Print Friendly, PDF & Email

[ ದೈನಂದಿನ ಪ್ರಚಲಿತ ಘಟನೆಗಳು ] ದಿನಾಂಕ – 6 ಫೆಬ್ರವರಿ 2021

 

ಪರಿವಿಡಿ :

ಸಾಮಾನ್ಯ ಅಧ್ಯಯನ ಪತ್ರಿಕೆ 2:

1. ರಾಜಕೀಯ ಪಕ್ಷಗಳ ನೋಂದಣಿ.

 

ಸಾಮಾನ್ಯ ಅಧ್ಯಯನ ಪತ್ರಿಕೆ 3:

1. ಪ್ರಧಾನ ಮಂತ್ರಿ ಬೆಳೆ ವಿಮೆ ಯೋಜನೆ (PMFBY).

2.  ಸರ್ಕಾರಿ ಭದ್ರತೆಗಳು ಯಾವುವು?

3. ಉತ್ತರ ಸಮುದ್ರದಲ್ಲಿ ವಿಶ್ವದ ಮೊದಲ ಶಕ್ತಿ / ಇಂಧನ ದ್ವೀಪವನ್ನು ನಿರ್ಮಿಸಲಿರುವ ಡೆನ್ಮಾರ್ಕ್.

4. ಆಮ್ಲಜನಕವನ್ನು ಒಳಗೊಂಡಂತೆ ಕತ್ತರಿಸಿದ 300 ಮರಗಳ ಉತ್ಪನ್ನಗಳಿಗೆ ₹ 2 ಬಿಲಿಯನ್ ವೆಚ್ಚವಾಗಲಿದೆ.

5. ಯಾವುದೇ ಸಂಸ್ಥೆಯನ್ನು ನಿರಂತರ ವಾಗಿ ಮೇಲ್ವಿಚಾರಣೆ ಮಾಡಲು ಅನುಮತಿ ಇಲ್ಲ.

 

ಸಾಮಾನ್ಯ ಅಧ್ಯಯನ ಪತ್ರಿಕೆ 4:

1. ‘ಸರ್ಕಾರದ ‘ವಿರೋಧಿ ವರ್ತನೆ’ಯ ಟೀಕೆ.

 

ಪೂರ್ವಭಾವಿ ಪರೀಕ್ಷೆಗಾಗಿ ಪ್ರಚಲಿತ ವಿದ್ಯಮಾನಗಳು:

1. ಕುಟುಂಬ ಗುರುತಿನ ಚೀಟಿ ಯೋಜನೆ (PPP).

 


ಸಾಮಾನ್ಯ ಅಧ್ಯಯನ ಪತ್ರಿಕೆ – 2


 

ವಿಷಯಗಳು: ಪ್ರಜಾ ಪ್ರಾತಿನಿಧ್ಯ ಕಾಯ್ದೆಯ ಪ್ರಮುಖ ಲಕ್ಷಣಗಳು.

ರಾಜಕೀಯ ಪಕ್ಷಗಳ ನೋಂದಣಿ :


Registration of political parties:

ಸಂದರ್ಭ:

ಅಸೋಸಿಯೇಷನ್ ​​ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ ನ (Association for Democratic Reforms- ADR) (ಪ್ರಜಾಪ್ರಭುತ್ವ ಸುಧಾರಣೆಗಳ ಸಂಘ) ಇತ್ತೀಚಿನ ವರದಿಯ ಪ್ರಕಾರ:

 • 2018-19ನೇ ಸಾಲಿನಲ್ಲಿ, ಒಟ್ಟು 2,301 ನೋಂದಾಯಿತ ಮಾನ್ಯತೆ ಪಡೆಯದ ರಾಜಕೀಯ ಪಕ್ಷಗಳಲ್ಲಿ ಕೇವಲ 78 ಪಕ್ಷಗಳ (3.39%) ಕೊಡುಗೆ ವರದಿಗಳು ಸಾರ್ವಜನಿಕವಾಗಿ ಲಭ್ಯವಿದೆ.
 • 2017-18ನೇ ಸಾಲಿಗೆ, ಆಯಾ ರಾಜ್ಯ ಮುಖ್ಯ ಚುನಾವಣಾ ಅಧಿಕಾರಿಗಳ ವೆಬ್‌ಸೈಟ್‌ಗಳಲ್ಲಿ ಕೊಡುಗೆ ವರದಿಗಳನ್ನು ಅಪ್‌ಲೋಡ್ ಮಾಡಲಾಗಿದ್ದು, ಕೇವಲ 82 ನೋಂದಾಯಿತ ಮಾನ್ಯತೆ ಪಡೆಯದ ರಾಜಕೀಯ ಪಕ್ಷಗಳ (3.56%) ಕೊಡುಗೆ ವರದಿಗಳನ್ನು ಅಪ್‌ಲೋಡ್ ಮಾಡಲಾಗಿದೆ.
 • ಕಳೆದ 10 ವರ್ಷಗಳಲ್ಲಿ ಇಂತಹ ಪಕ್ಷಗಳ ಸಂಖ್ಯೆ ಎರಡು ಪಟ್ಟು ಹೆಚ್ಚಾಗಿದೆ. ಅವುಗಳ ಸಂಖ್ಯೆ 2010 ರಲ್ಲಿ 1,112 ಆಗಿದ್ದರೆ, ಅದು 2019 ರಲ್ಲಿ 2,301 ಆಗಿತ್ತು.

ಗುರುತಿಸಲಾಗದ ರಾಜಕೀಯ ಪಕ್ಷಗಳು ಯಾವವು?:

(Unrecognised Political Parties):

“ವಿಧಾನಸಭಾ ಚುನಾವಣೆಗಳಲ್ಲಿ ಅಥವಾ ಸಾರ್ವತ್ರಿಕ ಚುನಾವಣೆಗಳಲ್ಲಿ ರಾಜ್ಯ ಪಕ್ಷವಾಗಲು ಬೇಕಾದ ಸಾಕಷ್ಟು ಶೇಕಡವಾರು ಮತಗಳನ್ನು ಗಾಳಿಸಲಾಗಿಲ್ಲದ, ಅಥವಾ ರಾಜಕೀಯ ಪಕ್ಷಗಳು ನೋಂದಾಯಿತವಾದಾಗಿನಿಂದಲೂ ಚುನಾವಣೆಗಳಲ್ಲಿ ಸ್ಪರ್ಧಿಸಿಲ್ಲದ, ಅಥವಾ ಹೊಸದಾಗಿ ನೋಂದಾಯಿತ ರಾಜಕೀಯ ಪಕ್ಷಗಳನ್ನು”, ಗುರುತಿಸಲಾಗದ ರಾಜಕೀಯ ಪಕ್ಷಗಳು’ (Unrecognised Political Parties)  ಎಂದು ಕರೆಯಲಾಗುತ್ತದೆ. ಈ ಪಕ್ಷಗಳಿಗೆ, ‘ಮಾನ್ಯತೆ ಪಡೆದ ಪಕ್ಷಗಳಿಗೆ’ ದೊರೆಯುವ ಎಲ್ಲಾ ಸೌಲಭ್ಯಗಳು ಸಿಗುವುದಿಲ್ಲ.

