Print Friendly, PDF & Email

[ ದೈನಂದಿನ ಪ್ರಚಲಿತ ಘಟನೆಗಳು ] ದಿನಾಂಕ – 3ನೇ ಮೇ 2021

 

ಪರಿವಿಡಿ:

 ಸಾಮಾನ್ಯ ಅಧ್ಯಯನ ಪತ್ರಿಕೆ 1:

1. ಭೂಮಿಯ ಅಕ್ಷದ ಬದಲಾವಣೆಗೆ ಕಾರಣವಾಗುತ್ತಿರುವ ಹವಾಮಾನ ಬದಲಾವಣೆ.

2. ಪಾವತಿಸದ ಆರೈಕೆ ಕೆಲಸವನ್ನು ಅಳೆಯುವುದು ಹೇಗೆ ಮತ್ತು ಅದರ ಅಸಮಾನತೆಗಳನ್ನು ಹೇಗೆ ಪರಿಹರಿಸುವುದು?

 

ಸಾಮಾನ್ಯ ಅಧ್ಯಯನ ಪತ್ರಿಕೆ 2:

1. ಮದ್ರಾಸ್ ಹೈಕೋರ್ಟ್ ನ ಟೀಕೆಗಳ ವಿರುದ್ಧ ಸುಪ್ರೀಂ ಕೋರ್ಟ್ ಮೊರೆಹೋದ

2. ಬಂಡವಾಳ ವೆಚ್ಚಕ್ಕಾಗಿ ರಾಜ್ಯಗಳಿಗೆ ಹಣಕಾಸಿನ ನೆರವು ನೀಡುವ ಯೋಜನೆ.

 

ಪೂರ್ವಭಾವಿ ಪರೀಕ್ಷೆಗೆ ಸಂಬಂಧಿಸಿದ ವಿದ್ಯಮಾನಗಳು:

1. ಸಂವಿಧಾನದ 311 ನೇ ವಿಧಿ.

2. P -8 I ಗಸ್ತು ವಿಮಾನ.

3. ಕ್ಸೈಲೋಫಿಸ್ ಡೀಪಾಕಿ.

4. ವಿಶ್ವ ಪತ್ರಿಕಾ ಸ್ವಾತಂತ್ರ್ಯ ದಿನ.

5. ವೊರುಖ್.

6. ಪತ್ರಕರ್ತರನ್ನು ‘ಮುಂಚೂಣಿ COVID-19 ಯೋಧರು’ ಎಂದು ಘೋಷಿಸಿದ ಒಡಿಶಾ.

 


ಸಾಮಾನ್ಯ ಅಧ್ಯಯನ ಪತ್ರಿಕೆ : 1


 

ವಿಷಯಗಳು: ಭೂಕಂಪಗಳು, ಸುನಾಮಿ, ಜ್ವಾಲಾಮುಖಿ ಚಟುವಟಿಕೆಗಳು ಚಂಡಮಾರುತ ಮುಂತಾದ ಪ್ರಮುಖ ಭೌಗೋಳಿಕ ವಿದ್ಯಮಾನಗಳು, ಭೌಗೋಳಿಕ ಲಕ್ಷಣಗಳು ಮತ್ತು ಅವುಗಳ ಸ್ಥಳ- ನಿರ್ಣಾಯಕ ಭೌಗೋಳಿಕ ವೈಶಿಷ್ಟ್ಯಗಳಲ್ಲಿನ ಬದಲಾವಣೆಗಳು (ಸಾಗರಗಳು ಮತ್ತು ಐಸ್-ಕ್ಯಾಪ್ಗಳು ಸೇರಿದಂತೆ) ಮತ್ತು ಸಸ್ಯ ಮತ್ತು ಪ್ರಾಣಿ ಮತ್ತು ಅಂತಹ ಬದಲಾವಣೆಗಳ ಪರಿಣಾಮಗಳು.

ಭೂಮಿಯ ಅಕ್ಷದ ಬದಲಾವಣೆಗೆ ಕಾರಣವಾಗುತ್ತಿರುವ ಹವಾಮಾನ ಬದಲಾವಣೆ:


(Climate change causing a shift in Earth’s axis)

 ಸಂದರ್ಭ:

ಒಂದು ಅಧ್ಯಯನದ ಪ್ರಕಾರ, 1990 ರ ದಶಕದಿಂದಲೂ, ಜಾಗತಿಕ ತಾಪಮಾನದಲ್ಲಿನ ಹೆಚ್ಚಳದಿಂದಾಗಿ ಹಿಮನದಿಗಳ ಅತಿಯಾದ ಕರಗುವಿಕೆಯಿಂದಾಗಿ ನಮ್ಮ ಗ್ರಹದ ಅಕ್ಷದ ತಿರುಗುವಿಕೆಯ ವೇಗ (axis of rotation) ಸಾಮಾನ್ಯಕ್ಕಿಂತ ಹೆಚ್ಚು ವೇಗವಾಗಿದೆ.

 

ಪರಿಣಾಮಗಳು:

ಈ ಬದಲಾವಣೆಯು ದೈನಂದಿನ ಜೀವನದ ಮೇಲೆ ಗಮನಾರ್ಹ ಪರಿಣಾಮ ಬೀರುವ ಸಾಧ್ಯತೆಯಿಲ್ಲದಿದ್ದರೂ, ಇದು ಕೆಲವು ಮಿಲಿ ಸೆಕೆಂಡುಗಳಷ್ಟು ಹಗಲಿನ ಅವಧಿಯ ಹೆಚ್ಚಳಕ್ಕೆ  ಕಾರಣವಾಗಬಹುದು.

 

ಭೂಮಿಯ ಅಕ್ಷ’ ಎಂದರೇನು?

ಭೂಮಿಯ ತಿರುಗುವಿಕೆಯ ಅಕ್ಷವು (axis of rotation) ಸೂರ್ಯನನ್ನು ಪರಿಭ್ರಮಿಸುವಾಗ ಭೂಮಿಯು ತನ್ನ ಸುತ್ತ ಸುತ್ತುವುದಾಗಿದೆ. ಈ ಅಕ್ಷವು ಗ್ರಹದ ಮೇಲ್ಮೈಯನ್ನು ಛೇದಿಸುವ (intersects) ಸ್ಥಳಗಳು ಭೌಗೋಳಿಕವಾಗಿ ಉತ್ತರ ಮತ್ತು ದಕ್ಷಿಣ ಧ್ರುವಗಳಾಗಿವೆ.

