Print Friendly, PDF & Email

[ ದೈನಂದಿನ ಪ್ರಚಲಿತ ಘಟನೆಗಳು ] ದಿನಾಂಕ – 5ನೇ ಜೂನ್ 2021

 

ಪರಿವಿಡಿ:

 ಸಾಮಾನ್ಯ ಅಧ್ಯಯನ ಪತ್ರಿಕೆ 2:

1. ಏನಿದು ಭಾರತದ ಸುಸ್ಥಿರ ಅಭಿವೃದ್ಧಿ ಗುರಿಗಳ ಸೂಚ್ಯಂಕ?

2. ಕ್ಲೀನ್ ಎನರ್ಜಿ ಮಿನಿಸ್ಟರಿಯಲ್ (CEM)- ಇಂಡಸ್ಟ್ರಿಯಲ್ ಡೀಪ ಡಿಕಾರ್ಬೋನೈಸೇಶನ್ ಇನಿಶಿಯೇಟಿವ್ (IDDI).

 

ಸಾಮಾನ್ಯ ಅಧ್ಯಯನ ಪತ್ರಿಕೆ 3:

1. LEO ಉಪಗ್ರಹಗಳ ಮೂಲಕ ಇಂಟರ್ನೆಟ್.

2. ನಾಸಾ ವಾಟರ್ ಬೇರ್ಸ್ ಮತ್ತು ಬೇಬಿ ಸ್ಕ್ವಿಡ್ ಗಳನ್ನು ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ  ಕಳುಹಿಸುತ್ತಿರುವ ಕಾರಣವೇನು?

3. ಆಲಿಕಲ್ಲು ವಿರೋಧಿ ಬಂದೂಕು ಪರೀಕ್ಷೆ ಮಾಡಿದ ಹಿಮಾಚಲ ಪ್ರದೇಶ.

4. ಕಪ್ಪು ಇಂಗಾಲದ ಮೇಲಿನ ಬಲವಾದ ನೀತಿಗಳು ಹಿಮನದಿಯ ಕರಗುವಿಕೆಯನ್ನು ತೀವ್ರವಾಗಿ ಕಡಿತಗೊಳಿಸಬಹುದು: ವಿಶ್ವಬ್ಯಾಂಕ್ ಅಧ್ಯಯನ.

 

ಪೂರ್ವಭಾವಿ ಪರೀಕ್ಷೆಗೆ ಸಂಬಂಧಿಸಿದ ವಿದ್ಯಮಾನಗಳು:

1. ಶಿಕ್ಷಕರ ಅರ್ಹತಾ ಪರೀಕ್ಷೆ.

2. SAGE ಪೋರ್ಟಲ್.

3. ಆಪರೇಷನ್ ಸಾಗರ್ ಆರಕ್ಷ

4. INS ಸಂಧ್ಯಾಕ್.

 


ಸಾಮಾನ್ಯ ಅಧ್ಯಯನ ಪತ್ರಿಕೆ : 2


 

ವಿಷಯಗಳು: ಆರೋಗ್ಯ, ಶಿಕ್ಷಣ, ಸಾಮಾಜಿಕ ವಲಯ / ಸೇವೆಗಳ ಅಭಿವೃದ್ಧಿ ಮತ್ತು ನಿರ್ವಹಣೆಗೆ ಸಂಬಂಧಿಸಿದ ಮಾನವ ಸಂಪನ್ಮೂಲ ಸಂಬಂಧಿತ ವಿಷಯಗಳು.

ಏನಿದು ಭಾರತದ ಸುಸ್ಥಿರ ಅಭಿವೃದ್ಧಿ ಗುರಿಗಳ ಸೂಚ್ಯಂಕ ?


(What is the SDG India Index?)

 ಸಂದರ್ಭ:

ಇತ್ತೀಚೆಗೆ, ‘ಸುಸ್ಥಿರ ಅಭಿವೃದ್ಧಿ ಗುರಿಗಳ ಭಾರತ ಸೂಚ್ಯಂಕ’, 2020-21 (Sustainable Development Goals India Index), ಅನ್ನು ನೀತಿ ಆಯೋಗವು ಬಿಡುಗಡೆ ಮಾಡಿದೆ.

ಸುಸ್ಥಿರ ಅಭಿವೃದ್ಧಿ ಗುರಿಗಳ ಸೂಚ್ಯಂಕದ ಕುರಿತು (SDGs):

 1. ಈ ಕಾರ್ಯಕ್ರಮವನ್ನು ಮೊದಲ ಬಾರಿಗೆ 2018 ರಲ್ಲಿ ಪ್ರಾರಂಭಿಸಲಾಯಿತು. ಈ ಸೂಚ್ಯಂಕವು ಭಾರತದ ಸುಸ್ಥಿರ ಅಭಿವೃದ್ಧಿ ಗುರಿಗಳ ಪ್ರಗತಿಯನ್ನು ವಿಶಾಲ ಅರ್ಥದಲ್ಲಿ ಮೇಲ್ವಿಚಾರಣೆ ಮಾಡುವ ಪ್ರಾಥಮಿಕ ಸಾಧನವಾಗಿದೆ.
 2. ಜಾಗತಿಕ ಗುರಿಗಳ ಸಾಧನೆಯ ಆಧಾರದ ಮೇಲೆ ಶ್ರೇಯಾಂಕ ನೀಡುವ ಮೂಲಕ ಅದು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ನಡುವೆ ಸ್ಪರ್ಧೆಯನ್ನು ಹೆಚ್ಚಿಸಿದೆ.
 3. ಭಾರತದಲ್ಲಿನ ವಿಶ್ವಸಂಸ್ಥೆ ಕಚೇರಿಯ ಸಹಯೋಗದೊಂದಿಗೆ ಈ ಸೂಚ್ಯಂಕವನ್ನು ಅಭಿವೃದ್ಧಿಪಡಿಸಲಾಗಿದೆ.
 4. ಅಂಕಿಅಂಶ ಮತ್ತು ಕಾರ್ಯಕ್ರಮ ಅನುಷ್ಠಾನ ಸಚಿವಾಲಯದ (MoSPI)  ರಾಷ್ಟ್ರೀಯ ಸೂಚಕ ಫ್ರೇಮ್‌ವರ್ಕ್ (the National Indicator Framework -NIF)) ನೊಂದಿಗೆ ಜೋಡಿಸಲಾದ 115 ಸೂಚಕಗಳಲ್ಲಿ ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಸಾಧನೆಯ ಪ್ರಗತಿಯ ಮೇಲೆ ನಿಗಾವಹಿಸುತ್ತದೆ.

 

ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಶ್ರೇಯಾಂಕ ನೀಡುವ ವಿಧಾನ:

SDG ಇಂಡಿಯಾ ಸೂಚ್ಯಂಕವು ಪ್ರತಿ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ 16 ಎಸ್‌ಡಿಜಿಗಳಲ್ಲಿ ಗುರಿವಾರು ಅಂಕಗಳನ್ನು ಲೆಕ್ಕಾಚಾರ ಮಾಡುತ್ತದೆ.     SDG ಇಂಡಿಯಾ ಇಂಡೆಕ್ಸ್ ಸ್ಕೋರ್‌ಗಳು 0-100ರ ನಡುವೆ ಇರುತ್ತವೆ. ಯಾವ ರಾಜ್ಯ / UT ಯು ಹೆಚ್ಚಿನ ಸ್ಕೋರ್ ಹೊಂದಿರುವುದೋ, ಅದರ SDG  ಗುರಿ ಸಾಧಿಸುವ ಹಾದಿಯಲ್ಲಿನ ಅಂತರವೂ ಅಷ್ಟೇ ಹೆಚ್ಚಾಗಿರುತ್ತದೆ.

 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳನ್ನು ಅವುಗಳ SDG ಇಂಡಿಯಾ ಇಂಡೆಕ್ಸ್ ಸ್ಕೋರ್‌ಗಳ ಆಧಾರದ ಮೇಲೆ ಈ ಕೆಳಗಿನ ರೀತಿಯಲ್ಲಿ ವರ್ಗೀಕರಿಸಲಾಗಿದೆ:

 1. ಆಕಾಂಕ್ಷಿ: 0–49.
 2. ಪ್ರದರ್ಶಕ: 50-64.
 3. ಫ್ರಂಟ್-ರನ್ನರ್: 65-99.
 4. ಸಾಧಕ: 100.

ಪ್ರಸ್ತುತ, ಆಕಾಂಕ್ಷಿ ಮತ್ತು ಸಾಧಕ ವಿಭಾಗದಲ್ಲಿ ಯಾವುದೇ ರಾಜ್ಯಗಳಿಲ್ಲ.