ಭಾರತದಲ್ಲಿ ‘ಗುರುತಿಸಲಾಗದ ರಾಜಕೀಯ ಪಕ್ಷಗಳು’:

ಪ್ರಸ್ತುತ, ಭಾರತದ ಚುನಾವಣಾ ಆಯೋಗದಲ್ಲಿ 2,360 ರಾಜಕೀಯ ಪಕ್ಷಗಳು ನೋಂದಣಿಯಾಗಿವೆ, ಅವುಗಳಲ್ಲಿ 2,301 ಪಕ್ಷಗಳು ಅಂದರೆ 97.50% ‘ಗುರುತಿಸಲಾಗದ ರಾಜಕೀಯ ಪಕ್ಷಗಳು’ಇವೆ.

ರಾಜಕೀಯ ಪಕ್ಷಗಳ ನೋಂದಣಿ:

ರಾಜಕೀಯ ಪಕ್ಷಗಳ ನೋಂದಣಿಯನ್ನು 1951 ರ ಪ್ರಜಾ ಪ್ರಾತಿನಿಧ್ಯ ಕಾಯ್ದೆಯ ( ಜನಪ್ರತಿನಿಧಿ ಕಾಯ್ದೆ) ಸೆಕ್ಷನ್ 29 ಎ ನಿಬಂಧನೆಗಳ ಅಡಿಯಲ್ಲಿ ಮಾಡಲಾಗುತ್ತದೆ.

 • ರಾಜಕೀಯ ಪಕ್ಷವನ್ನು ನೋಂದಾಯಿಸಲು, ರಚನೆಯಾದ 30 ದಿನಗಳ ಅವಧಿಯಲ್ಲಿ, ಮೇಲಿನ ವಿಭಾಗದ ಅಡಿಯಲ್ಲಿ ಭಾರತದ ಚುನಾವಣಾ ಆಯೋಗಕ್ಕೆ ಅರ್ಜಿಯನ್ನು ಸಲ್ಲಿಸಬೇಕು. ಇದಕ್ಕಾಗಿ, ಭಾರತದ ಚುನಾವಣಾ ಆಯೋಗವು ಭಾರತದ ಸಂವಿಧಾನದ 324 ನೇ ವಿಧಿ ಮತ್ತು 1951 ರ ಪ್ರಜಾ ಪ್ರಾತಿನಿಧ್ಯ ಕಾಯ್ದೆ ಯ ಸೆಕ್ಷನ್ 29 ಎ ಯಿಂದ ನೀಡಲ್ಪಟ್ಟ ಅಧಿಕಾರವನ್ನು ಚಲಾಯಿಸಲು ಮಾರ್ಗಸೂಚಿಗಳನ್ನು ನೀಡುತ್ತದೆ.

ಭಾರತದ ‘ರಾಷ್ಟ್ರೀಯ ರಾಜಕೀಯ ಪಕ್ಷ’ವಾಗಿ ಅರ್ಹತೆ ಪಡೆಯಲು:

 • ರಾಜಕೀಯ ಪಕ್ಷವನ್ನು ರಾಷ್ಟ್ರೀಯ ಪಕ್ಷವೆಂದು ಗುರುತಿಸಬೇಕಾದರೆ, ಯಾವುದೇ ನಾಲ್ಕು ಅಥವಾ ಹೆಚ್ಚಿನ ರಾಜ್ಯಗಳಲ್ಲಿ ಸಾರ್ವತ್ರಿಕ ಚುನಾವಣೆಗಳಲ್ಲಿ ಅಥವಾ ವಿಧಾನಸಭಾ ಚುನಾವಣೆಗಳಲ್ಲಿ ಒಟ್ಟು ಆರು ಪ್ರತಿಶತದಷ್ಟು ಮಾನ್ಯವಾದ ಮತಗಳನ್ನು ಪಡೆಯುವುದು ಕಡ್ಡಾಯವಾಗಿದೆ.
 • ಅಲ್ಲದೆ, ಇದಕ್ಕಾಗಿ ಯಾವುದೇ ರಾಜ್ಯ ಅಥವಾ ರಾಜ್ಯಗಳಿಂದ ಕನಿಷ್ಠ ನಾಲ್ಕು ಲೋಕಸಭಾ ಸ್ಥಾನಗಳನ್ನು ಗೆಲ್ಲಬೇಕು.
 • ಲೋಕಸಭಾ ಚುನಾವಣೆಯಲ್ಲಿ, ಒಟ್ಟು ಲೋಕಸಭಾ ಸ್ಥಾನಗಳಲ್ಲಿ 2 ಪ್ರತಿಶತ (ಪ್ರಸ್ತುತ 543 ಸದಸ್ಯರ ಪೈಕಿ 11 ಸದಸ್ಯರು) ಆ ರಾಜಕೀಯ ಪಕ್ಷದಿಂದ ಗೆದ್ದಿದ್ದರೆ ಮತ್ತು ಈ ಸದಸ್ಯರು ಕನಿಷ್ಠ ಮೂರು ವಿಭಿನ್ನ ರಾಜ್ಯಗಳಿಂದ ಆಯ್ಕೆ ಯಾಗಿರಬೇಕು.

