Print Friendly, PDF & Email

[ ದೈನಂದಿನ ಪ್ರಚಲಿತ ಘಟನೆಗಳು ] ದಿನಾಂಕ – 18 ಫೆಬ್ರವರಿ 2021

 

ಪರಿವಿಡಿ :

 ಸಾಮಾನ್ಯ ಅಧ್ಯಯನ ಪತ್ರಿಕೆ 2:

1. ಹಣಕಾಸು ಮಸೂದೆಗಳು.

2. ನಾಗಾ ರಾಜಕೀಯ ಸಮಸ್ಯೆಯ ಕುರಿತು ಸಮಿತಿಯನ್ನು ರಚಿಸಿದ ನಾಗಾಲ್ಯಾಂಡ್ ವಿಧಾನಸಭೆ.

3. ಹಿರಿಯ ಅಧಿಕಾರಿಗಳಿಗೆ ಹೆಚ್ಚಿನ ಆರ್ಥಿಕ ಅಧಿಕಾರ.

4. ಬಾಲಾಪರಾಧಿ ನ್ಯಾಯ ಕಾಯ್ದೆಗೆ ತಿದ್ದುಪಡಿ.

5. ವಿಶ್ವಸಂಸ್ಥೆಯ ಶಾಂತಿಪಾಲಕರು.

6. ಜೂನ್ ವರೆಗೆ FATF ಬೂದು ಪಟ್ಟಿಯಲ್ಲಿಯೇ ಮುಂದುವರಿಯಲಿರುವ ಪಾಕಿಸ್ತಾನ.

7. ವಿಶ್ವ ಆರೋಗ್ಯ ಸಂಸ್ಥೆಯು (WHO) ಧನಸಹಾಯ ಪಡೆಯುವ ವಿಧಗಳು.

 

ಸಾಮಾನ್ಯ ಅಧ್ಯಯನ ಪತ್ರಿಕೆ 3:

1. ಉತ್ಪಾದನೆ-ಸಂಬಂಧಿತ ಪ್ರೋತ್ಸಾಹಕ ಯೋಜನೆ.

2. ನಾಸಾದ ಪರ್ಸೇವೆರನ್ಸ್ ರೋವರ್.

 

ಪೂರ್ವಭಾವಿ ಪರೀಕ್ಷೆಗೆ ಸಂಬಂಧಿಸಿದ ವಿದ್ಯಮಾನಗಳು:

1. ಚಾರ್ ಮಿನಾರ್.

2. ಭಾರತೀಯ ಸಂಜ್ಞಾ (ಸಂಕೇತ) ಭಾಷೆ ನಿಘಂಟು.

 


ಸಾಮಾನ್ಯ ಅಧ್ಯಯನ ಪತ್ರಿಕೆ – 2


 

 ವಿಷಯಗಳು:ಭಾರತೀಯ ಸಂವಿಧಾನ- ಐತಿಹಾಸಿಕ ಆಧಾರಗಳು, ವಿಕಸನ, ವೈಶಿಷ್ಟ್ಯಗಳು, ತಿದ್ದುಪಡಿಗಳು, ಮಹತ್ವದ ನಿಬಂಧನೆಗಳು ಮತ್ತು ಮೂಲ ರಚನೆ.

ಹಣಕಾಸು ಮಸೂದೆಗಳು:


(Money Bills)

ಸಂದರ್ಭ:

ಇತ್ತೀಚೆಗೆ, ಪೂರ್ವಭಾವಿ ಕ್ರಮವಾಗಿ ಕಾಂಗ್ರೆಸ್ ಪಕ್ಷವು, ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರಿಗೆ ಎರಡು ಸಾರ್ವಜನಿಕ ವಲಯದ ಬ್ಯಾಂಕುಗಳನ್ನು ಖಾಸಗೀಕರಣಗೊಳಿಸುವುದು ಸೇರಿದಂತೆ ಏಳು ಪ್ರಮುಖ ಮಸೂದೆಗಳನ್ನು ‘ಹಣಕಾಸು ಮಸೂದೆಗಳು’ ಎಂದು ಘೋಷಿಸುವ ಮೂಲಕ ರಾಜ್ಯಸಭೆಯನ್ನು ಬೈಪಾಸ್ ಮಾಡದಂತೆ ( ಅಂದರೆ ಶಾಸನ ರಚನಾ ಪ್ರಕ್ರಿಯೆಯಿಂದ ರಾಜ್ಯಸಭೆಯನ್ನು ಹೊರಗಿಡದಂತೆ ಕೋರಿದೆ) ಪತ್ರ ಬರೆದು ಕೋರಿದೆ.

ಹಿನ್ನೆಲೆ:

 • ರಾಜ್ಯಸಭೆಗೆ ಹಣಕಾಸು ಮಸೂದೆಗೆ ಸಂಬಂಧಿಸಿದಂತೆ ಶಾಸನ ರೂಪಿಸಲು ಸೀಮಿತ ಅಧಿಕಾರಗಳಿವೆ.
 • ಹಣ ಮಸೂದೆಯಲ್ಲಿ ರಾಜ್ಯಸಭೆ ಮಾಡಿದ ತಿದ್ದುಪಡಿಗಳನ್ನು ಸ್ವೀಕರಿಸಲು ಅಥವಾ ತಿರಸ್ಕರಿಸಲು ಲೋಕಸಭೆಯು ಮುಕ್ತವಾಗಿದೆ.

ಹಣಕಾಸು ಮಸೂದೆ ಎಂದರೇನು?

What is a Money Bill?

ಸಂವಿಧಾನದ 110 ನೇ ವಿಧಿಯು ‘ಹಣಕಾಸು ಮಸೂದೆ’ ಯನ್ನು ‘ಕರಡು ಕಾನೂನು’ ಎಂದು ವ್ಯಾಖ್ಯಾನಿಸುತ್ತದೆ, ಇದು ಈ ಲೇಖನದ ಅಡಿಯಲ್ಲಿ ಪಟ್ಟಿ ಮಾಡಲಾದ ಯಾವುದೇ ಅಥವಾ ಎಲ್ಲಾ ವಿಷಯಗಳಿಗೆ ಸಂಬಂಧಿಸಿದ ನಿಬಂಧನೆಗಳನ್ನು ಮಾತ್ರ ಒಳಗೊಂಡಿದೆ.

 • ಇವುಗಳು ಏಳು ವಿಶೇಷತೆಗಳು / ಗುಣಲಕ್ಷಣಗಳ ಒಂದು ಗುಂಪನ್ನು ಒಳಗೊಂಡಿರುತ್ತವೆ, ವ್ಯಾಪಕವಾಗಿ ತೆರಿಗೆಗಳನ್ನು ಜಾರಿಗೊಳಿಸುವುದು ಅಥವಾ ನಿಯಂತ್ರಿಸುವುದು; ಭಾರತ ಸರ್ಕಾರದಿಂದ ಸಾಲವನ್ನು ಪಡೆಯುವ ನಿಯಂತ್ರಣ; ಭಾರತದ ಕನ್ಸಾಲಿಡೇಟೆಡ್ ಫಂಡ್‌ (ಭಾರತದ ಸಂಚಿತ ನಿಧಿ) ನಿಂದ ಹಣವನ್ನು ಹಿಂಪಡೆಯುವುದು; ಇತ್ಯಾದಿ ವಿಷಯಗಳನ್ನು ಒಳಗೊಂಡಿದೆ.
 • ಒಂದು ವೇಳೆ ಪ್ರಸ್ತಾವಿತ ಶಾಸನವು ಸಂಬಂಧಿತವಲ್ಲದ ಅಥವಾ ಮೇಲೆ ತಿಳಿಸಲಾದ ನಿರ್ದಿಷ್ಟ ಲಕ್ಷಣಗಳು / ಗುಣಲಕ್ಷಣಗಳಿಗೆ ಲಗತ್ತಿಸಲಾದ ಇತರೆ ವೈಶಿಷ್ಟ್ಯಗಳನ್ನು ಒಳಗೊಂಡಿದ್ದರೆ, ಈ ರೀತಿಯ ಕರಡು ಕಾನೂನನ್ನು ಹಣಕಾಸು ಮಸೂದೆ ಎಂದು ವರ್ಗೀಕರಿಸಲಾಗುವುದಿಲ್ಲ.
 • ಒಂದು ಮಸೂದೆ ‘ಹಣಕಾಸು ಮಸೂದೆ’ ಹೌದೋ ಅಥವಾ ಇಲ್ಲವೇ ಎಂಬ ಬಗ್ಗೆ ವಿವಾದ ಉಂಟಾದಾಗ, ಈ ವಿಷಯದಲ್ಲಿ ಲೋಕಸಭೆಯ ಸ್ಪೀಕರ್ ನಿರ್ಧಾರವನ್ನು ಅಂತಿಮವೆಂದು ಪರಿಗಣಿಸಲಾಗುತ್ತದೆ ಎಂದು ಅನುಚ್ಛೇದ 110 ಮತ್ತಷ್ಟು ಸ್ಪಷ್ಟಪಡಿಸುತ್ತದೆ. ಈ ನಿರ್ಧಾರವನ್ನು ಯಾವುದೇ ನ್ಯಾಯಾಲಯದಲ್ಲಿ ಆಗಲಿ ಅಥವಾ ಸಂಸತ್ತಿನಲ್ಲಿ ಆಗಲಿ ಪ್ರಶ್ನಿಸಲು ಸಾಧ್ಯವಿಲ್ಲ.

 

ವಿಷಯಗಳು: ಒಕ್ಕೂಟ ಮತ್ತು ರಾಜ್ಯಗಳ ಕಾರ್ಯಗಳು ಮತ್ತು ಜವಾಬ್ದಾರಿಗಳು, ಸಂಯುಕ್ತ ವ್ಯವಸ್ಥೆಯ ರಚನೆಗೆ ಸಂಬಂಧಿಸಿದ ಸಮಸ್ಯೆಗಳು ಮತ್ತು ಸವಾಲುಗಳು, ಸ್ಥಳೀಯ ಮಟ್ಟದವರೆಗೆ ಅಧಿಕಾರ ಮತ್ತು ಹಣಕಾಸು ಹಂಚಿಕೆ ಮತ್ತು ಅದರಲ್ಲಿರುವ ಸವಾಲುಗಳು.

ನಾಗಾ ರಾಜಕೀಯ ಸಮಸ್ಯೆಯ ಕುರಿತು ಸಮಿತಿಯನ್ನು ರಚಿಸಿದ ನಾಗಾಲ್ಯಾಂಡ್ ವಿಧಾನಸಭೆ:


ಸಂದರ್ಭ:

ಇತ್ತೀಚೆಗೆ, ನಾಗಾಲ್ಯಾಂಡ್ ಶಾಸನಸಭೆಯು ಎರಡು ದಶಕಗಳಿಗಿಂತಲೂ ಹೆಚ್ಚು ಕಾಲ ಉದ್ವಿಗ್ನತೆಯಿಂದ ಕೂಡಿರುವ ನಾಗ-ರಾಜಕೀಯ ವಿಷಯಗಳ ಬಗ್ಗೆ ಸಮಾಲೋಚಿಸಲು ‘ಏಳು ಸದಸ್ಯರ ಕರಡು ಸಮಿತಿಯನ್ನು’ ರಚಿಸಿದೆ.

