Print Friendly, PDF & Email

[ ದೈನಂದಿನ ಪ್ರಚಲಿತ ಘಟನೆಗಳು ] ದಿನಾಂಕ – 12 ಫೆಬ್ರವರಿ 2021

 

ಪರಿವಿಡಿ :

 

ಸಾಮಾನ್ಯ ಅಧ್ಯಯನ ಪತ್ರಿಕೆ 2:

1. ನಗರ ಸ್ಥಳೀಯ ಸಂಸ್ಥೆಗಳು (ULB) ಸುಧಾರಣೆಗಳು.

2. ಪ್ಯಾಂಗಾಂಗ್ ತ್ಸೋ ಪ್ರದೇಶದಲ್ಲಿ ಗಡಿ ಬಿಕ್ಕಟ್ಟು ಶಮನಕ್ಕೆ ಸಮ್ಮತಿ.

3. ಅಂತರರಾಷ್ಟ್ರೀಯ ಇಂಧನ ಸಂಸ್ಥೆ. (IEA).

 

ಸಾಮಾನ್ಯ ಅಧ್ಯಯನ ಪತ್ರಿಕೆ 3:

1. ಬ್ಯಾಂಕುಗಳ ಖಾಸಗೀಕರಣಗೊಳಿಸುವ ಪ್ರಕ್ರಿಯೆಗೆ ಚಾಲನೆ: ಏನಿದು ಪ್ರಸ್ತಾಪ? ಕಾಳಜಿಯ ವಿಷಯಗಳು ಯಾವುವು?

2. ಭಾರತದಲ್ಲಿ 5 ಜಿ ತಂತ್ರಜ್ಞಾನದ ಕುರಿತು ಸಂಸದೀಯ ಸಮಿತಿಯ ವರದಿ.

3. ಸ್ವಯಂ-ನಿಯಂತ್ರಕ ಟೂಲ್‌ಕಿಟ್ ಜಾರಿಗೆ ತಂದ, 17 ಪ್ರಮುಖ ಒಟಿಟಿ ಆಪರೇಟರ್‌ಗಳು.

4. ಚೀನಾದ ಟಿಯಾನ್ವೆನ್ -1 ಪ್ರೊಬ್.

 

ಪೂರ್ವಭಾವಿ ಪರೀಕ್ಷೆಗೆ ಸಂಬಂಧಿಸಿದ ವಿದ್ಯಮಾನಗಳು:

1. ಬಾಬರ್ ಕ್ರೂಸ್ ಕ್ಷಿಪಣಿ.

 


ಸಾಮಾನ್ಯ ಅಧ್ಯಯನ ಪತ್ರಿಕೆ – 2


 

ವಿಷಯಗಳು: ಕೇಂದ್ರ ಮತ್ತು ರಾಜ್ಯಗಳ ಕಾರ್ಯಗಳು ಮತ್ತು ಜವಾಬ್ದಾರಿಗಳು, ಫೆಡರಲ್ ವ್ಯವಸ್ಥೆ ರಚನೆಗೆ ಸಂಬಂಧಿಸಿದ ಸಮಸ್ಯೆಗಳು ಮತ್ತು ಸವಾಲುಗಳು, ಸ್ಥಳೀಯ ಮಟ್ಟದಲ್ಲಿ ಅಧಿಕಾರ ಮತ್ತು ಹಣಕಾಸು ಹಂಚಿಕೆ ಮತ್ತು ಅದರಲ್ಲಿನ ಸವಾಲುಗಳು.

ನಗರ ಸ್ಥಳೀಯ ಸಂಸ್ಥೆಗಳು (ULB) ಸುಧಾರಣೆಗಳು:


Urban Local Bodies (ULB) reforms:

ಸಂದರ್ಭ:  

ನಗರ ಸ್ಥಳೀಯ ಸಂಸ್ಥೆಗಳಲ್ಲಿ (Urban Local Bodies– ULB) ಸುಧಾರಣೆಗಳನ್ನು ಯಶಸ್ವಿಯಾಗಿ ಜಾರಿಗೆ ತಂದ ಆರನೇ ರಾಜ್ಯ ಎಂಬ ಹೆಗ್ಗಳಿಕೆಗೆ ಗೋವಾ ಪಾತ್ರವಾಗಿದೆ. ಇದಲ್ಲದೆ, ಗೋವಾ ಮುಕ್ತ ಮಾರುಕಟ್ಟೆ ಸಾಲಗಳ ಮೂಲಕ 223 ಕೋಟಿ ರೂ.ಗಳ ಹೆಚ್ಚುವರಿ ಹಣಕಾಸು ಸಂಪನ್ಮೂಲಗಳನ್ನು ಸಂಗ್ರಹಿಸಲು ಅರ್ಹವಾಗಿದೆ.

ಈ ಮೂಲಕ ನಗರ ಸ್ಥಳೀಯ ಸಂಸ್ಥೆಗಳ ಸುಧಾರಣೆಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ಆಂಧ್ರಪ್ರದೇಶ, ಮಧ್ಯಪ್ರದೇಶ, ಮಣಿಪುರ, ತೆಲಂಗಾಣ ಮತ್ತು ರಾಜಸ್ಥಾನ ಎಂಬ 5 ರಾಜ್ಯಗಳ ಸಾಲಿಗೆ ಗೋವಾ ಕೂಡ ಸೇರಿಕೊಂಡಿದೆ.

ಹಿನ್ನೆಲೆ:

ನಗರ ಸ್ಥಳೀಯ ಸಂಸ್ಥೆಗಳು (ULB) ಮತ್ತು ನಗರ ಉಪಯುಕ್ತತೆ ಸುಧಾರಣೆಗಳು ರಾಜ್ಯಗಳಲ್ಲಿ ‘ನಗರ ಸ್ಥಳೀಯ ಸಂಸ್ಥೆಗಳನ್ನು’ ಆರ್ಥಿಕವಾಗಿ ಬಲಪಡಿಸುವ ಗುರಿಯನ್ನು ಹೊಂದಿವೆ ಮತ್ತು ನಾಗರಿಕರಿಗೆ ಉತ್ತಮ ಸಾರ್ವಜನಿಕ ಆರೋಗ್ಯ ಮತ್ತು ನೈರ್ಮಲ್ಯ ಸೇವೆಗಳನ್ನು ಒದಗಿಸಲು ಅನುವು ಮಾಡಿಕೊಡುತ್ತವೆ.

ಆರ್ಥಿಕವಾಗಿ ಬಲಿಷ್ಟವಾದ ‘ನಗರ ಸ್ಥಳೀಯ ಸಂಸ್ಥೆಗಳು’ ಉತ್ತಮ ನಾಗರಿಕ ಮೂಲಸೌಕರ್ಯಗಳನ್ನು ನಿರ್ಮಿಸಲು ಸಹ ಸಾಧ್ಯವಾಗುತ್ತದೆ.

 • ಈ ಸುಧಾರಣೆಗಳನ್ನು ಹಣಕಾಸು ಸಚಿವಾಲಯದ ಅಧೀನದ ಖರ್ಚು ಇಲಾಖೆ ನಿಗದಿಪಡಿಸಿದೆ.

 ಈ ಉದ್ದೇಶಗಳನ್ನು ಸಾಧಿಸಲು ಖರ್ಚು ಇಲಾಖೆ ನಿಗದಿಪಡಿಸಿದ ಸುಧಾರಣೆಗಳು :

 • ರಾಜ್ಯಗಳು ತಿಳಿಸುವುದು: The State will notify:
  • ಪ್ರಸ್ತುತ ಚಾಲ್ತಿಯಲ್ಲಿರುವ ವಲಯ ದರಗಳಿಗೆ (ಆಸ್ತಿ ವಹಿವಾಟಿನ ಮಾರ್ಗಸೂಚಿಗಳು) ಅನುಗುಣವಾಗಿರುವ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಆಸ್ತಿ ತೆರಿಗೆ ಮೂಲ ದರಗಳು, ಮತ್ತು
  • ನೀರು ಸರಬರಾಜು, ಒಳಚರಂಡಿ, ಒಳಚರಂಡಿ ಸೌಲಭ್ಯ ಒದಗಿಸುವುದಕ್ಕೆ ಸಂಬಂಧಿಸಿದಂತೆ ಪ್ರಸ್ತುತ ವೆಚ್ಚ / ಹಿಂದಿನ ಹಣದುಬ್ಬರವನ್ನು ಪ್ರತಿಬಿಂಬಿಸುವ ಬಳಕೆದಾರರ ಶುಲ್ಕಗಳ ಮೂಲ ದರಗಳು.
 • ಆಸ್ತಿ ತೆರಿಗೆ / ಉಪಯುಕ್ತತೆ / ಬಳಕೆದಾರರ ಶುಲ್ಕದ ಮೂಲ ದರಗಳ ಹೆಚ್ಚಳಕ್ಕೆ ಅನುಗುಣವಾಗಿ ಆವರ್ತಕ ಹೆಚ್ಚಳಕ್ಕೆ ರಾಜ್ಯಗಳು ವ್ಯವಸ್ಥೆಯನ್ನು ರೂಪಿಸುತ್ತವೆ.

ಇದಲ್ಲದೆ, ಕೇಂದ್ರ ಸರ್ಕಾರವು ಸುಧಾರಣೆಗಳಿಗಾಗಿ 4 ನಾಗರಿಕ ಕೇಂದ್ರಿತ ಪ್ರದೇಶಗಳನ್ನು ಗುರುತಿಸಿದೆ ಅವುಗಳು ಇಂತಿವೆ:

 • ಇದರ ಅಡಿಯಲ್ಲಿ, ಒಂದು ರಾಷ್ಟ್ರ ಒಂದು ಪಡಿತರ ಕಾರ್ಡ್ ( One Nation One Ration Card ) ವ್ಯವಸ್ಥೆಯನ್ನು ಅನುಷ್ಠಾನಗೊಳಿಸುವುದು.
 • ಸುಲಲಿತ ವ್ಯಾಪಾರ ಸುಧಾರಣೆಗಳು.
 • ನಗರ ಸ್ಥಳೀಯ ಸಂಸ್ಥೆಗಳಲ್ಲಿನ / ಉಪಯುಕ್ತತೆ ಸೌಲಭ್ಯಗಳಲ್ಲಿ ಸುಧಾರಣೆಗಳು.
 • ಇಂಧನ / ವಿದ್ಯುತ್ ಕ್ಷೇತ್ರದ ಸುಧಾರಣೆಗಳು.