ಸೂಚ್ಯಂಕದ ಇತ್ತೀಚಿನ ಸಂಶೋಧನೆಗಳು:

 1. ದೇಶದ ಒಟ್ಟಾರೆ SDG ಸ್ಕೋರ್ 6 ಪಾಯಿಂಟ್‌ಗಳಿಂದ ಸುಧಾರಿಸಿದೆ ಮತ್ತು 2019 ರಲ್ಲಿ 60 ಪಾಯಿಂಟ್‌ಗಳಿಂದ 2020-21ರಲ್ಲಿ 66 ಕ್ಕೆ ಏರಿದೆ.
 2. ಈ ಸುಧಾರಣೆಯು ಶುದ್ಧ ನೀರು ಮತ್ತು ನೈರ್ಮಲ್ಯ ಮತ್ತು ‘ಕೈಗೆಟುಕುವ ಮತ್ತು ಶುದ್ಧ ಶಕ್ತಿ’ ಗುರಿಗಳ ಅಡಿಯಲ್ಲಿ ಸೌಲಭ್ಯಗಳನ್ನು ಒದಗಿಸುವಲ್ಲಿ ಸುಧಾರಿತ ಕಾರ್ಯಕ್ಷಮತೆಯ ಫಲಿತಾಂಶವಾಗಿದೆ.
 3. ಕೇರಳ 75 ಅಂಕಗಳನ್ನು ಗಳಿಸಿ ಅಗ್ರ ಶ್ರೇಯಾಂಕವನ್ನು ಉಳಿಸಿಕೊಂಡಿದ್ದರೆ, ಹಿಮಾಚಲ ಪ್ರದೇಶ ಮತ್ತು ತಮಿಳುನಾಡು ಎರಡೂ 74 ಅಂಕಗಳನ್ನು ಗಳಿಸಿ ದ್ವಿತೀಯ ಸ್ಥಾನದಲ್ಲಿವೆ.
 4. ಈ ವರ್ಷದ ಭಾರತ ಸೂಚ್ಯಂಕದಲ್ಲಿ ಬಿಹಾರ, ಜಾರ್ಖಂಡ್ ಮತ್ತು ಅಸ್ಸಾಂ ಅತ್ಯಂತ ಕೆಟ್ಟ ಪ್ರದರ್ಶನ ನೀಡಿದ ರಾಜ್ಯಗಳಾಗಿವೆ.
 5. ಕೇಂದ್ರಾಡಳಿತ ಪ್ರದೇಶಗಳಲ್ಲಿ ಚಂಡೀಗಡ 79 ಅಂಕಗಳನ್ನು ಗಳಿಸಿ ಅಗ್ರ ಸ್ಥಾನವನ್ನು ಕಾಯ್ದುಕೊಂಡರೆ, ದೆಹಲಿ 68 ಅಂಕಗಳೊಂದಿಗೆ ನಂತರದ ಸ್ಥಾನದಲ್ಲಿದೆ.

 

ವಿಷಯಗಳು: ಪ್ರಮುಖ ಅಂತರರಾಷ್ಟ್ರೀಯ ಸಂಸ್ಥೆಗಳು, ಏಜೆನ್ಸಿಗಳು ಮತ್ತು ವೇದಿಕೆಗಳು, ಅವುಗಳ ರಚನೆ, ಮತ್ತು ಆದೇಶ.

ಕ್ಲೀನ್ ಎನರ್ಜಿ ಮಿನಿಸ್ಟರಿಯಲ್ (CEM)- ಇಂಡಸ್ಟ್ರಿಯಲ್ ಡೀಪ ಡಿಕಾರ್ಬೋನೈಸೇಶನ್ ಇನಿಶಿಯೇಟಿವ್ (IDDI):


(Clean Energy Ministerial’s (CEM) – Industrial Deep Decarbonization Initiative (IDDI)

ಸಂದರ್ಭ:

ಭಾರತವು ಯುನೈಟೆಡ್ ಕಿಂಗ್‌ಡಮ್‌ನ ಸಹಯೋಗದೊಂದಿಗೆ, ಇಂಧನ ಮುಖ್ಯಸ್ಥರ 12 ನೇ ಸಭೆಯಲ್ಲಿ ಕ್ಲೀನ್ ಎನರ್ಜಿ ಮಿನಿಸ್ಟಿಯಲ್ (CEM) – ಇಂಡಸ್ಟ್ರಿಯಲ್ ಡೀಪ್ ಡಿಕಾರ್ಬೊನೈಸೇಶನ್ ಇನಿಶಿಯೇಟಿವ್’ (IDDI) ಅಡಿಯಲ್ಲಿ ಕೈಗಾರಿಕಾ ಇಂಧನ ದಕ್ಷತೆಯನ್ನು ಉತ್ತೇಜಿಸಲು ಹೊಸ ಕಾರ್ಯ ಪ್ರಕ್ರಿಯೆಯನ್ನು ಪ್ರಾರಂಭಿಸಿದೆ.

 

ಇಂಡಸ್ಟ್ರಿಯಲ್  ಡೀಪ್ ಡಿಕಾರ್ಬೊನೈಸೇಶನ್ ಇನಿಶಿಯೇಟಿವ್ (IDDI) ಎಂದರೇನು?

 1. ಇಂಡಸ್ಟ್ರಿಯಲ್ ಡೀಪ್ ಡಿಕಾರ್ಬೊನೈಸೇಶನ್ ಇನಿಶಿಯೇಟಿವ್- IDDI, ಸಾರ್ವಜನಿಕ ಮತ್ತು ಖಾಸಗಿ ಸಂಸ್ಥೆಗಳ ಜಾಗತಿಕ ಒಕ್ಕೂಟವಾಗಿದ್ದು, ಕಡಿಮೆ ಇಂಗಾಲದ ಕೈಗಾರಿಕಾ ವಸ್ತುಗಳ ಬೇಡಿಕೆಯನ್ನು ಉತ್ತೇಜಿಸುತ್ತದೆ.
 2. ರಾಷ್ಟ್ರೀಯ ಸರ್ಕಾರಗಳ ಸಹಯೋಗದೊಂದಿಗೆ, ಐಡಿಡಿಐ ಇಂಗಾಲದ ಮೌಲ್ಯಮಾಪನಗಳನ್ನು ಪ್ರಮಾಣೀಕರಿಸಲು, ಸಾರ್ವಜನಿಕ ಮತ್ತು ಖಾಸಗಿ ಕ್ಷೇತ್ರಗಳಿಗೆ ಮಹತ್ವಾಕಾಂಕ್ಷೆಯ ಖರೀದಿ ಗುರಿಗಳನ್ನು ನಿಗದಿಪಡಿಸಲು, ಕಡಿಮೆ ಇಂಗಾಲದ ಉತ್ಪನ್ನ ಅಭಿವೃದ್ಧಿಯಲ್ಲಿ ಹೂಡಿಕೆಯನ್ನು ಉತ್ತೇಜಿಸಲು ಮತ್ತು ಉದ್ಯಮದ ಮಾರ್ಗಸೂಚಿಗಳನ್ನು ವಿನ್ಯಾಸಗೊಳಿಸಲು ಕೆಲಸ ಮಾಡುತ್ತದೆ.
 3. ಇದನ್ನು ವಿಶ್ವಸಂಸ್ಥೆಯ ಕೈಗಾರಿಕಾ ಅಭಿವೃದ್ಧಿ ಸಂಸ್ಥೆ (UNIDO) ಸಂಯೋಜಿಸುತ್ತದೆ.
 4. ಸದಸ್ಯರು: IDDI ಅನ್ನು ಯುನೈಟೆಡ್ ಕಿಂಗ್‌ಡಮ್ ಮತ್ತು ಭಾರತ ಜಂಟಿಯಾಗಿ ಮುನ್ನಡೆಸುತ್ತವೆ, ಪ್ರಸ್ತುತ ಜರ್ಮನಿ ಮತ್ತು ಕೆನಡಾವು ಅದರ ಸದಸ್ಯರಾಗಿವೆ.

 

ಶುದ್ಧ ಇಂಧನ ಸಚಿವಾಲಯದ (ಕ್ಲೀನ್ ಎನರ್ಜಿ ಮಿನಿಸ್ಟಿಯಲ್) ಕುರಿತು (CEM):

 1. ಸ್ಥಾಪನೆ: ಕೋಪನ್ ಹ್ಯಾಗನ್ ನಲ್ಲಿ ನಡೆದ ಪಕ್ಷಗಳ ಹವಾಮಾನ ಬದಲಾವಣೆಯ ಸಮ್ಮೇಳನದಲ್ಲಿ ವಿಶ್ವಸಂಸ್ಥೆಯ ಫ್ರೇಮ್ವರ್ಕ್ ಸಮಾವೇಶದಲ್ಲಿ ಡಿಸೆಂಬರ್ 2009 ರಲ್ಲಿ ಶುದ್ಧ ಇಂಧನ ಸಚಿವಾಲಯವನ್ನು(ಕ್ಲೀನ್ ಎನರ್ಜಿ ಮಿನಿಸ್ಟಿಯಲ್) ಸ್ಥಾಪಿಸಲಾಯಿತು.
 2. CEM ಶುದ್ಧ ಇಂಧನ ತಂತ್ರಜ್ಞಾನವನ್ನು ಮುನ್ನಡೆಸುವ ನೀತಿಗಳು ಮತ್ತು ಕಾರ್ಯಕ್ರಮಗಳನ್ನು ಉತ್ತೇಜಿಸಲು, ಅನುಭವಗಳನ್ನು ಮತ್ತು ಉತ್ತಮ ಅಭ್ಯಾಸಗಳನ್ನು ಹಂಚಿಕೊಳ್ಳಲು ಮತ್ತು ಜಾಗತಿಕ ಶುದ್ಧ ಇಂಧನ ಆರ್ಥಿಕತೆಗೆ ಪರಿವರ್ತನೆಯನ್ನು ಪ್ರೋತ್ಸಾಹಿಸಲು ಇರುವ ಉನ್ನತ ಮಟ್ಟದ ಜಾಗತಿಕ ವೇದಿಕೆಯಾಗಿದೆ.
 3. ಭಾರತ ಸೇರಿದಂತೆ 29 ದೇಶಗಳು ಶುದ್ಧ ಇಂಧನ ಸಚಿವಾಲಯದ (CEM) ಭಾಗವಾಗಿವೆ.

