Print Friendly, PDF & Email

[ ದೈನಂದಿನ ಪ್ರಚಲಿತ ಘಟನೆಗಳು ] ದಿನಾಂಕ – 20ನೇ ಮೇ 2021

 

ಪರಿವಿಡಿ:

 ಸಾಮಾನ್ಯ ಅಧ್ಯಯನ ಪತ್ರಿಕೆ 1:

1. ವಿಶ್ವ ಪಾರಂಪರಿಕ ತಾಣಗಳು.

 

ಸಾಮಾನ್ಯ ಅಧ್ಯಯನ ಪತ್ರಿಕೆ 2:

1. ವಿಚಾರಣೆಯಿಂದ ನ್ಯಾಯಾಧೀಶರ ಹಿಂದೆ ಸರಿಯುಯುವಿಕೆ.

2. ಪ್ರಧಾನಮಂತ್ರಿ ಸ್ವಾಸ್ಥ್ಯ ಸುರಕ್ಷಾ ಯೋಜನೆ.

3. ಸಮುದಾಯ ಆಧಾರಿತ ಅಂತರ್ಗತ ಅಭಿವೃದ್ಧಿ (CBID) ಕಾರ್ಯಕ್ರಮ.

 

ಸಾಮಾನ್ಯ ಅಧ್ಯಯನ ಪತ್ರಿಕೆ 3:

1. ನಾಸಾ ಮತ್ತು ಯುರೋಪಿಯನ್ ಬಾಹ್ಯಾಕಾಶ ಏಜೆನ್ಸಿಯ‘ಸೌರ ಆರ್ಬಿಟರ್ ಬಾಹ್ಯಾಕಾಶ ನೌಕೆ’

2. ಚೀನಾದಲ್ಲಿ ಕ್ರಿಪ್ಟೋಕರೆನ್ಸಿಗಳ ಬಳಕೆಗೆ ಬೀಜಿಂಗ್‌ನ ಕಟ್ಟುನಿಟ್ಟಿನ ಹೊಸ ನೀತಿ.

 

ಪೂರ್ವಭಾವಿ ಪರೀಕ್ಷೆಗೆ ಸಂಬಂಧಿಸಿದ ವಿದ್ಯಮಾನಗಳು:

1. GI-ಪ್ರಮಾಣೀಕೃತ ಘೋಲ್ವಾಡ್ ಚಿಕೂ.

2. ಮ್ಯೂಕೋರ್ಮೈಕೋಸಿಸ್ ಅನ್ನು ಸಾಂಕ್ರಾಮಿಕ ಎಂದು ಘೋಷಿಸಿದ ರಾಜಸ್ಥಾನ ಸರ್ಕಾರ.

3. ಪ್ರದರ್ಶನ ಮತ್ತು ಸಮಾವೇಶ ಕೇಂದ್ರಗಳಿಗೆ ಮೂಲಸೌಕರ್ಯ’ದ ಸ್ಥಾನ.

4. ತೈವಾನ್ ಜಲಸಂಧಿ.

 


ಸಾಮಾನ್ಯ ಅಧ್ಯಯನ ಪತ್ರಿಕೆ : 1


 

ವಿಷಯಗಳು: ಭಾರತೀಯ ಸಂಸ್ಕೃತಿಯು ಪ್ರಾಚೀನ ಕಾಲದಿಂದ ಆಧುನಿಕ ಕಾಲದವರೆಗೆ ಕಲಾ ಪ್ರಕಾರಗಳು, ಸಾಹಿತ್ಯ ಮತ್ತು ವಾಸ್ತುಶಿಲ್ಪದ ಪ್ರಮುಖ ಅಂಶಗಳನ್ನು ಒಳಗೊಂಡಿದೆ.

ವಿಶ್ವ ಪಾರಂಪರಿಕ ತಾಣಗಳು:


(UNESCO world heritage sites)

 ಸಂದರ್ಭ:

ಇತ್ತೀಚೆಗೆ,‘ಯುನೆಸ್ಕೋ ವಿಶ್ವ ಪರಂಪರೆಯ ತಾಣಗಳ’ (UNESCO world heritage sites) ಭಾರತದ ಸಂಭವನೀಯ ಅಥವಾ ತಾತ್ಕಾಲಿಕ ಪಟ್ಟಿಗೆ ಆರು ಹೊಸ ತಾಣಗಳನ್ನು ಸೇರಿಸಲಾಗಿದೆ.

 

ಒಳಗೊಂಡಿರುವ ತಾಣಗಳು ಇಂತಿವೆ:

 1. ಮರಾಠಾ ಮಿಲಿಟರಿ ಆರ್ಕಿಟೆಕ್ಚರ್, ಮಹಾರಾಷ್ಟ್ರ.
 2. ಹಿರೇಬೆನಕಲ್ ಮೆಗಾಲಿಥಿಕ್ ಸೈಟ್, ಕರ್ನಾಟಕ.
 3. ಮಧ್ಯಪ್ರದೇಶದ ನರ್ಮದಾ ಕಣಿವೆಯ ಭೇದಘಾಟ್-ಲ್ಯಾಮ್ಹೆಟಾ ಘಾಟ್.
 4. ವಾರಣಾಸಿಯ ಗಂಗಾ ಘಟ್ಟಗಳು.
 5. ತಮಿಳುನಾಡಿನ ಕಾಂಚೀಪುರಂ ದೇವಾಲಯಗಳು.
 6. ಮಧ್ಯಪ್ರದೇಶದ ಸಾತ್ಪುರ ಹುಲಿ ಮೀಸಲು ಪ್ರದೇಶ.

ಈ ಆರು ತಾಣಗಳನ್ನು ಸೇರ್ಪಡೆಗೊಳಿಸುವುದರೊಂದಿಗೆ, ಯುನೆಸ್ಕೋ ವಿಶ್ವ ಪರಂಪರೆಯ ತಾಣಗಳ ಭಾರತದ ಸಂಭವನೀಯ ಪಟ್ಟಿಯಲ್ಲಿ ಪ್ರಸ್ತಾವಿತ ತಾಣಗಳ ಸಂಖ್ಯೆ 48 ಕ್ಕೆ ಏರಿದೆ.

 

ಮುಂದಿನ ನಡೆ?

ಈ ಪ್ರಸ್ತಾಪಗಳು ಒಂದು ವರ್ಷದವರೆಗೆ ವಿಶ್ವ ಪರಂಪರೆಯ ತಾಣಗಳ ಸಂಭವನೀಯ / ತಾತ್ಕಾಲಿಕ ಪಟ್ಟಿಯಲ್ಲಿ ಉಳಿಯುತ್ತವೆ, ನಂತರ ಯುನೆಸ್ಕೋಗೆ ಕಳುಹಿಸಬೇಕಾದ ಕಡತದಲ್ಲಿ ಅಂತಿಮ ಹೆಸರುಗಳನ್ನು ಸರ್ಕಾರವು ನಿರ್ಧರಿಸುತ್ತದೆ.

 

ವಿಶ್ವ ಪಾರಂಪರಿಕ ತಾಣ ಎಂದರೇನು?