 

ವಿಷಯಗಳು: ಭಾರತ ಮತ್ತು ಅದರ ನೆರೆಹೊರೆಯ ದೇಶಗಳೊಂದಿಗಿನ ಸಂಬಂಧಗಳು.

ಪ್ಯಾಂಗಾಂಗ್ ತ್ಸೋ ಪ್ರದೇಶದಲ್ಲಿ ಗಡಿ ಬಿಕ್ಕಟ್ಟು ಶಮನಕ್ಕೆ ಸಮ್ಮತಿ:


ಸಂದರ್ಭ:  

ಪ್ಯಾಂಗಾಂಗ್ ತ್ಸೋ ಸರೋವರ ಪ್ರದೇಶದಲ್ಲಿ ಹಂತಹಂತವಾಗಿ, ಸಮನ್ವಯ ಮತ್ತು ಪರಿಶೀಲಿಸಿದ ರೀತಿಯಲ್ಲಿ ಮುಂಚೂಣಿ ಪ್ರದೇಶಗಳಲ್ಲಿರುವ ಪಡೆಗಳನ್ನು ಹಿಂತೆಗೆದುಕೊಳ್ಳಲು ಭಾರತ ಮತ್ತು ಚೀನಾದ ಎರಡೂ ಕಡೆಯವರು ಒಪ್ಪಂದ ಮಾಡಿಕೊಂಡಿದ್ದಾರೆ.

ladakh_1

ಒಪ್ಪಂದದ ಪ್ರಕಾರ:

 • ಚೀನಾದ ಕಡೆಯವರು ಫಿಂಗರ್ 8 ರ ಪೂರ್ವದ ಸರೋವರದ ಉತ್ತರದಂಡೆಯ ಭಾಗದಲ್ಲಿ ತಮ್ಮ ಮಿಲಿಟರಿ ಉಪಸ್ಥಿತಿಯನ್ನು ಕಾಯ್ದುಕೊಳ್ಳಲಿದ್ದಾರೆ.
 • ಇದಕ್ಕೆ ಪ್ರತಿಯಾಗಿ, ಭಾರತೀಯ ಸೇನೆಯು ಫಿಂಗರ್ 3 ಬಳಿಯ ತನ್ನ ಶಾಶ್ವತ ನೆಲೆ ‘ಧನ್ ಸಿಂಗ್ ಥಾಪಾ ಪೋಸ್ಟ್’ ನಲ್ಲಿ ಬೀಡುಬಿಡಲಿದೆ.
 • ಸರೋವರದ ದಕ್ಷಿಣ ಭಾಗದಲ್ಲಿ ಎರಡೂ ಕಡೆಯವರೂ ಇದೇ ರೀತಿಯ ಕ್ರಮ ಕೈಗೊಳ್ಳುತ್ತಾರೆ.
 • ಏಪ್ರಿಲ್ 2020 ರಿಂದ, ಈ ಪ್ರದೇಶದಲ್ಲಿ ನಿರ್ಮಿಸಲಾದ ಎಲ್ಲಾ ರಚನೆಗಳನ್ನು ತೆಗೆದುಹಾಕಲಾಗುತ್ತದೆ ಮತ್ತು ಮೊದಲಿನಂತೆ ಇಲ್ಲಿನ ಭೂಸ್ವರೂಪವನ್ನು ಪುನಃಸ್ಥಾಪಿಸಲಾಗುತ್ತದೆ.
 • ತಮ್ಮ ಸಾಂಪ್ರದಾಯಿಕ ಪ್ರದೇಶಗಳಲ್ಲಿ ಗಸ್ತು ತಿರುಗುವುದು ಸೇರಿದಂತೆ ಉತ್ತರದ ತೀರದಲ್ಲಿನ / ದಂಡೆಯಲ್ಲಿನ ಮಿಲಿಟರಿ ಚಟುವಟಿಕೆಗಳನ್ನು ತಾತ್ಕಾಲಿಕವಾಗಿ ನಿಷೇಧಿಸಲು ಎರಡೂ ಕಡೆಯವರು ಒಪ್ಪಿದ್ದಾರೆ.

standoff

ಈ ಪ್ರದೇಶವು ವಿವಾದಗ್ರಸ್ತವಾಗಿದೆ ಏಕೆ?

1962 ರಿಂದ ಭಾರತೀಯ ಮತ್ತು ಚೀನೀ ಸೈನಾ ಪಡೆಗಳನ್ನು ಬೇರ್ಪಡಿಸುವ ರೇಖೆಯಾದ – ವಾಸ್ತವ ನಿಯಂತ್ರಣ ರೇಖೆ (LAC) ಯು ಸಾಮಾನ್ಯವಾಗಿ ಪಾಂಗೊಂಗ್ ತ್ಸೋ (Pangong Tso)  ಸರೋವರದ ವಲಯವನ್ನು ಹೊರತುಪಡಿಸಿ ಭೂ ಗಡಿರೇಖೆಯ ಉದ್ದಕ್ಕೂ ಇದೆ. ಇಲ್ಲಿ, ನೀರಿನ ಮೂಲಕವೂ ಗಡಿಯನ್ನು ಗುರುತಿಸಲಾಗುತ್ತದೆ.

 • ಯಾವ ಪ್ರದೇಶ ಯಾರಿಗೆ ಸೇರಿದೆ ಎಂದು ಎರಡೂ ದೇಶದವರು ತಮ್ಮ ಪ್ರದೇಶಗಳನ್ನು ಗುರುತಿಸಿದ್ದಾರೆ.
 • ಭಾರತವು ಪಾಂಗೊಂಗ್ ತ್ಸೋ ವಲಯದ ಸುಮಾರು 45 ಕಿ.ಮೀ. ಪ್ರದೇಶವನ್ನು ನಿಯಂತ್ರಿಸಿದರೆ ಚೀನಾ ಉಳಿದ ಪ್ರದೇಶವನ್ನು ನಿಯಂತ್ರಿಸುತ್ತದೆ.

ಸರೋವರವನ್ನು ಬೆರಳುಗಳು ( fingers )  ಎಂಬ ವಿಭಾಗಗಳಾಗಿ ವಿಂಗಡಿಸಲಾಗಿದೆ:

ಪರ್ವತಗಳ ಮುಂಚಾಚು ಪ್ರದೇಶವನ್ನು ಫಿಂಗರ್‌ ಎಂದು ಕರೆಯಲಾಗುತ್ತಿದೆ”. 

 • ಅವುಗಳಲ್ಲಿ ಎಂಟು ವಿವಾದಗ್ರಸ್ಥವಾಗಿವೆ. LAC ಎಲ್ಲಿ ಹಾದುಹೋಗುತ್ತದೆ ಎಂಬುದರ ಬಗ್ಗೆ ಭಾರತ ಮತ್ತು ಚೀನಾ ವಿಭಿನ್ನ ತಿಳುವಳಿಕೆಯನ್ನು ಹೊಂದಿವೆ.
 • ಚೀನಾದ ಅಂತಿಮ ಮಿಲಿಟರಿ ಪೊಸ್ಟ್ ಆದ ಫಿಂಗರ್ 8 ಮೂಲಕ LAC ಹಾದುಹೋಗಲಿದೆ ಎಂದು ಭಾರತ ಹೇಳಿದೆ.
 • ಭಾರತವು ಈ ಭೂಪ್ರದೇಶದ ಸ್ವರೂಪದಿಂದಾಗಿ – ಫಿಂಗರ್ 8 ರವರೆಗಿನ ಪ್ರದೇಶದಲ್ಲಿ ಹೆಚ್ಚಾಗಿ ಕಾಲ್ನಡಿಗೆಯಲ್ಲಿ ಗಸ್ತು ತಿರುಗುತ್ತಿದೆ – ಆದರೆ ಭಾರತೀಯ ಪಡೆಗಳು ಫಿಂಗರ್ 4 ಅನ್ನು ಮೀರಿ ಸಕ್ರಿಯ ನಿಯಂತ್ರಣವನ್ನು ಹೊಂದಿಲ್ಲ.
 • ಮತ್ತೊಂದೆಡೆ, ಚೀನಾ LAC ಯು ಫಿಂಗರ್ 2 ಮೂಲಕ ಹಾದುಹೋಗುತ್ತದೆ ಎಂದು ಹೇಳುತ್ತದೆ. ಇದು ಹೆಚ್ಚಾಗಿ ಲಘು ವಾಹನಗಳಲ್ಲಿ ಫಿಂಗರ್ 4 ರವರೆಗೆ ಮತ್ತು ಕೆಲವೊಮ್ಮೆ ಫಿಂಗರ್ 2 ವರೆಗೆ ಗಸ್ತು ತಿರುಗುತ್ತದೆ.

ಪ್ಯಾಂಗೊಂಗ್ ತ್ಸೊಗೆ ಹೊಂದಿಕೊಂಡಿರುವ ಪ್ರದೇಶಗಳನ್ನು, ಚೀನಾ ಏಕೆ ಆಕ್ರಮಿಸಿಕೊಳ್ಳಲು ಬಯಸುತ್ತದೆ?