ಹಿನ್ನೆಲೆ:

 • ದಶಕಗಳ ಸಶಸ್ತ್ರ ಉಗ್ರವಾದದ ನಂತರ, ಇಸಾಕ್-ಮುಯಿವಾ ರವರ ನಾಗಾಲ್ಯಾಂಡ್‌ನ ರಾಷ್ಟ್ರೀಯ ಸಮಾಜವಾದಿ ಮಂಡಳಿಯು ಅಂದರೆ NSCN (IM) ಬಣವು ಕದನ ವಿರಾಮವನ್ನು ಘೋಷಿಸಿದ ನಂತರ 1997 ರಲ್ಲಿ ನಾಗಾಲ್ಯಾಂಡ್‌ನಲ್ಲಿ ಶಾಂತಿ ಸ್ಥಾಪನೆಯಾಗಿದೆ.
 • ಆಗಸ್ಟ್ 2015 ರಲ್ಲಿ ಕೇಂದ್ರ ಮತ್ತು NSCN (IM) ನಡುವೆ ಒಪ್ಪಂದಕ್ಕೆ ಬಂದಿರುವುದರ ಜೊತೆಗೆ, ರಾಜಕೀಯ ಸಮಸ್ಯೆಯನ್ನು ಪರಿಹರಿಸುವಲ್ಲಿ ಕೇಂದ್ರ ಮತ್ತು ನಾಗಾ ರಾಷ್ಟ್ರೀಯ ರಾಜಕೀಯ ಗುಂಪುಗಳ (Naga National Political Groups- NNPGs) ನಡುವಿನ ಒಮ್ಮತ, ನವೆಂಬರ್ 2017 ರಲ್ಲಿ, ಅನೇಕ ಸುತ್ತಿನ ಮಾತುಕತೆಗಳ ನಂತರ ವಿಫಲವಾಗಿದೆ.

ನಾಗಾ ರಾಜಕೀಯದ ಸಂಕ್ಷಿಪ್ತ ಇತಿಹಾಸ: ಎಷ್ಟು ಪುರಾತನ ವಾದುದು?

 • ಸ್ವಾತಂತ್ರ್ಯ ಪೂರ್ವ:
 •  1826 ರಲ್ಲಿ ಬ್ರಿಟಿಷರು ಅಸ್ಸಾಂ ಅನ್ನು ಆಕ್ರಮಿಸಿಕೊಂಡರು ಮತ್ತು ನಾಗಾ ಬೆಟ್ಟಗಳು 1881 ರಲ್ಲಿ ಬ್ರಿಟಿಷ್ ಭಾರತದ ಭಾಗವಾಯಿತು. ನಾಗಾ ದಂಗೆಯ ಮೊದಲ ಕುರುಹುಗಳು 1918 ರಲ್ಲಿ ನಾಗ ಕ್ಲಬ್’ ರಚನೆಯಲ್ಲಿ ಕಂಡುಬರುತ್ತವೆ. ಅದರ ಸದಸ್ಯರು 1929 ರಲ್ಲಿ ನಾಗಾ ಬೆಟ್ಟವನ್ನು ತೊರೆಯುವಂತೆ ಸೈಮನ್ ಆಯೋಗವನ್ನು ಕೇಳಿದ್ದರು. ಅರ್ಥಾತ್ ನಾವು “ಪ್ರಾಚೀನ ಕಾಲದಲ್ಲಿ ಇದ್ದಂತೆ ನಮ್ಮನ್ನು ನಮ್ಮಷ್ಟಕ್ಕೆ ಬಿಟ್ಟುಹೋಗುವಂತೆ ಸೈಮನ್ ಆಯೋಗಕ್ಕೆ ಆಗ್ರಹಿಸಿತ್ತು”.
 •  ನಾಗಾ ನ್ಯಾಷನಲ್ ಕೌನ್ಸಿಲ್ (Naga National Council- NNC) 1946 ರಲ್ಲಿ ರಚನೆಯಾಯಿತು, ಇದು 1947 ರ ಆಗಸ್ಟ್ 14 ರಂದು ನಾಗಾಲ್ಯಾಂಡ್ ಅನ್ನು ಸ್ವತಂತ್ರ ರಾಜ್ಯವೆಂದು ಘೋಷಿಸಿತು.
 • ‘ನಾಗಾ ನ್ಯಾಷನಲ್ ಕೌನ್ಸಿಲ್’“ಸಾರ್ವಭೌಮ ನಾಗ ರಾಜ್ಯ” ವನ್ನು ಸ್ಥಾಪಿಸಲು ನಿರ್ಧರಿಸಿತು ಮತ್ತು 1951 ರಲ್ಲಿ “ಜನಾಭಿಪ್ರಾಯ ಸಂಗ್ರಹ” ವನ್ನು ನಡೆಸಿತು, ಇದರಲ್ಲಿ “99 ಪ್ರತಿಶತ” ಜನರು “ಸ್ವತಂತ್ರ” ನಾಗಾಲ್ಯಾಂಡ್ ಪರವಾಗಿ ಮತ ಚಲಾಯಿಸಿದರು.

ಸ್ವಾತಂತ್ರ್ಯ ನಂತರ:

 • ಮಾರ್ಚ್ 22, 1952 ರಂದು, ಭೂಗತ ನಾಗಾ ಫೆಡರಲ್ ಸರ್ಕಾರ (NFG) ಮತ್ತು ನಾಗಾ ಫೆಡರಲ್ ಆರ್ಮಿ (NFA) ರಚನೆಯಾಯಿತು. ದಂಗೆಯನ್ನು ಹತ್ತಿಕ್ಕಲು ಭಾರತ ಸರ್ಕಾರ ಸೈನ್ಯವನ್ನು ಕಳುಹಿಸಿತು ಮತ್ತು 1958 ರಲ್ಲಿ ಸಶಸ್ತ್ರ ಪಡೆಗಳ (ವಿಶೇಷ ಅಧಿಕಾರ) ಕಾಯ್ದೆಯನ್ನು ಜಾರಿಗೆ ತಂದಿತು.

 

ವಿಷಯಗಳು : ಸರ್ಕಾರದ ನೀತಿಗಳು ಮತ್ತು ವಿವಿಧ ಕ್ಷೇತ್ರಗಳಲ್ಲಿನ ಅಭಿವೃದ್ಧಿಗೆ ಸಂಬಂಧಿಸಿದ ಅಡಚಣೆಗಳು ಮತ್ತು ಅವುಗಳ ವಿನ್ಯಾಸ ಮತ್ತು ಅನುಷ್ಠಾನದಿಂದ ಉಂಟಾಗುವ ಸಮಸ್ಯೆಗಳು.

ಹಿರಿಯ ಅಧಿಕಾರಿಗಳಿಗೆ ಹೆಚ್ಚಿನ ಆರ್ಥಿಕ ಅಧಿಕಾರ:


ಸಂದರ್ಭ:

ಇತ್ತೀಚೆಗೆ, ಸಶಸ್ತ್ರ ಪಡೆಗಳ ಉಪ ಮುಖ್ಯಸ್ಥ ಸ್ಥಾನಕ್ಕಿಂತ ಕೆಳಗಿರುವ ಹಿರಿಯ ಅಧಿಕಾರಿಗಳಿಗೆ ‘ಬಂಡವಾಳ ಸಂಗ್ರಹಣೆಗಾಗಿ’  ಹೆಚ್ಚಿನ ಆರ್ಥಿಕ ಅಧಿಕಾರವನ್ನು ನಿಯೋಜಿಸಲು ಕ್ಯಾಬಿನೆಟ್ ಅನುಮೋದನೆ ನೀಡಿದೆ.

ಮಹತ್ವ:

ಅಧಿಕಾರದ ನಿಯೋಜನೆಯ ಸಶಸ್ತ್ರ ಪಡೆಗಳ ಆಧುನೀಕರಣಕ್ಕೆ ಸಹಾಯಮಾಡುತ್ತದೆ.

ರಕ್ಷಣಾ ಖರೀದಿ ಪ್ರಕ್ರಿಯೆ (DAP) -2020

 • ಇದನ್ನು 2020 ರ ಸೆಪ್ಟೆಂಬರ್ ನಲ್ಲಿ ಅನಾವರಣಗೊಳಿಸಲಾಯಿತು.
 • ಈ ಹೊಸ ನೀತಿಯು 2020 ರ ಅಕ್ಟೋಬರ್ ಒಂದರಿಂದ, 2016 ರ ರಕ್ಷಣಾ ಖರೀದಿ ಪ್ರಕ್ರಿಯೆಯನ್ನು ಮೀರಿಸಿತು.
 •  ರಕ್ಷಣಾ ಖರೀದಿ ಪ್ರಕ್ರಿಯೆಯು, ಕೋಸ್ಟ್ ಗಾರ್ಡ್ ಸೇರಿದಂತೆ ಸಶಸ್ತ್ರ ಪಡೆಗಳನ್ನು ಆಧುನಿಕರಿಸುವ ಸಲುವಾಗಿ ರಕ್ಷಣಾ ಮಂತ್ರಾಲಯದ ಬಜೆಟ್ ನಿಂದ ಸಂಗ್ರಹಣೆ ಮತ್ತು ಸ್ವಾಧೀನಪಡಿಸಿಕೊಳ್ಳುವ ನೀತಿಗಳು ಮತ್ತು ಕಾರ್ಯವಿಧಾನಗಳನ್ನು ಒಳಗೊಂಡಿದೆ.  

 ಹೊಸ ನೀತಿಯ ಪ್ರಮುಖ ಲಕ್ಷಣಗಳು:

ಸ್ಥಳೀಯ ಸಂಸ್ಥೆಗಳಿಗೆ ಮೀಸಲಾತಿ:

 • ಪಾಲಿಸಿಯಲ್ಲಿ ಸ್ಥಳೀಯ ಸಂಸ್ಥೆಗಳಿಗೆ ಹಲವಾರು ಖರೀದಿ ವಿಭಾಗಗಳನ್ನು ಕಾಯ್ದಿರಿಸಲಾಗಿದೆ.
 • DAP 2020 ರಲ್ಲಿ, ‘ಭಾರತೀಯ ಮಾರಾಟಗಾರ’ನನ್ನು ನಿವಾಸಿ ಭಾರತೀಯ ನಾಗರಿಕರ ಒಡೆತನದ ಮತ್ತು ನಿಯಂತ್ರಿಸುವ ಕಂಪನಿಯೆಂದು ವ್ಯಾಖ್ಯಾನಿಸಲಾಗಿದೆ ಮತ್ತು ಇದರಲ್ಲಿ ವಿದೇಶಿ ನೇರ ಹೂಡಿಕೆಯು (FDI) 49 ಪ್ರತಿಶತವನ್ನು ಮೀರುವುದಿಲ್ಲ.