 

ಅಕ್ಷದ ಸ್ಥಳಾಂತರ ಪ್ರಕ್ರಿಯೆ:

ಭೂಮಿಯ ಮೇಲ್ಮೈಯಲ್ಲಿರುವ ಧ್ರುವಗಳ ಸ್ಥಳವನ್ನು ನಿಗದಿಪಡಿಸಲಾಗಿಲ್ಲ, ಆದಾಗ್ಯೂ, ಭೂಮಿಯ ಮೇಲಿನ ಒಟ್ಟು ದ್ರವ್ಯರಾಶಿಯ ವಿತರಣೆಯಲ್ಲಿನ ಬದಲಾವಣೆಯಿಂದಾಗಿ, ಅದರ ಅಕ್ಷವು ಚಲಿಸುತ್ತದೆ.

ಹೀಗಾಗಿ, ಅಕ್ಷವು ಚಲಿಸಿದಾಗ ಧೃವಗಳು ಚಲಿಸುತ್ತವೆ, ಮತ್ತು ಈ ಬದಲಾವಣೆಯನ್ನು / ಚಲನೆಯನ್ನು “ಧ್ರುವಚಲನೆ” (polar motion) ಎಂದು ಕರೆಯಲಾಗುತ್ತದೆ.

 1. ಅಮೆರಿಕಾದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯಾದ ನಾಸಾ ಪ್ರಕಾರ, 20 ನೇ ಶತಮಾನದ ದತ್ತಾಂಶವು ಭೂಮಿಯ ತಿರುಗುವಿಕೆಯ ಅಕ್ಷವು (spin axis) ವರ್ಷಕ್ಕೆ ಸುಮಾರು 10 ಸೆಂಟಿಮೀಟರ್ ಗಳಷ್ಟು ಚಲಿಸುತ್ತಿದೆ ಎಂದು ತೋರಿಸುತ್ತದೆ. ಅಂದರೆ, ಒಂದು ಶತಮಾನದಲ್ಲಿ, ಧ್ರುವಗಳ ಚಲನೆಯು 10 ಮೀಟರ್ ಗಳಿಗಿಂತ ಹೆಚ್ಚಾಗುತ್ತದೆ.
 2. ಸಾಮಾನ್ಯವಾಗಿ, ಧ್ರುವೀಯ ಚಲನೆಯು ಜಲಗೋಳ, ವಾತಾವರಣ, ಸಾಗರಗಳು ಅಥವಾ ಘನ ಭೂಮಿಯ ಬದಲಾವಣೆಗಳಿಂದ ಉಂಟಾಗುತ್ತದೆ.

 

ಹೊಸ ಅಧ್ಯಯನವು ಹೇಳುವುದೇನು?

 1. 1990 ರ ದಶಕದಿಂದ, ಹವಾಮಾನ ಬದಲಾವಣೆಯಿಂದಾಗಿ ಶತಕೋಟಿ ಟನ್ ಗಳಷ್ಟು ಹಿಮವನ್ನು ಹಿಮನದಿಗಳು ಸಾಗರಗಳಲ್ಲಿ ಕರಗಿಸಿವೆ. ಈ ಕಾರಣದಿಂದಾಗಿ, ಭೂಮಿಯ ಧ್ರುವಗಳು ಹೊಸ ದಿಕ್ಕುಗಳಲ್ಲಿ ಚಲಿಸಲು ಕಾರಣವಾಗಿದೆ.
 2. ಅಧ್ಯಯನದ ಪ್ರಕಾರ, 1990 ರ ದಶಕದಿಂದ, ಜಲಗೋಳ (Hydrosphere) ದಲ್ಲಿನ ಬದಲಾವಣೆಗಳಿಂದಾಗಿ (ಭೂಮಿಯಲ್ಲಿ ನೀರನ್ನು ಸಂಗ್ರಹಿಸುವ ವಿಧಾನ) ಉತ್ತರ ಧ್ರುವವು ಹೊಸ ಪೂರ್ವದಿಕ್ಕಿಗೆ ಬದಲಾಗಿದೆ.
 3. 1995 ರಿಂದ 2020 ರವರೆಗೆ, ಧ್ರುವಗಳ ಚಲನೆಯ / ಸ್ಥಳಾಂತರದ ಸರಾಸರಿ ವೇಗವು 1981 ರಿಂದ 1995 ರವರೆಗೆ ಇದ್ದಂತಹ ಸರಾಸರಿ ವೇಗಕ್ಕಿಂತ 17 ಪಟ್ಟು ವೇಗವಾಗಿತ್ತು. ಅಲ್ಲದೆ ಕಳೆದ ನಾಲ್ಕು ದಶಕಗಳಲ್ಲಿ ಧ್ರುವಗಳು ಸುಮಾರು ನಾಲ್ಕು ಮೀಟರ್ ನಷ್ಟು ದೂರ ಚಲಿಸಿವೆ.

 

ಈ ಬದಲಾವಣೆಯ ಹಿಂದಿನ ನವೀನ ಅಂಶಗಳು:

 1. ಹವಾಮಾನ ವೈಪರೀತ್ಯದಿಂದಾಗಿ ಮತ್ತು ನೀರಾವರಿ ಮತ್ತು ಇತರ ಮಾನವಜನ್ಯ ಚಟುವಟಿಕೆಗಳಿಗೆ ಅಂತರ್ಜಲದ ಅಸಮರ್ಥ ಬಳಕೆಯಿಂದಾಗಿ ಹಿಮದ ಕರಗುವಿಕೆ ವೇಗವಾಗಿದೆ ಮತ್ತು ಹಿಮನದಿಯಲ್ಲದ ಪ್ರದೇಶಗಳಲ್ಲಿ ಪರಿವರ್ತನೆ ಉಂಟಾಗುತ್ತಿದೆ.
 2. ಪ್ರತಿ ವರ್ಷ ಲಕ್ಷಾಂತರ ಟನ್ ನೀರನ್ನು ಕುಡಿಯಲು, ಕೈಗಾರಿಕೆಗಳಿಗೆ ಅಥವಾ ಕೃಷಿಗೆ ಭೂಮಿಯ ಅಂತರಾಳದಿಂದ ತೆಗೆಯಲಾಗುತ್ತಿದೆ ಮತ್ತು  ಅಂತಿಮವಾಗಿ ಈ ನೀರು ಸಮುದ್ರಕ್ಕೆ ಸೇರುತ್ತದೆ. ಹೀಗಾಗಿ, ಇದು ಗ್ರಹದ ದ್ರವ್ಯರಾಶಿಯ ಪುನರ್ ವಿತರಣೆಗೆ / ಹಂಚಿಕೆಗೆ ಕಾರಣವಾಗುತ್ತದೆ.