 • ಭಾರತ ಮತ್ತು ಚೀನಾ ನಡುವಿನ 1962 ರ ಯುದ್ಧದ ಸಮಯದಲ್ಲಿ ಮುಂಚೂಣಿ ಯುದ್ಧಭೂಮಿಯಲ್ಲಿ ಒಂದಾದ ಚುಸುಲ್ ಕಣಿವೆ (Chusul Valley) ಗೆ ಇದು ತುಂಬಾ ಹತ್ತಿರದಲ್ಲಿರುವುದರಿಂದ ಪಂಗೊಂಗ್ ತ್ಸೊ ತುಂಬಾ ಆಯಕಟ್ಟಿನ ಮತ್ತು ನಿರ್ಣಾಯಕ ಪ್ರದೇಶವಾಗಿದೆ.
 • LAC ಬಳಿ ಎಲ್ಲಿಯೂ ಭಾರತ ತನ್ನ ಮೂಲಸೌಕರ್ಯವನ್ನು ಹೆಚ್ಚಿಸಿಕೊಳ್ಳುವುದನ್ನು ಚೀನಾ ಬಯಸುವುದಿಲ್ಲ.ಅಕ್ಸಾಯ್ ಚಿನ್ ಮತ್ತು ಲಾಸಾ-ಕಾಶ್ಗರ್ ಹೆದ್ದಾರಿಯನ್ನು (Aksai Chin and Lhasa-Kashgar highway) ಭಾರತವು ಆಕ್ರಮಿಸಿಕೊಳ್ಳುವ ಅಪಾಯವಿದೆ ಎಂಬುದು ಚೀನಾದ ಆತಂಕವಾಗಿದೆ.
 • ಈ ಹೆದ್ದಾರಿಗೆ ಎದುರಾಗುವ ಯಾವುದೇ ಬೆದರಿಕೆಯು ಪಾಕಿಸ್ತಾನ ಆಕ್ರಮಿತ ಪ್ರದೇಶಗಳಾದ ಲಡಾಖ್ ಮತ್ತು ಜಮ್ಮು ಮತ್ತು ಕಾಶ್ಮೀರಗಳಲ್ಲಿ ಮತ್ತು ಪಾಕಿಸ್ತಾನದ ಆಚೆಗೂ ಸಹ ಚೀನಾದ ಸಾಮ್ರಾಜ್ಯಶಾಹಿ ಯೋಜನೆಗಳಿಗೆ ಬೆದರಿಕೆಯೊಡ್ಡ ಬಲ್ಲದ್ದಾಗಿದೆ.

 About Pangong Tso: ಪ್ಯಾಂಗೊಂಗ್ ತ್ಸೊ ಕುರಿತುಃ

 • ಪ್ಯಾಂಗೊಂಗ್ ತ್ಸೊ ಎಂದರೆ ಅಕ್ಷರಶಃ “ಕಾನ್ಕ್ಲೇವ್ ಸರೋವರ” (conclave lake) ಎಂದಾಗುತ್ತದೆ.
 • 14,000 ಅಡಿಗಳಷ್ಟು ಎತ್ತರವಿರುವ ಈ ಸರೋವರವು ಸುಮಾರು 135 ಕಿ.ಮೀ. ವಿಸ್ತೀರ್ಣ ಹೊಂದಿದೆ.
 • ಇದು ಟೆಥಿಸ್ ಜಿಯೋಸಿಂಕ್ಲೈನ್‌ನಿಂದ (Tethys geosyncline) ರೂಪುಗೊಂಡಿದೆ.
 • ಕಾರಕೋರಂ ಪರ್ವತ ಶ್ರೇಣಿ ಯು ಪಂಗೊಂಗ್ ತ್ಸೊದ ಉತ್ತರ ದಂಡೆಯಲ್ಲಿ ಕೊನೆಗೊಳ್ಳುತ್ತದೆ.
 • ವಿಶ್ವದ ಎರಡನೇ ಅತಿ ಎತ್ತರದ ಶಿಖರವಾದ ಕೆ 2 ಸೇರಿದಂತೆ 6,000 ಮೀಟರ್‌ಗಿಂತಲೂ ಹೆಚ್ಚು ಎತ್ತರದ ಬೆಟ್ಟಗಳನ್ನು ಒಳಗೊಂಡಿರುವ ಕಾರಕೋರಂ ಪರ್ವತ ಶ್ರೇಣಿ ಯು, ತಜಕಿಸ್ತಾನ, ಅಫ್ಘಾನಿಸ್ತಾನ, ಪಾಕಿಸ್ತಾನ, ಚೀನಾ ಮತ್ತು ಭಾರತದ ಮೂಲಕ ಹಾದುಹೋಗುವ ಪಾಂಗೊಂಗ್ ತ್ಸೊದ ಉತ್ತರ ತುದಿಯಲ್ಲಿ ಕೊನೆಗೊಳ್ಳುತ್ತದೆ.
 • ಇದರ ದಕ್ಷಿಣದ ದಂಡೆಯಲ್ಲಿನ, ಸ್ಪಂಗೂರ್ ಸರೋವರದ (Spangur Lake) ದಕ್ಷಿಣದ ಕಡೆಗೆ ಇಳಿಜಾರು ಹೊಂದಿದ ಎತ್ತರದ ಮುರಿದ ಪರ್ವತಗಳಿವೆ.
 • ಪ್ಯಾಂಗಾಂಗ್ ತ್ಸೋ ಸರೋವರದ ದಕ್ಷಿಣದ ದಂಡೆಯ ಬಯಲಿನಂತೆ ಇದೆ. ಆದರೆ ಸರೋವರದ ಉತ್ತರ ದಂಡೆಯ ಸಮತಟ್ಟಾದ ನೆಲವಲ್ಲ. ಬದಲಿಗೆ ಹಲವು ಪರ್ವತಗಳ ಇಳಿಜಾರುಗಳು ಸರೋವರದ ಅಂಚಿನಲ್ಲಿ ನೆಲಮುಟ್ಟುತ್ತವೆ. ಇಳಿಜಾರುಗಳು ಸರೋವರದ ಒಳಗೂ ಚಾಚಿವೆ. ಇವನ್ನು ಫಿಂಗರ್ ಗಳು ಎಂದು ಕರೆಯಲಾಗುತ್ತದೆ ಸರೋವರದ ಪ್ರದೇಶದಲ್ಲಿ ಇಂತಹ 8 ಫಿಂಗರ್ ಗಳಿವೆ.

 

ವಿಷಯಗಳು: ಪ್ರಮುಖ ಅಂತರರಾಷ್ಟ್ರೀಯ ಸಂಸ್ಥೆಗಳು, ಏಜೆನ್ಸಿಗಳು ಮತ್ತು ವೇದಿಕೆಗಳು, ಅವುಗಳ ರಚನೆ, ಮತ್ತು ಆದೇಶ.

ಅಂತರರಾಷ್ಟ್ರೀಯ ಇಂಧನ ಸಂಸ್ಥೆ: (IEA)


International Energy Agency:

ಸಂದರ್ಭ:

ಇತ್ತೀಚೆಗೆ, ‘ಭಾರತದ ಇಂಧನ ಮುನ್ನೋಟ ವರದಿ 2021′ ಅನ್ನು (‘ಇಂಡಿಯಾ ಎನರ್ಜಿ ಔಟ್ಲುಕ್ 2021’) ವರದಿಯನ್ನು ಅಂತರರಾಷ್ಟ್ರೀಯ ಇಂಧನ ಸಂಸ್ಥೆ- IEA ಬಿಡುಗಡೆ ಮಾಡಿದೆ.

ಪ್ರಮುಖ ಸಂಶೋಧನೆಗಳು:

 • ಮುಂದಿನ ಎರಡು ದಶಕಗಳಲ್ಲಿ, ಭಾರತದ ಇಂಧನ ಬೇಡಿಕೆಯು 25% ರಷ್ಟು ಹೆಚ್ಚಾಗುತ್ತದೆ ಮತ್ತು ಇದು ಶಕ್ತಿಯ ಬೇಡಿಕೆಯ ಅತಿದೊಡ್ಡ ಪಾಲು ಆಗಿರುತ್ತದೆ, 2030 ರ ವೇಳೆಗೆ ಯುರೋಪಿಯನ್ ಒಕ್ಕೂಟವನ್ನು ಹಿಂದಿಕ್ಕುವ ಮೂಲಕ ವಿಶ್ವದ ಮೂರನೇ ಅತಿದೊಡ್ಡ ಇಂಧನ ಗ್ರಾಹಕ ದೇಶವಾಗಲಿದೆ ಭಾರತ.
 • ಭಾರತದ ಪ್ರಸ್ತುತ ರಾಷ್ಟ್ರೀಯ ನೀತಿ ಸನ್ನಿವೇಶದಲ್ಲಿ, ದೇಶದ ಒಟ್ಟು ದೇಶೀಯ ಉತ್ಪನ್ನವು (GDP) 2040 ರ ವೇಳೆಗೆ 6 ಟ್ರಿಲಿಯನ್ $(ಡಾಲರ್) ಆಗಲಿದೆ ಎಂದು ಅಂದಾಜಿಸಲಾಗಿದೆ, ಈ ಕಾರಣದಿಂದಾಗಿ, ಭಾರತದ ಇಂಧನ ಬಳಕೆ ಸುಮಾರು ದ್ವಿಗುಣಗೊಳ್ಳುವ ನಿರೀಕ್ಷೆಯಿದೆ.
 • ಭಾರತದ ಹೆಚ್ಚುತ್ತಿರುವ ಇಂಧನ ಅಗತ್ಯಗಳು ದೇಶವನ್ನು ಪಳೆಯುಳಿಕೆ ಇಂಧನ ಆಮದಿನ ಮೇಲೆ ಹೆಚ್ಚು ಅವಲಂಬಿತವಾಗುವಂತೆ ಮಾಡುತ್ತದೆ, ಕಾರಣ ಪೆಟ್ರೋಲಿಯಂ ಪರಿಶೋಧನೆ ಮತ್ತು ಉತ್ಪಾದನೆ ಮತ್ತು ನವೀಕರಿಸಬಹುದಾದ ಇಂಧನವನ್ನು ಉತ್ತೇಜಿಸುವ ಸರ್ಕಾರದ ನೀತಿಗಳ ಹೊರತಾಗಿಯೂ, ದೇಶೀಯ ತೈಲ ಮತ್ತು ಅನಿಲ ಉತ್ಪಾದನೆಯಲ್ಲಿ ಈ ಹಿಂದಿನ ವರ್ಷಗಳಲ್ಲಿ ಯಾವುದೇ ಪ್ರಗತಿ ಕಂಡುಬಂದಿಲ್ಲ.
 • ಅಂತರರಾಷ್ಟ್ರೀಯ ಇಂಧನ ಸಂಸ್ಥೆ (ಐಇಎ) ಪ್ರಕಾರ, ಭಾರತದ ತೈಲ ಬೇಡಿಕೆಯು 2019 ರಲ್ಲಿ ದಿನಕ್ಕೆ 5 ಮಿಲಿಯನ್ ಬ್ಯಾರೆಲ್‌ಗಳಿಂದ (ಬಿಪಿಡಿ) 2040 ರಲ್ಲಿ ದಿನಕ್ಕೆ 8.7 ಮಿಲಿಯನ್ ಬ್ಯಾರೆಲ್‌ಗೆ ಏರಿಕೆಯಾಗುವ ನಿರೀಕ್ಷೆಯಿದೆ. ಮತ್ತು, ಅದರ ಸಂಸ್ಕರಣಾ ಸಾಮರ್ಥ್ಯವು 2019 ರಲ್ಲಿ ದಿನಕ್ಕೆ 5 ಮಿಲಿಯನ್ ಬ್ಯಾರೆಲ್‌ಗಳಿಂದ 2030 ರ ಹೊತ್ತಿಗೆ ದಿನಕ್ಕೆ 6.4 ಮಿಲಿಯನ್ ಬ್ಯಾರೆಲ್‌ಗಳಿಗೆ ಮತ್ತು 2040 ರ ವೇಳೆಗೆ ದಿನಕ್ಕೆ 7.7 ಮಿಲಿಯನ್ ಬ್ಯಾರೆಲ್‌ಗಳಿಗೆ ತಲುಪಲಿದೆ.
 • ಚೀನಾದ ನಂತರ ವಿಶ್ವದ ಎರಡನೇ ಅತಿದೊಡ್ಡ ನಿವ್ವಳ ತೈಲ ಆಮದುದಾರ ದೇಶವಾದ ಭಾರತದ, ಪ್ರಸ್ತುತ ತನ್ನ ಕಚ್ಚಾ ತೈಲ ಅಗತ್ಯಗಳಲ್ಲಿ ಸುಮಾರು 76% ನಷ್ಟು ಆಮದು ಮಾಡಿಕೊಳ್ಳುತ್ತಿದೆ ಮತ್ತು ವಿದೇಶಿ ತೈಲದ ಮೇಲಿನ ಅವಲಂಬನೆಯು 2030 ರ ವೇಳೆಗೆ 90% ಮತ್ತು 2040 ರ ವೇಳೆಗೆ 92% ಆಗುವ ನಿರೀಕ್ಷೆಯಿದೆ.
 • ಹೆಚ್ಚುತ್ತಿರುವ ತೈಲ ಬೇಡಿಕೆಯಿಂದಾಗಿ, ಭಾರತದ ತೈಲ ಆಮದು ವೆಚ್ಚವು 2030 ರ ವೇಳೆಗೆ ಸುಮಾರು 1181 ಶತಕೋಟಿಗೆ ಮತ್ತು 2019 ಕ್ಕೆ ಹೋಲಿಸಿದರೆ 2040 ರ ವೇಳೆಗೆ 5255 ಶತಕೋಟಿಗೆ ತಲುಪಬಹುದು.