 1. ವಿಶ್ವ ಪರಂಪರೆಯ ತಾಣ ಗಳನ್ನು(World Heritage site) ನೈಸರ್ಗಿಕ ಅಥವಾ ಮಾನವ ನಿರ್ಮಿತ ಪ್ರದೇಶಗಳು ಅಥವಾ ಅಂತರರಾಷ್ಟ್ರೀಯ ಪ್ರಾಮುಖ್ಯತೆಯ ಮತ್ತು ವಿಶೇಷ ರಕ್ಷಣೆಯ ಅಗತ್ಯವಿರುವ ರಚನೆಗಳು ಎಂದು ವರ್ಗೀಕರಿಸಲಾಗಿದೆ.
 2. ಈ ತಾಣಗಳನ್ನು ವಿಶ್ವಸಂಸ್ಥೆ (UN) ಮತ್ತು ವಿಶ್ವಸಂಸ್ಥೆಯ ಶೈಕ್ಷಣಿಕ ವೈಜ್ಞಾನಿಕ ಮತ್ತು ಸಾಂಸ್ಕೃತಿಕ ಸಂಸ್ಥೆ (UNESCO) ಅಧಿಕೃತವಾಗಿ ಗುರುತಿಸಿವೆ.
 3. ವಿಶ್ವ ಪರಂಪರೆಯೆಂದು ವರ್ಗೀಕರಿಸಲಾದ ತಾಣಗಳನ್ನು ಮನುಕುಲಕ್ಕೆ ಮುಖ್ಯವೆಂದು ಯುನೆಸ್ಕೋ ಪರಿಗಣಿಸುತ್ತದೆ, ಏಕೆಂದರೆ ಈ ತಾಣಗಳು ಸಾಂಸ್ಕೃತಿಕ ಮತ್ತು ಭೌತಿಕ ಮಹತ್ವವನ್ನು ಹೊಂದಿವೆ.

 

ಪ್ರಮುಖ ಅಂಶಗಳು:

 1. ವಿಶ್ವ ಪರಂಪರೆಯ ತಾಣಗಳ ಪಟ್ಟಿಯನ್ನು ಯುನೆಸ್ಕೋದ ವಿಶ್ವ ಪರಂಪರೆಯ ಸಮಿತಿಯು ನಿರ್ವಹಿಸುವ ‘ಅಂತರರಾಷ್ಟ್ರೀಯ ವಿಶ್ವ ಪರಂಪರೆ ಕಾರ್ಯಕ್ರಮ’ ಸಿದ್ಧಪಡಿಸಿದೆ. ಈ ಸಮಿತಿಯು ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಿಂದ ಚುನಾಯಿತವಾದ 21 ಯುನೆಸ್ಕೋ ಸದಸ್ಯ ರಾಷ್ಟ್ರಗಳನ್ನು ಒಳಗೊಂಡಿದೆ.
 2. ಪ್ರತಿಯೊಂದು ವಿಶ್ವ ಪರಂಪರೆಯ ತಾಣಗಳ ಪಟ್ಟಿಯನ್ನು ಅವು ಇರುವ ದೇಶದ ಶಾಸನಬದ್ಧ ಪ್ರದೇಶದ ಭಾಗವಾಗಿ ಉಳಿದಿದೆ ಮತ್ತು ಅದರ ರಕ್ಷಣೆಯನ್ನು ಯುನೆಸ್ಕೋ ಸಂಸ್ಥೆಯು ಅಂತರರಾಷ್ಟ್ರೀಯ ಸಮುದಾಯದ ಹಿತದೃಷ್ಟಿಯಿಂದ ಪರಿಗಣಿಸುತ್ತದೆ.
 3. ವಿಶ್ವ ಪರಂಪರೆಯ ತಾಣವಾಗಿ ಆಯ್ಕೆ ಮಾಡಲು, ಒಂದು ತಾಣವನ್ನು ಈಗಾಗಲೇ ಭೌಗೋಳಿಕವಾಗಿ ಮತ್ತು ಐತಿಹಾಸಿಕವಾಗಿ ವಿಭಿನ್ನ, ಸಾಂಸ್ಕೃತಿಕ ಅಥವಾ ಭೌತಿಕ ಪ್ರಾಮುಖ್ಯತೆಯ ತಾಣವಾಗಿ ಅನನ್ಯ, ವಿಶಿಷ್ಟ ಹೆಗ್ಗುರುತು ಅಥವಾ ಚಿಹ್ನೆ ಹೊಂದಿದ ತಾಣ ಎಂದು ವರ್ಗೀಕರಿಸಿರಬೇಕು.

 


ಸಾಮಾನ್ಯ ಅಧ್ಯಯನ ಪತ್ರಿಕೆ : 2


 

ವಿಷಯಗಳು: ಸರ್ಕಾರದ ವಿವಿಧ ಅಂಗಗಳ ನಡುವೆ ಅಧಿಕಾರ ವಿಭಜನೆ, ವಿವಾದ ಪರಿಹಾರ ಕಾರ್ಯವಿಧಾನಗಳು ಮತ್ತು ಸಂಸ್ಥೆಗಳು.

 ವಿಚಾರಣೆಯಿಂದ ನ್ಯಾಯಾಧೀಶರ ಹಿಂದೆ ಸರಿಯುಯುವಿಕೆ:


(Recusal of Judges)

ಸಂದರ್ಭ:

ಮುಂಬೈನ ಮಾಜಿ ಪೊಲೀಸ್ ಆಯುಕ್ತ ಪರಂಬೀರ್ ಸಿಂಗ್ ಅವರು ತಮ್ಮ ವಿರುದ್ಧ ಮಹಾರಾಷ್ಟ್ರ ಸರ್ಕಾರ ಪ್ರಾರಂಭಿಸಿರುವ ಇಲಾಖಾ ವಿಚಾರಣೆಯನ್ನು ಮಹಾರಾಷ್ಟ್ರದ ಹೊರಗಡೆಯ ಸ್ವತಂತ್ರ ಸಂಸ್ಥೆಯೊಂದಕ್ಕೆ ವರ್ಗಾಯಿಸಬೇಕು ಎಂದು ಕೋರಿ ಸಲ್ಲಿಸಿದ ಅರ್ಜಿಯ ವಿಚಾರಣೆಯಿಂದ ಸುಪ್ರೀಂ ಕೋರ್ಟ್‌ನ ‘ರಜಾ ಕಾಲದ ಪೀಠದ’ (Vacation Bench) ಇಬ್ಬರು ನ್ಯಾಯಾಧೀಶರಲ್ಲಿ ಒಬ್ಬರಾದ ನ್ಯಾಯಮೂರ್ತಿ ಬಿ.ಆರ್ ಗವಾಯಿ ಯವರು ಸ್ವಯಂ ಹಿಂದೆ ಸರಿದಿದ್ದಾರೆ.

ಹಿನ್ನೆಲೆ:

ಮಹಾರಾಷ್ಟ್ರ ಮಾಜಿ ಗೃಹ ಸಚಿವ ಅನಿಲ್ ದೇಶಮುಖ ಅವರ ವಿರುದ್ಧ ಭ್ರಷ್ಟಾಚಾರದ ಆರೋಪ ಹೊರಿಸಿದ ನಂತರ ಗೃಹ ಸಚಿವರು ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದರು. ಈಗ ತನ್ನ ವಿರುದ್ಧ ನಡೆಸಲಾಗುತ್ತಿರುವ ಇಲಾಖಾ ವಿಚಾರಣೆಯು ತನ್ನನ್ನು ಕೂಡ ಈ ಭ್ರಷ್ಟಾಚಾರದ ಹಗರಣದಲ್ಲಿ ಸಿಲುಕಿಸುವ ಹುನ್ನಾರದ ಭಾಗವಾಗಿದೆ ಎಂದು ಸುಪ್ರೀಂ ಕೋರ್ಟ್‌ನಲ್ಲಿ ಸಲ್ಲಿಸಿರುವ ಅರ್ಜಿಯಲ್ಲಿ ಪರಂಬೀರ್ ಸಿಂಗ್ ಆರೋಪಿಸಿದ್ದಾರೆ.

ಇಲಾಖಾ ವಿಚಾರಣೆಯನ್ನು ಬೇರೆ ರಾಜ್ಯಕ್ಕೆ ಸ್ಥಳಾಂತರಿಸುವಂತೆ ಪರಂಬೀರ್ ಸಿಂಗ್ ಅವರು ಸುಪ್ರೀಂ ಕೋರ್ಟ್‌ಗೆ ಒತ್ತಾಯಿಸಿದ್ದಾರೆ.

 

ನ್ಯಾಯಾಂಗ ಅನರ್ಹತೆ’ ಅಥವಾ ‘ವಿಚಾರಣೆಯ ನಿರಾಕರಣೆ’ ಎಂದರೇನು?