 

ವಿಷಯಗಳು: ಮಹಿಳೆಯರು ಮತ್ತು ಮಹಿಳಾ ಸಂಘಟನೆಯ ಪಾತ್ರ, ಜನಸಂಖ್ಯೆ ಮತ್ತು ಸಂಬಂಧಿತ ಸಮಸ್ಯೆಗಳು, ಬಡತನ ಮತ್ತು ಅಭಿವೃದ್ಧಿ ಸಮಸ್ಯೆಗಳು, ನಗರೀಕರಣ, ಅವುಗಳ ಸಮಸ್ಯೆಗಳು ಮತ್ತು ಪರಿಹಾರಗಳು.

ಪಾವತಿಸದ ಆರೈಕೆ ಕೆಲಸವನ್ನು ಅಳೆಯುವುದು ಹೇಗೆ ಮತ್ತು ಅದರ ಅಸಮಾನತೆಗಳನ್ನು ಹೇಗೆ ಪರಿಹರಿಸುವುದು?


(How to measure unpaid care work and address its inequalities?)

 

ಸಂದರ್ಭ:

ಇತ್ತೀಚಿನ ಚುನಾವಣಾ ಪ್ರಣಾಳಿಕೆಗಳು ಗೃಹಿಣಿಯರಿಗೆ ಅವರು ಮಾಡುವ ಕೌಟುಂಬಿಕ ಸೇವೆಗಳಿಗೆ ವಿವಿಧ ರೀತಿಯ ಪಾವತಿಗಳನ್ನು ಮಾಡುವ ಭರವಸೆ ನೀಡಿವೆ, ಹೀಗಾಗಿ ಮಹಿಳೆಯರು ಮಾಡುವ ಪಾವತಿಸದ ಮನೆಗೆಲಸ’ (Unpaid Domestic Work) ದ ಬಗ್ಗೆ ಗಮನ ಸೆಳೆಯುತ್ತವೆ.

 

ಪಾವತಿಸದ ಆರೈಕೆ ಕೆಲಸ’ ಎಂದರೇನು?

ಆರ್ಥಿಕ ಸಹಕಾರ ಮತ್ತು ಅಭಿವೃದ್ಧಿಗಾಗಿನ ಸಂಘಟನೆಯ (Organization for Economic Co-operation and Development- OECD) ಪ್ರಕಾರ, ಒಂದು ಕುಟುಂಬದಲ್ಲಿ ತನ್ನ ಸದಸ್ಯರಿಗೆ ನೀಡಲಾಗುವ ಎಲ್ಲಾ ಪಾವತಿಸದ ಸೇವೆಗಳನ್ನು ಅಂದರೆ, ವ್ಯಕ್ತಿಗಳ ಆರೈಕೆ, ಮನೆಕೆಲಸ ಮತ್ತು ಸ್ವಯಂಪ್ರೇರಿತ ಸಮುದಾಯ ಕಾರ್ಯಗಳನ್ನು  ಪಾವತಿಸದ ಆರೈಕೆ ಕೆಲಸ’ (Unpaid Domestic Work) ಎಂದು ಪರಿಗಣಿಸಲಾಗುತ್ತದೆ.

ಈ ಚಟುವಟಿಕೆಗಳನ್ನು ‘ಕೆಲಸ’ ಎಂದು ಪರಿಗಣಿಸಲಾಗುತ್ತದೆ ಏಕೆಂದರೆ ಸೈದ್ಧಾಂತಿಕವಾಗಿ, ಒಬ್ಬ ವ್ಯಕ್ತಿಯು, ಈ ಕಾರ್ಯಗಳನ್ನು ಮಾಡಲು ಮೂರನೇ ವ್ಯಕ್ತಿಗೆ ಪಾವತಿಸಬೇಕಾಗುತ್ತದೆ.

 

ಈಗಿರುವ ಸಮಸ್ಯೆ ಏನು?

 1.  ಆರ್ಥಿಕ ಚಟುವಟಿಕೆಯ ಪ್ರಮಾಣಿತ ಮಾನದಂಡಗಳಲ್ಲಿ ಪಾವತಿಸದ ಆರೈಕೆ ಕೆಲಸವನ್ನು ಸೇರಿಸಲಾಗಿಲ್ಲ,ಈ ಕಾರ್ಯಗಳಲ್ಲಿನ ಹೆಚ್ಚಿನ ಭಾಗವನ್ನು ಅಧಿಕ ತರವಾಗಿ ಮಹಿಳೆಯರು ಮತ್ತು ಹುಡುಗಿಯರು ಮಾಡುತ್ತಾರೆ,.
 2. ಮೆಕಿನ್ಸೆ (McKinsey) ಯವರ ಒಂದು ಅಂದಾಜಿನ ಪ್ರಕಾರ, ವಿಶ್ವದ ಒಟ್ಟು ಪಾವತಿಸದ ಆರೈಕೆ ಕೆಲಸದ 75%  ಕೆಲಸಗಳನ್ನು ಮಹಿಳೆಯರು ಮಾಡುತ್ತಾರೆ.
 3. ಭಾರತದ ಜಿಡಿಪಿಗೆ ಮಹಿಳೆಯರ ಆರ್ಥಿಕ ಕೊಡುಗೆ 17% – ಇದು ಜಾಗತಿಕ ಸರಾಸರಿಯ ಅರ್ಧಕ್ಕಿಂತ ಕಡಿಮೆಯಾಗಿದೆ.
 4. ಅಸಮಾನತೆಯು ಔಪಚಾರಿಕ ಆರ್ಥಿಕತೆಯಲ್ಲಿ ಭಾಗವಹಿಸುವಿಕೆಯೊಂದಿಗೆ ನೇರ ಸಂಬಂಧವನ್ನು ಹೊಂದಿದೆ.

 

ಭಾರತದ ಮೇಲಾಗುವ ಪರಿಣಾಮಗಳು:

ವಿಶ್ವ ಆರ್ಥಿಕ ವೇದಿಕೆ (WEF) ನೀಡಿದ 2021 ರ ಜಾಗತಿಕ ಲಿಂಗ ಅಂತರ ವರದಿ ‘(Global Gender Gap Report), ಯಲ್ಲಿ, ಭಾರತವು 156 ದೇಶಗಳ ಪಟ್ಟಿಯಲ್ಲಿ 28 ಸ್ಥಾನಗಳಷ್ಟು ಕುಸಿದು 140 ನೇ ಸ್ಥಾನವನ್ನು ತಲುಪಿದೆ.