ಅಂತಾರಾಷ್ಟ್ರೀಯ ಇಂಧನ ಸಂಸ್ಥೆಯ ಕುರಿತು :

 • ಅಂತಾರಾಷ್ಟ್ರೀಯ ಇಂಧನ ಸಂಸ್ಥೆಯು (IEA) ಅಂತರ್ ಸರ್ಕಾರಿ ಸ್ವಾಯತ್ತ ಸಂಸ್ಥೆಯಾಗಿದ್ದು ಇದನ್ನು ಆರ್ಥಿಕ ಸಹಕಾರ ಮತ್ತು ಅಭಿವೃದ್ಧಿಗಾಗಿನ ಸಂಘಟನೆಯ (Organisation of Economic Cooperation and Development- OECD) ಫ್ರೇಮ್ವರ್ಕ್ ಪ್ರಕಾರ ಇದನ್ನು 1974 ರಲ್ಲಿ ಸ್ಥಾಪಿಸಲಾಯಿತು.
 • ಅದರ ಕಾರ್ಯೋದ್ದೇಶವು ಮುಖ್ಯವಾಗಿ ನಾಲ್ಕು ಪ್ರಮುಖ ಕ್ಷೇತ್ರಗಳ ಮೇಲೆ ಕೇಂದ್ರೀಕರಿಸಿದೆ: ಇಂಧನ ಸುರಕ್ಷತೆ, ಆರ್ಥಿಕ ಅಭಿವೃದ್ಧಿ, ಪರಿಸರ ಜಾಗೃತಿ ಮತ್ತು ಜಾಗತಿಕ ಭಾಗವಹಿಸುವಿಕೆ.
 • ಇದರ ಪ್ರಧಾನ ಕಚೇರಿಯು ( ಸಚಿವಾಲಯ) ಫ್ರಾನ್ಸ್‌ನ ಪ್ಯಾರಿಸ್‌ನಲ್ಲಿದೆ.

 ಅದರ ಪಾತ್ರಗಳು ಮತ್ತು ಕಾರ್ಯಗಳು:

 • 1973-1974ರ ತೈಲ ಬಿಕ್ಕಟ್ಟಿನ ಸಂದರ್ಭದಲ್ಲಿ ಅದರ ಸದಸ್ಯರಿಗೆ ಪ್ರಮುಖ ತೈಲ ಪೂರೈಕೆ ಅಡಚಣೆ ಗಳಿಗೆ ಸ್ಪಂದಿಸಲು ಅಂತರರಾಷ್ಟ್ರೀಯ ಇಂಧನ ಏಜೆನ್ಸಿಯನ್ನು ಸ್ಥಾಪಿಸಲಾಯಿತು. ಅದು ಇಂದಿಗೂ ತನ್ನ ಪಾತ್ರವನ್ನು ನಿರ್ವಹಿಸುತ್ತಿದೆ.
 • ಜಾಗತಿಕವಾಗಿ ಪ್ರಮುಖ ಇಂಧನ ಪ್ರವೃತ್ತಿಗಳನ್ನು ಪತ್ತೆಹಚ್ಚುವುದು ಮತ್ತು ವಿಶ್ಲೇಷಿಸುವುದು, ಬಲವಾದ ಇಂಧನ ನೀತಿಗಳನ್ನು ಉತ್ತೇಜಿಸುವುದು ಮತ್ತು ಬಹುರಾಷ್ಟ್ರೀಯ ಇಂಧನ ತಂತ್ರಜ್ಞಾನ ಸಹಕಾರವನ್ನು ಉತ್ತೇಜಿಸಲು ಅಂತರರಾಷ್ಟ್ರೀಯ ಇಂಧನ ಸಂಸ್ಥೆ (IEA) ಆದೇಶವು ಕಾಲಾನಂತರದಲ್ಲಿ ವಿಸ್ತರಿಸಿದೆ.

IEA ಸಂಯೋಜನೆ ಮತ್ತು ಸದಸ್ಯತ್ವದ ಅರ್ಹತೆ:

Composition and eligibility:

 • ಅಂತರರಾಷ್ಟ್ರೀಯ ಇಂಧನ ಸಂಸ್ಥೆ ಪ್ರಸ್ತುತ 30 ಸದಸ್ಯ ರಾಷ್ಟ್ರಗಳು ಮತ್ತು ಎಂಟು ಪಾಲುದಾರ ರಾಷ್ಟ್ರಗಳನ್ನು ಒಳಗೊಂಡಿದೆ. ಸದಸ್ಯರಾಗಲು, ದೇಶವೊಂದು ಆರ್ಥಿಕ ಸಹಕಾರ ಮತ್ತು ಅಭಿವೃದ್ಧಿ ಸಂಸ್ಥೆ (OECD) ಯಲ್ಲಿ ಸದಸ್ಯರಾಗುವುದು ಕಡ್ಡಾಯವಾಗಿದೆ. ಆದಾಗ್ಯೂ OECD ಯ ಎಲ್ಲಾ ಸದಸ್ಯರು IEA ಸದಸ್ಯರಲ್ಲ.
 • ಅಂತರರಾಷ್ಟ್ರೀಯ ಇಂಧನ ಏಜೆನ್ಸಿಯ ಸದಸ್ಯತ್ವಕ್ಕಾಗಿ ಒಂದು ದೇಶವು ಈ ಕೆಳಗಿನ ಷರತ್ತುಗಳನ್ನು ಪೂರೈಸಬೇಕು:
 • ಹಿಂದಿನ ವರ್ಷದ 90 ದಿನಗಳಲ್ಲಿ ಮಾಡಿದ ನಿವ್ವಳ ಆಮದಿಗೆ ಸಮನಾದ ಕಚ್ಚಾ ತೈಲ ಮತ್ತು / ಅಥವಾ ಉತ್ಪನ್ನ ನಿಕ್ಷೇಪಗಳನ್ನು ದೇಶದ ಸರ್ಕಾರವು ಹೊಂದಿರಬೇಕು. ಇವು ನೇರವಾಗಿ ಸರ್ಕಾರದ ಒಡೆತನದಲ್ಲಿಲ್ಲದಿದ್ದರೂ, ಜಾಗತಿಕ ತೈಲ ಪೂರೈಕೆಯಲ್ಲಿನ ಅಡೆತಡೆಯನ್ನು ನಿವಾರಿಸಲು ಇದನ್ನು ಬಳಸಬಹುದು.
 • ದೇಶದಲ್ಲಿ ರಾಷ್ಟ್ರೀಯ ತೈಲ ಬಳಕೆಯನ್ನು 10% ರಷ್ಟು ಕಡಿಮೆ ಮಾಡಲು ‘ಬೇಡಿಕೆ ನಿಯಂತ್ರಣ ಕಾರ್ಯಕ್ರಮ’ ವನ್ನು ಜಾರಿಗೆ ತರಬೇಕು.
 • ರಾಷ್ಟ್ರೀಯ ಆಧಾರಿತವಾಗಿ ಸಂಘಟಿತ ತುರ್ತು ಪ್ರತಿಕ್ರಿಯೆ ಕ್ರಮಗಳನ್ನು (Co-ordinated Emergency Response Measures- CERM) ಜಾರಿಗೆ ತರಲು ಶಾಸನ ಸಂಸ್ಥೆಗಳು ಇರಬೇಕು.
 • ಕೋರಿಕೆಯ ಮೇರೆಗೆ, ದೇಶದ ವ್ಯಾಪ್ತಿಯಲ್ಲಿ ಕೆಲಸ ಮಾಡುವ ಎಲ್ಲಾ ತೈಲ ಕಂಪನಿಗಳು ಮಾಹಿತಿ ನೀಡುತ್ತಿವೆಯೇ ಎಂದು ಖಚಿತಪಡಿಸಿಕೊಳ್ಳಲು ಕಾನೂನು ಕ್ರಮಗಳು ಇರಬೇಕು.
 • ಅಂತರರಾಷ್ಟ್ರೀಯ ಇಂಧನ ಏಜೆನ್ಸಿಯ ಸಾಮೂಹಿಕ ಕ್ರಮಕ್ಕೆ ಅದರ ಕೊಡುಗೆ ನೀಡುವುದನ್ನು ಖಚಿತಪಡಿಸಿಕೊಳ್ಳಲು ದೇಶದಲ್ಲಿ ಕಾನೂನುಗಳು ಅಥವಾ ಕ್ರಮಗಳು ಇರಬೇಕು.