 


ಸಾಮಾನ್ಯ ಅಧ್ಯಯನ ಪತ್ರಿಕೆ : 3


 

ವಿಷಯಗಳು: ಮಾಹಿತಿ ತಂತ್ರಜ್ಞಾನ, ಬಾಹ್ಯಾಕಾಶ, ಕಂಪ್ಯೂಟರ್, ರೊಬೊಟಿಕ್ಸ್, ನ್ಯಾನೊ-ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ ಮತ್ತು ಬೌದ್ಧಿಕ ಆಸ್ತಿ ಹಕ್ಕುಗಳಿಗೆ ಸಂಬಂಧಿಸಿದ ವಿಷಯಗಳಲ್ಲಿ ಜಾಗೃತಿ.

LEO ಉಪಗ್ರಹಗಳ ಮೂಲಕ ಇಂಟರ್ನೆಟ್:


(Internet through LEO satellites)

 ಸಂದರ್ಭ:

ಇತ್ತೀಚೆಗೆ, ಭೂ ನೀಚ ಕಕ್ಷೆ (Lower Earth Orbit- LEO) ಯಲ್ಲಿ ಸ್ಥಾಪಿಸಲಾದ ಸಂವಹನ ಉಪಗ್ರಹಗಳನ್ನು ನಿರ್ವಹಿಸುವ ಒನ್‌ವೆಬ್  (OneWeb)  ಕಂಪನಿಯು ತನ್ನ ಮುಂದಿನ ಬ್ಯಾಚ್ ನ 36 ಉಪಗ್ರಹಗಳನ್ನು ರಷ್ಯಾದಿಂದ ಉಡಾವಣೆ ಮಾಡಿದೆ.

ಇದರೊಂದಿಗೆ, ಭೂಮಿಯ ಕೆಳ ಕಕ್ಷೆಯಲ್ಲಿರುವ OneWeb ಉಪಗ್ರಹಗಳ ಒಟ್ಟು ಸಂಖ್ಯೆ 218 ಕ್ಕೆ ಏರಿದೆ. ಈ ಎಲ್ಲಾ ಉಪಗ್ರಹಗಳು ಒನ್‌ವೆಬ್‌ನ 648 LEO ಉಪಗ್ರಹ ತಂಡದ ಒಂದು ಭಾಗವಾಗಲಿವೆ.

 

OneWeb ನ ಲಿಯೋ ಇಂಟರ್ನೆಟ್ ಪ್ರೋಗ್ರಾಂ ಕುರಿತು:

ಯುನೈಟೆಡ್ ಕಿಂಗ್‌ಡಮ್, ಅಲಾಸ್ಕಾ, ಉತ್ತರ ಯುರೋಪ್, ಗ್ರೀನ್‌ಲ್ಯಾಂಡ್, ಆರ್ಕ್ಟಿಕ್ ಮಹಾಸಾಗರ ಮತ್ತು ಕೆನಡಾದಾದ್ಯಂತ ಭೂ ನೀಚ ಕಕ್ಷೆಯ ಉಪಗ್ರಹಗಳ ಮೂಲಕ ಇಂಟರ್ನೆಟ್ ಸಂಪರ್ಕದ ಆಯ್ಕೆಯನ್ನು ಒದಗಿಸುವ ಉದ್ದೇಶವನ್ನು ಒನ್‌ವೆಬ್ ಹೊಂದಿದೆ.

ಈ ವರ್ಷದ ಅಂತ್ಯದ ಮೊದಲು ಇಂಟರ್ನೆಟ್ ಸೇವೆಯನ್ನು ಕಾರ್ಯರೂಪಕ್ಕೆ ತರುವ ಸಾಧ್ಯತೆಯನ್ನು ಕಂಪನಿ ವ್ಯಕ್ತಪಡಿಸಿದೆ.

ಒನ್‌ವೆಬ್ ಈ ಕಾರ್ಯಕ್ರಮಕ್ಕೆ ಫೈವ್ ಟು 50’ (Five to 50) ಸೇವೆ ಎಂದು ಹೆಸರಿಸಿದ್ದು, ಇದರ ಅಡಿಯಲ್ಲಿ 50 ಡಿಗ್ರಿ ಅಕ್ಷಾಂಶದ ಉತ್ತರದಲ್ಲಿರುವ ಎಲ್ಲಾ ಪ್ರದೇಶಗಳಲ್ಲಿ ಇಂಟರ್ನೆಟ್ ಸಂಪರ್ಕ ಸೇವೆಗಳನ್ನು ಒದಗಿಸಲಾಗುವುದು.

 

LEO ಉಪಗ್ರಹ ಆಧಾರಿತ ಅಂತರ್ಜಾಲದ ಅನುಕೂಲಗಳು:

 1. LEO ಉಪಗ್ರಹಗಳು ಭೂಮಿಯಿಂದ ಸುಮಾರು 36,000 ಕಿ.ಮೀ ದೂರದಲ್ಲಿರುವ ಜಿಯೋಸ್ಟೇಷನರಿ ಕಕ್ಷೆಯ ಉಪಗ್ರಹಗಳಿಗೆ ಹೋಲಿಸಿದರೆ ಸುಮಾರು 500 ಕಿ.ಮೀ ನಿಂದ 2000 ಕಿ.ಮೀ ದೂರದಲ್ಲಿ ಸ್ಥಾಪಿಸಲಾಗಿರುತ್ತದೆ.
 2. LEO ಉಪಗ್ರಹಗಳು ಭೂಮಿಯನ್ನು ಹತ್ತಿರದಿಂದ ಸುತ್ತುತ್ತವೆ, ಆದ್ದರಿಂದ ಅವು ಸಾಂಪ್ರದಾಯಿಕ ಸ್ಥಿರ-ಉಪಗ್ರಹ ವ್ಯವಸ್ಥೆಗಳಿಗಿಂತ ಬಲವಾದ ಸಂಕೇತಗಳನ್ನು ಮತ್ತು ಅತ್ಯಂತ ವೇಗವನ್ನು ಒದಗಿಸಲು ಸಮರ್ಥವಾಗಿವೆ.
 3. ಫೈಬರ್-ಆಪ್ಟಿಕ್ ಕೇಬಲಿಂಗ್ ವ್ಯವಸ್ಥೆಗಳಿಗಿಂತ ಸಿಗ್ನಲ್‌ಗಳು ಬಾಹ್ಯಾಕಾಶದಲ್ಲಿ ವೇಗವಾಗಿ ಚಲಿಸುವ ಕಾರಣ, ಅವುಗಳು ಅಸ್ತಿತ್ವದಲ್ಲಿರುವ ಭೂ-ಆಧಾರಿತ ನೆಟ್‌ವರ್ಕ್‌ಗಳನ್ನು ಹಿಂದಿಕ್ಕಲು ಸಾಧ್ಯವಾಗದಿದ್ದರೂ ಸಹ, ಅವುಗಳೊಂದಿಗೆ ಸ್ಪರ್ಧಿಸಲು ಸಾಮರ್ಥ್ಯವನ್ನು ಹೊಂದಿದೆ.

 

ಸವಾಲುಗಳು:

ಎಲ್‌ಇಒ ಉಪಗ್ರಹಗಳು ಗಂಟೆಗೆ 27,000 ಕಿ.ಮೀ ವೇಗದಲ್ಲಿ ಚಲಿಸುತ್ತವೆ ಮತ್ತು 90-120 ನಿಮಿಷಗಳಲ್ಲಿ ಭೂಮಿಯ ಸಂಪೂರ್ಣ ಸರ್ಕ್ಯೂಟ್ ಅನ್ನು ಪೂರ್ಣಗೊಳಿಸುತ್ತವೆ. ಇದರ ಪರಿಣಾಮವಾಗಿ, ಉಪಗ್ರಹವು ಭೂಮಿಯ ಮೇಲೆ ಸ್ಥಾಪಿಸಲಾದ ಟ್ರಾನ್ಸ್‌ಮಿಟರ್‌ನೊಂದಿಗೆ ಬಹಳ ಕಡಿಮೆ ಸಮಯದವರೆಗೆ ಸಂವಹನ ನಡೆಸಬಲ್ಲದು, ಆದ್ದರಿಂದ ವ್ಯವಸ್ಥೆಯು ಯಶಸ್ವಿಯಾಗಿ ಕಾರ್ಯನಿರ್ವಹಿಸಲು ಹೆಚ್ಚಿನ ಸಂಖ್ಯೆಯ  ಭೂ ನೀಚ ಕಕ್ಷೆಯ ಉಪಗ್ರಹಗಳ ಅಗತ್ಯವಿರುತ್ತದೆ ಮತ್ತು ದೊಡ್ಡ ಮೊತ್ತದ ಬಂಡವಾಳ ಹೂಡಿಕೆಯ ಅಗತ್ಯವಿರುತ್ತದೆ.