 1. ಭಾರತದ ಶ್ರೇಯಾಂಕದಲ್ಲಿ ಈ ಕುಸಿತಕ್ಕೆ ಮುಖ್ಯ ಕಾರಣ ಮಹಿಳೆಯರ ಕಾರ್ಮಿಕ ಬಲದ ಭಾಗವಹಿಸುವಿಕೆಯ ಪ್ರಮಾಣ ಕಡಿಮೆಯಾಗಿದ್ದು, ಇದು ಶೇಕಡಾ 24.8 ರಿಂದ 22.3 ಕ್ಕೆ ಇಳಿದಿದೆ.
 2. ಭಾರತದಲ್ಲಿ ಮಹಿಳೆಯರು ಸಂಪಾದಿಸುವ ಆದಾಯವು ಪುರುಷರ ಆದಾಯದ ಐದನೇ ಒಂದು ಭಾಗಕ್ಕೆ ಸಮನಾಗಿರುತ್ತದೆ, ಇದು ಈ ಸೂಚ್ಯಂಕದಲ್ಲಿ ಭಾರತವನ್ನು ಜಾಗತಿಕವಾಗಿ ಕೆಳಗಿನ ಹತ್ತು ದೇಶಗಳ ಸಾಲಿನಲ್ಲಿ ನಿಲ್ಲುವಂತೆ ಮಾಡಿದೆ.

 

ಮಾಡಬೇಕಿರುವುದು ಏನು?

 1. ಆರೈಕೆ ಕಾರ್ಯಾಚರಣೆಗಳ ಹೆಚ್ಚುತ್ತಿರುವ ಅಗತ್ಯತೆಗಳನ್ನು ಪರಿಹರಿಸಲು ಮತ್ತು ಮಹಿಳೆಯರು ಮತ್ತು ಪುರುಷರ ಆರೈಕೆ ಜವಾಬ್ದಾರಿಗಳ ನಡುವಿನ ದೊಡ್ಡ ಅಸಮಾನತೆಯನ್ನು ಪರಿಹರಿಸಲು ನೀತಿಗಳನ್ನು ರೂಪಿಸಬೇಕು.
 2. ಸಂಗ್ರಹಿಸಿದ ಹೆಚ್ಚಿನ ಪ್ರಮಾಣದ ದತ್ತಾಂಶವು, ಹೆಚ್ಚು ಪಾವತಿಸದ ಆರೈಕೆ ಕೆಲಸವನ್ನು ಗೋಚರವಾಗುವಂತೆ ಮಾಡುತ್ತದೆ, ಇದು ಉದ್ದೇಶಿತ ನೀತಿಗಳನ್ನು ರೂಪಿಸಲು ಸಹಾಯ ಮಾಡುತ್ತದೆ ಮತ್ತು ನೀತಿಗಳು ಮತ್ತು ಹೂಡಿಕೆಯ ಪ್ರಭಾವವನ್ನು ಉತ್ತಮವಾಗಿ ಮೇಲ್ವಿಚಾರಣೆ ಮಾಡುತ್ತದೆ.
 3. ಶುದ್ಧ ನೀರು ಮತ್ತು ನೈರ್ಮಲ್ಯ, ಇಂಧನ ಮತ್ತು ಸಾರ್ವಜನಿಕ ಸಾರಿಗೆಯಂತಹ ಭೌತಿಕ ಮೂಲಸೌಕರ್ಯಗಳಲ್ಲಿ ಮತ್ತು ಸಾಮಾಜಿಕ ಮೂಲಸೌಕರ್ಯಗಳಾದ ಆರೈಕೆ, ಆರೋಗ್ಯ ಸೇವೆಗಳು ಮತ್ತು ಶಿಕ್ಷಣ ಕ್ಷೇತ್ರಗಳಲ್ಲಿ ಹೂಡಿಕೆ ಮಾಡುವ ಮೂಲಕ ‘ಪಾವತಿಸದ ಆರೈಕೆ ಕೆಲಸ’ವನ್ನು ಕಡಿಮೆ ಮಾಡಬೇಕು.
 4. ಪುರುಷರು ಮತ್ತು ಮಹಿಳೆಯರ ನಡುವೆ ಮತ್ತು ಕುಟುಂಬಗಳು ಮತ್ತು ರಾಜ್ಯಗಳ ನಡುವೆ ಆರೈಕೆ ಕಾರ್ಯಗಳ ಪುನರ್ವಿತರಣೆಯು ಸಕಾರಾತ್ಮಕ ಸಾಮಾಜಿಕ ರೂಢಿಗಳನ್ನು ಮತ್ತು ಆರ್ಥಿಕ ಅಭಿವೃದ್ಧಿಯನ್ನು ಉತ್ತೇಜಿಸುತ್ತದೆ.

 

ಆರೈಕೆ ಕಾರ್ಯಗಳ ಮಾಪನ ಮತ್ತು ಹಣಗಳಿಕೆ:

ಪಾವತಿಸದ ಕೆಲಸಗಳ ಮೌಲ್ಯವನ್ನು ಅವುಗಳ ಮೇಲೆ ವ್ಯಯಿಸಿದ ಸಮಯವನ್ನು ಲೆಕ್ಕಹಾಕುವ ಮೂಲಕ ಅಂದಾಜು ಮಾಡಬಹುದು (ಸಮಯ-ಬಳಕೆಯ ಸಮೀಕ್ಷೆಗಳ ಮೂಲಕ). ಅದರ ನಂತರ, ಅವಕಾಶದ ವೆಚ್ಚ ಅಥವಾ ಬದಲಿ ವೆಚ್ಚವನ್ನು ಲೆಕ್ಕಹಾಕುವ ಮೂಲಕ ಅಥವಾ ಆ ಚಟುವಟಿಕೆಯಲ್ಲಿ ತೊಡಗಿರುವ ಶ್ರಮವನ್ನು ಅಳೆಯುವ ಮೂಲಕ (by measuring the labour inputs that go into the activity) ಆ ಕೆಲಸದ ಬೆಲೆಯನ್ನು ನಿರ್ಧರಿಸಬಹುದು. ಆದಾಗ್ಯೂ, ಇದು ತನ್ನದೇ ಆದ ಅನೇಕ ಸವಾಲುಗಳನ್ನು ಸಹ ಹೊಂದಿದೆ.

 


ಸಾಮಾನ್ಯ ಅಧ್ಯಯನ ಪತ್ರಿಕೆ : 2


 

ವಿಷಯಗಳು: ಸರ್ಕಾರದ ವಿವಿಧ ಅಂಗಗಳ ನಡುವೆ ಅಧಿಕಾರ ವಿಭಜನೆ, ವಿವಾದ ಪರಿಹಾರ ಕಾರ್ಯವಿಧಾನಗಳು ಮತ್ತು ಸಂಸ್ಥೆಗಳು.