ಅಂತರರಾಷ್ಟ್ರೀಯ ಇಂಧನ ಸಂಸ್ಥೆ ಪ್ರಕಟಿಸುವ ವರದಿಗಳು:

 • ಜಾಗತಿಕ ಇಂಧನ ಮತ್ತು ಇಂಗಾಲದ ಡೈ ಆಕ್ಸೈಡ್ (CO2) ಸ್ಥಿತಿ ವರದಿ.

Global Energy & CO2 Status Report.

 • ವಿಶ್ವ ಇಂಧನ ಮುನ್ನೋಟ.

World Energy Outlook.

 • ವಿಶ್ವ ಇಂಧನ ಅಂಕಿಅಂಶಗಳು.

World Energy Statistics.

 • ವಿಶ್ವ ಇಂಧನ ಸಮತೋಲನ.

World Energy Balances.

 • ಇಂಧನ ತಂತ್ರಜ್ಞಾನದ ದೃಷ್ಟಿಕೋನಗಳು.

Energy Technology Perspectives.

 


ಸಾಮಾನ್ಯ ಅಧ್ಯಯನ ಪತ್ರಿಕೆ – 3


 

ವಿಷಯಗಳು: ಅಂತರ್ಗತ ಬೆಳವಣಿಗೆ ಮತ್ತು ಅದರಿಂದ ಉಂಟಾಗುವ ಸಮಸ್ಯೆಗಳು.

ಬ್ಯಾಂಕುಗಳ ಖಾಸಗೀಕರಣಗೊಳಿಸುವ ಪ್ರಕ್ರಿಯೆಗೆ ಚಾಲನೆ: ಏನಿದು ಪ್ರಸ್ತಾಪ? ಕಾಳಜಿಯ ವಿಷಯಗಳು ಯಾವುವು? :


ಸಂದರ್ಭ:

ಇತ್ತೀಚೆಗೆ ಮಂಡಿಸಲಾದ ಕೇಂದ್ರ ಬಜೆಟ್‌ನಲ್ಲಿ, ಈ ಹಣಕಾಸು ವರ್ಷದಲ್ಲಿ ಎರಡು ಸಾರ್ವಜನಿಕ ವಲಯದ ಬ್ಯಾಂಕುಗಳನ್ನು ಖಾಸಗೀಕರಣಗೊಳಿಸಲು ಪ್ರಸ್ತಾಪಿಸಲಾಗಿದೆ.

ಅಗತ್ಯತೆ:

 • ಬಂಡವಾಳ ಹರಿವು ಮತ್ತು ಆಡಳಿತ ಸುಧಾರಣೆಗಳನ್ನು ಹಲವು ವರ್ಷಗಳಿಂದ ಒದಗಿಸಲಾಗಿದ್ದರೂ, ಸಾರ್ವಜನಿಕ ವಲಯದ ಬ್ಯಾಂಕುಗಳ ಆರ್ಥಿಕ ಸ್ಥಿತಿಯಲ್ಲಿ ಗಮನಾರ್ಹ ಸುಧಾರಣೆ ಕಂಡುಬಂದಿಲ್ಲ.
 • ಈ ಬ್ಯಾಂಕುಗಳಲ್ಲಿ ಹೆಚ್ಚಿನವು ಖಾಸಗಿ ಬ್ಯಾಂಕುಗಳಿಗಿಂತ ಹೆಚ್ಚಿನ ಪ್ರಮಾಣದ ಒತ್ತಡದ ಸ್ವತ್ತುಗಳನ್ನು (stressed assets) ಹೊಂದಿವೆ, ಮತ್ತು ಲಾಭ, ಮಾರುಕಟ್ಟೆ ಬಂಡವಾಳೀಕರಣ, ಲಾಭಾಂಶ ಪಾವತಿ ದಾಖಲೆಗಳಲ್ಲಿ ಖಾಸಗಿ ಬ್ಯಾಂಕುಗಳಿಗಿಂತ ಬಹಳ ಹಿಂದಿವೆ.
 • ಸರ್ಕಾರವು 2019 ರ ಸೆಪ್ಟೆಂಬರ್‌ನಲ್ಲಿ ಸರ್ಕಾರಿ ಬ್ಯಾಂಕುಗಳಿಗೆ 70,000 ಕೋಟಿ ರೂ.ಗಳನ್ನು, ಹಣಕಾಸು ವರ್ಷ 2018 ರಲ್ಲಿ 80,000 ಕೋಟಿ ರೂ., ಮತ್ತು ಮರು ಬಂಡವಾಳೀಕರಣದ ಬಾಂಡ್‌ಗಳ ಮೂಲಕ ಹಣಕಾಸು ವರ್ಷ 2019 ರಲ್ಲಿ 1.06 ಲಕ್ಷ ಕೋಟಿ ರೂ.ಗಳನ್ನು ನೀಡಿತು. 2019 ರಲ್ಲಿ ಹತ್ತು ಸಾರ್ವಜನಿಕ ವಲಯದ ಬ್ಯಾಂಕುಗಳನ್ನು ಸರ್ಕಾರವು ನಾಲ್ಕು ಬ್ಯಾಂಕ್‌ಗಳಾಗಿ ವಿಲೀನಗೊಳಿಸಿತು.

ಸರ್ಕಾರದ ಈ ನಿರ್ಧಾರದ ಮಹತ್ವ ಮತ್ತು ಪರಿಣಾಮಗಳು:

 • ಎರಡು ಸಾರ್ವಜನಿಕ ವಲಯದ ಬ್ಯಾಂಕುಗಳ ಖಾಸಗೀಕರಣವು ದೀರ್ಘಾವಧಿಯ ಯೋಜನೆಯನ್ನು ಪ್ರಾರಂಭಿಸುತ್ತದೆ, ಅದರ ಅಡಿಯಲ್ಲಿ ಕೆಲವೇ ಬ್ಯಾಂಕುಗಳು ಮಾತ್ರ ಸರ್ಕಾರಿ ಸ್ವಾಮ್ಯದಲ್ಲಿ ಉಳಿಯುತ್ತವೆ ಮತ್ತು ಉಳಿದ ಬ್ಯಾಂಕುಗಳನ್ನು ವಿಲೀನಗೊಳಿಸಲಾಗುತ್ತದೆ ಅಥವಾ ಬಲಿಷ್ಟವಾದ ಬ್ಯಾಂಕುಗಳಾಗಿ ಖಾಸಗೀಕರಣಗೊಳಿಸಲಾಗುತ್ತದೆ.
 • ಇದು, ಬ್ಯಾಂಕುಗಳಲ್ಲಿ ಬಹುಪಾಲು ಪಾಲನ್ನು ಹೊಂದಿರುವ ಸರ್ಕಾರವನ್ನು ವರ್ಷದಿಂದ ವರ್ಷಕ್ಕೆ ಬ್ಯಾಂಕುಗಳಿಗೆ ಈಕ್ವಿಟಿ ಬೆಂಬಲವನ್ನು ನೀಡುವುದರಿಂದ ಮುಕ್ತಗೊಳಿಸುತ್ತದೆ.

ಸಾರ್ವಜನಿಕ ವಲಯದ ಬ್ಯಾಂಕುಗಳು ಎದುರಿಸುತ್ತಿರುವ ಸಮಸ್ಯೆಗಳು:

 • ಖಾಸಗಿ ಬ್ಯಾಂಕುಗಳಿಗೆ ಹೋಲಿಸಿದರೆ, ಸಾರ್ವಜನಿಕ ವಲಯದ ಬ್ಯಾಂಕುಗಳು ಹೆಚ್ಚಿನ ವಸೂಲಾಗದ ಸಾಲದ ಪ್ರಮಾಣವನ್ನು (Non-Performing Assets- NPAs) ಹೊಂದಿವೆ ಮತ್ತು ಒತ್ತಡದ ಸ್ವತ್ತುಗಳನ್ನು ಹೊಂದಿವೆ, ಆದರೂ ಅವು ಕ್ಷೀಣಿಸಲು ಪ್ರಾರಂಭಿಸಿವೆ.
 • ಕೋವಿಡ್ ಸಂಬಂಧಿತ ನಿಯಂತ್ರಕ ಕ್ರಮಗಳ ಅವಧಿ ಮುಗಿದ ನಂತರ, ಸರ್ಕಾರವು ಸಾರ್ವಜನಿಕ ವಲಯದ ಬ್ಯಾಂಕುಗಳಿಗೆ ಈಕ್ವಿಟಿಯನ್ನು ಪುನಃ ಹರಿಸುವ ಅಗತ್ಯವಿದೆ.