ಹಿತಾಸಕ್ತಿಯ ಸಂಘರ್ಷದಿಂದಾಗಿ ವಿಚಾರಣೆಯ ಪೀಠ ಅಲಂಕರಿಸುವ ನ್ಯಾಯಾಂಗ ಅಧಿಕಾರಿ ಅಥವಾ ಆಡಳಿತಾಧಿಕಾರಿಯು ಯಾವುದೇ ನ್ಯಾಯಾಂಗ ವಿಚಾರಣೆಯಲ್ಲಿ ಅಥವಾ ಅಧಿಕೃತ ಕ್ರಿಯೆಯಲ್ಲಿ ಭಾಗವಹಿಸುವಿಕೆಯಿಂದ ದೂರವಿರುವುದನ್ನು ಅಥವಾ ಹಿಂದೆ ಸರಿಯುವುದನ್ನು ನ್ಯಾಯಾಂಗ ಅನರ್ಹತೆ (Judicial disqualification), ‘ವಿಚಾರಣೆಯ ನಿರಾಕರಣೆ’ ಅಥವಾ ‘ಮರುಪಡೆಯುವಿಕೆ’ (Recusal) ಎಂದು ಕರೆಯಲಾಗುತ್ತದೆ.

 

ವಿಚಾರಣೆಯ ನಿರಾಕರಣೆ’ಗೆ ಸಾಮಾನ್ಯ ಆಧಾರಗಳು:

 1. ನ್ಯಾಯಾಧೀಶರು ಒಂದು ಪಕ್ಷದ ಬಗ್ಗೆ ಉತ್ತಮ ನಂಬಿಕೆ, ಅಥವಾ ಇತರ ಪಕ್ಷದ ಬಗ್ಗೆ ಪ್ರತಿಕೂಲ ಧೋರಣೆ ಹೊಂದಿದ್ದರೆ ಅಥವಾ ನ್ಯಾಯಾಧೀಶರು ಯಾರೋ ಒಬ್ಬರ ಬಗ್ಗೆ ಸಮಂಜಸವಾಗಿ ಪಕ್ಷಪಾತ ಹೊಂದಿರಬಹುದು ಎಂದು ನಿಷ್ಪಕ್ಷಪಾತ ಅಥವಾ ವಸ್ತುನಿಷ್ಠ ವೀಕ್ಷಕನು ಭಾವಿಸಿದರೆ.
 2. ನ್ಯಾಯಾಧೀಶರು ಪ್ರಕರಣದಲ್ಲಿ ವೈಯಕ್ತಿಕ ಹಿತಾಸಕ್ತಿಯನ್ನು ಹೊಂದಿದ್ದರೆ ಅಥವಾ ಪ್ರಕರಣದಲ್ಲಿ ವೈಯಕ್ತಿಕ ಹಿತಾಸಕ್ತಿಯನ್ನು ಹೊಂದಿರುವ ಯಾವುದೇ ವ್ಯಕ್ತಿಯೊಂದಿಗೆ ಸಂಬಂಧ ಹೊಂದಿದ್ದರೆ.
 3. ನ್ಯಾಯಾಧೀಶರ ಹಿನ್ನೆಲೆ ಅಥವಾ ಅನುಭವ, ಉದಾಹರಣೆಗೆ ನ್ಯಾಯಾಧೀಶರಾಗುವುದಕ್ಕಿಂತ ಮುಂಚೆ ವಕೀಲರಾಗಿ ಮಾಡಿದ ಕೆಲಸ.
 4. ವಾದಿ ಮತ್ತು ಪ್ರತಿವಾದಿಗಳ ಕುರಿತು ಹೊಂದಿರುವ ವೈಯಕ್ತಿಕ ತಿಳುವಳಿಕೆ ಅಥವಾ ಪ್ರಕರಣದ ಸಂಗತಿಗಳ ಕುರಿತ ಜ್ಞಾನ.
 5. ವಕೀಲರು ಅಥವಾ ವಕೀಲರಲ್ಲದವರೊಂದಿಗೆ ಏಕಪಕ್ಷೀಯ/ಖಾಸಗಿ ಸಂವಾದ.
 6. ನ್ಯಾಯಾಧೀಶರ ತೀರ್ಪುಗಳು, ಪ್ರತಿಕ್ರಿಯೆಗಳು ಅಥವಾ ನಡವಳಿಕೆ.

 

ಈ ನಿಟ್ಟಿನಲ್ಲಿ ಯಾವುದೇ ಕಾನೂನುಗಳಿವೆಯೇ?

ನ್ಯಾಯಾಧೀಶರು ‘ವಿಚಾರಣೆಯನ್ನು ನಿರಾಕರಿಸಲು’ ಅಥವಾ ವಿಚಾರಣೆಯಿಂದ ಹಿಂದೆ ಸರಿಯಲು ಯಾವುದೇ ನಿರ್ದಿಷ್ಟ ನಿಯಮಗಳಿಲ್ಲ.

 1. ಆದಾಗ್ಯೂ, ಸುಪ್ರೀಂ ಕೋರ್ಟ್ ಮತ್ತು ಹೈಕೋರ್ಟ್‌ಗಳ ನ್ಯಾಯಾಧೀಶರು ಪ್ರಮಾಣವಚನ ಸ್ವೀಕರಿಸುವ ಸಮಯದಲ್ಲಿ,ತಮ್ಮ ಕರ್ತವ್ಯಗಳನ್ನು ನಿರ್ವಹಿಸಲು, ನ್ಯಾಯದಾನ ಮಾಡಲು, ಭಯ ಅಥವಾ ಅನುಗ್ರಹವಿಲ್ಲದೆ, ವಾತ್ಸಲ್ಯ ಅಥವಾ ಬಾಂಧವ್ಯಕ್ಕೆ ಒಳಗಾಗದೆ ಅಥವಾ ತಿರಸ್ಕಾರವಿಲ್ಲದೆ ಅಥವಾ ಯಾವುದೇ ದುರುದ್ದೇಶವಿಲ್ಲದೆ ತಮ್ಮ ಕರ್ತವ್ಯಗಳನ್ನು ಪ್ರಾಮಾಣಿಕವಾಗಿ ಮತ್ತು ನಿಷ್ಪಕ್ಷಪಾತವಾಗಿ ನಿರ್ವಹಿಸುವ ವಚನವನ್ನು ನೀಡುತ್ತಾರೆ.

 

ಈ ಕುರಿತು ಸುಪ್ರೀಂ ಕೋರ್ಟ್ ಹೇಳಿರುವುದೇನು ?

ನ್ಯಾಯಮೂರ್ತಿ ಜೆ. ಚೆಲಮೇಶ್ವರ್ ಅವರು ಸುಪ್ರೀಂ ಕೋರ್ಟ್ ಅಡ್ವೊಕೇಟ್ಸ್-ಆನ್-ರೆಕಾರ್ಡ್ ಅಸೋಸಿಯೇಶನ್ VS ಯೂನಿಯನ್ ಆಫ್ ಇಂಡಿಯಾ (2015) ಪ್ರಕರಣದ ತೀರ್ಪು ನೀಡುವಾಗ ನ್ಯಾಯಾಧೀಶರು ಆರ್ಥಿಕ ಹಿತಾಸಕ್ತಿಯನ್ನು ಹೊಂದಿರುವುದು ಕಂಡು ಬಂದರೆ ಅದು ಪಕ್ಷಪಾತದ ಕುರಿತ ‘ನಿಜವಾದ ಅಪಾಯ’ ಅಥವಾ ಆಗ ‘ಸಮಂಜಸವಾದ ಅನುಮಾನ’ ಇದೆಯೇ ಎಂಬ ಬಗ್ಗೆ ಹೆಚ್ಚಿನ ತನಿಖೆ ನಡೆಸುವ ಅಗತ್ಯವಿಲ್ಲ “ ಎಂದು ಅಭಿಪ್ರಾಯಪಟ್ಟಿದ್ದಾರೆ.