ಮದ್ರಾಸ್ ಹೈಕೋರ್ಟ್ ನ ಟೀಕೆಗಳ ವಿರುದ್ಧ ಸುಪ್ರೀಂ ಕೋರ್ಟ್ ಮೊರೆಹೋದ CEC:


(CEC moves Supreme Court against Madras HC’s comments)

ಸಂದರ್ಭ:

ಭಾರತದ ಮುಖ್ಯ ಚುನಾವಣಾ ಆಯುಕ್ತರು’(Chief Election Commissioner- CEC) ಸುಪ್ರೀಂ ಕೋರ್ಟ್‌ನಲ್ಲಿ ವಿಶೇಷ ಅನುಮತಿ ಅರ್ಜಿ’ (Special Leave Petition) ಸಲ್ಲಿಸುವ ಮೂಲಕ ಮದ್ರಾಸ್ ಹೈಕೋರ್ಟ್‌ನ ನ್ಯಾಯಾಧೀಶರು ಮಾಡಿದ ಮೌಖಿಕ ಪ್ರತಿಕ್ರಿಯೆ ಅಥವಾ ಟೀಕೆಗಳ ವಿರುದ್ಧ ಮೇಲ್ಮನವಿ ಸಲ್ಲಿಸಿದ್ದಾರೆ. ಮೇಲ್ಮನವಿಯಲ್ಲಿ, ಕೋವಿಡ್ -19 ಸಾಂಕ್ರಾಮಿಕದ ಉಲ್ಬಣಕ್ಕೆ ಉನ್ನತ ಚುನಾವಣಾ ಸಂಸ್ಥೆ ಮತ್ತು ಅದರ ಅಧಿಕಾರಿಗಳನ್ನು ಹೊಣೆಗಾರರನ್ನಾಗಿ ಮಾಡಲಾಗುವುದು ಎಂದು ಮದ್ರಾಸ್ ಹೈಕೋರ್ಟ್ ಮೌಖಿಕವಾಗಿ ಹೇಳಿದ್ದನ್ನು ದಾಖಲಿಸಲಾಗಿತ್ತು.

 1. ಮಾಧ್ಯಮ ವರದಿಗಳ ಆಧಾರದ ಮೇಲೆ ಹೈಕೋರ್ಟ್ ನ್ಯಾಯಾಧೀಶರು ನ್ಯಾಯಾಲಯದಲ್ಲಿ ವ್ಯಕ್ತಪಡಿಸಿದ ಮೌಖಿಕ ಅಭಿಪ್ರಾಯಗಳನ್ನು ಉಲ್ಲೇಖಿಸಿ ಚುನಾವಣಾ ಅಧಿಕಾರಿಗಳ ವಿರುದ್ಧ ಕೊಲೆ ಪ್ರಕರಣಗಳನ್ನು ದಾಖಲಿಸದಿರುವಂತೆ ಮತ್ತು ಯಾವುದೇ ಬಲವಂತದ ಕ್ರಮ ಕೈಗೊಳ್ಳದಂತೆ ಪೊಲೀಸರಿಗೆ ನಿರ್ದೇಶನಗಳನ್ನು ನೀಡುವಂತೆ ‘ಮುಖ್ಯ ಚುನಾವಣಾ ಆಯುಕ್ತರು’ (CEC) ವರಿಷ್ಠ ನ್ಯಾಯಾಲಯವನ್ನು ಕೋರಿದ್ದಾರೆ.

 

ಏನಿದು ಸಮಸ್ಯೆ?

 1. ಇತ್ತೀಚೆಗೆ, ಕೋವಿಡ್ -19 ಸಾಂಕ್ರಾಮಿಕದ ಉಲ್ಬಣಕ್ಕೆ ಉನ್ನತ ಚುನಾವಣಾ ಸಂಸ್ಥೆ ಮತ್ತು ಅದರ ಅಧಿಕಾರಿಗಳನ್ನು ಜವಾಬ್ದಾರರನ್ನಾಗಿ ಮಾಡಲಾಗುವುದು ಎಂದು ಮದ್ರಾಸ್ ಹೈಕೋರ್ಟ್ ಮೌಖಿಕವಾಗಿ ಹೇಳಿಕೆ ನೀಡಿತ್ತು.
 2. ನ್ಯಾಯಾಧೀಶರು ಕೊಲೆ ಆರೋಪದ ಮೇಲೆ ಸಂಬಂಧಪಟ್ಟ ಅಧಿಕಾರಿಗಳನ್ನು ವಿಚಾರಣೆಗೆ ಒಳಪಡಿಸಬೇಕು ಎಂದು ಹೇಳಿರುವುದು ವರದಿಯಾಗಿದೆ.
 3. ಈಗ, ಚುನಾವಣಾ ಸಂಬಂಧಿತ ಪ್ರಕರಣಗಳ ವಿಚಾರಣೆಯ ಸಂದರ್ಭದಲ್ಲಿ ನ್ಯಾಯಾಧೀಶರು ಮಾಡಿದ ಮೌಖಿಕ ಟೀಕೆಗಳನ್ನು ಮಾಧ್ಯಮಗಳು ವರದಿ ಮಾಡದಂತೆ ತಡೆಯುವ ಆದೇಶವನ್ನು ಚುನಾವಣಾ ಆಯೋಗವು ಮದ್ರಾಸ್ ಹೈಕೋರ್ಟ್‌ನಿಂದ ಪಡೆಯಲು ಬಯಸಿದೆ.

 

ಇದರ ಅಗತ್ಯತೆ:

 1. ಮೌಖಿಕ ಟೀಕೆಗಳಿಂದಾಗಿ ಚುನಾವಣಾ ಸಂಸ್ಥೆ ಮತ್ತು ಪ್ರಜಾಪ್ರಭುತ್ವ ಪ್ರಕ್ರಿಯೆಯ ಮೇಲೆ ಸಾರ್ವಜನಿಕರು ಇಟ್ಟಿರುವ ನಂಬಿಕೆಯ ಮೇಲೆ ಪರಿಣಾಮ ಬೀರುತ್ತದೆ ಅಥವಾ ಸಂಸ್ಥೆಯ ಮೇಲಿನ ನಂಬಿಕೆ ಕಡಿಮೆಯಾಗುತ್ತದೆ.
 2. ಒಂದು ಸ್ವತಂತ್ರ ಸಾಂವಿಧಾನಿಕ ಪ್ರಾಧಿಕಾರವು ಮತ್ತೊಂದು ಸಾಂವಿಧಾನಿಕ ಸಂಸ್ಥೆಯ ವಿರುದ್ಧ ಮಾಡಿದ ಆರೋಪಗಳನ್ನು ಎಂದಿಗೂ ಸಮರ್ಥಿಸಲಾಗುವುದಿಲ್ಲ. ಏಕೆಂದರೆ ಈ ರೀತಿಯ ಟೀಕೆ ಗಳಿಂದಾಗಿ ಸಂಬಂಧಿಸಿದ ಸಂಸ್ಥೆಯ ಘನತೆಯು  ಪರಿಣಾಮಕಾರಿಯಾಗಿ ಹಾಳಾಗುತ್ತದೆ.