ರಾಜ್ಯ ರಾಜಕೀಯ ಪಕ್ಷವಾಗಿ (ಪ್ರಾದೇಶಿಕ ಪಕ್ಷ ) ಅರ್ಹತೆ ಪಡೆಯಲು:

 • ರಾಜಕೀಯ ಪಕ್ಷವನ್ನು ‘ರಾಜ್ಯ ಮಟ್ಟದ ರಾಜಕೀಯ ಪಕ್ಷ’ ಎಂದು ಗುರುತಿಸಬೇಕಾದರೆ, ರಾಜ್ಯದಲ್ಲಿ ನಡೆಯುವ ಲೋಕಸಭೆ ಅಥವಾ ವಿಧಾನಸಭಾ ಚುನಾವಣೆಯಲ್ಲಿ ಒಟ್ಟು ಶೇಕಡಾ ಆರರಷ್ಟು ಮಾನ್ಯ ಮತಗಳನ್ನು ಪಡೆಯುವುದು ಕಡ್ಡಾಯವಾಗಿದೆ.
 • ಇದಲ್ಲದೆ, ಅದು ಸಂಬಂಧಪಟ್ಟ ರಾಜ್ಯದ ವಿಧಾನಸಭೆಯಲ್ಲಿ ಕನಿಷ್ಠ ಎರಡು ಸ್ಥಾನಗಳನ್ನು ಗೆಲ್ಲಬೇಕು.
 • ರಾಜಕೀಯ ಪಕ್ಷವೊಂದು, ರಾಜ್ಯ ವಿಧಾನಸಭೆಯ ಚುನಾವಣೆಯಲ್ಲಿ ವಿಧಾನಸಭೆಯ ಒಟ್ಟು ಸ್ಥಾನಗಳಲ್ಲಿ 3 ಪ್ರತಿಶತ ಅಥವಾ 3 ಸ್ಥಾನಗಳು, ಯಾವುದು ಹೆಚ್ಚೋ ಅದನ್ನು ಪಡೆಯಬೇಕು.

ಪ್ರಯೋಜನಗಳು:

 • ‘ರಾಜ್ಯ ಮಟ್ಟದ ರಾಜಕೀಯ ಪಕ್ಷ’ ಎಂದು ಗುರುತಿಸಲ್ಪಟ್ಟ ಯಾವುದೇ ನೋಂದಾಯಿತ ಪಕ್ಷವು ಪಕ್ಷಕ್ಕೆ ಕಾಯ್ದಿರಿಸಿದ ಚುನಾವಣಾ ಚಿಹ್ನೆಯನ್ನು ಆಯಾ ರಾಜ್ಯದ ಅಭ್ಯರ್ಥಿಗಳಿಗೆ ಹಂಚುವ ಅರ್ಹತೆಯನ್ನು ಹೊಂದಿದೆ. ಮತ್ತು, ‘ರಾಷ್ಟ್ರೀಯ ರಾಜಕೀಯ ಪಕ್ಷ’ ಎಂದು ಗುರುತಿಸಲ್ಪಟ್ಟ ಯಾವುದೇ ನೋಂದಾಯಿತ ಪಕ್ಷವು ಭಾರತದಾದ್ಯಂತ ತನ್ನ ಅಭ್ಯರ್ಥಿಗಳಿಗೆ ಪಕ್ಷಕ್ಕೆ ಕಾಯ್ದಿರಿಸಿದ ಚಿಹ್ನೆಯನ್ನು ನಿಗದಿಪಡಿಸುವ ಅರ್ಹತೆಯನ್ನು ಹೊಂದಿರುತ್ತದೆ.
 • ಮಾನ್ಯತೆ ಪಡೆದ ರಾಷ್ಟ್ರೀಯ ಅಥವಾ ರಾಜ್ಯಮಟ್ಟದ ರಾಜಕೀಯ ಪಕ್ಷಗಳ ಅಭ್ಯರ್ಥಿಗಳಿಗೆ ತಮ್ಮ ನಾಮಪತ್ರಗಳನ್ನು ಸಲ್ಲಿಸುವಾಗ ಕೇವಲ ಒಬ್ಬ ಪ್ರಸ್ತಾಪಕರ ಅಗತ್ಯವಿದೆ. ಅಲ್ಲದೆ, ಮತದಾರರ ಪಟ್ಟಿಗಳ ತಿದ್ದುಪಡಿ ಸಮಯದಲ್ಲಿ ಎರಡು ಸೆಟ್ ಮತದಾರರ ಪಟ್ಟಿಗಳನ್ನು ಉಚಿತವಾಗಿ ಪಡೆಯಲು ಅವರಿಗೆ ಅಧಿಕಾರವಿದೆ ಮತ್ತು ಸಾರ್ವತ್ರಿಕ ಚುನಾವಣೆಯ ಸಮಯದಲ್ಲಿ ಒಂದು ಸೆಟ್ ಮತದಾರರ ಪಟ್ಟಿಯ ಒಂದು ನಕಲು ಪ್ರತಿಯನ್ನು ಸಂಬಂಧಿಸಿದ ಪಕ್ಷದ ಅಭ್ಯರ್ಥಿಗಳು ಉಚಿತವಾಗಿ ಪಡೆಯುತ್ತಾರೆ.
 • ಸಾರ್ವತ್ರಿಕ ಚುನಾವಣೆಯ ಸಮಯದಲ್ಲಿ ಅವರಿಗೆ ಆಕಾಶವಾಣಿ ಮತ್ತು ದೂರದರ್ಶನದಲ್ಲಿ ಪ್ರಸಾರ ಮಾಡುವ ಸೌಲಭ್ಯವನ್ನು ಒದಗಿಸಲಾಗುತ್ತದೆ.
 • ಮಾನ್ಯತೆ ಪಡೆದ ರಾಜಕೀಯ ಪಕ್ಷಗಳಿಗೆ, ಸಾರ್ವತ್ರಿಕ ಚುನಾವಣೆಗಳಲ್ಲಿ ಸ್ಟಾರ್ ಪ್ರಚಾರಕರ ಪ್ರಯಾಣದ ವೆಚ್ಚವನ್ನು ಆ ಪಕ್ಷದ ಅಭ್ಯರ್ಥಿ ಅಥವಾ ಪಕ್ಷದ ವೆಚ್ಚಗಳಿಗೆ ಸೇರಿಸಲಾಗುವುದಿಲ್ಲ.

 


ಸಾಮಾನ್ಯ ಅಧ್ಯಯನ ಪತ್ರಿಕೆ – 3


 

ವಿಷಯಗಳು : ನೇರ ಮತ್ತು ಪರೋಕ್ಷ ಕೃಷಿ ಸಬ್ಸಿಡಿಗಳು ಮತ್ತು ಕನಿಷ್ಠ ಬೆಂಬಲ ಬೆಲೆಗಳಿಗೆ ಸಂಬಂಧಿಸಿದ ಸಮಸ್ಯೆಗಳು; ಸಾರ್ವಜನಿಕ ವಿತರಣಾ ವ್ಯವಸ್ಥೆಯ ಉದ್ದೇಶಗಳು, ಕಾರ್ಯನಿರ್ವಹಣೆ, ಮಿತಿಗಳು, ಪುನರುಜ್ಜೀವನಗೊಳಿಸುವಿಕೆ; ಬಫರ್ ಸ್ಟಾಕ್ಗಳು / ತುರ್ತು ಸಂಗ್ರಹ ವ್ಯವಸ್ಥೆ ಮತ್ತು ಆಹಾರ ಸುರಕ್ಷತೆಯ ಸಮಸ್ಯೆಗಳು; ತಂತ್ರಜ್ಞಾನ ಕಾರ್ಯಾಚರಣೆಗಳು.