 

ವಿಷಯಗಳು: ಸರ್ಕಾರದ ನೀತಿಗಳು ಮತ್ತು ವಿವಿಧ ಕ್ಷೇತ್ರಗಳಲ್ಲಿನ ಅಭಿವೃದ್ಧಿಯ ಅಡಚಣೆಗಳು ಮತ್ತು ಅವುಗಳ ವಿನ್ಯಾಸ ಮತ್ತು ಅನುಷ್ಠಾನದಿಂದ ಉಂಟಾಗುವ ಸಮಸ್ಯೆಗಳು.

ಪ್ರಧಾನಮಂತ್ರಿ ಸ್ವಾಸ್ಥ್ಯ ಸುರಕ್ಷಾ ಯೋಜನೆ:


(Pradhan Mantri Swasthya Suraksha Yojana)

ಸಂದರ್ಭ:

ಇಲ್ಲಿಯವರೆಗೆ, 22 ಹೊಸ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆಗಳ (AIIMS) ಸ್ಥಾಪನೆಗೆ ಕೇಂದ್ರ ಸರ್ಕಾರವು ‘ಪ್ರಧಾನಮಂತ್ರಿ ಸ್ವಾಸ್ಥ್ಯ ಸುರಕ್ಷಾ ಯೋಜನೆ’ (Pradhan Mantri Swasthya Suraksha Yojana- PMSSY)ಯ ಅಡಿಯಲ್ಲಿ ಅನುಮೋದನೆ ನೀಡಿದ್ದು, ಈ ಪೈಕಿ ಆರು ಈಗಾಗಲೇ ಪೂರ್ಣ ಪ್ರಮಾಣದಲ್ಲಿ ಕಾರ್ಯನಿರ್ವಹಿಸುತ್ತಿವೆ.

PMSSY ಬಗ್ಗೆ:

ದೇಶದ ವಿವಿಧ ಭಾಗಗಳಲ್ಲಿ ಕೈಗೆಟುಕುವ / ವಿಶ್ವಾಸಾರ್ಹ ತೃತೀಯ ಆರೋಗ್ಯ ಸೌಲಭ್ಯಗಳ ಲಭ್ಯತೆ ಮತ್ತು ಸೌಲಭ್ಯಗಳನ್ನು ಹೆಚ್ಚಿಸಲು ಹಾಗೂ ಪ್ರಾದೇಶಿಕ ಅಸಮತೋಲನ ವೈಪರೀತ್ಯಗಳನ್ನು ಸರಿಪಡಿಸುವ ಮತ್ತು ದೇಶದಲ್ಲಿ ಗುಣಮಟ್ಟದ ಮತ್ತು ಉತ್ತಮ ವೈದ್ಯಕೀಯ ಶಿಕ್ಷಣಕ್ಕಾಗಿ ಸೌಲಭ್ಯಗಳನ್ನು ವಿಸ್ತರಿಸುವ ಉದ್ದೇಶದಿಂದ 2003 ರಲ್ಲಿ ಪ್ರಧಾನ್ ಮಂತ್ರಿ ಸ್ವಾಸ್ಥ್ಯ ಸುರಕ್ಷಾ ಯೋಜನೆ (PMSSY) ಯನ್ನು ಪ್ರಕಟಿಸಲಾಯಿತು.

PMSSY ಅನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಜಾರಿಗೆ ತಂದಿದೆ.

ಯೋಜನೆಯು ಎರಡು ಘಟಕಗಳನ್ನು ಹೊಂದಿದೆ:

 1. ಹೊಸ ಏಮ್ಸ್ ಸಂಸ್ಥೆಗಳ ಸ್ಥಾಪನೆ (ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆಗಳು).
 2. ವಿವಿಧ ರಾಜ್ಯಗಳಲ್ಲಿನ ಸರ್ಕಾರಿ ವೈದ್ಯಕೀಯ ಕಾಲೇಜುಗಳನ್ನು ನವೀಕರಿಸುವುದು / ಮೇಲ್ದರ್ಜೆಗೇರಿಸುವುದು.

 

ವೆಚ್ಚವನ್ನು ಭರಿಸುವುದು:

ಪ್ರತಿ ವೈದ್ಯಕೀಯ ಕಾಲೇಜು ಸಂಸ್ಥೆಯನ್ನು ಮೇಲ್ದರ್ಜೆಗೇರಿಸುವ ಯೋಜನೆಯ ವೆಚ್ಚವನ್ನು ಕೇಂದ್ರ ಮತ್ತು ರಾಜ್ಯಗಳ ನಡುವೆ ಹಂಚಲಾಗುತ್ತದೆ.

 

ವಿಷಯಗಳು: ಕೇಂದ್ರ ಮತ್ತು ರಾಜ್ಯಗಳಿಂದ ದುರ್ಬಲ ವರ್ಗದ ಜನಸಮುದಾಯದವರಿಗೆ ಇರುವ ಕಲ್ಯಾಣ ಯೋಜನೆಗಳು ಮತ್ತು ಈ ಯೋಜನೆಗಳ ಕಾರ್ಯಕ್ಷಮತೆ; ಕಾರ್ಯವಿಧಾನಗಳು,ಕಾನೂನುಗಳು, ಸಂಸ್ಥೆಗಳು ಮತ್ತು ಈ ದುರ್ಬಲ ವಿಭಾಗಗಳ ರಕ್ಷಣೆ ಮತ್ತು ಸುಧಾರಣೆಗಾಗಿ ರಚಿಸಲಾದ ಸಂಸ್ಥೆಗಳು.

ಸಮುದಾಯ ಆಧಾರಿತ ಅಂತರ್ಗತ ಅಭಿವೃದ್ಧಿ (CBID) ಕಾರ್ಯಕ್ರಮ:


(Community Based Inclusive Development (CBID) Program)

 

ಸಂದರ್ಭ:

ಇತ್ತೀಚೆಗೆ, ಅಂಗವಿಕಲರ ಪುನರ್ವಸತಿಗೆ ಸಂಬಂಧಿಸಿದಂತೆ ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯವು 6 ತಿಂಗಳ ‘ಸಮುದಾಯ ಆಧಾರಿತ ಅಂತರ್ಗತ ಅಭಿವೃದ್ಧಿ ಕಾರ್ಯಕ್ರಮ’ (Community Based Inclusive Development Program) ವನ್ನು ಪ್ರಾರಂಭಿಸಿದೆ.

ಮುಖ್ಯ ವೈಶಿಷ್ಟಗಳು:

 1. ಆಶಾ ಮತ್ತು ಅಂಗನವಾಡಿ ಕಾರ್ಯಕರ್ತರೊಂದಿಗೆ ಅಂಗವೈಕಲ್ಯಕ್ಕೆ ಸಂಬಂಧಿಸಿದ ವಿವಿಧ ವಿಭಾಗಗಳನ್ನು ನಿಭಾಯಿಸಲು ಮತ್ತು ಅಂಗವಿಕಲ ವ್ಯಕ್ತಿ ಗಳನ್ನು ಸಮಾಜದ ಮುಖ್ಯವಾಹಿನಿಗೆ ಸೇರಿಸಲು ಸಹಾಯ ಮಾಡಲು ಸಮುದಾಯ ಮಟ್ಟದಲ್ಲಿ ಪುನರ್ವಸತಿ ಯೋಜನೆಗಳನ್ನು ಅನುಷ್ಠಾನಗೊಳಿಸಲು ತಳಮಟ್ಟದ ಪುನರ್ವಸತಿ ಕಾರ್ಯಕರ್ತರ ಗುಂಪನ್ನು ರಚಿಸುವುದು ಈ ಕಾರ್ಯಕ್ರಮದ ಉದ್ದೇಶವಾಗಿದೆ.
 2. ತಮ್ಮ ಕರ್ತವ್ಯಗಳನ್ನು ಯಶಸ್ವಿಯಾಗಿ ನಿರ್ವಹಿಸುವಲ್ಲಿ ಅವರ ದಕ್ಷತೆಯನ್ನು ಹೆಚ್ಚಿಸಲು ಈ ಸಿಬ್ಬಂದಿಗಳ ಸಾಮರ್ಥ್ಯ ಆಧಾರಿತ ಜ್ಞಾನ ಮತ್ತು ಕೌಶಲ್ಯಗಳನ್ನು ಆಧರಿಸಿ ಕಾರ್ಯಕ್ರಮವನ್ನು ವಿನ್ಯಾಸಗೊಳಿಸಲಾಗಿದೆ. ಈ ಕಾರ್ಯಕರ್ತರನ್ನು ದಿವ್ಯಾಂಗ್ ಮಿತ್ರ” ಎಂದು ಕರೆಯಲಾಗುತ್ತದೆ.
 3. ಭಾರತದ ಪುನರ್ವಸತಿ ಮಂಡಳಿಯ ಅಧೀನದಲ್ಲಿರುವ ರಾಷ್ಟ್ರೀಯ ಪುನರ್ವಸತಿ ಪರೀಕ್ಷಾ ಮಂಡಳಿಯು ಈ ಕಾರ್ಯಕ್ರಮದಡಿ ಪರೀಕ್ಷೆಗಳನ್ನು ನಡೆಸಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಪ್ರಮಾಣಪತ್ರಗಳನ್ನು ನೀಡಲಿದೆ.
 4. ಭಾರತ ಮತ್ತು ಆಸ್ಟ್ರೇಲಿಯಾದ ತಜ್ಞರನ್ನು ಒಳಗೊಂಡ ಸಮಿತಿಯು ಈ ಕೋರ್ಸ್ ಗೆ ಪಠ್ಯಕ್ರಮವನ್ನು ಸಿದ್ಧಪಡಿಸಿದೆ. ಭಾರತೀಯ ಪುನರ್ವಸತಿ ಮಂಡಳಿ ಮತ್ತು ಮೆಲ್ಬೋರ್ನ್ ವಿಶ್ವವಿದ್ಯಾಲಯವು ಈ ಪಠ್ಯಕ್ರಮ ಸಿದ್ಧಪಡಿಸುವ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದವು.

 


ಸಾಮಾನ್ಯ ಅಧ್ಯಯನ ಪತ್ರಿಕೆ : 3


 

ವಿಷಯಗಳು: ಮಾಹಿತಿ ತಂತ್ರಜ್ಞಾನ, ಬಾಹ್ಯಾಕಾಶ, ಕಂಪ್ಯೂಟರ್, ರೊಬೊಟಿಕ್ಸ್, ನ್ಯಾನೊ-ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ ಮತ್ತು ಬೌದ್ಧಿಕ ಆಸ್ತಿ ಹಕ್ಕುಗಳಿಗೆ ಸಂಬಂಧಿಸಿದ ವಿಷಯಗಳಲ್ಲಿ ಜಾಗೃತಿ.

ನಾಸಾ ಮತ್ತು ಯುರೋಪಿಯನ್ ಬಾಹ್ಯಾಕಾಶ ಏಜೆನ್ಸಿಯ‘ಸೌರ ಆರ್ಬಿಟರ್ ಬಾಹ್ಯಾಕಾಶ ನೌಕೆ’:


(NASA-ESA Solar Orbiter Spacecraft)

 

ಸಂದರ್ಭ:

ಇತ್ತೀಚೆಗೆ, ನಾಸಾ ಮತ್ತು ಯುರೋಪಿಯನ್ ಬಾಹ್ಯಾಕಾಶ ಸಂಸ್ಥೆ (European Space Agency- ESA) ಯ ಬಾಹ್ಯಾಕಾಶ ನೌಕೆಯು ಮೊದಲ ಬಾರಿಗೆ ಸೂರ್ಯನ ಮೇಲ್ಮೈಯಲ್ಲಿಸೌರ-ಸ್ಫೋಟ’ (Solar Eruption) ವನ್ನು ದಾಖಲಿಸಿದೆ. ಸ್ಫೋಟಗಳನ್ನು’ಕರೋನಲ್ ಮಾಸ್ ಎಜೆಕ್ಷನ್’ (Coronal Mass Ejections- CMEs) ಎಂದೂ ಕರೆಯುತ್ತಾರೆ.

 

 1. ಸೂರ್ಯನ ಮೇಲ್ಮೈಯಲ್ಲಿನ ಸ್ಫೋಟಗಳು, ಸಾಕಷ್ಟು ದೊಡ್ಡದಾಗಿದ್ದರೆ, ಅವು ಶತಕೋಟಿ ಟನ್ ಪ್ಲಾಸ್ಮಾ ಮತ್ತು ವಿದ್ಯುತ್ ಚಾರ್ಜ್ಡ್ ಕಣಗಳನ್ನು ಭೂಮಿಯ ಕಡೆಗೆ ಬಂದು ಅಪ್ಪಳಿಸಲು ಕಾರಣವಾಗಬಹುದು.

 

NASA-ESA ಸೌರ ಆರ್ಬಿಟರ್ ಬಾಹ್ಯಾಕಾಶ ನೌಕೆಯ ಕುರಿತು:

ಸೌರ ಆರ್ಬಿಟರ್ (Solar Orbiter) ಯುರೋಪಿಯನ್ ಬಾಹ್ಯಾಕಾಶ ಸಂಸ್ಥೆ (European Space Agency- ESA) ಮತ್ತು ನಾಸಾ ನಡುವಿನ ಅಂತರರಾಷ್ಟ್ರೀಯ ಸಹಯೋಗದಲ್ಲಿ ಪ್ರಾರಂಭಿಸಲಾದ ಬಾಹ್ಯಾಕಾಶ ಕಾರ್ಯಾಚರಣೆಯಾಗಿದೆ.