 

ಭಾರತದ ಸಂವಿಧಾನದ ವಿಧಿ 136:

ಮೇಲ್ಮನವಿಗಾಗಿ ಸುಪ್ರೀಂ ಕೋರ್ಟ್‌ನ ವಿಶೇಷ ಅನುಮತಿ:

 1. ಆರ್ಟಿಕಲ್ 136 ರ ಪ್ರಕಾರ, ಸುಪ್ರೀಂ ಕೋರ್ಟ್ ತನ್ನ ವಿವೇಚನಾಧಿಕಾರದ ಮೂಲಕ ಭಾರತದ ಭೂಪ್ರದೇಶದಲ್ಲಿರುವ ನ್ಯಾಯಾಲಯ ಅಥವಾ ನ್ಯಾಯಮಂಡಳಿಯು ನೀಡಿದ ಯಾವುದೇ ತೀರ್ಪು, ಡಿಕ್ರಿ, ನಿರ್ಣಯ ,ಶಿಕ್ಷೆಯ ವಿರುದ್ಧ ಅಥವಾ ಆದೇಶವನ್ನು ಅಂಗೀಕರಿಸಿದ ಅಥವಾ ಮೊಕದ್ದಮೆ ಅಥವಾ ಪ್ರಕರಣದಲ್ಲಿ ಮೇಲ್ಮನವಿ ಸಲ್ಲಿಸಲು ವಿಶೇಷ ಅನುಮತಿಯನ್ನು ನೀಡಬಹುದು.
 2. ಸಶಸ್ತ್ರ ಪಡೆಗಳಿಗೆ ಸಂಬಂಧಿಸಿದ ಯಾವುದೇ ಕಾನೂನಿನ ಮೂಲಕ ಅಥವಾ ಅದರ ಅಡಿಯಲ್ಲಿ ರಚಿಸಲಾದ ನ್ಯಾಯಾಲಯ ಅಥವಾ ನ್ಯಾಯಮಂಡಳಿಯು ಅಂಗೀಕರಿಸಿದ ಅಥವಾ ನೀಡಿದ ಯಾವುದೇ ತೀರ್ಪು, ಧಾರಣ / ನಿರ್ಣಯ, ಶಿಕ್ಷೆ ಅಥವಾ ಆದೇಶಕ್ಕೆ ಈ ಷರತ್ತು (1) ಅನ್ವಯಿಸುವುದಿಲ್ಲ.

 

ವಿಷಯಗಳು: ಸರ್ಕಾರದ ನೀತಿಗಳು ಮತ್ತು ವಿವಿಧ ಕ್ಷೇತ್ರಗಳಲ್ಲಿನ ಅಭಿವೃದ್ಧಿಯ ಅಡಚಣೆಗಳು ಮತ್ತು ಅವುಗಳ ವಿನ್ಯಾಸ ಮತ್ತು ಅನುಷ್ಠಾನದಿಂದ ಉಂಟಾಗುವ ಸಮಸ್ಯೆಗಳು.

ಬಂಡವಾಳ ವೆಚ್ಚಕ್ಕಾಗಿ ರಾಜ್ಯಗಳಿಗೆ ಹಣಕಾಸಿನ ನೆರವು ನೀಡುವ ಯೋಜನೆ:


(Scheme of Financial Assistance to States for Capital Expenditure)

 

ಸಂದರ್ಭ:

ಬಂಡವಾಳ ಯೋಜನೆಗಳಿಗೆ ಖರ್ಚು ಮಾಡಲು ರಾಜ್ಯಗಳಿಗೆ 50 ವರ್ಷಗಳವರೆಗೆ 15,000 ಕೋಟಿ ರೂ.ವರೆಗೆ ಹೆಚ್ಚುವರಿ ಮೊತ್ತವನ್ನು ಬಡ್ಡಿರಹಿತ ಸಾಲವಾಗಿ ನೀಡಲು ಭಾರತ ಸರ್ಕಾರದ ಹಣಕಾಸು ಸಚಿವಾಲಯವು ನಿರ್ಧರಿಸಿದೆ.

 1. 2021-22ರ ಹಣಕಾಸು ವರ್ಷಕ್ಕೆ ರಾಜ್ಯಗಳಿಗೆ ಬಂಡವಾಳ ವೆಚ್ಚಕ್ಕಾಗಿ ಹಣಕಾಸಿನ ನೆರವು ನೀಡುವ ಯೋಜನೆ” (Scheme of Financial Assistance to States for Capital Expenditure) ಗಾಗಿ ಖರ್ಚು ಇಲಾಖೆ ಹೊಸ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ.

 

ಈ ಯೋಜನೆಯಡಿ ಹಂಚಿಕೆ:

 1. ಯೋಜನೆಯ ಮೊದಲ ಭಾಗದಲ್ಲಿ ಈಶಾನ್ಯ ಮತ್ತು ಗುಡ್ಡಗಾಡು ರಾಜ್ಯಗಳಿಗೆ ರೂ .2600 ಕೋಟಿ ನಿಗದಿಪಡಿಸಲಾಗಿದೆ.
 2. ಯೋಜನೆಯ ಎರಡನೇ ಭಾಗವು ಮೊದಲ ಭಾಗದಲ್ಲಿನ ರಾಜ್ಯಗಳನ್ನು ಹೊರತುಪಡಿಸಿ ಎಲ್ಲಾ ರಾಜ್ಯಗಳಿಗೆ 7400 ಕೋಟಿ ರೂ.ಗಳ ಹಂಚಿಕೆಯೊಂದಿಗೆ ಅನ್ವಯಿಸುತ್ತದೆ. ಇದಕ್ಕಾಗಿ 2021-22ನೇ ಸಾಲಿಗಾಗಿ 15 ನೇ ಹಣಕಾಸು ಆಯೋಗದ ನಿರ್ಧಾರಕ್ಕೆ ಅನುಗುಣವಾಗಿ ಈ ರಾಜ್ಯಗಳ ಕೇಂದ್ರ ತೆರಿಗೆಗಳ ಪಾಲಿಗೆ ಅನುಗುಣವಾಗಿ ಈ ಮೊತ್ತವನ್ನು ಹಂಚಿಕೆ ಮಾಡಲಾಗಿದೆ.
 3. ಮೂಲಸೌಕರ್ಯ ಆಸ್ತಿಗಳ ಹಣಗಳಿಕೆ ಅಥವಾ ಮರುಬಳಕೆ ಮತ್ತು ರಾಜ್ಯ ಸಾರ್ವಜನಿಕ ವಲಯದ ಉದ್ಯಮಗಳಲ್ಲಿ (SPSE) ಹೂಡಿಕೆ ಮಾಡಲು ರಾಜ್ಯಗಳಿಗೆ ಪ್ರೋತ್ಸಾಹ ನೀಡುವುದು ಯೋಜನೆಯ ಮೂರನೇ ಭಾಗವಾಗಿದೆ. ಇದಕ್ಕಾಗಿ 5,000 ಕೋಟಿ ರೂ.ಗಳನ್ನು ಹಂಚಿಕೆ ಮಾಡಲಾಗಿದೆ.