 

ಭೂ ನೀಚ ಕಕ್ಷೆಯ ಉಪಗ್ರಹಗಳ ಕುರಿತ ಟೀಕೆಗಳು:

 1. ಈ ಯೋಜನೆಗಳನ್ನು ಹೆಚ್ಚಾಗಿ ಖಾಸಗಿ ಕಂಪನಿಗಳು ನಡೆಸುತ್ತಿರುವುದರಿಂದ, ಅಧಿಕಾರದ ಸಮತೋಲನವು ದೇಶಗಳಿಂದ ಕಂಪನಿಗಳಿಗೆ ಬದಲಾಗಿದೆ. ಈ ಖಾಸಗಿ ಯೋಜನೆಗಳಲ್ಲಿ ಅನೇಕ ರಾಷ್ಟ್ರಗಳ ಭಾಗವಹಿಸುವಿಕೆಯ ದೃಷ್ಟಿಯಿಂದ, ಈ ಕಂಪನಿಗಳನ್ನು ನಿಯಂತ್ರಿಸುವುದಕ್ಕೆ ಸಂಬಂಧಿಸಿದಂತೆ ಪ್ರಶ್ನೆಗಳು ಉದ್ಭವಿಸುತ್ತಿವೆ.
 2. ಸಂಕೀರ್ಣ ನಿಯಂತ್ರಕ ಚೌಕಟ್ಟು: ಈ ಕಂಪನಿಗಳು ವಿವಿಧ ದೇಶಗಳ ಮಧ್ಯಸ್ಥಗಾರರನ್ನು ಒಳಗೊಂಡಿವೆ. ಆದ್ದರಿಂದ ಪ್ರತಿ ದೇಶದಲ್ಲಿ ಈ ಸೇವೆಗಳನ್ನು ನಿರ್ವಹಿಸಲು ಅಗತ್ಯವಾದ ಪರವಾನಗಿ ಪಡೆಯುವುದು ಸವಾಲಾಗಿ ಪರಿಣಮಿಸುತ್ತದೆ.
 3. ನೈಸರ್ಗಿಕ ಉಪಗ್ರಹಗಳನ್ನು ಕೆಲವೊಮ್ಮೆ ರಾತ್ರಿ ಆಕಾಶದಲ್ಲಿ ನೋಡಬಹುದಾದರೂ, ಈ ಕೃತಕ ಉಪಗ್ರಹಗಳು ಖಗೋಳಶಾಸ್ತ್ರಜ್ಞರಿಗೆ ಸಮಸ್ಯೆಗಳನ್ನು ಉಂಟುಮಾಡುತ್ತವೆ, ಹೇಗೆಂದರೆ ಈ ಕೃತಕ ಉಪಗ್ರಹಗಳು ಸೂರ್ಯನ ಬೆಳಕನ್ನು ಭೂಮಿಗೆ ಪ್ರತಿಬಿಂಬಿಸುವುದುರಿಂದ ಖಗೋಳಶಾಸ್ತ್ರಜ್ಞರ ಅಧ್ಯಯನದ ಚಿತ್ರಗಳ ಮೇಲೆ ಗೆರೆಗಳನ್ನು ಉಂಟುಮಾಡುತ್ತವೆ.
 4. ಕಡಿಮೆ ಕಕ್ಷೆಯಲ್ಲಿ ಪರಿಭ್ರಮಿಸುವ ಉಪಗ್ರಹಗಳು ತಮ್ಮ ಮೇಲೆ ಪರಿಭ್ರಮಿಸುವ ಉಪಗ್ರಹಗಳ ಆವರ್ತನಗಳನ್ನು ಅಡ್ಡಿಪಡಿಸುತ್ತದೆ.
 5. ಆಡುಮಾತಿನಲ್ಲಿ ಸ್ಪೇಸ್ ಜಂಕ್’(ಬಾಹ್ಯಾಕಾಶದ ಕಸ) ಎಂದು ಕರೆಯಲ್ಪಡುವ ವಸ್ತುಗಳು ಬಾಹ್ಯಾಕಾಶ ನೌಕೆಗೆ ಹಾನಿಯನ್ನು ಉಂಟುಮಾಡುವ ಅಥವಾ ಇತರ ಉಪಗ್ರಹಗಳೊಂದಿಗೆ ಘರ್ಷಿಸುವ ಸಾಮರ್ಥ್ಯವನ್ನು ಹೊಂದಿವೆ.

 

ಸಂಭವನೀಯತೆ:

ಫೈಬರ್ ಮತ್ತು ಸ್ಪೆಕ್ಟ್ರಮ್ ಸೇವೆಗಳು ಪ್ರವೇಶಿಸಲಾಗದ ಸ್ಥಳಗಳಲ್ಲಿ, LEO ಸ್ಯಾಟಲೈಟ್ ಬ್ರಾಡ್‌ಬ್ಯಾಂಡ್ ಉತ್ತಮವಾಗಿ ಕಾರ್ಯನಿರ್ವಹಿಸಲು ಸಾಧ್ಯವಾಗುತ್ತದೆ. ಆದ್ದರಿಂದ, ಇದರ ಗುರಿ(target) ಮಾರುಕಟ್ಟೆ ಗ್ರಾಮೀಣ ಜನಸಂಖ್ಯೆ ಮತ್ತು ನಗರ ಪ್ರದೇಶಗಳಿಂದ ದೂರದಲ್ಲಿರುವ ಮಿಲಿಟರಿ ಘಟಕಗಳಾಗಿವೆ.

ಇದೇ ರೀತಿಯ ಇತರ ಯೋಜನೆಗಳು:

ಒನ್‌ವೆಬ್‌ನ ಮುಖ್ಯ ಪ್ರತಿಸ್ಪರ್ಧಿ ಎಲಾನ್ ಮಸ್ಕ್‌ ರವರ ಸ್ಪೇಸ್‌ಎಕ್ಸ್ ಕಂಪನಿಯ ನೇತೃತ್ವದ ಸ್ಟಾರ್‌ಲಿಂಕ್. ಸ್ಟಾರ್‌ಲಿಂಕ್ ಪ್ರಸ್ತುತ 1,385 ಉಪಗ್ರಹಗಳನ್ನು ಭೂ ನೀಚ ಕಕ್ಷೆಯಲ್ಲಿ(LEO) ಇರಿಸಿದೆ.

ಸ್ಟಾರ್‌ಲಿಂಕ್ ಈಗಾಗಲೇ ಉತ್ತರ ಅಮೆರಿಕಾದಲ್ಲಿ ಬೀಟಾ ಪರೀಕ್ಷೆಯನ್ನು ಪ್ರಾರಂಭಿಸಿದೆ ಮತ್ತು ಭಾರತದಂತಹ ದೇಶಗಳಲ್ಲಿಯೂ ಸಹ ಪೂರ್ವ-ಆದೇಶಗಳನ್ನು(PRE-ORDERS) ಪ್ರಾರಂಭಿಸಿದೆ.

  

ವಿಷಯಗಳು: ಮಾಹಿತಿ ತಂತ್ರಜ್ಞಾನ, ಬಾಹ್ಯಾಕಾಶ, ಕಂಪ್ಯೂಟರ್, ರೊಬೊಟಿಕ್ಸ್, ನ್ಯಾನೊ-ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ ಮತ್ತು ಬೌದ್ಧಿಕ ಆಸ್ತಿ ಹಕ್ಕುಗಳಿಗೆ ಸಂಬಂಧಿಸಿದ ವಿಷಯಗಳಲ್ಲಿ ಜಾಗೃತಿ.

ನಾಸಾ ವಾಟರ್ ಬೇರ್ಸ್ ಮತ್ತು ಬೇಬಿ ಸ್ಕ್ವಿಡ್ ಗಳನ್ನು ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ   ಕಳುಹಿಸುತ್ತಿರುವ ಕಾರಣವೇನು?


(Why is NASA sending water bears, baby squid to the International Space Station?)

ಸಂದರ್ಭ:

ಇತ್ತೀಚೆಗೆ, ನಾಸಾ, ಕತ್ತಲಲ್ಲೂ ಪ್ರಜ್ವಲಿಸುವ ಬೇಬಿ ಸ್ಕ್ವಿಡ್‌ಗಳನ್ನು(Baby Squids) ಮತ್ತು ‘ವಾಟರ್ ಬೇರ್ಸ್’  ಎಂದೂ ಕರೆಯಲ್ಪಡುವ 5,000 ಟಾರ್ಡಿಗ್ರೇಡ್‌ಗಳನ್ನು (Tardigrades), ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಕಳುಹಿಸಿದೆ.

 1. ಈ ಜೀವಿಗಳು 22 ನೇ ಸ್ಪೇಸ್‌ಎಕ್ಸ್ ಸರಕು ಮರುಪೂರಣ ಕಾರ್ಯಾಚರಣೆಯ ಒಂದು ಭಾಗವಾಗಿವೆ.

 

ಈ ಹೊಸ ಪ್ರಯೋಗಗಳ ಉದ್ದೇಶ:

 1. ದೀರ್ಘಾವಧಿಯ ಬಾಹ್ಯಾಕಾಶ ಯಾನಗಳಲ್ಲಿ ಪಾಲ್ಗೊಳ್ಳುವ ಗಗನಯಾತ್ರಿಗಳಿಗೆ ಉತ್ತಮ ರಕ್ಷಣಾತ್ಮಕ ಕ್ರಮಗಳನ್ನು ವಿನ್ಯಾಸಗೊಳಿಸಲು ವಿಜ್ಞಾನಿಗಳಿಗೆ ಸಹಾಯ ಮಾಡುವುದು.
 2. ಪ್ರಾಣಿಗಳ ಜೊತೆಗೆ ಪರಸ್ಪರ ಸಂವಹನ ಕ್ರಿಯೆಯನ್ನು ನಡೆಸುವ ಸೂಕ್ಷ್ಮಾಣುಜೀವಿಗಳು ಎಷ್ಟು ಪ್ರಯೋಜನಕಾರಿ ಎಂಬುದನ್ನು ಅರ್ಥಮಾಡಿಕೊಳ್ಳುವುದು, ಆ ಮೂಲಕ ಭೂಮಿಯ ಮೇಲೆ ಮಾನವನ ಆರೋಗ್ಯವನ್ನು ಸುಧಾರಿಸುವ ಪ್ರಮುಖ ಆವಿಷ್ಕಾರಗಳಿಗೆ ಕಾರಣವಾಗುವುದು.

 

ಸೂಕ್ಷ್ಮಾಣುಜೀವಿಗಳನ್ನು ಅಂತರಿಕ್ಷಕ್ಕೆ ಕಳುಹಿಸಲು ಕಾರಣ?