 1. 2020 ರ ಫೆಬ್ರವರಿಯಲ್ಲಿ ‘ಯುನೈಟೆಡ್ ಲಾಂಚ್ ಅಲೈಯನ್ಸ್’ (United Launch Alliance- ULA) ನ ಅಟ್ಲಾಸ್-V ರಾಕೆಟ್ ಮೂಲಕ ಈ ಬಾಹ್ಯಾಕಾಶ ನೌಕೆಯನ್ನು ಕೇಪ್ ಕೆನವೆರಲ್ (Cape Canaveral) ನಿಂದ ಉಡಾಯಿಸಲಾಯಿತು.
 2. ಇದನ್ನು ESAಯ ಕಾಸ್ಮಿಕ್ ವಿಷನ್ 2015-2025 ಕಾರ್ಯಕ್ರಮದಡಿಯಲ್ಲಿ ಮೊದಲ ಮಧ್ಯಮ ವರ್ಗದ ಮಿಷನ್ ಆಗಿ ಆಯ್ಕೆ ಮಾಡಲಾಗಿದೆ.
 3. ಇದು,ಬಾಹ್ಯಾಕಾಶ ನೌಕೆಯಲ್ಲಿ ಅಳವಡಿಸಲಾದ ಆರು ಉಪಕರಣಗಳನ್ನು ಬಳಸಿ ಸೂರ್ಯನ ಉತ್ತರ ಮತ್ತು ದಕ್ಷಿಣ ಧ್ರುವಗಳ ಚಿತ್ರಗಳನ್ನು ಒದಗಿಸುವ ಮೊದಲ ಯೋಜನೆಯಾಗಿದೆ, ಈ ಉಪಕರಣಗಳು ಬಾಹ್ಯಾಕಾಶ ನೌಕೆಯ ನೋಟವನ್ನೂ ಕೂಡ ಸೆರೆ ಹಿಡಿಯುವುದರಿಂದ ಇದು ಸಾಧ್ಯವಾಗುತ್ತದೆ.
 4. ಈ ಕಾರ್ಯಾಚರಣೆಯ ಅವಧಿ ಏಳು ವರ್ಷಗಳದ್ದಾಗಿದೆ, ಮತ್ತು ಈ ಸಮಯದಲ್ಲಿ ಅದು ಸೂರ್ಯನ ಒಳಗೆ 26 ದಶಲಕ್ಷ ಮೈಲುಗಳಷ್ಟು ಸಮೀಪ ತಲುಪುತ್ತದೆ.
 5. ಕ್ಯಾಲ್ಸಿಯಂ ಫಾಸ್ಫೇಟ್ನಲ್ಲಿ ಲೇಪಿಸಲಾದ ನಿರ್ದಿಷ್ಟ ಟೈಟಾನಿಯಂ ಶಾಖ ಗುರಾಣಿಯನ್ನು ಬಾಹ್ಯಾಕಾಶ ನೌಕೆ ಹೊಂದಿದೆ, ಇದು 970 ಡಿಗ್ರಿ ಫ್ಯಾರನ್ಹೀಟ್ ವರೆಗಿನ ತಾಪಮಾನವನ್ನು ತಡೆದುಕೊಳ್ಳಲು ಅನುವು ಮಾಡಿಕೊಡುತ್ತದೆ.
 6. ಈ ಸೌರ ಆರ್ಬಿಟರ್ ಯೋಜನೆಯು, 1990 ರಲ್ಲಿ ನಾಸಾ ಮತ್ತು ಯುರೋಪಿಯನ್ ಬಾಹ್ಯಾಕಾಶ ಸಂಸ್ಥೆಯ ಜಂಟಿ ಸಹಯೋಗದಲ್ಲಿ ಯುಲಿಸಸ್ ಬಾಹ್ಯಾಕಾಶ ನೌಕೆ (Ulysses spacecraft) ಉಡಾವಣೆಯಾದ ನಂತರ ಸೂರ್ಯನನ್ನು ಅಧ್ಯಯನ ಮಾಡಲು ಇವೆರಡು ಬಾಹ್ಯಾಕಾಶ ಸಂಸ್ಥೆಗಳು ಕೈಗೊಂಡ ಎರಡನೇ ಜಂಟಿ ಕಾರ್ಯಾಚರಣೆ ಆಗಿದೆ.

 

ಸೌರ ಆರ್ಬಿಟರ್ ಈ ಕೆಳಗಿನ ನಾಲ್ಕು ಉನ್ನತಮಟ್ಟದ ವೈಜ್ಞಾನಿಕ ಪ್ರಶ್ನೆಗಳಿಗೆ ಉತ್ತರಗಳನ್ನು ಹುಡುಕುತ್ತದೆ:

 1. ಸೌರ ಮಾರುತಗಳು ಉಂಟಾಗಲು ಕಾರಣವಾದ ಪ್ರೇರಕ ಶಕ್ತಿ ಯಾವುದು ಮತ್ತು ಕರೋನಲ್ ಕಾಂತಕ್ಷೇತ್ರವು ಎಲ್ಲಿಂದ ಹುಟ್ಟುತ್ತದೆ?
 2. ಸೌರ ಅಸ್ಥಿರತೆಗಳಿಂದ (Solar Transients) ಉಂಟಾಗುವ ಹೆಲಿಯೊಯರಿ ವ್ಯತ್ಯಯ (Heliospheric Variability) ಕ್ಕೆ ಕಾರಣವೇನು?
 3. ಹೀಲಿಯೋಸ್ಪಿಯರ್‌ನಲ್ಲಿ ಕಂಡುಬರುವ ಶಕ್ತಿಯುತ ಕಣಗಳ ವಿಕಿರಣವು ಸೌರ ಸ್ಫೋಟಗಳಿಂದ ಹೇಗೆ ಉತ್ಪಾದನೆಗೊಳ್ಳುತ್ತದೆ?
 4. ಸೌರ ಡೈನಮೋ ಹೇಗೆ ಕಾರ್ಯನಿರ್ವಹಿಸುತ್ತದೆ, ಮತ್ತು ಇದು ಸೂರ್ಯ ಮತ್ತು ಹೆಲಿಯೋಸ್ಪಿಯರ್ ನಡುವಿನ ಸಂಬಂಧವನ್ನು ಹೇಗೆ ಸ್ಥಾಪಿಸುತ್ತದೆ?

 

ವಿಷಯಗಳು: ಮಾಹಿತಿ ತಂತ್ರಜ್ಞಾನ, ಬಾಹ್ಯಾಕಾಶ, ಕಂಪ್ಯೂಟರ್, ರೊಬೊಟಿಕ್ಸ್, ನ್ಯಾನೊ-ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ ಮತ್ತು ಬೌದ್ಧಿಕ ಆಸ್ತಿ ಹಕ್ಕುಗಳಿಗೆ ಸಂಬಂಧಿಸಿದ ವಿಷಯಗಳಲ್ಲಿ ಜಾಗೃತಿ.

ಚೀನಾದಲ್ಲಿ ಕ್ರಿಪ್ಟೋಕರೆನ್ಸಿಗಳ ಬಳಕೆಗೆ ಬೀಜಿಂಗ್‌ನ ಕಟ್ಟುನಿಟ್ಟಿನ ಹೊಸ ನೀತಿ:


ಸಂದರ್ಭ:

 ಇತ್ತೀಚೆಗೆ, ಚೀನೀ ನಿಯಂತ್ರಕರು ‘ಕ್ರಿಪ್ಟೋಕರೆನ್ಸಿ’ (Cryptocurrency) ಗಳ ಬಳಕೆಗೆ ಕಟ್ಟುನಿಟ್ಟಿನ ನಿರ್ಬಂಧಗಳನ್ನು ವಿಧಿಸಿದ್ದಾರೆ.

ಹೊಸ ನಿಯಮಗಳ ಪ್ರಕಾರ, ‘ಕ್ರಿಪ್ಟೋಕರೆನ್ಸಿ’ಗಾಗಿ ನಿಷೇಧಿಸಲಾದ ಸೇವೆಗಳ ವ್ಯಾಪ್ತಿಯನ್ನು ಗಣನೀಯವಾಗಿ ವಿಸ್ತರಿಸಿದೆ ಮತ್ತು ಇದನ್ನು’ ಯಾವುದೇ ನೈಜ ಬೆಲೆಯಿಲ್ಲದ ವರ್ಚುವಲ್ ಕರೆನ್ಸಿಗಳು ‘ಎಂದು ವಿವರಿಸಲಾಗಿದೆ.

 

ಇತ್ತೀಚಿನ ಬದಲಾವಣೆಗಳ ಪ್ರಕಾರ:

 1.  ಕ್ರಿಪ್ಟೋ-ಸಂಬಂಧಿತ ಸೇವೆಗಳಾದ ಖಾತೆ ತೆರೆಯುವಿಕೆ, ನೋಂದಣಿ, ವ್ಯಾಪಾರ, ತೆರವುಗೊಳಿಸುವಿಕೆ, ವಸಾಹತು ಮತ್ತು ವಿಮೆ ಇತ್ಯಾದಿಗಳನ್ನು ಬ್ಯಾಂಕುಗಳು ಮತ್ತು ಆನ್‌ಲೈನ್ ಪಾವತಿ ಸಂಸ್ಥೆಗಳು ಒದಗಿಸುವುದಿಲ್ಲ.
 2. ಹೊಸ ನಿಯಮಗಳಲ್ಲಿ ಈ ಹಿಂದೆ ಉಲ್ಲೇಖಿಸದ ಸೇವೆಗಳೂ ಸೇರಿವೆ.
 3. ಘಟಕಗಳಿಗೆ, ಕ್ರಿಪ್ಟೋಕರೆನ್ಸಿ ಉಳಿತಾಯವನ್ನು ಕ್ರೆಡಿಟ್ ಅಥವಾ ಅಡಮಾನ ಸೇವೆಗಳನ್ನು ಒದಗಿಸುವುದನ್ನು ಮತ್ತು ಕ್ರಿಪ್ಟೋ-ಸಂಬಂಧಿತ ಹಣಕಾಸು ಉತ್ಪನ್ನಗಳನ್ನು ನೀಡುವುದನ್ನು ನಿಷೇಧಿಸಲಾಗಿದೆ. ಮತ್ತು,
 4. ವರ್ಚುವಲ್ ಕರೆನ್ಸಿಗಳನ್ನು ಟ್ರಸ್ಟ್ ಮತ್ತು ಫಂಡ್ ಉತ್ಪನ್ನಗಳಿಂದ ಹೂಡಿಕೆ ಗುರಿಯಾಗಿ ಬಳಸುವಂತಿಲ್ಲ.