ಬ್ಯಾಂಕುಗಳ ರಾಷ್ಟ್ರೀಕರಣ:

(Nationalisation of Banks):

ಜುಲೈ 19, 1969 ರಂದು ಹಣಕಾಸು ಮಂತ್ರಿಗಳು ಆಗಿದ್ದ ಅಂದಿನ ಪ್ರಧಾನ ಮಂತ್ರಿ ಇಂದಿರಾ ಗಾಂಧಿ ಅವರು 14 ದೊಡ್ಡ ಖಾಸಗಿ ಬ್ಯಾಂಕುಗಳನ್ನು ರಾಷ್ಟ್ರೀಕರಣಗೊಳಿಸಲು ನಿರ್ಧರಿಸಿದರು. ಈ ನಿರ್ಧಾರದ ಉದ್ದೇಶ ಬ್ಯಾಂಕಿಂಗ್ ಕ್ಷೇತ್ರವನ್ನು ಅಂದಿನ ಸರ್ಕಾರದ ಸಮಾಜವಾದಿ ದೃಷ್ಟಿಕೋನದೊಂದಿಗೆ ಜೋಡಿಸುವುದು. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾವನ್ನು 1955 ರಲ್ಲಿ ರಾಷ್ಟ್ರೀಕರಿಸಲಾಯಿತು, ಮತ್ತು ವಿಮಾ ಕ್ಷೇತ್ರವನ್ನು 1965 ರಲ್ಲಿ ರಾಷ್ಟ್ರೀಕರಿಸಲಾಯಿತು.

ಸಾರ್ವಜನಿಕ ಬ್ಯಾಂಕುಗಳಲ್ಲಿನ ಸರ್ಕಾರದ ಪಾಲನ್ನು 51% ಕ್ಕಿಂತ ಕಡಿಮೆ ಮಾಡಲು ಹಲವಾರು ಸಮಿತಿಗಳು ಪ್ರಸ್ತಾಪಿಸಿವೆ:

 • ಸರಕಾರಿ ಪಾಲನ್ನು 33% ಕ್ಕೆ ಇಳಿಸಲು ನರಸಿಂಹಂ ಸಮಿತಿ ಮತ್ತು ಸರ್ಕಾರದ ಪಾಲನ್ನು 50% ಕ್ಕಿಂತ ಕಡಿಮೆ ಮಾಡಲು ಪಿ ಜೆ ನಾಯಕ್ ಸಮಿತಿಗಳು ಸೂಚಿಸಿವೆ.

next_gen_PSB

 

ವಿಷಯಗಳು: ಮಾಹಿತಿ ತಂತ್ರಜ್ಞಾನ, ಬಾಹ್ಯಾಕಾಶ, ಕಂಪ್ಯೂಟರ್, ರೊಬೊಟಿಕ್ಸ್, ನ್ಯಾನೊ-ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ ಮತ್ತು ಬೌದ್ಧಿಕ ಆಸ್ತಿ ಹಕ್ಕುಗಳಿಗೆ ಸಂಬಂಧಿಸಿದ ವಿಷಯಗಳ ಬಗ್ಗೆ ಜಾಗೃತಿ.

ಭಾರತದಲ್ಲಿ 5 ಜಿ ತಂತ್ರಜ್ಞಾನದ ಕುರಿತು ಸಂಸದೀಯ ಸಮಿತಿಯ ವರದಿ:


ವರದಿಯ ಪ್ರಮುಖ ಆವಿಷ್ಕಾರಗಳು:

 • ಆಗಸ್ಟ್ 2018 ರ ಆರಂಭದಲ್ಲಿ 5 ಜಿ ತಂತ್ರಜ್ಞಾನಕ್ಕಾಗಿ ಭಾರತವನ್ನು ಸಿದ್ಧಪಡಿಸಲು ತೆಗೆದುಕೊಳ್ಳಬೇಕಾದ ಕ್ರಮಗಳ ಕುರಿತು ದೂರಸಂಪರ್ಕ ಇಲಾಖೆ- (Department of Telecommunications- DoT) ವರದಿಯನ್ನು ಮಂಡಿಸಿದೆ, ಇದರ ಹೊರತಾಗಿಯೂ, ವಾಸ್ತವದಲ್ಲಿ, ಬಹಳ ಕಡಿಮೆ ಪ್ರಗತಿ ಸಾಧಿಸಲಾಗಿದೆ.
 • ಸವಾಲುಗಳು: ವಿವಿಧ ಸ್ಪೆಕ್ಟ್ರಮ್ (ತರಂಗಾಂತರ) ಸಂಬಂಧಿತ ಅನುಮೋದನೆಗಳ ಕೊರತೆ, ಹರಾಜು ಅನಿಶ್ಚಿತತೆ, ಸ್ಪೆಕ್ಟ್ರಮ್‌ನ ಹೆಚ್ಚಿನ ಮೀಸಲು ಬೆಲೆ, ಪರೀಕ್ಷಾ ಪ್ರಕರಣಗಳ ಅಸಮರ್ಪಕ ಮತ್ತು ಕಳಪೆ ಅಭಿವೃದ್ಧಿ, ಆಪ್ಟಿಕಲ್ ಫೈಬರ್‌ನ ಕಡಿಮೆ ವಿಸ್ತರಣೆ ಮತ್ತು ಭಾರತದಾದ್ಯಂತ ಅಪೂರ್ಣ ಬ್ಯಾಕ್‌ಹೋಲ್ (backhaul capacity) ಸಾಮರ್ಥ್ಯ.

ಏನು ಮಾಡುವುದು?

 • ಭಾರತವು, 5 ಜಿ ನೆಟ್‌ವರ್ಕ್‌ ನಿಯೋಜನೆಯಲ್ಲಿ ಮುಂಚೂಣಿಯಲ್ಲಿರುವ ದೇಶಗಳೊಂದಿಗೆ ಸ್ಪರ್ಧಿಸಲು ಮತ್ತು ಸ್ಪೆಕ್ಟ್ರಮ್ ಹರಾಜು, ಬ್ಯಾಕ್‌ಹಾಲ್ ಸಾಮರ್ಥ್ಯ, ಬೆಲೆಗಳು ಮತ್ತು ಬಳಕೆದಾರ-ಪರೀಕ್ಷಾ ಪ್ರಕರಣಗಳಂತಹ ಸಮಸ್ಯೆಗಳನ್ನು ಪರಿಹರಿಸಲು ಅದು ತನ್ನ ಅನುಮೋದನೆ ಪ್ರಕ್ರಿಯೆಯನ್ನು ಚುರುಕುಗೊಳಿಸಬೇಕು.
 • ಸ್ಪೆಕ್ಟ್ರಮ್ ತರಂಗಗಳ ಹಂಚಿಕೆಯನ್ನು ನಿರ್ಧರಿಸಲು ದೂರಸಂಪರ್ಕ ಇಲಾಖೆಯು (DoT) ಬಾಹ್ಯಾಕಾಶ ಇಲಾಖೆ ಮತ್ತು ರಕ್ಷಣಾ ಸಚಿವಾಲಯದೊಂದಿಗೆ ತ್ವರಿತ ಸಮನ್ವಯವನ್ನು ಸ್ಥಾಪಿಸಬೇಕು.

5G ಎಂದರೇನು?

 • 5G ತಂತ್ರಜ್ಞಾನವು ಮುಂದಿನ ಪೀಳಿಗೆಯ ಮೊಬೈಲ್ ಬ್ರಾಡ್‌ಬ್ಯಾಂಡ್ ಆಗಿದೆ. ಈ ತಂತ್ರಜ್ಞಾನವು ಅಂತಿಮವಾಗಿ 4ಜಿ ಎಲ್‌ಟಿಇ ಸಂಪರ್ಕಗಳನ್ನು ಬದಲಾಯಿಸುತ್ತದೆ ಅಥವಾ ಗಮನಾರ್ಹವಾಗಿ ಹೆಚ್ಚಿಸುತ್ತದೆ.
 • 5G ಸೂಪರ್ ಫಾಸ್ಟ್ ಡೌನ್‌ಲೋಡ್ ಮತ್ತು ಅಪ್‌ಲೋಡ್ ವೇಗವನ್ನು ನೀಡುತ್ತದೆ.
 • 5G ಮಲ್ಟಿ-ಜಿಬಿಪಿಎಸ್ ಗರಿಷ್ಠ ದರಗಳು, ಅಲ್ಟ್ರಾ- ಲೋ ಲೇಟೆನ್ಸಿ, ಬೃಹತ್ ಸಾಮರ್ಥ್ಯ ಮತ್ತು ಹೆಚ್ಚು ಏಕರೂಪದ ಬಳಕೆದಾರ ಅನುಭವವನ್ನು ನೀಡುತ್ತದೆ.

5g

5G ತಂತ್ರಜ್ಞಾನದ ಓಟದಲ್ಲಿ ಭಾರತದ ಸ್ಥಾನ?

 • ಮೂರು ಖಾಸಗಿ ದೂರವಾಣಿ ಕಂಪೆನಿಗಳಾದ, ರಿಲಯನ್ಸ್ ಜಿಯೋ ಇನ್ಫೋಕಾಮ್, ಭಾರ್ತಿ ಏರ್ಟೆಲ್ ಮತ್ತು ವಿ (Vi) ಗಳು ಸ್ಪೆಕ್ಟ್ರಮ್ ಹಂಚಿಕೆ ಮತ್ತು 5 ಜಿ ಫ್ರೀಕ್ವೆನ್ಸಿ ಬ್ಯಾಂಡ್‌ಗಳ ಸ್ಪಷ್ಟ ಮಾರ್ಗಸೂಚಿಯನ್ನು ರೂಪಿಸುವಂತೆ ದೂರಸಂಪರ್ಕ ಇಲಾಖೆಯನ್ನು ಒತ್ತಾಯಿಸುತ್ತಿವೆ.ಇದರಿಂದ ಅವುಗಳು ತಮ್ಮ ಸೇವೆಗಳನ್ನು ಅದಕ್ಕೆ ತಕ್ಕಂತೆ ಯೋಜಿಸಲು ಸಾಧ್ಯವಾಗುತ್ತದೆ.
 • ಆದಾಗ್ಯೂ, ಒಂದು ಪ್ರಮುಖ ಅಡಚಣೆಯೆಂದರೆ, ಮೂರು ಕಂಪೆನಿಗಳಲ್ಲಿ ಕನಿಷ್ಠ ಎರಡು ಕಂಪೆನಿಗಳಾದ ಭಾರ್ತಿ ಏರ್‌ಟೆಲ್ ಮತ್ತು ವೊಡಾಫೋನ್ ಐಡಿಯಾಗಳು ಸಾಕಷ್ಟು ಬಂಡವಾಳದ ಕೊರತೆಯನ್ನು ಎದುರಿಸುತ್ತಿವೆ.
 • ಮತ್ತೊಂದೆಡೆ, ರಿಲಯನ್ಸ್ ಜಿಯೋ ದೇಶಕ್ಕಾಗಿ ಸ್ಥಳೀಯವಾಗಿ ಅಭಿವೃದ್ಧಿಪಡಿಸಿದ 5 ಜಿ ನೆಟ್‌ವರ್ಕ್ ಅನ್ನು ಈ ವರ್ಷದ ದ್ವಿತೀಯಾರ್ಧದಲ್ಲಿ ಪ್ರಾರಂಭಿಸಲು ಯೋಜನೆ ರೂಪಿಸಿದೆ.

