳ ಕುರಿತು ಆಯಾ ರಾಜ್ಯ ಸರ್ಕಾರಗಳಿಗೆ ನಿರ್ದೇಶನಗಳನ್ನು ನೀಡಲು ‘ವಾಯು ಗುಣಮಟ್ಟ ನಿರ್ವಹಣಾ ಆಯೋಗಕ್ಕೆ’ ಅಧಿಕಾರ ನೀಡಲಾಗುವುದು.
 2. ರಾಷ್ಟ್ರೀಯ ರಾಜಧಾನಿ ಪ್ರದೇಶ (NCR) ಮತ್ತು ಪಕ್ಕದ ಪ್ರದೇಶಗಳಲ್ಲಿ ಗಾಳಿಯ ಗುಣಮಟ್ಟವನ್ನು ರಕ್ಷಿಸುವ ಮತ್ತು ಸುಧಾರಿಸುವ ಉದ್ದೇಶದಿಂದ ಅಗತ್ಯವೆಂದು ಪರಿಗಣಿಸಲಾದ ದೂರುಗಳನ್ನು ‘ಆಯೋಗ’ ಪರಿಗಣಿಸುತ್ತದೆ.
 3. ಇದು ವಾಯುಮಾಲಿನ್ಯ ನಿಯಂತ್ರಣಕ್ಕೆ ಮಾನದಂಡಗಳನ್ನು ಸಹ ನಿಗದಿಪಡಿಸುತ್ತದೆ.
 4. ಈ ಆಯೋಗಕ್ಕೆ, ಉಲ್ಲಂಘಿಸುವವರನ್ನು ಗುರುತಿಸಲು, ಕಾರ್ಖಾನೆಗಳು, ಕೈಗಾರಿಕೆಗಳು ಮತ್ತು ಇತರ ಯಾವುದೇ ಮಾಲಿನ್ಯ ಘಟಕಗಳನ್ನು ಮೇಲ್ವಿಚಾರಣೆ ಮಾಡಲು ಮತ್ತು ಅಂತಹ ಘಟಕಗಳನ್ನು ಮುಚ್ಚುವ ಅಧಿಕಾರವಿರುತ್ತದೆ.
 5. ಮಾಲಿನ್ಯ ಮಾನದಂಡಗಳ ಉಲ್ಲಂಘನೆಗಾಗಿ ಎನ್‌ಸಿಆರ್ ಮತ್ತು ಪಕ್ಕದ ಪ್ರದೇಶಗಳಲ್ಲಿ ರಾಜ್ಯ ಸರ್ಕಾರಗಳು ನೀಡಿರುವ ನಿರ್ದೇಶನಗಳನ್ನು ರದ್ದುಗೊಳಿಸುವ ಅಧಿಕಾರವೂ ಆಯೋಗಕ್ಕೆ ಇರುತ್ತದೆ.

 

ಆಯೋಗ ಹೊಂದಿರುವ ಶಿಕ್ಷೆ ವಿಧಿಸುವ ಅಧಿಕಾರಗಳು:

ಹೌದು, ಆಯೋಗವು ಕೆಲವು ಅಧಿಕಾರಗಳನ್ನು ಹೊಂದಿದೆ. ನಿರ್ಬಂಧಿತ ಪ್ರದೇಶದಲ್ಲಿ ಕೈಗಾರಿಕಾ ಘಟಕವನ್ನು ಸ್ಥಾಪಿಸುವ ಮೂಲಕ ಆಯೋಗದ ನಿರ್ದೇಶನಗಳನ್ನು ಉಲ್ಲಂಘಿಸಿದರೆ 1 ಕೋಟಿ ರೂ.ವರೆಗೆ ದಂಡ ಮತ್ತು 5 ವರ್ಷಗಳವರೆಗೆ ಜೈಲು ಶಿಕ್ಷೆ ವಿಧಿಸುವ ಅಧಿಕಾರವು ಆಯೋಗಕ್ಕಿದೆ.

 

ಮಸೂದೆಯಲ್ಲಿ ಮಾಡಲಾದ ಪ್ರಮುಖ ನಿಬಂಧನೆಗಳು:

 1. ಮಸೂದೆಯಲ್ಲಿ, ಸರ್ಕಾರವು ಕೃಷಿ ತ್ಯಾಜ್ಯ (ಜೊಂಡು) ವನ್ನು ಸುಡುವುದನ್ನು ನಿರಪರಾಧವನ್ನಾಗಿ ಮಾಡಿದೆ ಅಥವಾ ನ್ಯಾಯಸಮ್ಮತಗೊಳಿಸಿದೆ ಮತ್ತು ಸಂಭವನೀಯ ಜೈಲು ಶಿಕ್ಷೆಯ ಷರತ್ತನ್ನು ಹಿಂತೆಗೆದುಕೊಂಡಿದೆ.
 2. ಮಸೂದೆಯಲ್ಲಿ, ಹಲವಾರು ಸುತ್ತಿನ ಮಾತುಕತೆಗಳ ನಂತರ, ಕಠಿಣ ದಂಡ ಮತ್ತು ಕೃಷಿ ತ್ಯಾಜ್ಯದ ಸುಡುವಿಕೆಗೆ ಜೈಲು ಶಿಕ್ಷೆ ವಿಧಿಸುವ ಬಗ್ಗೆ ರೈತರ ಕಳವಳವನ್ನು ಗಣನೆಗೆ ತೆಗೆದುಕೊಳ್ಳಲಾಗಿದೆ.
 3. ಆದಾಗ್ಯೂ, ರೈತರು ಸೇರಿದಂತೆ ಯಾವುದೇ ವ್ಯಕ್ತಿ ಕೃಷಿ ತ್ಯಾಜ್ಯವನ್ನು ಸುಡುವಾಗ ಸಿಕ್ಕಿಬಿದ್ದರೆ ಅವರ ಮೇಲೆ ‘ಪರಿಸರ ಪರಿಹಾರ ಶುಲ್ಕ’ ವಿಧಿಸಲಾಗುತ್ತದೆ.