 

ಹಿನ್ನೆಲೆ:

ಚೀನಾದಲ್ಲಿ, ಕ್ರಿಪ್ಟೋಕರೆನ್ಸಿಯನ್ನು ‘ಲೀಗಲ್ ಟೆಂಡರ್’ (legal tender) ಎಂದು ಗುರುತಿಸಲಾಗಿಲ್ಲ ಮತ್ತು ಕ್ರಿಪ್ಟೋಕರೆನ್ಸಿಯನ್ನು ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ಸ್ವೀಕರಿಸಲಾಗುವುದಿಲ್ಲ ಅಥವಾ ಅದರಲ್ಲಿ ಯಾವುದೇ ರೀತಿಯ ಸೇವೆಗಳನ್ನು ಒದಗಿಸಲಾಗುವುದಿಲ್ಲ.

 

ಚೀನಾದಲ್ಲಿ ಕ್ರಿಪ್ಟೋಕರೆನ್ಸಿಗೆ ಸಂಬಂಧಿಸಿದ ನಿಯಮಗಳನ್ನು ಬಿಗಿಗೊಳಿಸಲು ಕಾರಣಗಳು:

ಕಾಲ್ಪನಿಕ ಬಿಟ್‌ಕಾಯಿನ್ ವಹಿವಾಟು ಮತ್ತೆ ವೇಗವನ್ನು ಪಡೆಯುತ್ತಿದೆ ಎಂದು ನಿರ್ದೇಶನವು ಎಚ್ಚರಿಸಿದೆ, ಇದು ಜನರ ಆಸ್ತಿ ಸುರಕ್ಷತೆಯನ್ನು ಅತಿಕ್ರಮಿಸಲು ಕಾರಣವಾಗಬಹುದು ಅಥವಾ ಜನರ ಆಸ್ತಿಯ ಸುರಕ್ಷತೆಯನ್ನು ಉಲ್ಲಂಘಿಸುತ್ತದೆ ಮತ್ತು ಸಾಮಾನ್ಯ ಆರ್ಥಿಕ ಮತ್ತು ಹಣಕಾಸಿನ ವ್ಯವಸ್ಥೆಯನ್ನು ಅಸ್ತವ್ಯಸ್ಥ ಗೊಳಿಸುತ್ತದೆ.

 

ಈ ಕಟ್ಟುನಿಟ್ಟಿನ ನಿಯಂತ್ರಣದ ಪರಿಣಾಮ:

 1. ಚೀನಾದ ಈ ಹೊಸ ನಿಯಂತ್ರಣ ಕ್ರಮವು ಜನರಿಗೆ ವಿವಿಧ ಪಾವತಿ ಮಾರ್ಗಗಳ ಮೂಲಕ ಕ್ರಿಪ್ಟೋಕರೆನ್ಸಿಗಳನ್ನು ಖರೀದಿಸಲು ಹೆಚ್ಚು ಕಷ್ಟಕರವಾಗಿ ಮಾಡುತ್ತದೆ.
 2. ಯುವಾನ್‌ನಲ್ಲಿ ಕ್ರಿಪ್ಟೋಕರೆನ್ಸಿಯನ್ನು ವಿನಿಮಯ ಮಾಡಿಕೊಳ್ಳುವುದು ಕಷ್ಟಕರವಾಗಿಸುವ ಮೂಲಕ,ಇದು ಕ್ರಿಪ್ಟೋಕರೆನ್ಸಿ-ಗಣಿಗಾರರ ವ್ಯವಹಾರದ ಮೇಲೆ ಪರಿಣಾಮ ಬೀರಬಹುದು.
 3. ಇದಲ್ಲದೆ, ಬ್ಯಾಂಕುಗಳು ಮತ್ತು ಪಾವತಿ ಕಂಪನಿಗಳು ಸಹ ಕ್ರಿಪ್ಟೋಕರೆನ್ಸಿ-ಸಂಬಂಧಿತ ಹಣದ ಹರಿವನ್ನು ಗುರುತಿಸುವ ಸವಾಲುಗಳನ್ನು ಎದುರಿಸುತ್ತಿವೆ.

 

ಕ್ರಿಪ್ಟೋಕರೆನ್ಸಿ’ ಎಂದರೇನು?

ಕ್ರಿಪ್ಟೋಕರೆನ್ಸಿಗಳು (Cryptocurrencies) ಒಂದು ರೀತಿಯ ಡಿಜಿಟಲ್ ಕರೆನ್ಸಿಯಾಗಿದ್ದು, ಇದು ಕರೆನ್ಸಿ ಘಟಕಗಳ ಉತ್ಪಾದನೆಯನ್ನು ನಿಯಂತ್ರಿಸಲು ಮತ್ತು ನಿಧಿಯ ವರ್ಗಾವಣೆಯನ್ನು ಪರಿಶೀಲಿಸಲು ಕ್ರಿಪ್ಟೋಗ್ರಾಫಿಕ್ (Encryption) ತಂತ್ರಗಳನ್ನು ಅಂದರೆ ಗೂಢ ಲಿಪಿ ತಂತ್ರಗಳನ್ನು ಬಳಸುತ್ತದೆ ಮತ್ತು ಯಾವುದೇ ಕೇಂದ್ರ ಬ್ಯಾಂಕ್ ನ ಮಧ್ಯಸ್ಥಿಕೆ ಇಲ್ಲದೆ ಸ್ವತಂತ್ರವಾಗಿ ಕಾರ್ಯನಿರ್ವಹಿಸುತ್ತವೆ.

ಇದು ಬ್ಲಾಕ್‌ಚೈನ್ ತಂತ್ರಜ್ಞಾನದಲ್ಲಿ ಕಾರ್ಯನಿರ್ವಹಿಸುತ್ತದೆ. ಉದಾಹರಣೆಗಳು: ಬಿಟ್‌ಕಾಯಿನ್, ಎಥೆರಿಯಮ್ ಇತ್ಯಾದಿ.

 


ಪೂರ್ವಭಾವಿ ಪರೀಕ್ಷೆಗೆ ಸಂಬಂಧಿಸಿದ ವಿದ್ಯಮಾನಗಳು:


GI-ಪ್ರಮಾಣೀಕೃತ ಘೋಲ್ವಾಡ್ ಚಿಕೂ(ಸಪೋಟ)

(GI-certified Gholvad Chikoo)