ಪ್ರಧಾನ ಮಂತ್ರಿ ಬೆಳೆ ವಿಮೆ ಯೋಜನೆ (PMFBY):


(Pradhan Mantri Fasal Bima Yojana):

ಸಂದರ್ಭ:

ಪ್ರಧಾನಮಂತ್ರಿ ಬೆಳೆ ವಿಮಾ ಯೋಜನೆಯಡಿ, (Pradhan Mantri Fasal Bima Yojana – PMFBY) ಹಕ್ಕುಗಳ ಸಕಾಲಿಕ ಇತ್ಯರ್ಥವನ್ನು ಖಚಿತಪಡಿಸಿಕೊಳ್ಳಲು ಭತ್ತ ಮತ್ತು ಗೋಧಿಯನ್ನು ಬೆಳೆಯುತ್ತಿರುವ ದೇಶದ 100 ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಡ್ರೋನ್‌ಗಳನ್ನು ಹಾರಿಸಲು ಅನುಮತಿ ನೀಡಲಾಗಿದೆ. ಹಾಗೂ ಕೃಷಿ ಇಲಾಖೆಯ ಈ ಪ್ರಸ್ತಾವನೆಯನ್ನು ನಾಗರಿಕ ವಿಮಾನಯಾನ ನಿರ್ದೇಶನಾಲಯವು  (Directorate General of Civil Aviation- DGCA) ಅನುಮೋದಿಸಿದೆ.

 • ರಿಮೋಟ್ ಸೆನ್ಸಿಂಗ್ ತಂತ್ರಜ್ಞಾನವನ್ನು ಆಧರಿಸಿದ ದೇಶದ ಮೊದಲ ಅತಿದೊಡ್ಡ ಪ್ರಾಯೋಗಿಕ ಅಧ್ಯಯನ ಇದಾಗಿದ್ದು, ಇದರಲ್ಲಿ ಬೆಳೆ ಇಳುವರಿಯನ್ನು ನಿರ್ಣಯಿಸಲಾಗುತ್ತದೆ.

ಪ್ರಧಾನಮಂತ್ರಿ ಬೆಳೆ ವಿಮಾ ಯೋಜನೆ ಕುರಿತು:

 • ಪ್ರಧಾನ್ ಮಂತ್ರಿ ಬೆಳೆ ವಿಮೆ ಯೋಜನೆ (PMFBY) ಯನ್ನು 13 ಜನವರಿ 2016 ರಂದು ಪ್ರಾರಂಭಿಸಲಾಯಿತು.
 • ಈ ಯೋಜನೆಯಲ್ಲಿ, ಹಿಂದಿನ ರಾಷ್ಟ್ರೀಯ ಕೃಷಿ ವಿಮಾ ಯೋಜನೆ (NIAS) ಮತ್ತು ಪರಿಷ್ಕೃತ ರಾಷ್ಟ್ರೀಯ ಕೃಷಿ ವಿಮಾ ಯೋಜನೆ (MNIAS) ಯನ್ನು ವಿಲೀನಗೊಳಿಸಲಾಯಿತು.
 • ರೈತರ ಮೇಲಿನ ಪ್ರೀಮಿಯಂ ಹೊರೆಯನ್ನು ಕಡಿಮೆ ಮಾಡುವುದು ಮತ್ತು ವಿಮೆ ಮಾಡಿದ ಸಂಪೂರ್ಣ ಮೊತ್ತಕ್ಕೆ ಬೆಳೆ ವಿಮಾ ಹಕ್ಕುಗಳ ಆರಂಭಿಕ ಇತ್ಯರ್ಥವನ್ನು ಖಚಿತಪಡಿಸುವುದು ಈ ಯೋಜನೆಯ ಉದ್ದೇಶವಾಗಿದೆ.

ವ್ಯಾಪ್ತಿ:

 • ಈ ಯೋಜನೆಯಲ್ಲಿ, ಎಲ್ಲಾ ಆಹಾರ ಮತ್ತು ಎಣ್ಣೆಬೀಜ ಬೆಳೆಗಳು ಮತ್ತು ವಾರ್ಷಿಕ ವಾಣಿಜ್ಯ / ತೋಟಗಾರಿಕಾ ಬೆಳೆಗಳನ್ನು ಸೇರಿಸಲಾಗಿದೆ, ಇದಕ್ಕಾಗಿ ಹಿಂದಿನ ಇಳುವರಿ ಅಂಕಿಅಂಶಗಳು ಲಭ್ಯವಿವೆ ಮತ್ತು ಸಾಮಾನ್ಯ ಬೆಳೆ ಅಂದಾಜು ಸಮೀಕ್ಷೆ- (GCES ), ಬೆಳೆ ಕತ್ತರಿಸುವ ಪ್ರಯೋಗಗಳ- (CCEs) ಅಡಿಯಲ್ಲಿ ಸುಗ್ಗಿಯ ನಂತರದ ಅಗತ್ಯ ಸಂಖ್ಯೆಯ ಪ್ರಯೋಗಗಳ ಕಾರ್ಯಾಚರಣೆಗಳನ್ನು ನಡೆಸಲಾಗುತ್ತದೆ.

PMFBY ನಿಂದ PMFBY 2.0:

 • ಸಂಪೂರ್ಣ ಸ್ವಯಂಪ್ರೇರಿತ: 2020 ಖಾರಿಫ್‌ ಹಂಗಾಮಿನಿಂದ ಎಲ್ಲಾ ರೈತರಿಗೆ ಈ ಯೋಜನೆಗೆ ಸೇರುವ ದಾಖಲಾತಿಯನ್ನು 100% ದಷ್ಟು ಸ್ವಯಂಪ್ರೇರಿತಗೊಳಿಸಲು ನಿರ್ಧರಿಸಲಾಗಿದೆ.
 • ಕೇಂದ್ರದ ಸಬ್ಸಿಡಿಗೆ ಮಿತಿ: ನೀರಾವರಿ ಯಲ್ಲದ ಪ್ರದೇಶಗಳು / ಬೆಳೆಗಳಿಗೆ 30% ಮತ್ತು ನೀರಾವರಿ ಪ್ರದೇಶಗಳು / ಬೆಳೆಗಳಿಗೆ 25% ವರೆಗಿನ ಪ್ರೀಮಿಯಂ ದರಗಳನ್ನು ಈ ಯೋಜನೆಗಳ ಅಡಿಯಲ್ಲಿ ಕೇಂದ್ರದ ಪ್ರೀಮಿಯಂ ಸಬ್ಸಿಡಿಯನ್ನು ಮಿತಿ ಗೊಳಿಸಲು ಕ್ಯಾಬಿನೆಟ್ ನಿರ್ಧರಿಸಿದೆ.
 • ರಾಜ್ಯಗಳಿಗೆ ಹೆಚ್ಚಿನ ಸ್ವಾಯತ್ತತೆ: ಬಿತ್ತನೆ, ಸ್ಥಳೀಯ ವಿಪತ್ತು, ಸುಗ್ಗಿಯ ಸಮಯದಲ್ಲಿ ಹವಾಮಾನ ಪ್ರತಿಕೂಲತೆ, ಮತ್ತು ಸುಗ್ಗಿಯ ನಂತರದ ನಷ್ಟಗಳು ಇತ್ಯಾದಿಗಳ ಜೊತೆಗೆ ಪ್ರಧಾನ ಮಂತ್ರಿಯ ಬೆಳೆ ವಿಮಾ ಯೋಜನೆಯನ್ನು ಜಾರಿಗೆ ತರಲು ಕೇಂದ್ರ ಸರ್ಕಾರವು ರಾಜ್ಯಗಳಿಗೆ / ಕೇಂದ್ರಾಡಳಿತ ಪ್ರದೇಶಗಳಿಗೆ ವ್ಯಾಪಕ ಸ್ವಾತಂತ್ರ್ಯವನ್ನು ನೀಡಿದೆ. ಯಾವುದೇ ಹೆಚ್ಚುವರಿ ಅಪಾಯದ ಅಂಶಗಳು / ವೈಶಿಷ್ಟ್ಯಗಳ ಸೌಲಭ್ಯಗಳನ್ನು ಆಯ್ಕೆ ಮಾಡುವ ಆಯ್ಕೆಯನ್ನು ನೀಡಿದೆ.
 • ಬಾಕಿ ಉಳಿಸಿಕೊಂಡರೆ ದಂಡ ವಿಧಿಸುವುದು: ಪರಿಷ್ಕೃತ PMFBY ಅಡಿಯಲ್ಲಿ, ರಾಜ್ಯಗಳು ಖಾರಿಫ್  ಋತುವಿನಲ್ಲಿ ಮಾರ್ಚ್ 31 ರೊಳಗೆ ಮತ್ತು ರಬಿಗೆ ಸೆಪ್ಟೆಂಬರ್ 30 ರೊಳಗೆ ತಮ್ಮ ಪಾಲನ್ನು ಬಿಡುಗಡೆ ಮಾಡದೆ ಹೋದರೆ  ನಂತರದ  ಋತುಗಳಲ್ಲಿ ಯೋಜನೆಯಲ್ಲಿ ಭಾಗವಹಿಸಲು ಅನುಮತಿಸ ಲಾಗುವುದಿಲ್ಲ.
 • ICE ಚಟುವಟಿಕೆಗಳಲ್ಲಿ ಹೂಡಿಕೆ:

ವಿಮಾ ಕಂಪನಿಗಳು ಈಗ ಸಂಗ್ರಹಿಸಿದ ಒಟ್ಟು ಪ್ರೀಮಿಯಂನ 0.5% ಅನ್ನು ಮಾಹಿತಿ, ಶಿಕ್ಷಣ ಮತ್ತು ಸಂವಹನ (ICE) ಚಟುವಟಿಕೆಗಳಿಗಾಗಿ ಖರ್ಚು ಮಾಡುವುದು ಕಡ್ಡಾಯವಾಗಿದೆ.

 

ವಿಷಯಗಳು :   ಭಾರತೀಯ ಆರ್ಥಿಕತೆ ಮತ್ತು ಯೋಜನೆ, ಸಂಪನ್ಮೂಲಗಳ ಕ್ರೂಢೀಕರಣ , ಬೆಳವಣಿಗೆ, ಅಭಿವೃದ್ಧಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ವಿಷಯಗಳು.

ಸರ್ಕಾರಿ ಭದ್ರತೆಗಳು ಯಾವುವು?


What are govt securities?

ಸಂದರ್ಭ:

ಇತ್ತೀಚೆಗೆ, ಭಾರತೀಯ ರಿಸರ್ವ್ ಬ್ಯಾಂಕ್ (RBI) ಸಣ್ಣ ಹೂಡಿಕೆದಾರರಿಗೆ ಸರ್ಕಾರಿ ಭದ್ರತಾ ವಹಿವಾಟು ವೇದಿಕೆಗೆ ನೇರ ಪ್ರವೇಶವನ್ನು ಒದಗಿಸಿದೆ.

 • ಇನ್ನುಮುಂದೆ, ಚಿಲ್ಲರೆ ಹೂಡಿಕೆದಾರರು ತಮ್ಮ ಗಿಲ್ಟ್ ಖಾತೆಯನ್ನು ನೇರವಾಗಿ ಆರ್‌ಬಿಐನೊಂದಿಗೆ ತೆರೆಯಬಹುದು ಮತ್ತು ಸರ್ಕಾರಿ ಭದ್ರತೆಗಳಲ್ಲಿ ವ್ಯಾಪಾರ ಮಾಡಬಹುದು.

ಹಾಗಾದರೆ ಪ್ರಸ್ತುತ ಪ್ರಸ್ತಾವನೆಯ ಅವಶ್ಯಕತೆ ಏನು?

 • ‘ಸರ್ಕಾರಿ ಭದ್ರತೆಗಳ’ (g-sec) ಮಾರುಕಟ್ಟೆಯಲ್ಲಿ ಮುಖ್ಯವಾಗಿ ಸಾಂಸ್ಥಿಕ ಹೂಡಿಕೆದಾರರಾದ ಬ್ಯಾಂಕುಗಳು, ಮ್ಯೂಚುಯಲ್ ಫಂಡ್‌ಗಳು ಮತ್ತು ವಿಮಾ ಕಂಪನಿಗಳು ಪ್ರಾಬಲ್ಯ ಹೊಂದಿವೆ. ಈ ಘಟಕಗಳು 5 ಕೋಟಿ ಅಥವಾ ಅದಕ್ಕಿಂತ ಹೆಚ್ಚಿನ ಗಾತ್ರದಲ್ಲಿ ವ್ಯಾಪಾರ ಮಾಡುತ್ತವೆ.
 • ಆದ್ದರಿಂದ, ಸಣ್ಣ ಹೂಡಿಕೆದಾರರಿಗೆ ಸಣ್ಣ ಪ್ರಮಾಣದಲ್ಲಿ ವ್ಯಾಪಾರ ಮಾಡಲು ಬಯಸುವ ದ್ವಿತೀಯ ಮಾರುಕಟ್ಟೆಯಲ್ಲಿ ದ್ರವ್ಯತೆ ಲಭ್ಯವಿಲ್ಲ. ಬೇರೆ ಮಾತುಗಳಲ್ಲಿ ಹೇಳುವುದಾದರೆ, ಅವುಗಳಲ್ಲಿ ಹೂಡಿಕೆ ಮಾಡಲು ಸುಲಭವಾದ ಮಾರ್ಗಗಳಿಲ್ಲ.
 • ಈ ಕಾರಣಕ್ಕಾಗಿ, ಪ್ರಸ್ತುತ, ‘ಸರ್ಕಾರಿ ಭದ್ರತೆ’ಗಳಲ್ಲಿ ನೇರವಾಗಿ ವ್ಯಾಪಾರ ಮಾಡುವುದು ಚಿಲ್ಲರೆ ಹೂಡಿಕೆದಾರರಲ್ಲಿ ಹೆಚ್ಚು ಜನಪ್ರಿಯವಾಗಿಲ್ಲ.