 ಹೊಸ ಖರೀದಿ (ಭಾರತದಲ್ಲಿ ಜಾಗತಿಕ-ಉತ್ಪಾದನೆ) ವಿಭಾಗ:

 • ತಂತ್ರಜ್ಞಾನದ ವರ್ಗಾವಣೆ ಸೇರಿದಂತೆ ಭಾರತದಲ್ಲಿ ಉತ್ಪಾದನೆಯ ಉದ್ದೇಶದಿಂದ ಮಾಡಿದ ವಿದೇಶಿ ಖರೀದಿಗಳ ಒಟ್ಟು ಗುತ್ತಿಗೆ ಮೌಲ್ಯದ ಕನಿಷ್ಠ 50 ಪ್ರತಿಶತದಷ್ಟು ದೇಶೀಕರಣವನ್ನು ಇದು ಕಡ್ಡಾಯಗೊಳಿಸುತ್ತದೆ.

ಗರಿಷ್ಠ ಸ್ಥಳೀಯ ವಿಷಯ:

 • ಇದು ಪರವಾನಗಿ ಅಡಿಯಲ್ಲಿ ಭಾರತದಲ್ಲಿ ತಯಾರಿಸಿದ ಉಪಕರಣಗಳು ಸೇರಿದಂತೆ ಶಸ್ತ್ರಾಸ್ತ್ರಗಳು ಮತ್ತು ಮಿಲಿಟರಿ ಖರೀದಿ ಸಾಧನಗಳಲ್ಲಿ ಗರಿಷ್ಠ ಸ್ಥಳೀಯ ವಸ್ತುಗಳ ಬಳಕೆಯನ್ನು ಉತ್ತೇಜಿಸುತ್ತದೆ. ಹೆಚ್ಚಿನ ಸ್ವಾಧೀನ ವಿಭಾಗಗಳಲ್ಲಿ, DAP -2020 ಡಿಫೆನ್ಸ್ ಪ್ರೊಕ್ಯೂರ್ಮೆಂಟ್ ಪ್ರಕ್ರಿಯೆ (DAP) 2016 ಗಿಂತ 10 ಪ್ರತಿಶತ ಹೆಚ್ಚು ದೇಶೀಕರಣ ಒಪ್ಪಂದಗಳನ್ನು ಒಳಗೊಂಡಿದೆ.

ಆಮದು ನಿರ್ಬಂಧ ಪಟ್ಟಿ:

 • ಕಳೆದ ತಿಂಗಳಲ್ಲಿ ಸರ್ಕಾರವು ಘೋಷಿಸಿದ 101 ವಸ್ತುಗಳ ಆಮದು ನಿಷೇಧ ಪಟ್ಟಿ’ ಯನ್ನು ನಿರ್ದಿಷ್ಟವಾಗಿ ರಕ್ಷಣಾ ಸ್ವಾಧೀನ ಪ್ರಕ್ರಿಯೆ 2020 ರಲ್ಲಿ ಸೇರಿಸಲಾಗಿದೆ. (ವ್ಯಾಪಾರ ನಿಷೇಧವು ಒಂದು ನಿರ್ದಿಷ್ಟ ದೇಶದಿಂದ ವ್ಯಾಪಾರ ಅಥವಾ ನಿರ್ದಿಷ್ಟ ಸರಕುಗಳ ವಿನಿಮಯವನ್ನು ನಿಷೇಧಿಸುವ ಸರ್ಕಾರದ ಆದೇಶವಾಗಿದೆ.)

ಆಫ್‌ಸೆಟ್ ಹೊಣೆಗಾರಿಕೆ:

 • ಸರ್ಕಾರದ ನಿರ್ಧಾರದ ಪ್ರಕಾರ – ಒಪ್ಪಂದವನ್ನು ಅಂತರ್-ಸರ್ಕಾರಿ ಒಪ್ಪಂದ (IGA), ಸರ್ಕಾರದಿಂದ ಸರ್ಕಾರಕ್ಕೆ ಅಥವಾ ಆರಂಭಿಕ ಏಕೈಕ ಮಾರಾಟಗಾರರ ಮೂಲಕ ಒಪ್ಪಂದ ಮಾಡಿಕೊಂಡರೆ, ರಕ್ಷಣಾ ಸಾಧನಗಳ ಖರೀದಿಯಲ್ಲಿ ಸರ್ಕಾರವು ಆಫ್‌ಸೆಟ್ ಷರತ್ತು ನೀಡುವುದಿಲ್ಲ.
 • ಆಫ್‌ಸೆಟ್ ಷರತ್ತು ಅನ್ವಯ, ವಿದೇಶಿ ಮಾರಾಟಗಾರನು ಭಾರತದಲ್ಲಿ ‘ಒಪ್ಪಂದದ ಬೆಲೆಯ’ ಒಂದು ಭಾಗವನ್ನು ಹೂಡಿಕೆ ಮಾಡುವುದು ಅವಶ್ಯಕವಾಗಿದೆ.

 

ವಿಷಯಗಳು : ಸರ್ಕಾರದ ನೀತಿಗಳು ಮತ್ತು ವಿವಿಧ ಕ್ಷೇತ್ರಗಳಲ್ಲಿನ ಅಭಿವೃದ್ಧಿಗೆ ಸಂಬಂಧಿಸಿದ ಅಡಚಣೆಗಳು ಮತ್ತು ಅವುಗಳ ವಿನ್ಯಾಸ ಮತ್ತು ಅನುಷ್ಠಾನದಿಂದ ಉಂಟಾಗುವ ಸಮಸ್ಯೆಗಳು.

ಬಾಲಾಪರಾಧಿ ನ್ಯಾಯ ಕಾಯ್ದೆಗೆ ತಿದ್ದುಪಡಿ: (Amendments to Juvenile Justice Act)


ಸಂದರ್ಭ:

ಬಾಲಾಪರಾಧಿ ನ್ಯಾಯ (ಮಕ್ಕಳ ಆರೈಕೆ ಮತ್ತು ರಕ್ಷಣೆ)  ಕಾಯ್ದೆ -2015 (Juvenile Justice (Care and Protection of Children) Act, 2015) ತಿದ್ದುಪಡಿ ಮಸೂದೆಗೆ ಕೇಂದ್ರ ಮಂತ್ರಿ ಮಂಡಲವು ಅನುಮೋದನೆ ನೀಡಿದೆ.

ಇತ್ತೀಚಿನ ತಿದ್ದುಪಡಿಗಳ ಅಡಿಯಲ್ಲಿ:

 • ‘ದತ್ತು ಆದೇಶ’ ಹೊರಡಿಸಲು ಮತ್ತು ಕಾನೂನಿನ ಅನುಷ್ಠಾನವನ್ನು ಮೇಲ್ವಿಚಾರಣೆ ಮಾಡಲು ಜಿಲ್ಲಾಧಿಕಾರಿಗೆ (ಡಿಎಂ) ಅಧಿಕಾರವಿದೆ.
 • ‘ಬಾಲಾಪರಾಧಿ ನ್ಯಾಯ ಕಾಯ್ದೆ’ ಅನುಷ್ಠಾನಗೊಳಿಸುವ ಜವಾಬ್ದಾರಿಯುತ ಏಜೆನ್ಸಿಗಳ ಕಾರ್ಯವೈಖರಿಯನ್ನು ಮೇಲ್ವಿಚಾರಣೆ ಮಾಡಲು ಜಿಲ್ಲಾಧಿಕಾರಿ ಮತ್ತು ಹೆಚ್ಚುವರಿ ಜಿಲ್ಲಾಧಿಕಾರಿಗೆ ಅಧಿಕಾರ ನೀಡಲಾಗಿದೆ.
 • ಜಿಲ್ಲಾ ಮಕ್ಕಳ ರಕ್ಷಣಾ ಘಟಕಗಳು ‘ಜಿಲ್ಲಾ ಮ್ಯಾಜಿಸ್ಟ್ರೇಟ್’ ಅಡಿಯಲ್ಲಿ ಕಾರ್ಯನಿರ್ವಹಿಸಲಿವೆ.
 • ಒಬ್ಬ ವ್ಯಕ್ತಿಯು ಮಕ್ಕಳಿಗೆ ಆಶ್ರಯ ಮನೆ ಸ್ಥಾಪಿಸಲು ಮತ್ತು ‘ಬಾಲಾಪರಾಧಿ ನ್ಯಾಯ ಕಾಯ್ದೆ’ ಯ ಅಡಿಯಲ್ಲಿ ನೋಂದಾಯಿಸಲು ರಾಜ್ಯಕ್ಕೆ ಪ್ರಸ್ತಾವನೆಯನ್ನು ಕಳುಹಿಸುವ ಮೊದಲು, ಜಿಲ್ಲಾ ಮ್ಯಾಜಿಸ್ಟ್ರೇಟ್ ಆಶ್ರಯ ಮನೆಯ ಸಾಮರ್ಥ್ಯ ಮತ್ತು ಆ ವ್ಯಕ್ತಿಯ ಹಿನ್ನೆಲೆಯನ್ನು ಪರಿಶೀಲಿಸುವುದು ಅಗತ್ಯವಾಗಿರುತ್ತದೆ.
 • ಮಕ್ಕಳ ಕಲ್ಯಾಣ ಸಮಿತಿ, ವಿಶೇಷ ಬಾಲಾಪರಾಧಿ ಸಂರಕ್ಷಣಾ ಘಟಕಗಳು ಮತ್ತು ನೋಂದಾಯಿತ ಮಕ್ಕಳ ಆರೈಕೆ ಸಂಸ್ಥೆಗಳ ಕಾರ್ಯಚಟುವಟಿಕೆಯನ್ನು ಜಿಲ್ಲಾಧಿಕಾರಿ ಸ್ವತಂತ್ರವಾಗಿ ಮೌಲ್ಯಮಾಪನ ಮಾಡಬಹುದು.