 1.  ಮಹಾರಾಷ್ಟ್ರದ GI-ಪ್ರಮಾಣೀಕೃತ ಘೋಲ್ವಾಡ್ ಸಪೋಟಾ (ಚಿಕು) ದ ರಫ್ತು ಮಹಾರಾಷ್ಟ್ರದಿಂದ UK ಗೆ ಪ್ರಾರಂಭವಾಯಿತು.
 2. ಘೋಲ್ವಾಡ್ ಸಪೋಟಾದ ಜಿಐ ಪ್ರಮಾಣೀಕರಣವನ್ನು ಮಹಾರಾಷ್ಟ್ರ ರಾಜ್ಯ ಚಿಕು ಬೆಳೆಗಾರರ ​​ಸಂಘವು ಹೊಂದಿದೆ ಮತ್ತು ಈ ಹಣ್ಣು ಸಿಹಿ ಮತ್ತು ಅತ್ಯುತ್ತಮ ವಿಶಿಷ್ಟ ರುಚಿಗೆ ಹೆಸರುವಾಸಿಯಾಗಿದೆ.
 3. ಘೋಲ್ವಾಡ್ ಗ್ರಾಮದ ಕ್ಯಾಲ್ಸಿಯಂ ಸಮೃದ್ಧ ಮಣ್ಣು ಚಿಕ್ಕು ಹಣ್ಣಿಗೆ ವಿಶಿಷ್ಟ ರುಚಿಯನ್ನು ನೀಡುತ್ತದೆ ಎಂದು ನಂಬಲಾಗಿದೆ.
 4. ಸಪೋಟಾವನ್ನು ಹಲವಾರು ರಾಜ್ಯಗಳಲ್ಲಿ ಬೆಳೆಯಲಾಗುತ್ತದೆ – ಕರ್ನಾಟಕ, ಗುಜರಾತ್, ಮಹಾರಾಷ್ಟ್ರ, ತಮಿಳುನಾಡು, ಪಶ್ಚಿಮ ಬಂಗಾಳ ಮತ್ತು ಆಂಧ್ರಪ್ರದೇಶ.
 5. ಕರ್ನಾಟಕವು ಹೆಚ್ಚು ಹಣ್ಣುಗಳನ್ನು ಉತ್ಪಾದಿಸುವ ರಾಜ್ಯವೆಂದು ಪರಿಗಣಿಸಲ್ಪಟ್ಟಿದೆ, ನಂತರದ ಸ್ಥಾನದಲ್ಲಿ ಮಹಾರಾಷ್ಟ್ರವಿದೆ.
 6. ಇದನ್ನು ಹಣ್ಣಿನ ಸಲಾಡ್‌ಗಳಲ್ಲಿ, ಹಾಲು ಅಥವಾ ಮೊಸರಿನೊಂದಿಗೆ ಬೆರೆಸಿ, ಸಾಸ್‌ನಂತೆ ಅಥವಾ ಜಾಮ್ ಆಗಿ ಬಳಸಬಹುದು.

ಮ್ಯೂಕೋರ್ಮೈಕೋಸಿಸ್ ಅನ್ನು ಸಾಂಕ್ರಾಮಿಕ ಎಂದು ಘೋಷಿಸಿದ ರಾಜಸ್ಥಾನ ಸರ್ಕಾರ:

 1.  ಕರೋನಾ ವೈರಸ್ ಸೋಂಕಿನಿಂದ ಚೇತರಿಸಿಕೊಳ್ಳುವ ರೋಗಿಗಳ ಮೇಲೆ ಪರಿಣಾಮ ಬೀರುವ ಮುಕೋರ್ಮೈಕೋಸಿಸ್ (Mucormycosis) ಅಥವಾ ಕಪ್ಪು ಶಿಲಿಂದ್ರ ಅಥವಾ ‘ಬ್ಲ್ಯಾಕ್ ಫಂಗಸ್’ ರೋಗದ ಹೆಚ್ಚುತ್ತಿರುವ ಪ್ರಕರಣಗಳನ್ನು ಪರಿಗಣಿಸಿ ರಾಜಸ್ಥಾನ ಸರ್ಕಾರವು ಇದನ್ನು ಸಾಂಕ್ರಾಮಿಕ ಮತ್ತು ಅಧಿಸೂಚಿತ ರೋಗ (Notifiable Disease) ವೆಂದು ಘೋಷಿಸಿದೆ.
 2. ಮ್ಯೂಕೋರ್ಮೈಕೋಸಿಸ್ ಅನ್ನು ಸಾಂಕ್ರಾಮಿಕ ರೋಗವೆಂದು ಘೋಷಿಸುವುದರಿಂದ ಕೋವಿಡ್ -19 ಚಿಕಿತ್ಸೆಯೊಂದಿಗೆ ರೋಗದ “ಸಂಯೋಜಿತ ಮತ್ತು ಸಂಘಟಿತ” ಚಿಕಿತ್ಸೆಯನ್ನು ಖಚಿತಪಡಿಸುತ್ತದೆ.
 3. ಈ ಅಧಿಸೂಚನೆಯನ್ನು ರಾಜಸ್ಥಾನ ಸಾಂಕ್ರಾಮಿಕ ಕಾಯ್ದೆ 2020 ರ ಅಡಿಯಲ್ಲಿ ನೀಡಲಾಗಿದೆ.

ಪ್ರದರ್ಶನ ಮತ್ತು ಸಮಾವೇಶ ಕೇಂದ್ರಗಳಿಗೆ ಮೂಲಸೌಕರ್ಯ’ದ ಸ್ಥಾನ:

 1.  ಇತ್ತೀಚೆಗೆ, ಪ್ರದರ್ಶನ ಮತ್ತು ಸಮಾವೇಶ ಕೇಂದ್ರಗಳಿಗೆ’ಮೂಲಸೌಕರ್ಯ’ ಸ್ಥಾನಮಾನವನ್ನು ಹಣಕಾಸು ಸಚಿವಾಲಯ ನೀಡಿದೆ.
 2. ಸರ್ಕಾರದ ಈ ಕ್ರಮದಿಂದ, ಅಂತಹ ಯೋಜನೆಗಳಿಗೆ ಬ್ಯಾಂಕ್ ಹಣಕಾಸು ಸೌಲಭ್ಯ ಕಲ್ಪಿಸುವ ಸಾಧ್ಯತೆಯಿದೆ.
 3. ಅರ್ಹತೆ: ಈ ನಿರ್ಧಾರದ ಪ್ರಯೋಜನವು ವಿಶೇಷ ಪ್ರದರ್ಶನ ತಾಣ ಅಥವಾ ಸಮಾವೇಶದ ಸ್ಥಳ ಅಥವಾ ಜಂಟಿಯಾಗಿ, ಕನಿಷ್ಠ 1,00,000 ಚದರ ಮೀಟರ್ ವಿಸ್ತೀರ್ಣದ ನೆಲ-ವಿಸ್ತೀರ್ಣವನ್ನು ಹೊಂದಿರುವ ಯೋಜನೆಗಳಿಗೆ ಮಾತ್ರ ಲಭ್ಯವಿರುತ್ತದೆ.

ತೈವಾನ್ ಜಲಸಂಧಿ:

 1.  ಫಾರ್ಮೋಸಾ ಜಲಸಂಧಿ (the Formosa Strait) ಎಂದೂ ಕರೆಯಲ್ಪಡುವ ತೈವಾನ್ ಜಲಸಂಧಿಯು (the Taiwan Strait) 180 ಕಿ.ಮೀ ಅಗಲದ ಜಲಸಂಧಿಯಾಗಿದ್ದು, ತೈವಾನ್ ಮತ್ತು ಚೀನಾದ ಮುಖ್ಯ ಭೂಭಾಗವನ್ನು ಪ್ರತ್ಯೇಕಿಸುತ್ತದೆ.
 2. ಈ ಜಲಸಂಧಿಯು ಪ್ರಸ್ತುತ ದಕ್ಷಿಣ ಚೀನಾ ಸಮುದ್ರದ ಒಂದು ಭಾಗವಾಗಿದೆ ಮತ್ತು ಉತ್ತರದಲ್ಲಿ ಪೂರ್ವ ಚೀನಾ ಸಮುದ್ರಕ್ಕೆ ಸಂಪರ್ಕ ಕಲ್ಪಿಸುತ್ತದೆ. ಇದರ ಕಿರಿದಾದ ಅಗಲ 130 ಕಿ.ಮೀ.
 3. ತೈವಾನ್ ಜಲಸಂಧಿಯು ಸಂಪೂರ್ಣವಾಗಿ ಏಷ್ಯಾದ ಖಂಡಾವರಣ ಪ್ರದೇಶ (Continental shelf) ದಲ್ಲಿದೆ.


 • Join our Official Telegram Channel HERE for Motivation and Fast Updates
 • Subscribe to our YouTube Channel HERE to watch Motivational and New analysis videos