 

ಹಿನ್ನೆಲೆ:

ಈ ಯೋಜನೆಯಡಿ ರಾಜ್ಯ ಸರ್ಕಾರಗಳಿಗೆ 50 ವರ್ಷಗಳ ಕಾಲ ಬಡ್ಡಿರಹಿತ ಸಾಲ ರೂಪದಲ್ಲಿ ಆರ್ಥಿಕ ನೆರವು ನೀಡಲಾಗುವುದು.

 1. 2020-21ರ ಆರ್ಥಿಕ ವರ್ಷಕ್ಕೆ ಈ ಯೋಜನೆಗಾಗಿ ಗರಿಷ್ಠ 12,000 ಕೋಟಿ ರೂ. ಮೀರದ ಮೊತ್ತವನ್ನು ನಿಗದಿಪಡಿಸಲಾಗಿದೆ ಮತ್ತು 11,830.29 ಕೋಟಿ ರೂ. ಗಳನ್ನು ಬಿಡುಗಡೆ ಮಾಡಲಾಗಿದೆ.
 2. ಸಾಂಕ್ರಾಮಿಕ ವರ್ಷದಲ್ಲಿ ರಾಜ್ಯ ಮಟ್ಟದ ಬಂಡವಾಳ ವೆಚ್ಚವನ್ನು ನಿರ್ವಹಿಸಲು ಇದು ಸಹಾಯ ಮಾಡಿತು.

 


ಪೂರ್ವಭಾವಿ ಪರೀಕ್ಷೆಗೆ ಸಂಬಂಧಿಸಿದ ವಿದ್ಯಮಾನಗಳು:


ಸಂವಿಧಾನದ 311 ನೇ ವಿಧಿ:

(Article 311)

ಇತ್ತೀಚೆಗೆ, ಜಮ್ಮು ಮತ್ತು ಕಾಶ್ಮೀರದ ಸರ್ಕಾರಿ ಶಿಕ್ಷಕನನ್ನು ಯಾವುದೇ ತನಿಖೆಯಿಲ್ಲದೆ 311 ನೇ ವಿಧಿ ಅಡಿಯಲ್ಲಿ ವಜಾಗೊಳಿಸಲಾಗಿದೆ.

 1. ಭಾರತದ ಸಂವಿಧಾನದ 311 ನೇ ವಿಧಿಯು ಒಕ್ಕೂಟ ಸರ್ಕಾರ ಅಥವಾ ರಾಜ್ಯ ಸರ್ಕಾರದ ಅಡಿಯಲ್ಲಿ ನಾಗರಿಕ ಸೇವೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ವ್ಯಕ್ತಿಯನ್ನು ವಜಾಗೊಳಿಸುವುದು ಅಥವಾ ತೆಗೆದುಹಾಕುವುದು ಅಥವಾ ಆ ವ್ಯಕ್ತಿಯ ಸೇವಾ ಶ್ರೇಣಿಯಲ್ಲಿ ಕಡಿತಗೊಳಿಸುವುದರ ಕುರಿತು ಹೇಳುತ್ತದೆ.
 2. ಆರ್ಟಿಕಲ್ 311 (2) ರ, ಉಪವಿಧಿ (ಸಿ), ಅಡಿಯಲ್ಲಿ ರಾಷ್ಟ್ರಪತಿಗಳು ಅಥವಾ ರಾಜ್ಯಪಾಲರು, ರಾಜ್ಯದ ಸುರಕ್ಷತೆಯ ಹಿತದೃಷ್ಟಿಯಿಂದ ಅಂತಹ ತನಿಖೆ ನಡೆಸುವುದು ಸೂಕ್ತವಲ್ಲ ಎಂದು ಭಾವಿಸಿದರೆ ಅಥವಾ ತೃಪ್ತಿಪಟ್ಟರೆ, ವ್ಯಕ್ತಿಯ ವಿರುದ್ಧದ ಆರೋಪಗಳ ಕುರಿತು ವಿಚಾರಣೆ ನಡೆಸುವುದನ್ನು ಬಿಟ್ಟುಬಿಡಬಹುದು.

P -8 I ಗಸ್ತು ವಿಮಾನ:

(P-8 I patrol aircraft)

 1.  ಇತ್ತೀಚೆಗೆ, ಆರು ‘P -8 I ಗಸ್ತು ವಿಮಾನ’ಗಳನ್ನು ಭಾರತಕ್ಕೆ ಮಾರಾಟ ಮಾಡಲು ಅಮೆರಿಕ ಸಂಯುಕ್ತ ಸಂಸ್ಥಾನವು ಅನುಮೋದನೆ ನೀಡಿದೆ.
 2. P -8 I ವಿಮಾನವು ಭಾರತೀಯ ನೌಕಾಪಡೆಗಾಗಿ ಬೋಯಿಂಗ್ ತಯಾರಿಸಿದ ದೀರ್ಘ-ಶ್ರೇಣಿಯ ಬಹುಪಯೋಗಿ ಕಡಲ ಗಸ್ತು ವಿಮಾನವಾಗಿದೆ.
 3. ಪಿ -8 ಐ ವಿಮಾನವು ಭಾರತದ ವಿಶಾಲ ಕರಾವಳಿ ಮತ್ತು ಪ್ರಾದೇಶಿಕ ಜಲ ಭಾಗವನ್ನು ರಕ್ಷಿಸಲು ವಿನ್ಯಾಸಗೊಳಿಸಲಾಗಿದೆ.
 4. ಇದನ್ನು ಜಲಾಂತರ್ಗಾಮಿ ವಿರೋಧಿ ಯುದ್ಧ, ಗುಪ್ತಚರ ಕಾರ್ಯಾಚರಣೆಗಳು, ಕಡಲಗಸ್ತು, ಕಣ್ಗಾವಲು ಮತ್ತು ವಿಚಕ್ಷಣ ಕಾರ್ಯಾಚರಣೆಗಳಲ್ಲಿ ಬಳಸಬಹುದು.