ಜೆಜೆ ಕಾಯಿದೆಯ ಬಗ್ಗೆ:

 • ಜುವೆನೈಲ್ ಜಸ್ಟೀಸ್ (ಮಕ್ಕಳ ಆರೈಕೆ ಮತ್ತು ರಕ್ಷಣೆ) ಕಾಯ್ದೆ, ಅಂದರೆ, ಬಾಲಾಪರಾಧಿ ನ್ಯಾಯ (ಮಕ್ಕಳ ಆರೈಕೆ ಮತ್ತು ರಕ್ಷಣೆ) ಕಾಯ್ದೆ, 2000 ಅನ್ನು ‘ಜೆಜೆ ಕಾಯ್ದೆ’ಯ ಬದಲಿಯಾಗಿ ಮಾಡಲಾಗಿದೆ.
 • ಗುರಿ: ಕಾನೂನಿನೊಂದಿಗೆ ಸಂಘರ್ಷದಲ್ಲಿರುವ ಮತ್ತು ಆರೈಕೆ ಮತ್ತು ರಕ್ಷಣೆಯ ಅಗತ್ಯವಿರುವ ಮಕ್ಕಳಿಗೆ ಸಂಬಂಧಿಸಿದ ಪ್ರಕರಣಗಳನ್ನು ಸಮಗ್ರವಾಗಿ ಪರಿಹರಿಸುವುದು.
 • ಈ ಕಾಯ್ದೆಯಡಿ ಪ್ರತಿ ಜಿಲ್ಲೆಯಲ್ಲೂ ‘ಬಾಲಾಪರಾಧಿ ನ್ಯಾಯ ಮಂಡಳಿಗಳು’ ಮತ್ತು ‘ಮಕ್ಕಳ ಕಲ್ಯಾಣ ಸಮಿತಿಗಳನ್ನು’ ರಚಿಸುವಂತೆ ಆದೇಶಿಸಲಾಗಿದೆ. ಈ ಸಂಸ್ಥೆಗಳಲ್ಲಿ ಕನಿಷ್ಠ ಒಬ್ಬ ಮಹಿಳಾ ಸದಸ್ಯರಿರುವುದು ಕಡ್ಡಾಯವಾಗಿದೆ.
 • ಇದರ ಜೊತೆಯಲ್ಲಿ, ಕೇಂದ್ರ ದತ್ತು ಸಂಪನ್ಮೂಲ ಪ್ರಾಧಿಕಾರಕ್ಕೆ- (Central Adoption Resource Authority- CARA) ಶಾಸನಬದ್ಧ ಸಂಸ್ಥೆಯ ಸ್ಥಾನಮಾನವನ್ನು ನೀಡಲಾಗಿದೆ, ಇದು ತನ್ನ ಕಾರ್ಯಗಳನ್ನು ಪರಿಣಾಮಕಾರಿಯಾಗಿ ನಿರ್ವಹಿಸಲು ಅನುವು ಮಾಡಿಕೊಡುತ್ತದೆ.
 • ಈ ಕಾಯಿದೆಯು ಮಕ್ಕಳ ವಿರುದ್ಧದ ಹಲವಾರು ಹೊಸ ಅಪರಾಧಗಳನ್ನು ಒಳಗೊಂಡಿದೆ (ಉದಾ., ಅಕ್ರಮ ದತ್ತು, ಭಯೋತ್ಪಾದಕ ಗುಂಪುಗಳಿಂದ ಮಕ್ಕಳನ್ನು ಬಳಸುವುದು, ಅಂಗವಿಕಲ ಮಕ್ಕಳ ಮೇಲಿನ ಅಪರಾಧಗಳು, ಇತ್ಯಾದಿ), ಇವುಗಳನ್ನು ಬೇರೆ ಯಾವುದೇ ಕಾನೂನಿನ ಅಡಿಯಲ್ಲಿ ಸಮರ್ಪಕವಾಗಿ ಒಳಗೊಂಡಿರುವುದಿಲ್ಲ.
 • ರಾಜ್ಯ ಸರ್ಕಾರ, ಸ್ವಯಂಪ್ರೇರಿತ ಅಥವಾ ಸರ್ಕಾರೇತರ ಸಂಸ್ಥೆಗಳಿಂದ ನಿರ್ವಹಿಸಲ್ಪಡುವ ಎಲ್ಲಾ ಶಿಶುಪಾಲನಾ ಸಂಸ್ಥೆಗಳು ಕಾಯ್ದೆ ಪ್ರಾರಂಭದ ದಿನಾಂಕದಿಂದ 6 ತಿಂಗಳೊಳಗೆ ಕಾಯಿದೆಯಡಿ ಕಡ್ಡಾಯವಾಗಿ ನೋಂದಾಯಿಸಕೊಳ್ಳಬೇಕು.

 

ವಿಷಯಗಳು: ಪ್ರಮುಖ ಅಂತರರಾಷ್ಟ್ರೀಯ ಸಂಸ್ಥೆಗಳು, ಏಜೆನ್ಸಿಗಳು ಮತ್ತು ವೇದಿಕೆಗಳು, ಅವುಗಳ ರಚನೆ, ಆದೇಶ.

ವಿಶ್ವಸಂಸ್ಥೆಯ ಶಾಂತಿಪಾಲಕರು:


(UN peacekeepers):

ಸಂದರ್ಭ:

ಇತ್ತೀಚೆಗೆ, ಯುಎನ್ ಶಾಂತಿಪಾಲಕರಿಗೆ ಭಾರತವು ಎರಡು ಲಕ್ಷ ಡೋಸ್ ಕೋವಿಡ್ -19 ಲಸಿಕೆಗಳನ್ನು ಉಡುಗೊರೆಯಾಗಿ ನೀಡಲಿದೆ ಇಂದು ತಿಳಿಸಿದೆ.

 • ಕೋವಿಡ್ -19 ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ದೇಶಗಳ ಹಗೆತನವನ್ನು ಹೋಗಲಾಡಿಸುವ ಕುರಿತು ಪ್ರಸ್ತಾವನೆ 2532 (2020) ಅನುಷ್ಠಾನಗೊಳಿಸುವ ಕುರಿತು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಮುಕ್ತ ಚರ್ಚೆಯ ಸಂದರ್ಭದಲ್ಲಿ ವಿದೇಶಾಂಗ ಸಚಿವ ಎಸ್ ಜೈಶಂಕರ್ ಈ ವಿಷಯವನ್ನು ಪ್ರಕಟಿಸಿದ್ದಾರೆ.

ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ‘ಪ್ರಸ್ತಾಪ 2532’ ಎಂದರೇನು?

ನಿರ್ಣಯಗಳ ಅಡಿಯಲ್ಲಿ:

 • ಅದರ ಕಾರ್ಯಸೂಚಿಯಲ್ಲಿ, ಎಲ್ಲಾ ಸಂದರ್ಭಗಳಲ್ಲಿಯೂ ಎಲ್ಲಾ ಹಗೆತನಗಳನ್ನು ಸಾಮಾನ್ಯ ಮತ್ತು ತಕ್ಷಣದ ನಿಲುಗಡೆ ಮಾಡಲು ಪ್ರಯತ್ನಿಸಲಾಗಿದೆ “(ಇದನ್ನು ಈಗಾಗಲೇ ವಿಶ್ವಸಂಸ್ಥೆಯ ಭದ್ರತಾ ಮಂಡಳಿ (UNSC) ಗುರುತಿಸಿದೆ).
 • ಸಶಸ್ತ್ರ ಸಂಘರ್ಷಗಳಲ್ಲಿ ಭಾಗಿಯಾಗಿರುವ ಎಲ್ಲಾ ಪಕ್ಷಗಳು (ಯುಎನ್‌ಎಸ್‌ಸಿಯ ಕಾರ್ಯಸೂಚಿಯಲ್ಲಿ ನಿರ್ದಿಷ್ಟವಾಗಿ ಸೇರಿಸಿಕೊಳ್ಳದವುಗಳನ್ನು ಒಳಗೊಂಡಂತೆ) ತಕ್ಷಣದ ‘ಕನಿಷ್ಠ 90 ದಿನಗಳ ಶಾಶ್ವತ ಮಾನವೀಯ ಕದನ ವಿರಾಮ’ವನ್ನು ಪಾಲಿಸಲು ಕೋರಿವೆ.
 • ವಿಶ್ವಸಂಸ್ಥೆಯ ಭದ್ರತಾ ಮಂಡಳಿಯು ನಿರ್ದಿಷ್ಟವಾಗಿ ಗೊತ್ತುಪಡಿಸಿದ ಭಯೋತ್ಪಾದಕ ಗುಂಪುಗಳಾದ ಇಸ್ಲಾಮಿಕ್ ಸ್ಟೇಟ್ ಮತ್ತು ಇರಾಕ್‌ನ ಲೆವಂಟ್ ಅನ್ನು ಸೇರಿಸಿಲ್ಲ.

ಶಾಂತಿ ಅಭಿಯಾನ’ ಮತ್ತು ಅವುಗಳ ಪ್ರಾಮುಖ್ಯತೆ:

 • ವಿಶ್ವಸಂಸ್ಥೆಯ ಶಾಂತಿಪಾಲನಾ ಕಾರ್ಯಾಚರಣೆಯು ಶಾಂತಿ ಕಾರ್ಯಾಚರಣೆ ಇಲಾಖೆ ಮತ್ತು ಕಾರ್ಯಾಚರಣೆಯ ಬೆಂಬಲ ಇಲಾಖೆಗಳ ಜಂಟಿ ಪ್ರಯತ್ನವಾಗಿದೆ.
 •  ಪ್ರತಿಯೊಂದು ಶಾಂತಿಪಾಲನಾ ಕಾರ್ಯಾಚರಣೆಯನ್ನು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯು ಅನುಮೋದಿಸುತ್ತದೆ.
 •  ಯುಎನ್ ಶಾಂತಿಪಾಲನಾ ಕಾರ್ಯಾಚರಣೆಗಳಿಗೆ ಬೇಕಿರುವ ಹಣಕಾಸಿನ ಅಗತ್ಯತೆಗಳನ್ನು ವಿಶ್ವಸಂಸ್ಥೆಯ ಸದಸ್ಯ ರಾಷ್ಟ್ರಗಳು ಒಟ್ಟಾಗಿ ಭರಿಸುತ್ತವೆ.
 • ವಿಶ್ವಸಂಸ್ಥೆಯ ಚಾರ್ಟರ್ ಪ್ರಕಾರ, ಪ್ರತಿ ಸದಸ್ಯ ರಾಷ್ಟ್ರವು ಶಾಂತಿ ಕಾರ್ಯಾಚರಣೆಗಾಗಿ ನಿಗದಿತ ಮೊತ್ತವನ್ನು ಪಾವತಿಸಲು ಕಾನೂನುಬದ್ಧವಾಗಿ ಬಾಧ್ಯತೆಯನ್ನು ಹೊಂದಿದೆ.