 1. ಪ್ರಾಣಿಗಳಲ್ಲಿನ ಅಂಗಾಂಶಗಳ ಸಾಮಾನ್ಯ ಬೆಳವಣಿಗೆಯಲ್ಲಿ ಮತ್ತು ಮಾನವನ ಆರೋಗ್ಯದ ನಿರ್ವಹಣೆಯಲ್ಲಿ ಸೂಕ್ಷ್ಮಜೀವಿಗಳು ಪ್ರಮುಖ ಪಾತ್ರವಹಿಸುತ್ತವೆ. ಸೂಕ್ಷ್ಮಜೀವಿಗಳ ಕುರಿತಾದ ಈ ಸಂಶೋಧನೆಗಳೊಂದಿಗೆ, ಗುರುತ್ವ ಮುಕ್ತ ಅಥವಾ ಶೂನ್ಯ ಗುರುತ್ವ ಪರಿಸ್ಥಿತಿಗಳಲ್ಲಿ ಪ್ರಯೋಜನಕಾರಿ ಸೂಕ್ಷ್ಮಾಣುಜೀವಿಗಳು ಮತ್ತು ಪ್ರಾಣಿಗಳ ನಡುವಿನ ಪರಸ್ಪರ ಕ್ರಿಯೆಯನ್ನು ಅರ್ಥಮಾಡಿಕೊಳ್ಳಲು ವಿಜ್ಞಾನಿಗಳಿಗೆ ಅನುವು ಮಾಡಿಕೊಡುತ್ತದೆ.
 2. ಮಾನವ ದೇಹದಲ್ಲಿನ ಸೂಕ್ಷ್ಮಜೀವಿಗಳು ಜೀರ್ಣಕ್ರಿಯೆ, ಪ್ರತಿರಕ್ಷಣಾ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸುವುದು ಮತ್ತು ಹಾನಿಕಾರಕ ರಾಸಾಯನಿಕಗಳನ್ನು ನಿರ್ವಿಷ ಗೊಳಿಸುವಂತಹ ಕಾರ್ಯಗಳಿಗೆ ಗಮನಾರ್ಹವಾಗಿ ಕೊಡುಗೆ ನೀಡುತ್ತವೆ. ಈ ಸೂಕ್ಷ್ಮಾಣುಜೀವಿಗಳು ಮತ್ತು ಮಾನವ ದೇಹದ ನಡುವಿನ ಸಂಬಂಧದಲ್ಲಿನ ಅಡಚಣೆಗಳು ಅಥವಾ ತೊಡರುಗಳು ರೋಗಗಳಿಗೆ ಕಾರಣವಾಗಬಹುದು.

 

ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದ ಕುರಿತು:

 1. ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ (ISS) ವನ್ನು 1998 ರಲ್ಲಿ ಪ್ರಾರಂಭಿಸಲಾಯಿತು.
 2.  ಇದು ಯುರೋಪಿಯನ್ ಬಾಹ್ಯಾಕಾಶ ಸಂಸ್ಥೆ ಸೇರಿದಂತೆ ರಷ್ಯಾ, ಯುನೈಟೆಡ್ ಸ್ಟೇಟ್ಸ್, ಕೆನಡಾ, ಜಪಾನ್‌ನ ಬಾಹ್ಯಾಕಾಶ ಏಜೆನ್ಸಿಗಳನ್ನು ಒಳಗೊಂಡಿದೆ. ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ (ISS) ಮಾನವ ಇತಿಹಾಸದಲ್ಲಿ ಅತ್ಯಂತ ಮಹತ್ವಾಕಾಂಕ್ಷೆಯ ಅಂತರರಾಷ್ಟ್ರೀಯ ಸಹಯೋಗವಾಗಿದೆ.
 3. ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣವು ‘(ISS) ಭೂಮಿಯ ಕೆಳ ಕಕ್ಷೆಯಲ್ಲಿರುವ’(ನಿಕಟವರ್ತಿ ಕಕ್ಷೆಯಲ್ಲಿ) ಮಾಡ್ಯುಲರ್ ಬಾಹ್ಯಾಕಾಶ ನಿಲ್ದಾಣ ‘(ವಾಸಯೋಗ್ಯ ಕೃತಕ ಉಪಗ್ರಹ) ವಾಗಿದೆ.
 4. ISS ಮೈಕ್ರೊಗ್ರಾವಿಟಿ (ಸೂಕ್ಷ್ಮಗುರುತ್ವ) ಮತ್ತು ಬಾಹ್ಯಾಕಾಶ ಪರಿಸರ ಸಂಶೋಧನಾ ಪ್ರಯೋಗಾಲಯವಾಗಿ ಕಾರ್ಯನಿರ್ವಹಿಸುತ್ತದೆ, ಅದರ ಮೇಲೆ ಖಗೋಳ ಜೀವವಿಜ್ಞಾನ, ಖಗೋಳವಿಜ್ಞಾನ, ಹವಾಮಾನಶಾಸ್ತ್ರ, ಭೌತಶಾಸ್ತ್ರ ಮತ್ತು ಇತರ ಕ್ಷೇತ್ರಗಳಿಗೆ ಸಂಬಂಧಿಸಿದ ವೈಜ್ಞಾನಿಕ ಪ್ರಯೋಗಗಳನ್ನು ನಡೆಸಲಾಗುತ್ತದೆ.
 5. ISS ಸುಮಾರು 93 ನಿಮಿಷಗಳಲ್ಲಿ ಭೂಮಿಯನ್ನು ಒಂದು ಸುತ್ತು ಸುತ್ತುತ್ತದೆ ಮತ್ತು ದಿನಕ್ಕೆ 15.5 ಕಕ್ಷೆಗಳನ್ನು ಪೂರ್ಣಗೊಳಿಸುತ್ತದೆ.
 6. ಬಾಹ್ಯಾಕಾಶ ನೌಕೆಯ ವ್ಯವಸ್ಥೆಗಳ ಪರೀಕ್ಷೆಗಾಗಿ ನಿಲ್ದಾಣವು ವಿಶಿಷ್ಟ ವಾತಾವರಣವನ್ನು ಒದಗಿಸುತ್ತದೆ. ಇಂತಹ ವ್ಯವಸ್ಥೆಗಳು ಚಂದ್ರ ಮತ್ತು ಮಂಗಳದ ಯಾತ್ರೆಗೆ ಅಗತ್ಯವಾಗಿವೆ.
 7. ಇದರೊಂದಿಗೆ ರಷ್ಯಾದ ಬಾಹ್ಯಾಕಾಶ ಸಂಸ್ಥೆಯು 2025 ರಲ್ಲಿ ತನ್ನದೇ ಆದ ‘ಕಕ್ಷೀಯ ಕೇಂದ್ರ’(ISS)ವನ್ನು ಪ್ರಾರಂಭಿಸಲು ಯೋಜಿಸುತ್ತಿದೆ, ಒಂದು ವೇಳೆ ಇದು ಆಸ್ಪತ್ರೆ ಬಂದರೆ ಅಂತರಿಕ್ಷದಲ್ಲಿನ ಒಂಬತ್ತನೇ ಅಂತರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣವಾಗಲಿದೆ.

 

ವಿಷಯಗಳು: ಸಂರಕ್ಷಣೆ, ಪರಿಸರ ಮಾಲಿನ್ಯ ಮತ್ತು ಅವನತಿ, ಪರಿಸರ ಪ್ರಭಾವದ ಮೌಲ್ಯಮಾಪನ.

ಆಲಿಕಲ್ಲು ವಿರೋಧಿ ಬಂದೂಕು ಪರೀಕ್ಷೆ ಮಾಡಿದ ಹಿಮಾಚಲ ಪ್ರದೇಶ:


(Anti-hail gun test by Himachal Pradesh)

 ಸಂದರ್ಭ:

ಆಲಿಕಲ್ಲು ಮಳೆಯಿಂದಾಗಿ ಬೆಳೆ ಹಾನಿಯನ್ನು ಎದುರಿಸುತ್ತಿರುವ ತೋಟಗಾರರಿಗೆ ಸಹಾಯ ಮಾಡಲು ಸ್ಥಳೀಯವಾಗಿ ಅಭಿವೃದ್ಧಿಪಡಿಸಿದ ‘ಆಲಿಕಲ್ಲು ವಿರೋಧಿ ಬಂದೂಕು’ (Anti-hail gun) ಗಳ  ಬಳಕೆಯನ್ನು, ಹಿಮಾಚಲ ಪ್ರದೇಶ ಸರ್ಕಾರವು ಪರೀಕ್ಷಿಸಲಿದೆ.

 

ಆಲಿಕಲ್ಲು ಮಳೆ’ ಎಂದರೇನು?

 ಆಲಿಕಲ್ಲು ಮಳೆಯು ‘ಕ್ಯುಮುಲೋನಿಂಬಸ್ ಮೋಡಗಳಿಂದ’ (Cumulonimbus Clouds) ರೂಪುಗೊಳ್ಳುತ್ತದೆ.ಈ ಹತ್ತಿ ಮಳೆ ಮೋಡಗಳು ಸಾಮಾನ್ಯವಾಗಿ ತುಂಬಾ ವಿಶಾಲ ಮತ್ತು ಗಾಢವಾದ ಮೋಡಗಳಾಗಿವೆ, ಮತ್ತು ಗುಡುಗು ಮತ್ತು ಮಿಂಚಿಗೆ ಕಾರಣವಾಗಬಹುದು.