ಕ್ಸೈಲೋಫಿಸ್ ದೀಪಾಕಿ:

(Xylophis deepaki)

 1.  ‘ಕ್ಸೈಲೋಫಿಸ್ ದೀಪಾಕಿ’ ತಮಿಳುನಾಡಿನಲ್ಲಿ ಇತ್ತೀಚೆಗೆ ಪತ್ತೆಯಾದ ಹಾವಿನ ಹೊಸ ಪ್ರಭೇದವಾಗಿದೆ.
 2. ಇದು ಕೇವಲ 20 ಸೆಂ.ಮೀ ಉದ್ದದ ಸಣ್ಣ ಹಾವಾಗಿದ್ದು, ಪ್ರಕಾಶಮಾನವಾದ ಚರ್ಮವನ್ನು / ಚರ್ಮದ ಮೇಲೆ ವರ್ಣ ವೈವಿಧ್ಯತೆಯ ಮಾಪಕಗಳನ್ನು ಹೊಂದಿದೆ.
 3. ‘ಮರದ ಹಾವುಗಳಿಗೆ’ (Wood snakes) ಸ್ಥಳವಕಾಶ ಕಲ್ಪಿಸಲು ಹೊಸ ಉಪವರ್ಗ ಕ್ಸೈಲೋಫಿನೆಯನ್ನು (Xylophiinae)  ರಚಿಸುವಲ್ಲಿ ವಹಿಸಿದ ಪ್ರಮುಖ ಪಾತ್ರಕ್ಕಾಗಿ ಸರೀಸೃಪ ವಿಜ್ಞಾನಿ ದೀಪಕ್ ವೀರಪ್ಪನ್ ಅವರ ಗೌರವಾರ್ಥ ಅವರ ಹೆಸರನ್ನು ಈ ಹಾವಿನ ಪ್ರಭೇದಕ್ಕೆ ಇಡಲಾಗಿದೆ.
 4. ‘ಮರದ ಹಾವುಗಳು’ ನಿರುಪದ್ರವಿಗಳು, ನೆಲ ಅಗೆತದ ಸಮಯದಲ್ಲಿ ಕಂಡುಬಂದ ಬರುವ ಜೀವಿಗಳು, ಇವುಗಳು ಹೊಲಗಳಲ್ಲಿ ನೆಲ ಅಗೆಯುವಾಗ ಮತ್ತು ಪಶ್ಚಿಮ ಘಟ್ಟದ ಕಾಡುಗಳಲ್ಲಿನ ಮರದ ದಿಮ್ಮಿಗಳ ಕೆಳಗೆ ಕಂಡುಬರುತ್ತವೆ.

ವಿಶ್ವ ಪತ್ರಿಕಾ ಸ್ವಾತಂತ್ರ್ಯ ದಿನ:

(World Press Freedom Day)

 1.  ಪ್ರತಿ ವರ್ಷ, ಮೇ 3, ‘ವಿಂಡ್‌ಹೋಕ್ ಘೋಷಣೆ’ (Declaration of Windhoek) ಯ ವಾರ್ಷಿಕೋತ್ಸವವನ್ನು ‘ವಿಶ್ವ ಪತ್ರಿಕಾ ಸ್ವಾತಂತ್ರ್ಯ ದಿನ’ ಎಂದು ಆಚರಿಸಲಾಗುತ್ತದೆ.
 2. ಯುನೆಸ್ಕೋ ಸಾಮಾನ್ಯ ಸಮ್ಮೇಳನದ ಶಿಫಾರಸಿನ ಅನ್ವಯ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯು 1993 ರ ಡಿಸೆಂಬರ್ ನಲ್ಲಿ ‘ವಿಶ್ವ ಪತ್ರಿಕಾ ಸ್ವಾತಂತ್ರ್ಯ ದಿನ’ ದ ಆಚರಣೆಯನ್ನು ಘೋಷಿಸಿತು.
 3. ವಿಶ್ವ ಪತ್ರಿಕಾ ಸ್ವಾತಂತ್ರ್ಯ ದಿನದ ವಿಷಯ – 2021: “ಸಾರ್ವಜನಿಕ ಒಳಿತಿಗಾಗಿ ಮಾಹಿತಿ

(Theme: “Information as a Public Good”)

ವೊರುಖ್: (Vorukh)

 1.  ಇದು ಉತ್ತರ ತಜಕಿಸ್ತಾನದಲ್ಲಿರುವ ‘ಜಮೋಟ್’ (jamoat), ಆಗಿದೆ. (ರಷ್ಯನ್ ಭಾಷೆಯಲ್ಲಿ ಸಮುದಾಯ ಎಂದರ್ಥ). ‘ವೊರುಖ್ ಜಾಮೋಟ್’ ಕಿರ್ಗಿಸ್ತಾನ್‌ನಿಂದ ಸುತ್ತುವರೆದಿರುವ ಹೊರವಲಯವಾಗಿದೆ ಮತ್ತು ಇದು ಸುಘ್ದ್ (Sughd) ಪ್ರದೇಶದ ಇಸ್ಫರಾ ನಗರದ ಒಂದು ಭಾಗವಾಗಿದೆ.
 2. ‘ಜಾಮೋಟ್’ ಗಳು ಮಧ್ಯ ಏಷ್ಯಾದ ತಜಕಿಸ್ತಾನದಲ್ಲಿ, ಕೋಮುಗಳು ಅಥವಾ ಪುರಸಭೆಗಳಂತೆಯೆ ಮೂರನೇ ಹಂತದ ಆಡಳಿತ ವಿಭಾಗಗಳಾಗಿವೆ.

ಸುದ್ದಿಯಲ್ಲಿರಲು ಕಾರಣ?

ಕಿರ್ಗಿಸ್ತಾನ್ ಮತ್ತು ತಜಿಕಿಸ್ತಾನ್ ನಡುವಿನ ಗಡಿ-ಉದ್ವಿಗ್ನತೆ.

 ಪತ್ರಕರ್ತರನ್ನು ‘ಮುಂಚೂಣಿ COVID-19 ಯೋಧರು’ ಎಂದು ಘೋಷಿಸಿದ ಒಡಿಶಾ:

(Odisha declares journalists as ‘frontline COVID-19 warriors’)

ಇತ್ತೀಚೆಗೆ, ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಅವರು ರಾಜ್ಯದಲ್ಲಿನ  ಕಾರ್ಯನಿರತ ಪತ್ರಕರ್ತರನ್ನು ‘ಫ್ರಂಟ್ಲೈನ್ ​​ಕೋವಿಡ್ -19 ಯೋಧರು’ ಎಂದು ಘೋಷಿಸಿದ್ದಾರೆ ಮತ್ತು ನೊವೆಲ್ ಕರೋನವೈರಸ್ ಸೋಂಕಿನಿಂದ ಪ್ರಾಣ ಕಳೆದುಕೊಂಡ ಪತ್ರಕರ್ತರ ಕುಟುಂಬಕ್ಕೆ 15,00,000 ರೂ. ಗಳ ಪರಿಹಾರವನ್ನು ನೀಡುವುದಾಗಿ ಘೋಷಿಸಿದ್ದಾರೆ.


 • Join our Official Telegram Channel HERE for Motivation and Fast Updates
 • Subscribe to our YouTube Channel HERE to watch Motivational and New analysis videos