 ಸಂರಕ್ಷಣೆ:

 • ವಿಶ್ವಸಂಸ್ಥೆಯ ಶಾಂತಿಪಾಲಕರು (ತಿಳಿ ನೀಲಿ ಬಣ್ಣದ ಬೆರೆಟ್ ಗಳು ಅಥವಾ ಹೆಲ್ಮೆಟ್ ಗಳ ಕಾರಣದಿಂದಾಗಿ ಈ ಪಡೆಯನ್ನು ಬ್ಲೂ ಬೆರೆಟ್ಸ್ ಅಥವಾ ಬ್ಲೂ ಹೆಲ್ಮೆಟ್ ಎಂದು ಕರೆಯಲಾಗುತ್ತದೆ) ಇದು ಸೈನಿಕರು, ಪೊಲೀಸ್ ಅಧಿಕಾರಿಗಳು ಮತ್ತು ನಾಗರಿಕ ಸಿಬ್ಬಂದಿಯನ್ನು ಒಳಗೊಂಡಿರಬಹುದು.
 • ಸದಸ್ಯ ರಾಷ್ಟ್ರಗಳು ಸ್ವಯಂಪ್ರೇರಿತ ಆಧಾರದ ಮೇಲೆ ಶಾಂತಿಪಾಲಕರಿಗೆ / ವಿಶ್ವಸಂಸ್ಥೆಯ ಶಾಂತಿಪಾಲನಾ ಪಡೆಗೆ ಕೊಡುಗೆ ನೀಡುತ್ತವೆ.
 • ಶಾಂತಿ ಕಾರ್ಯಾಚರಣೆಯ ನಾಗರಿಕ ನೌಕರರು ಅಂತರರಾಷ್ಟ್ರೀಯ ನಾಗರಿಕ ಸೇವಕರು, ವಿಶ್ವಸಂಸ್ಥೆಯ ಸಚಿವಾಲಯದಿಂದ ನೇಮಕಗೊಂಡು ನಿಯೋಜಿಸಲ್ಪಟ್ಟಿದ್ದಾರೆ.

ವಿಶ್ವಸಂಸ್ಥೆಯ ಶಾಂತಿಪಾಲನಾ ಕಾರ್ಯಾಚರಣೆಗಳನ್ನು ಮೂರು ಮೂಲ ತತ್ವಗಳಿಂದ ನಿರ್ದೇಶಿಸಲಾಗುತ್ತದೆ:

 • ಪಕ್ಷಗಳ ಒಪ್ಪಿಗೆ.
 • ನಿಷ್ಪಕ್ಷಪಾತ.
 • ಜನಾದೇಶದ ರಕ್ಷಣೆ ಮತ್ತು ಆತ್ಮರಕ್ಷಣೆ ಸಂದರ್ಭಗಳನ್ನು ಹೊರತುಪಡಿಸಿ ಬಲ ಪ್ರಯೋಗವನ್ನು ಮಾಡದಿರುವುದು.

 

ವಿಷಯಗಳು: ಭಾರತ ಮತ್ತು ಅದರ ನೆರೆಹೊರೆಯ ದೇಶಗಳೊಂದಿಗಿನ ಸಂಬಂಧಗಳು. ಪ್ರಮುಖ ಅಂತರರಾಷ್ಟ್ರೀಯ ಸಂಸ್ಥೆಗಳು, ಏಜೆನ್ಸಿಗಳು ಮತ್ತು ವೇದಿಕೆಗಳು, ಅವುಗಳ ರಚನೆ, ಆದೇಶ.

ಜೂನ್ ವರೆಗೆ FATF ಬೂದು ಪಟ್ಟಿಯಲ್ಲಿಯೇ ಮುಂದುವರಿಯಲಿರುವ ಪಾಕಿಸ್ತಾನ:


ಸಂದರ್ಭ:

ಪ್ಯಾರಿಸ್ ನಲ್ಲಿ, ಫೆಬ್ರವರಿ 21 ರಿಂದ 26 ರವರೆಗೆ, ಹಣಕಾಸು ಕ್ರಿಯಾ ಕಾರ್ಯಪಡೆಯ (Financial Action Task Force- FATF)  ಪೂರ್ಣ ಪ್ರಮಾಣದ ಅಸೆಂಬ್ಲಿ ಮತ್ತು ವರ್ಕಿಂಗ್ ಗ್ರೂಪ್ ಸಭೆಗಳು ನಡೆಯಲಿದ್ದು, ಇದರಲ್ಲಿ ಪಾಕಿಸ್ತಾನದ ‘ಬೂದು ಪಟ್ಟಿ’ಯ ಪರಿಸ್ಥಿತಿಯನ್ನು ನಿರ್ಧರಿಸಲಾಗುತ್ತದೆ. ಆದಾಗ್ಯೂ, ಜೂನ್ ತಿಂಗಳ ಅಂತ್ಯದವರೆಗೆ, ಪಾಕಿಸ್ತಾನವು ಹಣಕಾಸು ಕ್ರಿಯಾ ಕಾರ್ಯಪಡೆಯ (FATF) ‘ಬೂದು ಪಟ್ಟಿಯಿಂದ’ ನಿರ್ಗಮಿಸುವ ಸಾಧ್ಯತೆಯಿಲ್ಲ.

ಹಿನ್ನೆಲೆ:

2018 ರ ಜೂನ್‌ನಲ್ಲಿ ಪಾಕಿಸ್ತಾನವನ್ನು ಹಣಕಾಸು ಕ್ರಿಯಾ ಕಾರ್ಯಪಡೆಯು (ಎಫ್‌ಎಟಿಎಫ್) ‘ಬೂದು ಪಟ್ಟಿಯಲ್ಲಿ(‘grey’ list ) ಇರಿಸಿದೆ ಮತ್ತು 27 ಆಕ್ಷನ್ ಪಾಯಿಂಟ್‌ಗಳನ್ನು ಕಾರ್ಯಗತಗೊಳಿಸಲು ಗಡುವು ನೀಡಲಾಯಿತು. ಈ ವಿಷಯದಲ್ಲಿ ವಿಫಲವಾದರೆ ಇರಾನ್ ಮತ್ತು ಉತ್ತರ ಕೊರಿಯಾ ಗಳ ಜೊತೆಗೆ ಪಾಕಿಸ್ತಾನವನ್ನು ಕಪ್ಪುಪಟ್ಟಿಗೆ ಸೇರಿಸುವುದಾಗಿ ಎಚ್ಚರಿಸಿತ್ತು.

FATF ಕುರಿತು:

ಪ್ಯಾರಿಸ್ನಲ್ಲಿ ನಡೆದ ಜಿ -7 ದೇಶಗಳ ಸಭೆಯ ಉಪಕ್ರಮದ ಅನ್ವಯ 1989 ರಲ್ಲಿ, ಹಣಕಾಸು ಕ್ರಿಯಾ ಕಾರ್ಯಪಡೆಯು ಒಂದು ಅಂತರ್ ಸರ್ಕಾರಿ ಸಂಸ್ಥೆಯ ರೂಪದಲ್ಲಿ ರಚನೆಯಾಯಿತು.

 • ಇದು ‘ನೀತಿ-ರೂಪಿಸುವ ಸಂಸ್ಥೆ’ ಆಗಿದ್ದು, ರಾಷ್ಟ್ರಮಟ್ಟದಲ್ಲಿ ವಿವಿಧ ಹಂತಗಳಲ್ಲಿ ಶಾಸಕಾಂಗ ಮತ್ತು ನಿಯಂತ್ರಕ ಸುಧಾರಣೆಗಳನ್ನು ಕೈಗೊಳ್ಳಲು ಅಗತ್ಯವಾದ ರಾಜಕೀಯ ಇಚ್ಛಾಶಕ್ತಿಯನ್ನು ಸೃಷ್ಟಿಸುತ್ತದೆ.
 • ಇದರ ಸಚಿವಾಲಯ ಅಥವಾ ಕೇಂದ್ರ ಕಚೇರಿಯನ್ನು ಪ್ಯಾರಿಸ್‌ನ ‘ಆರ್ಥಿಕ ಸಹಕಾರ ಮತ್ತು ಅಭಿವೃದ್ಧಿ ಕೇಂದ್ರ (Economic Cooperation and Development- OECD) ಕಚೇರಿಯಲ್ಲಿ ಸ್ಥಾಪಿಸಲಾಗಿದೆ.

 ಪಾತ್ರಗಳು ಮತ್ತು ಕಾರ್ಯಗಳು:

 • ಹಣ ವರ್ಗಾವಣೆಯನ್ನು ಎದುರಿಸುವ ಕ್ರಮಗಳನ್ನು ತನಿಖೆ ಮಾಡಲು ಮತ್ತು ಅಭಿವೃದ್ಧಿಪಡಿಸಲು FATF ಅನ್ನು ಆರಂಭದಲ್ಲಿ ಸ್ಥಾಪಿಸಲಾಯಿತು.
 • ಅಕ್ಟೋಬರ್ 2001 ರಲ್ಲಿ, ಹಣ ವರ್ಗಾವಣೆಯ ಜೊತೆಗೆ ಭಯೋತ್ಪಾದಕ ಹಣಕಾಸನ್ನು ಎದುರಿಸುವ ಪ್ರಯತ್ನಗಳನ್ನು ಸೇರಿಸಲು ಎಫ್‌ಎಟಿಎಫ್ ತನ್ನ ಆದೇಶವನ್ನು ವಿಸ್ತರಿಸಿತು.
 • ಏಪ್ರಿಲ್ 2012 ರಲ್ಲಿ, ಸಾಮೂಹಿಕ ವಿನಾಶದ ಶಸ್ತ್ರಾಸ್ತ್ರಗಳ ಪ್ರಸರಣಕ್ಕಾಗಿ ಹಣವನ್ನು ನಿರ್ಬಂಧಿಸುವ ತನ್ನ ಪ್ರಯತ್ನಗಳಿಗೆ ಅದು ಸೇರಿಸಿತು.

ಸಂಯೋಜನೆ:

‘ಹಣಕಾಸು ಕ್ರಿಯಾ ಕಾರ್ಯಪಡೆಯು’ /  (Financial Action Task Force- FATF) ಪ್ರಸ್ತುತ 39 ಸದಸ್ಯರನ್ನು ಒಳಗೊಂಡಿದೆ. ಇದರ ಸದಸ್ಯರು ವಿಶ್ವದ ಎಲ್ಲಾ ಭಾಗಗಳಲ್ಲಿನ ಹಣಕಾಸು ಕೇಂದ್ರಗಳನ್ನು ಪ್ರತಿನಿಧಿಸುತ್ತಾರೆ. ಇದು 2 ಪ್ರಾದೇಶಿಕ ಸಂಸ್ಥೆಗಳನ್ನು ಒಳಗೊಂಡಿದೆ – ಗಲ್ಫ್ ಆಫ್ ಕೋಆಪರೇಷನ್ ಕೌನ್ಸಿಲ್ (GCC) ಮತ್ತು ಯುರೋಪಿಯನ್ ಕಮಿಷನ್ (EC). ಇದು ವೀಕ್ಷಕರನ್ನು ಮತ್ತು ಸಹಾಯಕ ಸದಸ್ಯರನ್ನು (ದೇಶಗಳು) ಸಹ ಹೊಂದಿದೆ.