 


ಪೂರ್ವಭಾವಿ ಪರೀಕ್ಷೆಗೆ ಸಂಬಂಧಿಸಿದ ವಿದ್ಯಮಾನಗಳು:


ಅಣ್ಣಾಮಲೈ ಹಾರುವ ಕಪ್ಪೆ:

(Anaimalai flying frog)

 1. ವೈಜ್ಞಾನಿಕ ಹೆಸರು: ರಾಕೋಫರಸ್ ಸ್ಯೂಡೋಮಾಲಾಬರಿಕಸ್.(Racophorus pseudomalabaricus).
 2. ಇತರ ಹೆಸರುಗಳು: ಮೋಸಗೊಳಿಸುವ ಮಲಬಾರ್ ಗ್ಲೈಡಿಂಗ್ ಫ್ರಾಗ್ ಮತ್ತು ಸುಳ್ಳು ಮಲಬಾರ್ ಟ್ರೀ ಫ್ರಾಗ್.
 3. ಇದು ‘ತೀವ್ರವಾಗಿ ಅಳಿವಿನಂಚಿನಲ್ಲಿರುವ’(critically endangered) ಕಪ್ಪೆ ಜಾತಿಯಾಗಿದೆ.
 4. ಇದು ಪಶ್ಚಿಮ ಘಟ್ಟಗಳ ದಕ್ಷಿಣ ಭಾಗಕ್ಕೆ ಸ್ಥಳೀಯವಾಗಿದೆ, ಮತ್ತು ಇವುಗಳ ಆವಾಸಸ್ಥಾನದ ನಷ್ಟವು ಈ ಕಪ್ಪೆಗಳ ಸಂಖ್ಯೆಯಲ್ಲಿ ಕ್ಷಿಪ್ರ ಇಳಿಕೆಗೆ ಕಾರಣವಾಗಿದೆ.
 5. ಪ್ರಸ್ತುತ,ಈ ಪ್ರಭೇದವು ಇಂದಿರಾ ಗಾಂಧಿ ರಾಷ್ಟ್ರೀಯ ಉದ್ಯಾನ ಮತ್ತು ಪರಂಬಿಕುಲಂ ಹುಲಿ ಸಂರಕ್ಷಿತ ಪ್ರದೇಶ ಎಂಬ ಎರಡು ಸಂರಕ್ಷಿತ ಪ್ರದೇಶಗಳಲ್ಲಿ ಕಂಡುಬರುತ್ತದೆ.

 

ಭಾರತೀಯ ಕಂಪ್ಯೂಟರ್ ತುರ್ತು ಪ್ರತಿಕ್ರಿಯೆ ತಂಡ (CERT-In):

 1. ಭಾರತೀಯ ಕಂಪ್ಯೂಟರ್ ತುರ್ತು ಪ್ರತಿಕ್ರಿಯೆ ತಂಡ (Indian Computer Emergency Response Team – CERT-In) ವು,ಭಾರತ ಸರ್ಕಾರದ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದ ಅಡಿಯಲ್ಲಿರುವ ‘ಇಂಡಿಯನ್ ಸೈಬರ್ ಸ್ಪೇಸ್’ ಅನ್ನು ಭದ್ರಪಡಿಸುವ ಉದ್ದೇಶದಿಂದ ರೂಪುಗೊಂಡ ಸಂಸ್ಥೆಯಾಗಿದೆ.
 2. ಇದನ್ನು 2004 ರಲ್ಲಿ ಸ್ಥಾಪಿಸಲಾಯಿತು.
 3. ಹ್ಯಾಕಿಂಗ್ ಮತ್ತು ಫಿಶಿಂಗ್ ನಂತಹ ಸೈಬರ್ ಭದ್ರತಾ ಬೆದರಿಕೆಗಳನ್ನು ಎದುರಿಸಲು ಇದು ‘ನೋಡಲ್ ಏಜೆನ್ಸಿ’ ಆಗಿದೆ.
 4. ಮಾಹಿತಿ ತಂತ್ರಜ್ಞಾನ (ತಿದ್ದುಪಡಿ) ಕಾಯ್ದೆ 2008 ರ ಅಡಿಯಲ್ಲಿ, CERT-In ಅನ್ನು ಕೆಲವು ಕಾರ್ಯಗಳನ್ನು  ರಾಷ್ಟ್ರೀಯ ಏಜೆನ್ಸಿಯಾಗಿ ಕಾರ್ಯನಿರ್ವಹಿಸಲು ಗೊತ್ತುಪಡಿಸಲಾಗಿದೆ.

ಸಂದರ್ಭ:

2021 ವರ್ಷದ ಮೊದಲ ಆರು ತಿಂಗಳಲ್ಲಿ, 6.07 ಲಕ್ಷ ಸೈಬರ್ ಸೆಕ್ಯೂರಿಟಿ ಘಟನೆಗಳನ್ನು CERT-In  ಪತ್ತೆ ಮಾಡಿದೆ, ಅದರಲ್ಲಿ ಸುಮಾರು 12,000 ಸೈಬರ್ ಭದ್ರತೆಗೆ ಸಂಬಂಧಿತ ವಿಷಯಗಳು ಸರ್ಕಾರಿ ಸಂಸ್ಥೆಗಳಿಗೆ ಸಂಬಂಧಿಸಿವೆ.

 


Join our Official Telegram Channel HERE for Motivation and Fast Updates

Subscribe to our YouTube Channel HERE to watch Motivational and New analysis videos