ಸರ್ಕಾರಿ ಭದ್ರತೆಗಳು ಯಾವುವು?

ಸರ್ಕಾರಿ ಭದ್ರತೆ (government security -G-Sec) ಎನ್ನುವುದು ಕೇಂದ್ರ ಸರ್ಕಾರ ಅಥವಾ ರಾಜ್ಯ ಸರ್ಕಾರಗಳು ನೀಡುವ ವ್ಯಾಪಾರ ಮಾಡಬಹುದಾದ ಸಾಧನ’ (Tradeable Instrument) ‘ವಾಗಿದೆ.

ಪ್ರಮುಖ ಲಕ್ಷಣಗಳು:

 • ಇದು ಸರ್ಕಾರದ ಸಾಲ ಬಾಧ್ಯತೆಗಳನ್ನು ಸ್ವೀಕರಿಸುತ್ತದೆ.
 • ಅಂತಹ ಸೆಕ್ಯೂರಿಟಿಗಳು ಅಲ್ಪಾವಧಿಯ (ಖಜಾನೆ ಬಿಲ್ ಗಳು – ಒಂದು ವರ್ಷಕ್ಕಿಂತ ಕಡಿಮೆ ಅವಧಿಯ ಮೂಲ ಮುಕ್ತಾಯದೊಂದಿಗೆ / ಮೇಚುರಿಟಿಗಳೊಂದಿಗೆ) ಅಥವಾ ದೀರ್ಘಾವಧಿಯ (ಸರ್ಕಾರಿ ಬಾಂಡ್‌ಗಳು ಅಥವಾ ದಿನಾಂಕದ ಸೆಕ್ಯುರಿಟೀಸ್ – ಒಂದು ವರ್ಷ ಅಥವಾ ಹೆಚ್ಚಿನ ಮೂಲ ಮುಕ್ತಾಯದೊಂದಿಗೆ /ಮೇಚುರಿಟಿಗಳೊಂದಿಗೆ) ಆಗಿರಬಹುದು.
 • ಕೇಂದ್ರ ಸರ್ಕಾರವು ಖಜಾನೆ ಬಿಲ್ ಗಳು ಮತ್ತು ಸರ್ಕಾರಿ ಬಾಂಡ್‌ಗಳು ಅಥವಾ ದಿನಾಂಕದ ಭದ್ರತೆಗಳು ಎರಡನ್ನೂ ನೀಡುತ್ತದೆ.
 • ರಾಜ್ಯ ಸರ್ಕಾರಗಳು ಬಾಂಡ್ ಅಥವಾ ದಿನಾಂಕದ ಭದ್ರತೆಗಳನ್ನು ಮಾತ್ರ ನೀಡುತ್ತವೆ, ಇದನ್ನು ರಾಜ್ಯ ಅಭಿವೃದ್ಧಿ ಸಾಲ ಎಂದು ಕರೆಯಲಾಗುತ್ತದೆ.
 • ಅವುಗಳನ್ನು ಸರ್ಕಾರ ಹೊರಡಿಸಿರುವುದರಿಂದ, ಡೀಫಾಲ್ಟ್ ಆಗುವ ಅಪಾಯವಿಲ್ಲ, ಆದ್ದರಿಂದ ಅವುಗಳನ್ನು ಅಪಾಯಮುಕ್ತ ಗಿಲ್ಟ್-ಅಂಚಿನ ಉಪಕರಣಗಳು (risk-free gilt-edged instruments) ಎಂದು ಕರೆಯಲಾಗುತ್ತದೆ.
 • ವಿದೇಶಿ ಬಂಡವಾಳ ಹೂಡಿಕೆದಾರರಿಗೆ (FPI) ನಿಗದಿತ ಸಮಯದ ಮಿತಿಯೊಳಗೆ ಸರ್ಕಾರಿ ಭದ್ರತೆಗಳ ಮಾರುಕಟ್ಟೆಯಲ್ಲಿ ಭಾಗವಹಿಸಲು ಅನುಮತಿ ನೀಡಲಾಗಿದೆ.

ಸರ್ಕಾರಿ ಭದ್ರತೆಗಳ (G-Sec) ಬೆಲೆಗಳು ದ್ವಿತೀಯ ಮಾರುಕಟ್ಟೆಯಲ್ಲಿ ವೇಗವಾಗಿ ಏರಿಳಿತಗೊಳ್ಳುತ್ತವೆ.

ಅವುಗಳ ಬೆಲೆಗಳ ಮೇಲೆ ಪರಿಣಾಮ ಬೀರುವ ಅಂಶಗಳು:

 • ಭದ್ರತೆಗಳ ಬೇಡಿಕೆ ಮತ್ತು ಪೂರೈಕೆ.
 • ಬಡ್ಡಿದರಗಳಲ್ಲಿನ ಬದಲಾವಣೆಗಳು ಮತ್ತು ಆರ್ಥಿಕತೆಯೊಳಗಿನ ಇತರ ಸ್ಥೂಲ-ಆರ್ಥಿಕ ಅಂಶಗಳಾದ ದ್ರವ್ಯತೆ ಮತ್ತು ಹಣದುಬ್ಬರ.
 • ಹಣಕಾಸು, ವಿದೇಶಿ ವಿನಿಮಯ, ಸಾಲ ಮತ್ತು ಬಂಡವಾಳ ಮಾರುಕಟ್ಟೆಗಳಂತಹ ಇತರ ಮಾರುಕಟ್ಟೆಗಳಲ್ಲಿನ ಬೆಳವಣಿಗೆ.
 • ಅಂತರರಾಷ್ಟ್ರೀಯ ಬಾಂಡ್ ಮಾರುಕಟ್ಟೆಗಳಲ್ಲಿ, ವಿಶೇಷವಾಗಿ ಯುಎಸ್ ಖಜಾನೆಗಳಲ್ಲಿನ ಬೆಳವಣಿಗೆ.
 • ರೆಪೊ ದರಗಳಲ್ಲಿನ ಬದಲಾವಣೆಗಳು, ನಗದು-ಮೀಸಲು ಅನುಪಾತಗಳು ಮತ್ತು ಮುಕ್ತ ಮಾರುಕಟ್ಟೆ ಕಾರ್ಯಾಚರಣೆಗಳಂತಹ ಭಾರತೀಯ ರಿಸರ್ವ್ ಬ್ಯಾಂಕ್ ನ ಹಣಕಾಸು ನೀತಿಯಲ್ಲಿನ ಬದಲಾವಣೆಗಳು.