ಏನಿದು FATF ನ ಕಪ್ಪು ಪಟ್ಟಿ ಮತ್ತು ಬೂದು ಪಟ್ಟಿ:

ಕಪ್ಪು ಪಟ್ಟಿ: ಭಯೋತ್ಪಾದಕರಿಗೆ ಹಣಕಾಸು ನೆರವು ಮತ್ತು ಅಕ್ರಮ ಹಣ ವರ್ಗಾವಣೆಗೆ ಸಂಬಂಧಿತ ಚಟುವಟಿಕೆಗಳನ್ನು ಬೆಂಬಲಿಸುವ ಮತ್ತು ಈ ಚಟುವಟಿಕೆಗಳನ್ನು ನಿಷೇಧಿಸುವ ಜಾಗತಿಕ ನಿಬಂಧನೆಗಳೊಂದಿಗೆ ಸಹಕರಿಸದ ಸಹಕಾರೇತರ ದೇಶಗಳನ್ನು (Non-Cooperative Countries or Territories- NCCTs) ‘ಕಪ್ಪು ಪಟ್ಟಿಯಲ್ಲಿ’ ಇರಿಸಲಾಗಿದೆ. ‘ಹಣಕಾಸು ಕ್ರಿಯಾ ಕಾರ್ಯಪಡೆಯು’ ಹೊಸ ನಮೂದುಗಳನ್ನು ಸೇರಿಸಲು ಅಥವಾ ತೆಗೆದುಹಾಕಲು ಕಪ್ಪುಪಟ್ಟಿಯನ್ನು ನಿಯಮಿತವಾಗಿ ತಿದ್ದುಪಡಿ ಮಾಡುತ್ತದೆ.

ಬೂದು ಪಟ್ಟಿ: ಭಯೋತ್ಪಾದಕರಿಗೆ ಹಣಕಾಸು ನೆರವು ಮತ್ತು ಅಕ್ರಮ ಹಣ ವರ್ಗಾವಣೆಗೆ  ಸಂಬಂಧಿತ ಚಟುವಟಿಕೆಗಳಿಗೆ ಸುರಕ್ಷಿತವೆಂದು ಪರಿಗಣಿಸಲಾದ ದೇಶಗಳನ್ನು FATF ‘ಬೂದು ಪಟ್ಟಿಯಲ್ಲಿ’ ಸೇರಿಸುತ್ತದೆ. ಈ ಬೂದು ಪಟ್ಟಿಗೆ ಸೇರುವ ದೇಶಕ್ಕೆ ಕಪ್ಪುಪಟ್ಟಿಗೆ ಪ್ರವೇಶಿಸಬಹುದಾದ ಎಚ್ಚರಿಕೆಯ ಗಂಟೆಯಾಗಿ FATF ಕಾರ್ಯನಿರ್ವಹಿಸುತ್ತದೆ.

ಬೂದು ಪಟ್ಟಿಯಲ್ಲಿ’ ಸೇರ್ಪಡೆಗೊಂಡ ದೇಶಗಳು ಈ ಕೆಳಗಿನ ಸಂದರ್ಭಗಳನ್ನು ಎದುರಿಸಬೇಕಾಗುತ್ತದೆ:

 • ಐಎಂಎಫ್, ವಿಶ್ವ ಬ್ಯಾಂಕ್, ಎಡಿಬಿಯಿಂದ ಆರ್ಥಿಕ ನಿರ್ಬಂಧಗಳು.
 • ಐಎಂಎಫ್, ವಿಶ್ವ ಬ್ಯಾಂಕ್, ಎಡಿಬಿ ಮತ್ತು ಇತರ ದೇಶಗಳಿಂದ ಸಾಲ ಪಡೆಯುವಲ್ಲಿ ಸಮಸ್ಯೆ.
 • ಅಂತರರಾಷ್ಟ್ರೀಯ ವ್ಯಾಪಾರದಲ್ಲಿ ಕಡಿತ.
 • ಅಂತರರಾಷ್ಟ್ರೀಯ ಬಹಿಷ್ಕಾರ.

 

ವಿಷಯಗಳು: ಪ್ರಮುಖ ಅಂತರರಾಷ್ಟ್ರೀಯ ಸಂಸ್ಥೆಗಳು, ಏಜೆನ್ಸಿಗಳು ಮತ್ತು ವೇದಿಕೆಗಳು, ಅವುಗಳ ರಚನೆ, ಆದೇಶ.

ವಿಶ್ವ ಆರೋಗ್ಯ ಸಂಸ್ಥೆಯು (WHO) ಧನಸಹಾಯ ಪಡೆಯುವ ವಿಧಗಳು:


ಸಂದರ್ಭ:

ಈ ತಿಂಗಳ ಅಂತ್ಯದ ವೇಳೆಗೆ, ಅಮೇರಿಕಾ ಸಂಯುಕ್ತ ಸಂಸ್ಥಾನದ ವಿದೇಶಾಂಗ ಕಾರ್ಯದರ್ಶಿ( Secretary of state) ಆಂಟನಿ ಬ್ಲಿಂಕೆನ್ ವಿಶ್ವ ಆರೋಗ್ಯ ಸಂಸ್ಥೆಗೆ (WHO) $ 200 ಮಿಲಿಯನ್ ಪಾವತಿಸುವುದಾಗಿ ಘೋಷಿಸಿದ್ದಾರೆ.

ಅಮೆರಿಕವನ್ನು WHO ನಿಂದ ಬೇರ್ಪಡಿಸುವ ಪ್ರಕ್ರಿಯೆಯನ್ನು ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪ್ರಾರಂಭಿಸಿದ್ದರು, ಆದರೆ ಇದನ್ನು ಅವರ ಉತ್ತರಾಧಿಕಾರಿ ಅಧ್ಯಕ್ಷ ಜೋ ಬಿಡನ್ ನಿಷೇಧಿಸಿದ್ದಾರೆ.

ಈ ನಡೆಯ ಅಗತ್ಯ ಮತ್ತು ಪ್ರಾಮುಖ್ಯತೆ:

ವಿಶ್ವಸಂಸ್ಥೆ, ವಿಶ್ವ ಆರೋಗ್ಯ ಸಂಸ್ಥೆ, ಆದರೆ ಭವಿಷ್ಯಕ್ಕಾಗಿ, ‘ಜಾಗತಿಕ ಆರೋಗ್ಯ ಸಾಮರ್ಥ್ಯಗಳು ಮತ್ತು ಸುರಕ್ಷತೆಯನ್ನು ಬಲಪಡಿಸಲು’ ಅಂತರರಾಷ್ಟ್ರೀಯ ಆರೋಗ್ಯ ಮತ್ತು ಮಾನವೀಯ ಪ್ರತಿಕ್ರಿಯೆಯಾಗಿ ಬಹುಪಕ್ಷೀಯತೆ ಮುಖ್ಯವಾಗಿದೆ ಎಂದು ಯುಎಸ್ ಹೇಳಿದೆ.

WHO ಗೆ ಹೇಗೆ ಹಣ / ಅನುದಾನ ನೀಡಲಾಗುತ್ತದೆ?

WHO ಗಾಗಿ ನಾಲ್ಕು ರೀತಿಯ ಧನಸಹಾಯ ಕೊಡುಗೆಗಳಿವೆ: ಅವುಗಳೆಂದರೆ,

 • ಮೌಲ್ಯಮಾಪನ ಕೊಡುಗೆ (Assessed contributions):ಇದರ ಅಡಿಯಲ್ಲಿ, ಸಂಸ್ಥೆಯ ಪ್ರತಿಯೊಬ್ಬ ಸದಸ್ಯರು ಸದಸ್ಯತ್ವ ಮೊತ್ತವಾಗಿ ನಿಗದಿತ ಮೊತ್ತವನ್ನು ಪಾವತಿಸಬೇಕಾಗುತ್ತದೆ. ಪ್ರತಿ ಸದಸ್ಯ ರಾಷ್ಟ್ರವು ಮಾಡಿದ ಪಾವತಿಗಳನ್ನು ದೇಶದ ಸಂಪತ್ತು ಮತ್ತು ಜನಸಂಖ್ಯೆಗೆ ಅನುಗುಣವಾಗಿ ಲೆಕ್ಕಹಾಕಲಾಗುತ್ತದೆ.
 • ಸ್ವಯಂಪ್ರೇರಿತ ಕೊಡುಗೆಗಳು (Voluntary contributions): ಇದರ ಅಡಿಯಲ್ಲಿ, ಸದಸ್ಯ ರಾಷ್ಟ್ರಗಳಿಂದ (ಅವರ ನಿಗದಿತ ಕೊಡುಗೆಗೆ ಹೆಚ್ಚುವರಿಯಾಗಿ) ಮತ್ತು ಇತರ ಪಾಲುದಾರರಿಂದ ಅನುದಾನವನ್ನು ನೀಡಲಾಗುತ್ತದೆ.
 • ಮೂಲ / ಕೋರ್ ಸ್ವಯಂಪ್ರೇರಿತ ಕೊಡುಗೆಗಳು (Core voluntary contributions):   ಕಡಿಮೆ-ಹಣದ ಚಟುವಟಿಕೆಗಳಿಗೆ ಸಂಪನ್ಮೂಲಗಳ ಸುಧಾರಿತ ಹರಿವಿನಿಂದ ಲಾಭ ಪಡೆಯಲು ಮತ್ತು ತಕ್ಷಣದ ಹಣದ ಕೊರತೆಯಿದ್ದಾಗ ಉಂಟಾಗುವ ಅಡೆತಡೆಗಳನ್ನು ಕಡಿಮೆ ಮಾಡಲು ಅನುವು ಮಾಡಿಕೊಡುತ್ತದೆ.
 • ಸಾಂಕ್ರಾಮಿಕ ಇನ್ಫ್ಲುಯೆನ್ಸ ಸಿದ್ಧತೆ (PIP) ಕೊಡುಗೆ (Pandemic Influenza Preparedness- PIP) : ಸಂಭಾವ್ಯ ಸಾಂಕ್ರಾಮಿಕ ಸಮಯದಲ್ಲಿ ಅಭಿವೃದ್ಧಿಶೀಲ ರಾಷ್ಟ್ರಗಳಿಗೆ ಲಸಿಕೆಗಳು ಮತ್ತು ಇತರ ಸರಬರಾಜುಗಳ ಪೂರೈಕೆಯನ್ನು ಖಚಿತಪಡಿಸಿಕೊಳ್ಳಲು ಇದನ್ನು 2011 ರಿಂದ ಪ್ರಾರಂಭಿಸಲಾಗಿದೆ.

 WHO ಗೆ ಪ್ರಸ್ತುತ ಧನಸಹಾಯದ ಮಾದರಿ:

2019 ರ ನಾಲ್ಕನೇ ತ್ರೈಮಾಸಿಕದ ವೇಳೆಗೆ, ಒಟ್ಟು ಕೊಡುಗೆಗಳು  5.62 ಶತಕೋಟಿ $ ಗಳಷ್ಟಿದ್ದು,

 • ಮೌಲ್ಯಮಾಪನ ಮಾಡಿದ ಕೊಡುಗೆಗಳು $ 956 ಮಿಲಿಯನ್,
 • ನಿರ್ದಿಷ್ಟಪಡಿಸಿದ ಸ್ವಯಂಪ್ರೇರಿತ ಕೊಡುಗೆಗಳು $ 4.38 ಬಿಲಿಯನ್,
 • ಮೂಲ ಸ್ವಯಂಪ್ರೇರಿತ ಕೊಡುಗೆಗಳು $ 160 ಮಿಲಿಯನ್,
 • ಮತ್ತು PIP ಕೊಡುಗೆಗಳು $ 178 ಮಿಲಿಯನ್ ಗಳಾಗಿವೆ.