 1. ಈ ಮೋಡಗಳಲ್ಲಿ, ಗಾಳಿಯು ನೀರಿನ ಹನಿಗಳನ್ನು ತಮ್ಮೊಂದಿಗೆ ಎತ್ತರಕ್ಕೆ ಕೊಂಡೊಯ್ಯುತ್ತದೆ, ಅಲ್ಲಿ ನೀರಿನ ಹನಿಗಳು ಹಿಮದಂತೆ ಹೆಪ್ಪುಗಟ್ಟುತ್ತವೆ. ಈ ಹೆಪ್ಪುಗಟ್ಟಿದ ನೀರಿನ ಹನಿಗಳು ಮಳೆಯ ರೂಪದಲ್ಲಿ ಕೆಳಗೆ ಬೀಳಲು ಪ್ರಾರಂಭಿಸುತ್ತವೆ,ಆದರೆ ಶೀಘ್ರದಲ್ಲೇ ಅವುಗಳನ್ನು ಗಾಳಿಯಿಂದ ಹಿಂದಕ್ಕೆ ತಳ್ಳಲಾಗುತ್ತದೆ ಮತ್ತು ಹೆಚ್ಚಿನ ಹನಿಗಳು ಅವುಗಳ ಮೇಲೆ ಸಂಗ್ರಹವಾಗುತ್ತವೆ, ಇದರ ಪರಿಣಾಮವಾಗಿ ಹೆಪ್ಪುಗಟ್ಟಿದ ನೀರಿನ ಹನಿಗಳ ಅಂದರೆ ಆಲಿಕಲ್ಲು ಮೇಲೆ ಅನೇಕ ಪದರಗಳ ಮಂಜುಗಡ್ಡೆಗಳು ಉಂಟಾಗುತ್ತವೆ.
 2. ಈ ಹೆಪ್ಪುಗಟ್ಟಿದ ನೀರಿನ ಹನಿಗಳು ಕೆಳಗೆ ಬಿದ್ದು ಮತ್ತೆ ಮೇಲಕ್ಕೆ ಹೋಗುವ ಪ್ರಕ್ರಿಯೆಯು ಈ ಆಲಿಕಲ್ಲುಗಳು ತುಂಬಾ ಭಾರವಾಗುವವರೆಗೆ ಪುನರಾವರ್ತನೆಯಾಗುತ್ತದೆ ನಂತರ ಈ ಆಲಿಕಲ್ಲು, ಮಳೆಯ ರೂಪದಲ್ಲಿ ಭೂಮಿಯ ಮೇಲೆ ಬೀಳಲು ಪ್ರಾರಂಭಿಸುತ್ತದೆ.

 

ಆಲಿಕಲ್ಲು ವಿರೋಧಿ ಬಂದೂಕು’ ಎಂದರೇನು?

 1. ಆಲಿಕಲ್ಲು ವಿರೋಧಿ ಬಂದೂಕು (Anti-Hail Gun)ಮೋಡಗಳಲ್ಲಿ ಆಲಿಕಲ್ಲುಗಳ ಬೆಳವಣಿಗೆಯನ್ನು ತಡೆಯಲು ‘ಆಘಾತ ತರಂಗಗಳನ್ನು’(Shock Waves) ಉತ್ಪಾದಿಸುವ ಯಂತ್ರವಾಗಿದೆ.
 2. ಇದು ತಲೆಕೆಳಗಾದ ಗೋಪುರವನ್ನು ಹೋಲುವ ಹಲವಾರು ಮೀಟರ್ ಎತ್ತರದ ಸ್ಥಿರ ರಚನೆಯಾಗಿದೆ ಮತ್ತು ಆಕಾಶದ ಕಡೆಗೆ ತೆರೆಯುವ ಉದ್ದ ಮತ್ತು ಕಿರಿದಾದ ಶಂಕುವಿನಾಕಾರದ ಕೊಳವೆಯನ್ನು ಹೊಂದಿರುತ್ತದೆ.
 3. ಅಸಿಟಲೀನ್ ಅನಿಲ ಮತ್ತು ಗಾಳಿಯ ಸ್ಫೋಟಕ ಮಿಶ್ರಣವನ್ನು(mixture of acetylene gas and air) ಗನ್‌ನ ಕೆಳಭಾಗದಲ್ಲಿ ತುಂಬಿಸಿ ಗನ್‌ನಿಂದ ಗುಂಡು ಹಾರಿಸಲಾಗುತ್ತದೆ, ಇದರ ಪರಿಣಾಮವಾಗಿ ‘ಆಘಾತ ತರಂಗಗಳು’ ಉಂಟಾಗುತ್ತವೆ. ಈ ‘ಆಘಾತ ತರಂಗ’ಗಳ ವೇಗವು ಶಬ್ದದ ವೇಗಕ್ಕಿಂತ ಹೆಚ್ಚಾಗಿರುತ್ತದೆ ಅಂದರೆ, ಸೂಪರ್ಸಾನಿಕ್ ವಿಮಾನದಿಂದ ಹೊರಹೊಮ್ಮುವ ಶಬ್ದಕ್ಕಿಂತ ಹೆಚ್ಚಿನ ವೇಗ.
 4. ಈ ಆಘಾತ ತರಂಗಗಳು ಮೋಡಗಳಲ್ಲಿನ ನೀರಿನ ಹನಿಗಳು ಆಲಿಕಲ್ಲುಗಳಾಗಿ ಬದಲಾಗುವುದನ್ನು ತಡೆಯುತ್ತದೆ, ಇದರಿಂದ ಅವು ಸಾಮಾನ್ಯ ಮಳೆಹನಿಗಳಾಗಿ ಬೀಳುತ್ತವೆ.

 

ಹಿಮಾಚಲ ಪ್ರದೇಶದಲ್ಲಿ ಆಲಿಕಲ್ಲು ಮಳೆ ಏಕೆ ದೊಡ್ಡ ಸಮಸ್ಯೆಯಾಗಿದೆ?

ಮಾರ್ಚ್‌ನಿಂದ ಮೇ ವರೆಗಿನ ಪ್ರತಿ ಬೇಸಿಗೆಯಲ್ಲಿ, ಹಿಮಾಚಲದ ಹಣ್ಣು ಉತ್ಪಾದಿಸುವ ಪ್ರದೇಶಗಳಲ್ಲಿ ನಿರಂತರವಾಗಿ ಆಲಿಕಲ್ಲು ಮಳೆಯು ಸೇಬು, ಪೇರಳೆ ಮತ್ತು ಇತರ ಬೆಳೆಗಳನ್ನು ನಾಶಪಡಿಸುತ್ತದೆ, ಇದರಿಂದ ರೈತರಿಗೆ ಭಾರಿ ನಷ್ಟವಾಗುತ್ತದೆ. ನರ್ಕಂದ ಮತ್ತು ಥಿಯೋಗ್‌ನಂತಹ ಕೆಲವು ಆಲಿಕಲ್ಲು ಪೀಡಿತ ಪ್ರದೇಶಗಳಲ್ಲಿ, ಕೆಲವೊಮ್ಮೆ ಇಂತಹ ಬಿರುಗಾಳಿಗಳು ಹಣ್ಣಿನ ತೋಟದಲ್ಲಿ ಸಂಪೂರ್ಣ ಸೇಬಿನ ಬೆಳೆಗಳನ್ನು ನಾಶಮಾಡುತ್ತವೆ.

 

ವಿಷಯಗಳು:ಸಂರಕ್ಷಣೆ, ಪರಿಸರ ಮಾಲಿನ್ಯ ಮತ್ತು ಅವನತಿ, ಪರಿಸರ ಪ್ರಭಾವದ ಮೌಲ್ಯಮಾಪನ.

ಕಪ್ಪು ಇಂಗಾಲದ ಮೇಲಿನ ಬಲವಾದ ನೀತಿಗಳು ಹಿಮನದಿಯ ಕರಗುವಿಕೆಯನ್ನು ತೀವ್ರವಾಗಿ ಕಡಿತಗೊಳಿಸಬಹುದು: ವಿಶ್ವಬ್ಯಾಂಕ್ ಅಧ್ಯಯನ:


(Strong policies on black carbon can sharply cut glacier melt: World Bank study)

 ಸಂದರ್ಭ:

 ಹಿಮಾಲಯನ್, ಕಾರಾಕೋರಂ ಮತ್ತು ಹಿಂದೂ-ಕುಶ್  (Himalaya, Karakoram and Hindu-Kush: HKHK)  ಪರ್ವತ ಶ್ರೇಣಿಗಳ ಮೇಲೆ ಕಪ್ಪು ಇಂಗಾಲದ ಪ್ರಭಾವಗಳನ್ನು ತಿಳಿಯಲು ವಿಶ್ವ ಬ್ಯಾಂಕ್ ಇತ್ತೀಚೆಗೆ ಸಂಶೋಧನಾ ಅಧ್ಯಯನವನ್ನು ನಡೆಸಿತು. ಈ ಪರ್ವತ ಶ್ರೇಣಿಗಳಲ್ಲಿ ಹಿಮನದಿಯ ಕರಗುವಿಕೆಯ ಪ್ರಮಾಣವು ವಿಶ್ವದ ಸರಾಸರಿ ಹಿಮ ಕ್ಷೇತ್ರಗಳಿಗಿಂತ ಹೆಚ್ಚಾಗಿದೆ ಎಂದು ತಿಳಿದುಬಂದಿದೆ.

 1. ಈ ಸಂಶೋಧನಾ ವರದಿಯ ಶೀರ್ಷಿಕೆ ಹಿಮಾಲಯದ ಹಿಮನದಿಗಳು, ಹವಾಮಾನ ಬದಲಾವಣೆ, ಕಪ್ಪು ಕಾರ್ಬನ್ ಮತ್ತು ಪ್ರಾದೇಶಿಕ ಸ್ಥಿತಿಸ್ಥಾಪಕತ್ವ”(Glaciers of the Himalayas, Climate Change, Black Carbon and Regional Resilience) ಎಂಬುದಾಗಿದೆ.