5 ಜಿ ತಂತ್ರಜ್ಞಾನ ದಲ್ಲಿ ಜಾಗತಿಕ ಪ್ರಗತಿ ಏನು?

ಸರ್ಕಾರಗಳಿಗಿಂತ ಹೆಚ್ಚಾಗಿ, ಜಾಗತಿಕ ಟೆಲಿಕಾಂ ಕಂಪನಿಗಳು 5 ಜಿ ನೆಟ್‌ವರ್ಕ್‌ಗಳನ್ನು ರೂಪಿಸಲು ಪ್ರಾರಂಭಿಸಿವೆ ಮತ್ತು ಅವುಗಳನ್ನು ಪ್ರಾಯೋಗಿಕ ಆಧಾರದ ಮೇಲೆ ತಮ್ಮ ಗ್ರಾಹಕರಿಗೆ ನೀಡಲು ಪ್ರಾರಂಭಿಸಿವೆ. ಅಮೇರಿಕಾ ದ೦ತಹ ದೇಶಗಳಲ್ಲಿ, AT&T, T-Mobile, and Verizon ನಂತಹ ಕಂಪನಿಗಳು ತಮ್ಮ ಬಳಕೆದಾರರಿಗಾಗಿ ವಾಣಿಜ್ಯ 5 ಜಿ ಸೇವೆಯನ್ನು ಒದಗಿಸುವಲ್ಲಿ ಮಂಚೂಣಿಯಲ್ಲಿವೆ.

 

ವಿಷಯಗಳು: ಮಾಹಿತಿ ತಂತ್ರಜ್ಞಾನ, ಬಾಹ್ಯಾಕಾಶ, ಕಂಪ್ಯೂಟರ್, ರೊಬೊಟಿಕ್ಸ್, ನ್ಯಾನೊ-ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ ಮತ್ತು ಬೌದ್ಧಿಕ ಆಸ್ತಿ ಹಕ್ಕುಗಳಿಗೆ ಸಂಬಂಧಿಸಿದ ವಿಷಯಗಳ ಬಗ್ಗೆ ಜಾಗೃತಿ.

ಸ್ವಯಂ-ನಿಯಂತ್ರಕ ಟೂಲ್‌ಕಿಟ್ ಜಾರಿಗೆ ತಂದ,   17 ಪ್ರಮುಖ ಒಟಿಟಿ ಆಪರೇಟರ್‌ಗಳು:


(17 major OTT players adopt self-regulatory toolkit):

ಸಂದರ್ಭ:

ಇಂಟರ್ನೆಟ್ ಮತ್ತು ಮೊಬೈಲ್ ಅಸೋಸಿಯೇಷನ್ ​​ಆಫ್ ಇಂಡಿಯಾ (IAMAI) ಸಮಗ್ರ ಅನುಷ್ಠಾನ ಟೂಲ್ಕಿಟ್ (comprehensive implementation toolkit – CIT) ಅನ್ನು ಅಳವಡಿಸಿಕೊಳ್ಳುವುದಾಗಿ ಘೋಷಿಸಿದೆ, ಇದು ಆನ್‌ಲೈನ್ ಕ್ಯುರೇಟ್ ವಿಷಯ ಪೂರೈಕೆದಾರರಿಗೆ (OCCP) ‘ಯುನಿವರ್ಸಲ್ ಸೆಲ್ಫ್-ರೆಗ್ಯುಲೇಷನ್ ಕೋಡ್’ ಗೆ ಅನುಗುಣವಾಗಿ ಸೆಪ್ಟೆಂಬರ್ 4, 2020 ರಂದು ಚಲನೆಗೆ ಬಂದಿತು.

 • ಈ ಟೂಲ್‌ಕಿಟ್‌ನ ಉದ್ದೇಶವು ಮಾರ್ಗದರ್ಶಿ ಸೂತ್ರಗಳು ಮತ್ತು ನೀತಿ ಸಂಹಿತೆಯನ್ನು ತಿಳಿಸುವುದು ಮತ್ತು ಹೆಚ್ಚುವರಿಯಾಗಿ, ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ಆಸಕ್ತಿಯ ಸಂಘರ್ಷ ಮತ್ತು ನಿಷೇಧಿತ ವಿಷಯದ ಕುರಿತು ನೀಡುವ ಪ್ರತಿಕ್ರಿಯೆಯನ್ನು ಸಹ ತಿಳಿಸುತ್ತದೆ.

ಸ್ವಯಂ ನಿಯಂತ್ರಣ ಕೋಡ್:

 • ಕಳೆದ ವರ್ಷ, ಸುಮಾರು ಹದಿನೈದು ವೀಡಿಯೊ ಸ್ಟ್ರೀಮಿಂಗ್ ಸೇವಾ ಪೂರೈಕೆದಾರರು ಸ್ವಯಂ-ನಿಯಂತ್ರಕ ಸಂಕೇತಕ್ಕೆ ಸಹಿ ಹಾಕಿದರು.
 • ಈ ಪ್ಲ್ಯಾಟ್‌ಫಾರ್ಮ್‌ಗಳಲ್ಲಿ ತೋರಿಸಿರುವ ವಿಷಯಕ್ಕಾಗಿ ಸೂಚನಾ ತತ್ವಗಳ ಗುಂಪನ್ನು ರಚಿಸುವುದು ಇದರ ಉದ್ದೇಶವಾಗಿದೆ.
 • ಇದು ರಾಷ್ಟ್ರೀಯ ಲಾಂಛನ ಅಥವಾ ಧ್ವಜ ಮತ್ತು ಮಕ್ಕಳ ಅಶ್ಲೀಲತೆಯನ್ನು ಉತ್ತೇಜಿಸುವ ಯಾವುದೇ ದೃಶ್ಯ – ಕಥೆಯ ಸಾಲುಗಳನ್ನು ಉದ್ದೇಶಪೂರ್ವಕವಾಗಿ ಮತ್ತು ದುರುದ್ದೇಶದಿಂದ ಅವಮಾನಿಸುವ ವಿಷಯವನ್ನು ಒಳಗೊಂಡಂತೆ ಐದು ರೀತಿಯ ವಿಷಯವನ್ನು ಈ ಕೊಡ್ ನಿಷೇಧಿಸುತ್ತದೆ.
 • ಅವರ ಕ್ಯುರೇಟೆಡ್ ಸ್ಟ್ರೀಮಿಂಗ್ ವಿಷಯವನ್ನು ನಿಯಂತ್ರಿಸುವುದು ಇದರ ಉದ್ದೇಶ. ಮೆಚುರಿಟಿ ರೇಟಿಂಗ್‌ಗಳು ಮತ್ತು ವಿಷಯ ವಿವರಣೆಯನ್ನು ನಿರ್ದಿಷ್ಟಪಡಿಸುವಂತಹ ಬಹಿರಂಗಪಡಿಸುವಿಕೆಗಳನ್ನು ಅನುಸರಿಸುವ ಮೂಲಕ ಅವರು ಇದನ್ನು ಮಾಡುವ ಗುರಿ ಹೊಂದಿದ್ದಾರೆ.

ಓವರ್-ದಿ-ಟಾಪ್ (ಒಟಿಟಿ) ಸ್ಟ್ರೀಮಿಂಗ್ ಎಂದರೇನು?

ಓವರ್-ದಿ-ಟಾಪ್’ ಮಾಧ್ಯಮ ಸೇವೆಯು ಆನ್‌ಲೈನ್ ವಿಷಯ ಪೂರೈಕೆದಾರರಾಗಿದ್ದು ಅದು ಸ್ಟ್ರೀಮಿಂಗ್ ಮಾಧ್ಯಮವನ್ನು ಸ್ವತಂತ್ರ ಉತ್ಪನ್ನವಾಗಿ ಒದಗಿಸುತ್ತದೆ.

 • ವೀಡಿಯೊ-ಆನ್-ಡಿಮಾಂಡ್ ಪ್ಲಾಟ್‌ಫಾರ್ಮ್‌ಗಳಿಗೆ ಸಂಬಂಧಿಸಿದಂತೆ ಓವರ್-ದಿ-ಟಾಪ್ (ಒಟಿಟಿ) ಅನ್ನು ಹೆಚ್ಚಾಗಿ ಬಳಸಲಾಗುತ್ತದೆ, ಆದರೆ ಇದನ್ನು ಆಡಿಯೊ ಸ್ಟ್ರೀಮಿಂಗ್, ಸಂದೇಶ ಸೇವೆ ಅಥವಾ ಇಂಟರ್ನೆಟ್ ಆಧಾರಿತ ಧ್ವನಿ ಕರೆ ಪರಿಹಾರಗಳ ಸಂದರ್ಭದಲ್ಲಿಯೂ ಬಳಸಲಾಗುತ್ತದೆ.
 • ಓವರ್-ದಿ-ಟಾಪ್ ಸೇವೆಗಳು ದೂರಸಂಪರ್ಕ ಜಾಲಗಳು ಅಥವಾ ಕೇಬಲ್ ಟೆಲಿವಿಷನ್ ಪೂರೈಕೆದಾರರಂತಹ ಸಾಂಪ್ರದಾಯಿಕ ಮಾಧ್ಯಮ ವಿತರಣಾ ಚಾನಲ್‌ಗಳನ್ನು ಬೈಪಾಸ್ ಮಾಡುತ್ತದೆ.
 • ನೀವು ಇಂಟರ್ನೆಟ್ ಸಂಪರ್ಕವನ್ನು ಹೊಂದಿದ್ದರೆ, ನಿಮ್ಮ ಅನುಕೂಲಕ್ಕೆ ತಕ್ಕಂತೆ ನೀವು ಸಂಪೂರ್ಣ ಇಂಟರ್ನೆಟ್ ಸೇವೆಯನ್ನು ಬಳಸಬಹುದು.