 


ಸಾಮಾನ್ಯ ಅಧ್ಯಯನ ಪತ್ರಿಕೆ – 3


 

ವಿಷಯಗಳು: ಆರ್ಥಿಕತೆಯ ಮೇಲೆ ಉದಾರೀಕರಣದ ಪರಿಣಾಮ, ಕೈಗಾರಿಕಾ ನೀತಿಯಲ್ಲಿನ ಬದಲಾವಣೆಗಳು ಮತ್ತು ಕೈಗಾರಿಕಾ ಅಭಿವೃದ್ಧಿಯ ಮೇಲೆ ಅವುಗಳ ಪ್ರಭಾವ.

ಉತ್ಪಾದನೆ-ಸಂಬಂಧಿತ ಪ್ರೋತ್ಸಾಹಕ / ಉತ್ತೇಜನ ಯೋಜನೆ:


(Production-Linked Incentive (PLI) scheme):

ಸಂದರ್ಭ:

ಇತ್ತೀಚೆಗೆ, ಕೇಂದ್ರ ಸಚಿವ ಸಂಪುಟವು ಉತ್ಪಾದನಾ-ಸಂಬಂಧಿತ ಪ್ರೋತ್ಸಾಹಕ ಯೋಜನೆಯಡಿ: ಟೆಲಿಕಾಂ ಕ್ಷೇತ್ರಕ್ಕೆ ಅನುಮೋದನೆ ನೀಡಿದ್ದು, ಈ PLI ಯೋಜನೆಗೆ ಐದು ವರ್ಷಗಳಲ್ಲಿ, 12,195 ಕೋಟಿ ವಿನಿಯೋಗಿಸಲು ನಿರ್ಧರಿಸಿದೆ.

 • ರಾಷ್ಟ್ರೀಯ ಎಲೆಕ್ಟ್ರಾನಿಕ್ಸ್ ನೀತಿಯ ಭಾಗವಾಗಿ ಯೋಜನೆಯ ಅನುಷ್ಠಾನವು ಏಪ್ರಿಲ್ 1, 2021 ರಿಂದ ಪ್ರಾರಂಭವಾಗಲಿದೆ.

ಮಹತ್ವ:

 • ಈ ಯೋಜನೆಯು 2.44 ಲಕ್ಷ ಕೋಟಿ ರೂ. ಮೌಲ್ಯದ ಉಪಕರಣಗಳ ಉತ್ಪಾದನೆಯನ್ನು ಉತ್ತೇಜಿಸುತ್ತದೆ ಮತ್ತು ಸುಮಾರು 40,000 ಜನರಿಗೆ ನೇರ ಮತ್ತು ಪರೋಕ್ಷ ಉದ್ಯೋಗವನ್ನು ಸೃಷ್ಟಿಸುತ್ತದೆ.
 • ಈ ಯೋಜನೆಯು 3,000 ಕೋಟಿ ರೂ.ಗಳ ಹೂಡಿಕೆಯನ್ನು ತರುವ ನಿರೀಕ್ಷೆಯಿದೆ ಮತ್ತು ಗಮನಾರ್ಹವಾದ ನೇರ ಮತ್ತು ಪರೋಕ್ಷ ಉದ್ಯೋಗ ಮತ್ತು ತೆರಿಗೆ ಪ್ರಯೋಜನಗಳನ್ನು ಗಳಿಸುವ ನಿರೀಕ್ಷೆಯಿದೆ.

ಉತ್ಪಾದನೆ-ಸಂಬಂಧಿತ ಪ್ರೋತ್ಸಾಹಕ / ಉತ್ತೇಜನ ಯೋಜನೆ (PLI scheme ) ಕುರಿತು: 

 • ಭಾರತವನ್ನು ದೂರಸಂಪರ್ಕ ಉಪಕರಣಗಳ ತಯಾರಿಕೆಯ ಜಾಗತಿಕ ಕೇಂದ್ರವನ್ನಾಗಿ ಮಾಡುವ ಯೋಜನೆ ಹೊಂದಿದೆ.
 • ಯೋಜನೆಯ ಅರ್ಹತಾ ಮಾನದಂಡಗಳ ಅಡಿಯಲ್ಲಿ, ಸಂಚಿತ ಹೆಚ್ಚಳ ಹೂಡಿಕೆ ಮತ್ತು ತಯಾರಿಸಿದ ಸರಕುಗಳ ಹೆಚ್ಚುತ್ತಿರುವ ಮಾರಾಟದ ಗುರಿಯನ್ನು ಸಾಧಿಸಲು ಕನಿಷ್ಠ ಮಿತಿಯನ್ನು ನಿಗದಿಪಡಿಸಲಾಗಿದೆ.
 • ವಿವಿಧ ವಿಭಾಗಗಳು ಮತ್ತು ವರ್ಷಗಳಿಗೆ 4% ರಿಂದ 7% ರವರೆಗೆ ಪ್ರೋತ್ಸಾಹ ಧನ ನೀಡಲಾಗುವುದು. ಒಟ್ಟು ಸರಕುಗಳ ಸಂಚಿತ ಹೆಚ್ಚಳದ ಮಾರಾಟದ ಮೇಲಿನ ತೆರಿಗೆಗಳನ್ನು ಲೆಕ್ಕಾಚಾರ ಮಾಡಲು 2019-20ರ ಹಣಕಾಸು ವರ್ಷವನ್ನು ಮೂಲ ವರ್ಷವೆಂದು ಪರಿಗಣಿಸಲಾಗುತ್ತದೆ.
 • ಕನಿಷ್ಠ ಹೂಡಿಕೆ ಮಿತಿಯನ್ನು MSME ಗೆ 10 ಕೋಟಿ ಮತ್ತು ಇತರರಿಗೆ 100 ಕೋಟಿ ರೂ. ಎಂದು ನಿಗದಿಪಡಿಸಲಾಗಿದೆ.
 • ಅರ್ಹತೆ ಪಡೆದ ನಂತರ, ಹೂಡಿಕೆದಾರನು ತನ್ನ ಬಳಕೆಯಾಗದ ಸಾಮರ್ಥ್ಯವನ್ನು ಬಳಸಿಕೊಳ್ಳಲು ಅನುವು ಮಾಡಿಕೊಡಲು ಕನಿಷ್ಠ ಹೂಡಿಕೆಯ ಮಿತಿಯ 20 ಪಟ್ಟು ಪ್ರೋತ್ಸಾಹಕಗಳನ್ನು ಒದಗಿಸಲಾಗುತ್ತದೆ.
 • ಇದರ ಅಡಿಯಲ್ಲಿ, ದೇಶೀಯ ಉತ್ಪಾದನೆಯನ್ನು ಉತ್ತೇಜಿಸಲು ಮತ್ತು ಎಲೆಕ್ಟ್ರಾನಿಕ್ ಘಟಕಗಳ ತಯಾರಿಕೆಯಲ್ಲಿ ವ್ಯಾಪಕ ಹೂಡಿಕೆಯನ್ನು ಆಕರ್ಷಿಸಲು ಹಣಕಾಸಿನ ಪ್ರೋತ್ಸಾಹನವನ್ನು ನೀಡಲಾಗುತ್ತದೆ.
 • ಭಾರತದ ಉತ್ಪಾದನಾ ಸಾಮರ್ಥ್ಯ ಮತ್ತು ರಫ್ತು ಸಾಮರ್ಥ್ಯವನ್ನು ಹೆಚ್ಚಿಸಲು ಇತರ 10 ಕ್ಷೇತ್ರಗಳಲ್ಲಿ ಉತ್ಪಾದನೆ ಸಂಬಂಧಿತ ಉತ್ತೇಜನ ಯೋಜನೆ (PLI scheme) ಯನ್ನು ಪರಿಚಯಿಸಲು ಕೇಂದ್ರ ಸಚಿವ ಸಂಪುಟ ನವೆಂಬರ್‌ನಲ್ಲಿ ಅನುಮೋದನೆ ನೀಡಿತ್ತು. (ಆತ್ಮ ನಿರ್ಭರ ಭಾರತ ನಿರ್ಮಾಣದ ಉದ್ದೇಶ).

 

ವಿಷಯಗಳು: ಮಾಹಿತಿ ತಂತ್ರಜ್ಞಾನ, ಬಾಹ್ಯಾಕಾಶ, ಕಂಪ್ಯೂಟರ್, ರೊಬೊಟಿಕ್ಸ್, ನ್ಯಾನೊ-ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ ಮತ್ತು ಬೌದ್ಧಿಕ ಆಸ್ತಿ ಹಕ್ಕುಗಳಿಗೆ ಸಂಬಂಧಿಸಿದ ವಿಷಯಗಳಿಗೆ ಸಂಬಂಧಿಸಿದಂತೆ ಜಾಗೃತಿ.

ನಾಸಾದ ಪರ್ಸೇವೆರನ್ಸ್ ರೋವರ್:


NASA PERSEVERANCE:

ಸಂದರ್ಭ:

ಭೂಮಿಯಿಂದ ಏಳು ತಿಂಗಳ ಪ್ರಯಾಣದ ನಂತರ, ನಾಸಾದ ಪರ್ಸೇವೆರನ್ಸ್ ರೋವರ್ (Perseverance rover) ಮಂಗಳ ಗ್ರಹವನ್ನು ತಲುಪುವ ಪ್ರಯಾಣದ ಅಂತಿಮ ಹಂತದಲ್ಲಿದೆ.