 

ಪ್ರಮುಖ ಆವಿಷ್ಕಾರಗಳು:

 1. ಮಾನವ ಚಟುವಟಿಕೆಗಳಿಂದ ಉತ್ಪತ್ತಿಯಾಗುವ ಕಪ್ಪು ಇಂಗಾಲ ನಿಕ್ಷೇಪದಿಂದಾಗಿ ಹಿಮಾಲಯನ್ ಪ್ರದೇಶದಲ್ಲಿ ಹಿಮನದಿಗಳು ಮತ್ತು ಮಂಜುಗಡ್ಡೆಯ ಕರಗುವಿಕೆಯ ವೇಗವನ್ನು ಹೆಚ್ಚಿಸುತ್ತದೆ.
 2. HKHK ಪರ್ವತ ಶ್ರೇಣಿಗಳ ಹಿಮನದಿ / ಗ್ಲೇಷಿಯರ್ ಗಳ ಹಿಮ್ಮೆಟ್ಟುವಿಕೆಯ ಪ್ರಮಾಣವು ಪಶ್ಚಿಮ ಪ್ರದೇಶಗಳಲ್ಲಿ ವರ್ಷಕ್ಕೆ 0.3 ಮೀ ಮತ್ತು ಪೂರ್ವ ಪ್ರದೇಶಗಳಲ್ಲಿ ವರ್ಷಕ್ಕೆ 1.0 ಮೀ ಎಂದು ಅಂದಾಜಿಸಲಾಗಿದೆ. ಕಪ್ಪು ಇಂಗಾಲವು ಹವಾಮಾನ ಬದಲಾವಣೆಯ ಪರಿಣಾಮಗಳನ್ನು ತೀವ್ರಗೊಳಿಸುತ್ತದೆ.
 3. ಕಪ್ಪು ಇಂಗಾಲದ ನಿಕ್ಷೇಪಗಳು ಹಿಮನದಿ ಕರಗುವಿಕೆಯನ್ನು ಎರಡು ರೀತಿಯಲ್ಲಿ ವೇಗಗೊಳಿಸಲು ಕಾರ್ಯನಿರ್ವಹಿಸುತ್ತವೆ: ಸೌರ ಬೆಳಕಿನ ಮೇಲ್ಮೈ ಪ್ರತಿಫಲನವನ್ನು ಕಡಿಮೆ ಮಾಡುವ ಮೂಲಕ ಮತ್ತು ಗಾಳಿಯ ಉಷ್ಣತೆಯನ್ನು ಹೆಚ್ಚಿಸುವ ಮೂಲಕ.

 

ಸಲಹೆಗಳು:

 1.  ಕಪ್ಪು ಇಂಗಾಲವನ್ನು ಕಡಿಮೆ ಮಾಡಲು ಅಸ್ತಿತ್ವದಲ್ಲಿರುವ ನೀತಿಗಳನ್ನು ಪೂರ್ಣವಾಗಿ ಅನುಷ್ಠಾನಗೊಳಿಸುವುದರಿಂದ ಹಿಮಯುಗದ ಕರಗುವಿಕೆಯ ಪ್ರಮಾಣವನ್ನು 23% ರಷ್ಟು ಕಡಿಮೆ ಮಾಡಬಹುದು, ಆದರೆ, ಹೊಸ ನೀತಿಗಳ ಅನುಷ್ಠಾನ ಮತ್ತು ಸಂಬಂಧಪಟ್ಟ ದೇಶಗಳಲ್ಲಿ ಪ್ರಾದೇಶಿಕ ಸಹಕಾರದ ಮೂಲಕ ಇವುಗಳನ್ನು ಕಾರ್ಯಗತ ಗೊಳಿಸುವ ಮೂಲಕ ಹೆಚ್ಚಿನ ಪ್ರಯೋಜನಗಳನ್ನು ಪಡೆಯಬಹುದು.
 2. ಹೊಸ ಮತ್ತು ಪ್ರಸ್ತುತ ಕಾರ್ಯಸಾಧ್ಯವಾದ ನೀತಿಗಳ ಮೂಲಕ ಹಿಮನದಿಗಳ ಹಿಮ್ಮೆಟ್ಟುವಿಕೆಯ ಪ್ರಮಾಣವನ್ನು ಪ್ರಸ್ತುತ ಮಟ್ಟಕ್ಕಿಂತ 50% ರಷ್ಟು ವೇಗವಾಗಿ ಕಡಿಮೆ ಮಾಡಬಹುದು.
 3. ನಿರ್ದಿಷ್ಟವಾಗಿ ಹಿಮಾಲಯದಲ್ಲಿ, ಆಹಾರ ಬೇಯಿಸುವ ಒಲೆಗಳು, ಡೀಸೆಲ್ ಎಂಜಿನ್ ಮತ್ತು ತೆರೆದ ದಹನಕಾರ್ಯದಿಂದ ಕಪ್ಪು ಇಂಗಾಲದ ಹೊರಸೂಸುವಿಕೆಯನ್ನು ಕಡಿಮೆ ಮಾಡುವಲ್ಲಿ ಹೆಚ್ಚಿನ ಪರಿಣಾಮ ಬೀರುತ್ತದೆ ಮತ್ತು ವಿಕಿರಣ ಶಕ್ತಿಗಳನ್ನು ಗಮನಾರ್ಹವಾಗಿ ಕಡಿಮೆ ಮಾಡುತ್ತದೆ.

 

ಕಪ್ಪು ಇಂಗಾಲ / ಬ್ಲಾಕ್ ಕಾರ್ಬನ್ ಕುರಿತು:

 1. ಅಲ್ಪಾವಧಿಯ ಮಾಲಿನ್ಯಕಾರಕವಾದ ಕಪ್ಪು ಇಂಗಾಲವು ಇಂಗಾಲದ ಡೈಆಕ್ಸೈಡ್ (CO 2) ನಂತರ ಭೂಮಿಯ ಉಷ್ಣತೆಯ ಹೆಚ್ಚಳಕ್ಕೆ ಎರಡನೇ ಅತಿದೊಡ್ಡ ಕೊಡುಗೆ ನೀಡುತ್ತದೆ.
 2. ಇತರ ಹಸಿರುಮನೆ ಅನಿಲ ಹೊರಸೂಸುವಿಕೆಗಿಂತ ಭಿನ್ನವಾಗಿ, ಕಪ್ಪು ಇಂಗಾಲವನ್ನು ತ್ವರಿತವಾಗಿ ತೆರವುಗೊಳಿಸಲಾಗುತ್ತದೆ ಮತ್ತು ಅದರ ಹೊರಸೂಸುವಿಕೆಯನ್ನು ನಿಲ್ಲಿಸಿದರೆ ವಾತಾವರಣದಿಂದ ಹೊರಹಾಕಬಹುದು.
 3. ಐತಿಹಾಸಿಕ ಇಂಗಾಲದ ಹೊರಸೂಸುವಿಕೆಗಿಂತ ಭಿನ್ನವಾಗಿ, ಇದು ಸ್ಥಳೀಯ ಮೂಲಗಳಿಂದ ಹುಟ್ಟಿಕೊಂಡಿದೆ ಮತ್ತು ಸ್ಥಳೀಯ ಪ್ರದೇಶಗಳ ಮೇಲೆ ಭಾರಿ ಪರಿಣಾಮ ಬೀರುತ್ತದೆ.
 4. ಇದು ಪಳೆಯುಳಿಕೆ ಇಂಧನಗಳು, ಜೈವಿಕ ಇಂಧನಗಳು ಮತ್ತು ಜೀವರಾಶಿಗಳ ಅಪೂರ್ಣ ದಹನದ ಮೂಲಕ ಉತ್ಪತ್ತಿಯಾಗುತ್ತದೆ ಮತ್ತು ಇದು ಮಾನವಜನ್ಯ ಮತ್ತು ನೈಸರ್ಗಿಕವಾಗಿ ಕಂಡುಬರುವ ಮಸಿ ಎರಡರಿಂದಲೂ ಹೊರಸುಸ್ವಲ್ಪಡುತ್ತದೆ.

 

ಹಿಮಾಲಯ, ಕಾರಕೋರಂ ಮತ್ತು ಹಿಂದೂಕುಶ್ (HKHK) ಪ್ರದೇಶಗಳಲ್ಲಿ ಕಪ್ಪು ಇಂಗಾಲದ ಮೂಲಗಳು:

ಈ ಪ್ರದೇಶದ ಮಾನವಜನ್ಯ ಕಪ್ಪು ಇಂಗಾಲದ ನಿಕ್ಷೇಪಗಳಲ್ಲಿ, ಕೈಗಾರಿಕೆಗಳಿಂದ (ಪ್ರಾಥಮಿಕವಾಗಿ ಇಟ್ಟಿಗೆ ಗೂಡುಗಳು) ಮತ್ತು ಸ್ಥಳೀಯ ನಿವಾಸಿಗಳ ಘನ ಇಂಧನ ದಹನದಿಂದ 45–66% ರಷ್ಟು ಕೊಡುಗೆ ನೀಡುತ್ತದೆ, ನಂತರ ಸಾರಿಗೆ ವಾಹನಗಳ ಡೀಸೆಲ್ ಇಂಧನದಿಂದ (7–18%) ಮತ್ತು ತೆರೆದ ದಹನ (ಎಲ್ಲ ಋತುಮಾನಗಳಲ್ಲಿ 3% ಕ್ಕಿಂತ ಕಡಿಮೆ) ಇದೆ.