ಓವರ್-ದಿ-ಟಾಪ್ (OTT) ಜನಪ್ರಿಯತೆಗೆ ಕಾರಣ:

 • ಕಡಿಮೆ ಬೆಲೆಯಲ್ಲಿ ಹೆಚ್ಚಿನ ಮೌಲ್ಯದ ವಿಷಯ ಪಡೆಯಬಹುದು.
 • ಮೂಲ ವಿಷಯ ಪೂರೈಕೆದಾರರಾದ ನೆಟ್‌ಫ್ಲಿಕ್ಸ್ ಮತ್ತು ಅಮೆಜಾನ್ ಪ್ರೈಮ್ ಗಳಿಂದ ಮನರಂಜನೆ.
 • ಬಹು ಸಾಧನಗಳೊಂದಿಗೆ ಹೊಂದಾಣಿಕೆ ಸಾಧ್ಯವಿದೆ.

 

ವಿಷಯಗಳು: ಬಾಹ್ಯಾಕಶದ ಕುರಿತ ಜಾಗೃತಿ.

ಚೀನಾದ ಟಿಯಾನ್ವೆನ್ -1 ಪ್ರೊಬ್:


(China’s Tianwen-1 probe):

ಸಂದರ್ಭ:

ಚೀನಾದ ಟಿಯಾನ್ವೆನ್ -1 ಪ್ರೊಬ್ (Tianwen-1 probe) ಅಂತರಿಕ್ಷ ನೌಕೆಯು ಭೂಮಿಯಿಂದ ಆರೂವರೆ ತಿಂಗಳು (6-1/2 month) ಪ್ರಯಾಣಿಸಿದ ನಂತರ ಮಂಗಳ ಗ್ರಹದ ಕಕ್ಷೆಯನ್ನು ಯಶಸ್ವಿಯಾಗಿ ಪ್ರವೇಶಿಸಿದೆ.

ಮುಂದಿನ ನಡೆ:

ಸುಮಾರು ಮೂರು ತಿಂಗಳಲ್ಲಿ, ಟಿಯಾನ್ವೆನ್ -1, 240 ಕೆಜಿ ತೂಕದ ರೋವರ್ ಸೇರಿದಂತೆ ಲ್ಯಾಂಡಿಂಗ್ ಕ್ಯಾಪ್ಸುಲ್ ಅನ್ನು ಏಳು ನಿಮಿಷಗಳ ಕ್ಷಿಪ್ರ ಹಾರಾಟದಲ್ಲಿ ಮಂಗಳದ ಉತ್ತರ ಗೋಳಾರ್ಧದಲ್ಲಿ ಯುಟೋಪಿಯಾ ಪ್ಲಾನಿಟಿಯಾ ಎಂದು ಕರೆಯಲಾಗುವ ವಿಶಾಲ ಬಯಲಿನಲ್ಲಿ ಇಳಿಸಲು ಪ್ರಯತ್ನಿಸುತ್ತದೆ.

ಟಿಯಾನ್ವೆನ್ -1 ಪ್ರೊಬ್ ಕುರಿತು:

 • ಇದು ಚೀನಾದ ಮೊದಲ ಮಂಗಳ ಗ್ರಹ ಶೋಧವಾಗಿದ್ದು, ಇದನ್ನು ಮೊದಲು ಹುಕ್ಸಿಂಗ್ 1 (Huoxing 1) ಎಂದು ಕರೆಯಲಾಗುತ್ತಿತ್ತು.
 • ಈ ಬಾಹ್ಯಾಕಾಶ ನೌಕೆಯು ಆರ್ಬಿಟರ್, ಲ್ಯಾಂಡರ್ ಮತ್ತು ರೋವರ್ ಗಳನ್ನು ಒಳಗೊಂಡಿದೆ.
 • ಕಳೆದ ವರ್ಷ ಚೀನಾದ ಕ್ಸಿಚಾಂಗ್ ಉಪಗ್ರಹ ಉಡಾವಣಾ ಕೇಂದ್ರದಿಂದ (Xichang Satellite Launch Center) ಈ ಉಪಗ್ರಹವು ಲಾಂಗ್ ಮಾರ್ಚ್ 5 ರಾಕೆಟ್ ಮೂಲಕ ಉಡಾವಣೆಯಾಯಿತು.
 • ಲ್ಯಾಂಡಿಂಗ್ ಸೈಟ್: ಈ ಬಾಹ್ಯಾಕಾಶ ನೌಕೆ ಮಂಗಳ ಗ್ರಹದ ಉತ್ತರ ಅಕ್ಷಾಂಶಗಳಲ್ಲಿರುವ ‘ಯುಟೋಪಿಯಾ ಪ್ಲಾನಿಟಿಯಾ’ (Utopia Planitia) ಎಂಬ ವಿಶಾಲ ಬಯಲಿನಲ್ಲಿ, 1970 ರಲ್ಲಿ ನಾಸಾ ಕಳುಹಿಸಿದ ವೈಕಿಂಗ್ 2 ಮಿಷನ್ ಇಳಿದ ಅದೇ ಸ್ಥಳದಲ್ಲಿ ಇಳಿಯಲಿದೆ.
 • ಟಿಯಾನ್ವೆನ್ -1 ಫೆಬ್ರವರಿ 2021 ರಲ್ಲಿ ಮಂಗಳ ಗ್ರಹದ ಕಕ್ಷೆಯನ್ನು ತಲುಪಲಿದೆ ಮತ್ತು ರೋವರ್, ಮೇ ತಿಂಗಳಲ್ಲಿ ಮಂಗಳ ಗ್ರಹದ ಮೇಲ್ಮೈಗೆ ಇಳಿಯಲಿದೆ.
 • ಈ ಅಭಿಯಾನ ಯಶಸ್ವಿಯಾದರೆ, ಯುಎಸ್ಎಸ್ಆರ್ ಮತ್ತು ಯುನೈಟೆಡ್ ಸ್ಟೇಟ್ಸ್ ನಂತರ ಚೀನಾ ಮಂಗಳನ ಅಂಗಳದಲ್ಲಿ ಯಶಸ್ವಿಯಾಗಿ ಇಳಿದ ಮೂರನೇ ರಾಷ್ಟ್ರವಾಗಲಿದೆ.

ಅಭಿಯಾನದ ಪ್ರಮುಖ 5 ವೈಜ್ಞಾನಿಕ ಉದ್ದೇಶಗಳು:

 • ಮಂಗಳ ಗ್ರಹದ ಭೂವೈಜ್ಞಾನಿಕ ನಕ್ಷೆಯನ್ನು ರಚಿಸುವುದು.
 • ಮಂಗಳ ಗ್ರಹದ ಮಣ್ಣಿನ ಗುಣಲಕ್ಷಣಗಳನ್ನು ಪರೀಕ್ಷಿಸಲು ಮತ್ತು ನೀರು-ಮಂಜುಗಡ್ಡೆಯ ಸಂಭಾವ್ಯ ನಿಕ್ಷೇಪಗಳನ್ನು ಅನ್ವೇಷಿಸಲು.
 • ಮಂಗಳ ಗ್ರಹದ ಮೇಲ್ಮೈ ವಸ್ತುವಿನ ಸಂಯೋಜನೆಯನ್ನು ವಿಶ್ಲೇಷಿಸಲು.
 • ಮಂಗಳ ಗ್ರಹದ ವಾತಾವರಣ ಮತ್ತು ಹವಾಮಾನವನ್ನು ಪರಿಶೀಲಿಸಲು.
 • ಮಂಗಳನ ವಿದ್ಯುತ್ಕಾಂತೀಯ ಮತ್ತು ಗುರುತ್ವಾಕರ್ಷಣ ಕ್ಷೇತ್ರಗಳನ್ನು ಅರ್ಥ ಮಾಡಿಕೊಳ್ಳಲು.

 


ಪೂರ್ವಭಾವಿ ಪರೀಕ್ಷೆಗೆ ಸಂಬಂಧಿಸಿದ ವಿದ್ಯಮಾನಗಳು:


ಬಾಬರ್ ಕ್ರೂಸ್ ಕ್ಷಿಪಣಿ:

 • ಇದು ಪಾಕಿಸ್ತಾನದ ಕಡಿಮೆ-ಶ್ರೇಣಿಯ ಮೇಲ್ಮೈಯಿಂದ ಮೇಲ್ಮೈಗೆ (surface-to-surface) ದಾಳಿಮಾಡುವ ಬ್ಯಾಲಿಸ್ಟಿಕ್ ಕ್ಷಿಪಣಿ ಯಾಗಿದೆ.
 • ಈ ಕ್ಷಿಪಣಿ 490 ಕಿ.ಮೀ ದೂರದವರೆಗೆ “ಹೆಚ್ಚಿನ ನಿಖರತೆ” ಯೊಂದಿಗೆ ಭೂಮಿಯ ಮತ್ತು ಸಮುದ್ರ ಮೇಲಣ ಗುರಿಗಳನ್ನು ಹೊಡೆಯುವ ಸಾಮರ್ಥ್ಯ ಹೊಂದಿದೆ.

 • Join our Official Telegram Channel HERE for Motivation and Fast Updates
 • Subscribe to our YouTube Channel HERE to watch Motivational and New analysis videos