ಪರ್ಸೇವೆರನ್ಸ್ ರೋವರ್ ಕುರಿತು:

 • ಪರ್ಸೇವೆರನ್ಸ್ ರೋವರ್ ಅನ್ನು ಜುಲೈ 2020 ರಲ್ಲಿ ಉಡಾವಣೆ ಮಾಡಲಾಯಿತು.
 • ಇದು ಬಹುಶಃ ಮಂಗಳನ ಮೇಲ್ಮೈಯಲ್ಲಿ ಜೆಜೆರೊ ಕುಳಿಗಳ  (Jezero Crater)  ಮೇಲೆ ಇಳಿಯುತ್ತದೆ.
 • ಪ್ರಾಚೀನ ಜೀವಿಗಳ ಜೀವನದ ಖಗೋಳ ಸಾಕ್ಷ್ಯಗಳನ್ನು ಹುಡುಕುವುದು ಮತ್ತು ಭೂಮಿಗೆ ಮರಳಿ ತರಲು ಬಂಡೆಗಳು ಮತ್ತು ರೆಗ್ಲೋಲಿತ್‌ಗಳ (Reglolith) ಮಾದರಿಗಳನ್ನು ಸಂಗ್ರಹಿಸುವುದು ಪರ್ಸೇವೆರನ್ಸ್ ರೋವರ್ ನ ಮುಖ್ಯ ಕಾರ್ಯವಾಗಿದೆ.
 • ಇದು ಪ್ಲುಟೋನಿಯಂನ ವಿಕಿರಣಶೀಲ ಕೊಳೆಯುವಿಕೆಯಿಂದ ಉತ್ಪತ್ತಿಯಾಗುವ ಶಾಖದಿಂದ ಉತ್ಪತ್ತಿಯಾಗುವ ವಿದ್ಯುತ್ ಶಕ್ತಿಯನ್ನು ಇಂಧನವಾಗಿ ಬಳಸುತ್ತದೆ.
 • ನಾಸಾದ ಪರ್ಸೇವೆರನ್ಸ್, ಮಂಗಳನ ಮೇಲ್ಮೈಯಲ್ಲಿ ಸ್ಥಿರವಾಗಿರಲು ಆಕಾರ ಮೆಮೊರಿ ಮಿಶ್ರಲೋಹಗಳನ್ನು (shape memory alloys) ಬಳಸಲಾಗುತ್ತದೆ.
 • ಸುಸಜ್ಜಿತ ಡ್ರಿಲ್, ಕ್ಯಾಮೆರಾ ಮತ್ತು ಲೇಸರ್ ಹೊಂದಿದ ರೋವರ್ ಅನ್ನು ಮಂಗಳ ಗ್ರಹವನ್ನು  ಅನ್ವೇಷಿಸಲು  ಸಿದ್ಧಪಡಿಸಲಾಗಿದೆ.

ಈ ಯೋಜನೆಯ ಮಹತ್ವ:

 • ಪರ್ಸೇವೆರನ್ಸ್ ರೋವರ್ MOXIE ಅಥವಾ ಮಾರ್ಸ್ ಆಕ್ಸಿಜನ್ ISRU ಪ್ರಯೋಗ ಎಂಬ ವಿಶೇಷ ಸಾಧನವನ್ನು ಹೊಂದಿದೆ, ಇದು ಮಂಗಳ ಗ್ರಹದಲ್ಲಿ ಇಂಗಾಲ-ಡೈಆಕ್ಸೈಡ್-ಸಮೃದ್ಧ ವಾತಾವರಣದಿಂದ ಇಂಗಾಲದ ಡೈಆಕ್ಸೈಡ್ ಬಳಸಿ ಮೊದಲ ಬಾರಿಗೆ ಆಣ್ವಿಕ ಆಮ್ಲಜನಕವನ್ನು ರಚಿಸುತ್ತದೆ. (ISRU- In Situ Resource Utilization, ಅಂದರೆ , ನೌಕೆಯಲ್ಲಿರುವ ಗಗನಯಾತ್ರಿಗಳ ಹಾಗೂ ಬಾಹ್ಯಾಕಾಶ ನೌಕೆಯ ಅವಶ್ಯಕತೆಗಳನ್ನು ಪೂರೈಸಲು ಸ್ಥಳೀಯ ಸಂಪನ್ಮೂಲಗಳ ಬಳಕೆ ಅಂದರೆ ಬಾಹ್ಯಾಕಾಶ ನೌಕೆಯ ಒಳಗಿನ ಸಂಪನ್ಮೂಲಗಳನ್ನು ಬಳಕೆ ಮಾಡುವುದು).
 • ಈ ಕಾರ್ಯಾಚರಣೆಯಲ್ಲಿ INGENUITY (‘ಜಾಣ್ಮೆ’) ಎಂಬ ಹೆಲಿಕಾಪ್ಟರ್ ಅನ್ನು ಸಹ ಕಳುಹಿಸಲಾಗಿದೆ, ಇದು ಮಂಗಳ ಗ್ರಹದಲ್ಲಿ ಹಾರಾಟ ನಡೆಸುವ ಮೊದಲ ಹೆಲಿಕಾಪ್ಟರ್ ಆಗಲಿದೆ. ನಾಸಾ ಮತ್ತೊಂದು ಗ್ರಹ ಅಥವಾ ಉಪಗ್ರಹದಲ್ಲಿ ಹೆಲಿಕಾಪ್ಟರ್ ಅನ್ನು ಹಾರಾಟ ನಡೆಸುತ್ತಿರುವುದು ಇದೇ ಮೊದಲು.

 ನಾಸಾದ ಹಿಂದಿನ ಮಂಗಳ ಕಾರ್ಯಾಚರಣೆಗಳು:

 • ನಾಸಾ 1997 ರಲ್ಲಿ ಮಾರ್ಸ್ ಪಾಥ್‌ಫೈಂಡರ್ ಮಿಷನ್ ಪ್ರಾರಂಭವಾದಾಗಿನಿಂದ ಮಂಗಳಕ್ಕೆ ರೋವರ್‌ಗಳನ್ನು ಕಳುಹಿಸುತ್ತಿದೆ.
 • ಈ ಕಾರ್ಯಾಚರಣೆಯ ಯಶಸ್ಸಿನ ನಂತರ, ಪುರಾವೆಗಳನ್ನು ಕಂಡುಹಿಡಿಯಲು ನಾಸಾ ಮಂಗಳ ಕಾರ್ಯಕ್ರಮವನ್ನು ಮುಂದುವರಿಸಲು ನಿರ್ಧರಿಸಿತು.
 • ಎರಡನೇ ಬಾರಿಗೆ, ನಾಸಾ 2003 ರಲ್ಲಿ ಮಂಗಳಕ್ಕೆ ಸ್ಪಿರಿಟ್ಸ್ ಮತ್ತು ಅಪಾರ್ಚುನಿಟಿ ಎಂಬ ಅವಳಿ ರೋವರ್ಗಳನ್ನು, ಕಳುಹಿಸಿತು.
 • 2012 ರಲ್ಲಿ ನಾಸಾ ಕ್ಯೂರಿಯಾಸಿಟಿ ರೋವರ್ ಅನ್ನು ಮೂರನೇ ಬಾರಿಗೆ ಕಳುಹಿಸಿತು.

 


ಪೂರ್ವಭಾವಿ ಪರೀಕ್ಷೆಗೆ ಸಂಬಂಧಿಸಿದ ವಿದ್ಯಮಾನಗಳು:


ಚಾರ್ ಮಿನಾರ್:  (Charminar):

 • ಹೈದರಬಾದ್ ನಗರದಲ್ಲಿ ಪ್ಲೇಗ್‌ನ ಅಂತ್ಯದ ನೆನಪಿಗಾಗಿ 1591 ರಲ್ಲಿ ಮೊಹಮ್ಮದ್ ಕುಲಿ ಕುತುಬ್ ಷಾ ಅವರು ಚಾರ್ಮಿನಾರ್ ಅನ್ನು ನಿರ್ಮಿಸಿದರು.
 • ಪ್ರತಿಯೊಂದು ಮಿನಾರ್ ವು ಕಮಲದ ಎಲೆಗಳ ತಳದಲ್ಲಿ ನಿಂತಿರುವಂತೆ ನಿರ್ಮಿಸಲಾಗಿದೆ, ಇದು ಕುತುಬ್ ಶಾಹಿ ಕಟ್ಟಡಗಳಲ್ಲಿ ಕಂಡುಬರುವ ಪುನರಾವರ್ತಿತ ವಿಶೇಷ ಲಲಕ್ಷಣವಾಗಿದೆ

ಸುದ್ದಿಯಲ್ಲಿರಲು ಕಾರಣ?

 • ಭಾರತೀಯ ಸರ್ವೇಕ್ಷಣ ಇಲಾಖೆಯ / ಭಾರತೀಯ ಪುರತತ್ವ ಸಂಶೋಧನಾ ಇಲಾಖೆಯ (Archaeological Survey of India (ASI) ಪ್ರಕಾರ, ಚಾರ್ಮಿನಾರ್ ಪಕ್ಕದಲ್ಲಿರುವ ಚಿಲ್ಲಾ (ಸಣ್ಣ ದೇವಾಲಯ) ದ ಕುರಿತು ಯಾವುದೇ ದಾಖಲೆಗಳಿಲ್ಲ ಎಂದು, ಮಾಹಿತಿ ಹಕ್ಕಿನ ಅಡಿಯಲ್ಲಿ ಕೇಳಲಾದ ಪ್ರಶ್ನೆಗೆ ಉತ್ತರವಾಗಿ ASI ಈ ಮಾಹಿತಿಯನ್ನು ನೀಡಿದೆ.

ಭಾರತೀಯ ಸಂಜ್ಞಾ (ಸಂಕೇತ) ಭಾಷೆ ನಿಘಂಟು.

(ISL dictionary):

 • ಇತ್ತೀಚೆಗೆ, ಭಾರತೀಯ ಸಂಕೇತ ಭಾಷೆಯ ಮೂರನೇ ಡಿಜಿಟಲ್ ಆವೃತ್ತಿಯನ್ನು- (Indian Sign Language– ISL)” ಬಿಡುಗಡೆ ಮಾಡಲಾಯಿತು.
 • ಇದು ಆರು ವಿಭಾಗಗಳ ಅಡಿಯಲ್ಲಿ 10,000 ಪದಗಳನ್ನು ಒಳಗೊಂಡಿದೆ.
 • ಈ ನಿಘಂಟನ್ನು, ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯದ ಅಧೀನದಲ್ಲಿರುವ ಭಾರತೀಯ ಸಂಕೇತ ಭಾಷಾ ಸಂಶೋಧನೆ ಮತ್ತು ತರಬೇತಿ ಕೇಂದ್ರ (Indian Sign Language Research and Training Centre) ಸಿದ್ಧಪಡಿಸಿದೆ.
 • ISLRTC ಯು ವಿಕಲಚೇತನರ ಸಬಲೀಕರಣ ಇಲಾಖೆಯ (Department of Empowerment of Persons with disabilities) ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯದ (Social Justice and Empowerment Ministry) ಅಧೀನದಲ್ಲಿರುವ ಸ್ವಾಯತ್ತ ಸಂಸ್ಥೆಯಾಗಿದೆ.
 • ಸಂಜ್ಞಾ (ಸಂಕೇತ) ಭಾಷೆಯನ್ನು ವಿಕಲಾಂಗ ವ್ಯಕ್ತಿಗಳ ಹಕ್ಕುಗಳ ಕಾಯ್ದೆ, 2016 ರ ಅಡಿಯಲ್ಲಿ ಸಂವಹನ ಸಾಧನವಾಗಿ ಗುರುತಿಸಲಾಗಿದೆ.
 • ISLRTC ಪೀಠ – ನವದೆಹಲಿ.
 •  ISLRTC ಯನ್ನು 1860 ರ ಸಂಘಗಳ ನೋಂದಣಿ ಕಾಯ್ದೆಯಡಿ ಒಂದು ಸೊಸೈಟಿ ಆಗಿ ಸ್ಥಾಪಿಸಲಾಗಿದೆ.

 • Join our Official Telegram Channel HERE for Motivation and Fast Updates
 • Subscribe to our YouTube Channel HERE to watch Motivational and New analysis videos