 


ಪೂರ್ವಭಾವಿ ಪರೀಕ್ಷೆಗೆ ಸಂಬಂಧಿಸಿದ ವಿದ್ಯಮಾನಗಳು:


ಶಿಕ್ಷಕರ ಅರ್ಹತಾ ಪರೀಕ್ಷೆ:

 1. ಶಿಕ್ಷಕರ ಅರ್ಹತಾ ಪರೀಕ್ಷೆ (Teachers Eligibility Test- TET) ಭಾರತದಲ್ಲಿ ಒಂದರಿಂದ ಎಂಟನೇ ತರಗತಿಗಳಿಗೆ ಶಿಕ್ಷಕರಾಗಿ ನೇಮಕಗೊಳ್ಳಲು ಅರ್ಹತೆ ಪಡೆಯಲು ಇರುವ ಕನಿಷ್ಠ ಅರ್ಹತೆಯಾಗಿದೆ.
 2. ಭಾರತದ ಸರ್ಕಾರಿ ಶಾಲೆಗಳಲ್ಲಿ ಪಾಠ ಮಾಡಲು ಈ ಪರೀಕ್ಷೆಯಲ್ಲಿ ಉತ್ತೀರ್ಣರಾಗುವುದು ಕಡ್ಡಾಯ.
 3. ಟಿಇಟಿಯನ್ನು ಭಾರತದ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ನಡೆಸುತ್ತವೆ.
 4. ಉಚಿತ ಮತ್ತು ಕಡ್ಡಾಯ ಶಿಕ್ಷಣ ಕಾಯ್ದೆ, 2009 ರ ಮಕ್ಕಳ ಹಕ್ಕಿನ ಉದ್ದೇಶಗಳನ್ನು ಪೂರೈಸಲು ಈ ಪರೀಕ್ಷೆಯನ್ನು ನಡೆಸಲಾಗುತ್ತದೆ.

ಸುದ್ದಿಯಲ್ಲಿರಲು ಕಾರಣ:

ಶಿಕ್ಷಕರ ಅರ್ಹತಾ ಪರೀಕ್ಷೆಯ ಅರ್ಹತಾ ಪ್ರಮಾಣಪತ್ರದ ಮಾನ್ಯತೆಯ ಅವಧಿಯನ್ನು ಶಿಕ್ಷಣ ಸಚಿವಾಲಯವು ಏಳು ವರ್ಷದಿಂದ ಜೀವಿತಾವಧಿಗೆ ವಿಸ್ತರಿಸಿದೆ.

SAGE ಪೋರ್ಟಲ್:

 1. ಇತ್ತೀಚೆಗೆ, ಭಾರತದ ವೃದ್ಧ ನಾಗರಿಕರಿಗೆ ಸಹಾಯ ಮಾಡಲು ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವರು ಸೀನಿಯರ್ ಕೇರ್ ಏಜಿಂಗ್ ಗ್ರೋತ್ ಎಂಜಿನ್’ (Seniorcare Aging Growth Engine- SAGE) ಉಪಕ್ರಮ ಮತ್ತು SAGE ಪೋರ್ಟಲ್ ಅನ್ನು ಪ್ರಾರಂಭಿಸಿದ್ದಾರೆ.
 2. ವಿಶ್ವಾಸಾರ್ಹ ಸ್ಟಾರ್ಟ್ ಅಪ್‌ಗಳಿಂದ ವೃದ್ಧರ ಆರೈಕೆ ಉತ್ಪನ್ನಗಳು ಮತ್ತು ಸೇವೆಗಳನ್ನು ಒದಗಿಸಲು ಈ ಪೋರ್ಟಲ್ “ಒಂದು-ನಿಲುಗಡೆ” ಕೇಂದ್ರವಾಗಲಿದೆ.
 3. SAGE ಅಡಿಯಲ್ಲಿ ಆಯ್ಕೆ ಮಾಡಲಾದ ಸ್ಟಾರ್ಟ್ ಅಪ್ ಗಳು ಆರೋಗ್ಯ, ಪ್ರಯಾಣ, ಹಣಕಾಸು, ಕಾನೂನು, ವಸತಿ, ಆಹಾರ ಮುಂತಾದ ವಿವಿಧ ಕ್ಷೇತ್ರಗಳಲ್ಲಿನ ವೃದ್ಧರಿಗೆ ನವೀನ ಉತ್ಪನ್ನಗಳು ಮತ್ತು ಸೇವೆಗಳನ್ನು ಒದಗಿಸುತ್ತದೆ.
 4. ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯವು ಈ ಯೋಜನೆಗೆ ಸಹಾಯಕರಾಗಿ ಕಾರ್ಯನಿರ್ವಹಿಸುತ್ತದೆ.
 5. ಆಯ್ದ ಪ್ರತಿ ಸ್ಟಾರ್ಟ್ ಅಪ್‌ಗೆ ಒಂದು ಬಾರಿಯ ಇಕ್ವಿಟಿಯಾಗಿ ರೂ .1 ಕೋಟಿ ವರೆಗೆ ಹಣವನ್ನು ಒದಗಿಸಲಾಗುವುದು.

 ಆಪರೇಷನ್ ಸಾಗರ್ ಆರಕ್ಷ II.

 1.  ಶ್ರೀಲಂಕಾ ಅಧಿಕಾರಿಗಳ ಸಮನ್ವಯದೊಂದಿಗೆ ಭಾರತೀಯ ಕೋಸ್ಟ್ ಗಾರ್ಡ್ (ICG)ಕೊಲಂಬೊದಲ್ಲಿ 25 ಮೇ 2021 ರಿಂದ ಲಂಗರು ಹಾಕಿದ ರಾಸಾಯನಿಕ ತುಂಬಿದ ಕಂಟೇನರ್ ಹಡಗು MV X-ಪ್ರೆಸ್ ಪರ್ಲ್ ನಲ್ಲಿನ ಬೆಂಕಿಯನ್ನು ನಂದಿಸಲು ದಣಿವರಿಯಿಲ್ಲದೆ ಕೆಲಸ ಮಾಡುತ್ತಿದೆ.
 2. ಪರಿಸರ ಅಪಾಯವನ್ನು ಎದುರಿಸಲು ಭಾರತ ಮತ್ತು ಶ್ರೀಲಂಕಾ ನಡುವಿನ ಸಂಘಟಿತ ಜಂಟಿ ಕಾರ್ಯಾಚರಣೆಗೆ ಸಾಗರ್ ಆರಕ್ಷ – II ಎಂದು ಹೆಸರಿಡಲಾಗಿದೆ.

 INS ಸಂಧ್ಯಾಕ್:

(INS Sandhayak)

 1. ಇದು ಭಾರತೀಯ ನೌಕಾಪಡೆಯ ಅತ್ಯಂತ ಹಳೆಯ ಹೈಡ್ರೋಗ್ರಾಫಿಕ್ ಸಮೀಕ್ಷಾ ಹಡಗು ಮತ್ತು ಸ್ಥಳೀಯವಾಗಿ ವಿನ್ಯಾಸಗೊಳಿಸಿ ಮತ್ತು ನಿರ್ಮಿಸಲ್ಪಟ್ಟ ಅದರ ವರ್ಗದ ಮೊದಲನೆಯದು.
 2. 40 ವರ್ಷಗಳ ಸೇವೆಯ ನಂತರ ಇದನ್ನು ಇತ್ತೀಚೆಗೆ ಸೇವೆಯಿಂದ ಹಿಂಪಡೆಯಲಾಯಿತು.
 3. ಭಾರತೀಯ ನೌಕಾಪಡೆಯ 40 ವರ್ಷಗಳ ಸೇವೆಯ ಅವಧಿಯಲ್ಲಿ, ಐಎನ್ಎಸ್ ಸಂಧ್ಯಾಕ್ ನೆರೆಯ ರಾಷ್ಟ್ರಗಳು ಸೇರಿದಂತೆ ಭಾರತೀಯ ಪರ್ಯಾಯ ದ್ವೀಪದ ಪಶ್ಚಿಮ ಮತ್ತು ಪೂರ್ವ ಕರಾವಳಿಗಳಲ್ಲಿ 200 ಪ್ರಮುಖ ಹೈಡ್ರೋಗ್ರಾಫಿಕ್ ಸಮೀಕ್ಷೆಗಳನ್ನು ಕೈಗೊಂಡಿತ್ತು.

ಈ ಹಡಗು ಹಲವಾರು ಪ್ರಮುಖ ಕಾರ್ಯಾಚರಣೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಿದೆ:

 1. ಆಪರೇಷನ್ ಪವನ್ – 1987 ರಲ್ಲಿ ಶ್ರೀಲಂಕಾದಲ್ಲಿ ಭಾರತೀಯ ಶಾಂತಿ ಪಾಲನಾ ಪಡೆಗೆ ಸಹಾಯ ಮಾಡಲು ತೆರಳಿತ್ತು.
 2. ಆಪರೇಷನ್ ರೇನ್ಬೋ – 2004 ರ ಸುನಾಮಿಯ ನಂತರ ಮಾನವೀಯ ನೆರವು ನೀಡಿತು.
 3. ಮೊದಲ ಜಂಟಿ ಇಂಡೋ-ಯುಎಸ್ ಮಾನವೀಯ ನೆರವು ಮತ್ತು ವಿಪತ್ತು ಪರಿಹಾರ (HADR) ಅಭ್ಯಾಸವಾದ ಟೈಗರ್-ಟ್ರಯಂಫ್’ ನಲ್ಲಿ ಭಾಗವಹಿಸಿತ್ತು.


 • Join our Official Telegram Channel HERE for Motivation and Fast Updates
 • Subscribe to our YouTube Channel HERE to watch Motivational and New analysis videos