 

ವಿಷಯಗಳು: ಮೂಲಸೌಕರ್ಯ: ಇಂಧನ, ಬಂದರುಗಳು, ರಸ್ತೆಗಳು, ವಿಮಾನ ನಿಲ್ದಾಣಗಳು, ರೈಲ್ವೆ ಇತ್ಯಾದಿ.

ಉತ್ತರ ಸಮುದ್ರದಲ್ಲಿ ವಿಶ್ವದ ಮೊದಲ ಶಕ್ತಿ / ಇಂಧನ ದ್ವೀಪವನ್ನು ನಿರ್ಮಿಸಲಿರುವ ಡೆನ್ಮಾರ್ಕ್:


ಸಂದರ್ಭ:

ಇತ್ತೀಚೆಗೆ, ಡೆನ್ಮಾರ್ಕ್ ವಿಶ್ವದ ಮೊದಲ ಶಕ್ತಿ ದ್ವೀಪವನ್ನು ಉತ್ತರ ಸಮುದ್ರದಲ್ಲಿ ನಿರ್ಮಿಸುವ ಯೋಜನೆಗೆ ಅನುಮೋದನೆ ನೀಡಿದೆ.

ಈ ಯೋಜನೆಯ ಕುರಿತು:

 • ಅದರ ಆರಂಭಿಕ ಹಂತದಲ್ಲಿ, ಈ ಕೃತಕ ದ್ವೀಪವು 18 ಫುಟ್ಬಾಲ್ ಮೈದಾನಗಳಿಗೆ ಸಮಾನವಾಗಿರುತ್ತದೆ.
 • ಇದು ನೂರಾರು ಕಡಲಾಚೆಯ ವಿಂಡ್ ಟರ್ಬೈನ್‌ಗಳೊಂದಿಗೆ ಸಂಪರ್ಕಗೊಳ್ಳಲಿದೆ ಮತ್ತು ದೇಶೀಯ ಬಳಕೆಗೆ ಶಕ್ತಿಯನ್ನು ಮತ್ತು ಹಡಗು, ವಾಯುಯಾನ, ಕೈಗಾರಿಕೆ, ಗೃಹಕಾರ್ಯಗಳಿಗೆ ಮತ್ತು ಭಾರಿ ಸಾರಿಗೆಯಲ್ಲಿ ಬಳಸಲು ಹಸಿರು ಹೈಡ್ರೋಜನ್ ಅನ್ನು ಪೂರೈಸುತ್ತದೆ.
 • ಮೂರು ದಶಲಕ್ಷ ಯುರೋಪಿಯನ್ ಕುಟುಂಬಗಳ ವಿದ್ಯುತ್ ಅಗತ್ಯಗಳನ್ನು ಪೂರೈಸಲು ಸಾಕಷ್ಟು ಹಸಿರು ಶಕ್ತಿಯನ್ನು ಈ ದ್ವೀಪದಲ್ಲಿ ಉತ್ಪಾದಿಸಲಾಗುತ್ತದೆ ಮತ್ತು ಸಂಗ್ರಹಿಸಲಾಗುತ್ತದೆ.

ಮಹತ್ವ:

ಇತ್ತೀಚೆಗೆ, ಯುರೋಪಿಯನ್ ಒಕ್ಕೂಟವು ತನ್ನ ವಿದ್ಯುತ್ ವ್ಯವಸ್ಥೆಯನ್ನು ಒಂದು ದಶಕದೊಳಗೆ ನವೀಕರಿಸಬಹುದಾದ ಇಂಧನವಾಗಿ ಪರಿವರ್ತಿಸುವ ಯೋಜನೆಯನ್ನು ಪ್ರಕಟಿಸಿತು ಮತ್ತು 2050 ರ ವೇಳೆಗೆ ಅದರ ಕಡಲಾಚೆಯ ಪವನ ಶಕ್ತಿಯ ಸಾಮರ್ಥ್ಯವನ್ನು 25 ಪಟ್ಟು ಹೆಚ್ಚಿಸುವ ಯೋಜನೆಯನ್ನು ಅನಾವರಣಗೊಳಿಸಿದ್ದ ರಿಂದ ಡೆನ್ಮಾರ್ಕ್ ಈ ಕ್ರಮವನ್ನು ಕೈಗೊಂಡಿದೆ.

 

ವಿಷಯಗಳು: ಸಂರಕ್ಷಣೆ, ಪರಿಸರ ಮಾಲಿನ್ಯ ಮತ್ತು ಅವನತಿ, ಪರಿಸರ ಪ್ರಭಾವದ ಮೌಲ್ಯಮಾಪನ.

ಕತ್ತರಿಸಿದ 300 ಮರಗಳ ಉತ್ಪನ್ನಗಳಿಗೆ ಆಮ್ಲಜನಕವನ್ನು ಒಳಗೊಂಡಂತೆ ₹ 2.2 ಬಿಲಿಯನ್ ವೆಚ್ಚವಾಗಲಿದೆ:


ಸಂದರ್ಭ:

ಪಶ್ಚಿಮ ಬಂಗಾಳದಲ್ಲಿ ಐದು ರೈಲ್ವೆ ಓವರ್‌ ಬ್ರಿಡ್ಜ್‌ಗಳ ನಿರ್ಮಾಣಕ್ಕಾಗಿ ಕತ್ತರಿಸಬೇಕಾದ 300 ಪಾರಂಪರಿಕ ಮರಗಳು ಆಮ್ಲಜನಕ ಮತ್ತು ಇತರ ಉತ್ಪನ್ನಗಳ ವಿಷಯದಲ್ಲಿ 2.2 ಶತಕೋಟಿ ರೂಪಾಯಿ ಮೌಲ್ಯದ್ದಾಗಿದೆ, ಆದರೆ, ಜೀವಂತ ಮರಗಳು ಈ ಯೋಜನೆಗಿಂತ ಹೆಚ್ಚು ಲಾಭದಾಯಕವಾಗಿವೆ ಎಂದು ಈ ವರದಿ ಹೇಳುತ್ತದೆ. ಅಥವಾ ಪಶ್ಚಿಮ ಬಂಗಾಳದಲ್ಲಿ 5 ರೈಲ್ವೆ ಮೇಲು ಸೇತುವೆಗಳನ್ನು ನಿರ್ಮಿಸಲು ಪಾರಂಪರಿಕ ಮರಗಳನ್ನು ಕಡಿದು ಹಾಕುವುದರಿಂದ ಭಾರತಕ್ಕೆ ₹ 2.2 ಬಿಲಿಯನ್ ಗಳ ನಷ್ಟವಾಗಲಿದೆ ಎಂದು ಸುಪ್ರೀಂಕೋರ್ಟ್ ನೇಮಿಸಿದ್ದ ತಜ್ಞರ ಸಮಿತಿಯು ನೀಡಿದ ವರದಿಯನ್ನು ಇತ್ತೀಚಿಗೆ ತನ್ನ ಗಮನಕ್ಕೆ ತೆಗೆದುಕೊಂಡಿತು.

ಈ ಅಂಕಿಅಂಶವನ್ನು ಹೇಗೆ ನಿರ್ಧರಿಸಲಾಯಿತು?

ಸಮಿತಿಯು ಈ ಕೆಳಗಿನ ಸಂಗತಿಗಳನ್ನು ಅಧ್ಯಯನ ಮಾಡಿದ ನಂತರ ಈ 10-ಅಂಕಿ ಅಂಶಗಳನ್ನು ಬಿಡುಗಡೆ ಮಾಡಲಾಗಿದೆ:

 • ಈ ಮರಗಳು 100 ವರ್ಷಗಳಿಗಿಂತ ಹೆಚ್ಚು ನೈಸರ್ಗಿಕ ಜೀವಿತಾವಧಿಯಲ್ಲಿ ಉತ್ಪಾದಿಸಬಲ್ಲ ಉತ್ಪನ್ನಗಳನ್ನು ಸಮಿತಿ ಲೆಕ್ಕಹಾಕಿದೆ.
 • ಈ ಉತ್ಪನ್ನಗಳ ಲೆಕ್ಕಾಚಾರದಲ್ಲಿ, ಆಮ್ಲಜನಕ, ಸೂಕ್ಷ್ಮ ಪೋಷಕಾಂಶಗಳು, ರಸಗೊಬ್ಬರಗಳು ಮತ್ತು ಜೈವಿಕ ಗೊಬ್ಬರಗಳನ್ನು ಸೇರಿಸಲಾಯಿತು, ಜೊತೆಗೆ ಮರಗಳು ನೈಸರ್ಗಿಕ ಪರಿಸರದ ಪ್ರಮುಖ ಭಾಗವಾಗಿವೆ.
 • ಇದರ ಆಧಾರದ ಮೇಲೆ, ಎಲ್ಲಾ ಬೆಲೆಗಳನ್ನು ಮರದ ಉಳಿದ ವಯಸ್ಸಿನಿಂದ ಸೇರಿಸಿದರೆ ಮತ್ತು ಗುಣಿಸಿದರೆ, ಪ್ರಸ್ತುತ ಸಂದರ್ಭದಲ್ಲಿ ಪ್ರತಿ ಮರದ ಒಟ್ಟು ಬೆಲೆ ವರ್ಷಕ್ಕೆ 74,500 ರೂ.ಗಳಾಗುತ್ತವೆ.

ನ್ಯಾಯಾಲಯ ನೀಡಿದ ಸಲಹೆಗಳು:

 • ರಸ್ತೆ ಮತ್ತು ಹೆದ್ದಾರಿ ಯೋಜನೆಗಳಿಗೆ ಜಲಮಾರ್ಗ ಮತ್ತು ರೈಲ್ವೆಗಳಂತಹ ಇತರ ಸಾರಿಗೆ ವಿಧಾನಗಳ ಕಾರ್ಯಸಾಧ್ಯತೆಯನ್ನು ಪರೀಕ್ಷಿಸಿದ ನಂತರವೇ ಹೊಸ ಪ್ರೋಟೋಕಾಲ್ ಸಿದ್ಧಪಡಿಸಲು ಅನುಮೋದನೆ ನೀಡಲಾಗುತ್ತದೆ ಎಂದು ನ್ಯಾಯಾಲಯ ಸೂಚಿಸಿದೆ.
 • ಒಂದು ವೇಳೆ ರಸ್ತೆ ಯೋಜನೆಯು ಅನಿವಾರ್ಯವಾದರೆ, ಪ್ರತಿ ಮರದ ಬೆಲೆಯನ್ನು ಆ “ಯೋಜನೆಯ ವೆಚ್ಚದಲ್ಲಿ” ಸೇರಿಸಬೇಕು ಎಂದು ಹೇಳಿದೆ.

 

 

ವಿಷಯಗಳು: ಸಂವಹನ ನೆಟ್‌ವರ್ಕ್‌ಗಳ ಮೂಲಕ ಆಂತರಿಕ ಭದ್ರತೆಗೆ ಸವಾಲುಗಳು, ಆಂತರಿಕ ಭದ್ರತಾ ಸವಾಲುಗಳಲ್ಲಿ ಮಾಧ್ಯಮ ಮತ್ತು ಸಾಮಾಜಿಕ ಜಾಲತಾಣಗಳ ಪಾತ್ರ, ಸೈಬರ್ ಸುರಕ್ಷತೆಯ ಮೂಲಗಳು; ಹಣ ವರ್ಗಾವಣೆ ಮತ್ತು ಅದರ ತಡೆಗಟ್ಟುವಿಕೆ.

ಯಾವುದೇ ಸಂಸ್ಥೆಯನ್ನು ನಿರಂತರವಾಗಿ ಮೇಲ್ವಿಚಾರಣೆ ಮಾಡಲು ಅನುಮತಿ ಇಲ್ಲ:


ಸಂದರ್ಭ:

ಕೇಂದ್ರೀಕೃತ ಮಾನಿಟರಿಂಗ್ ಸಿಸ್ಟಮ್ (CMS), ನೆಟ್‌ವರ್ಕ್ ಟ್ರಾಫಿಕ್ ಅನಾಲಿಸಿಸ್ (NETRA) ಮತ್ತು ನ್ಯಾಷನಲ್ ಇಂಟೆಲಿಜೆನ್ಸ್ ಗ್ರಿಡ್ (NATGRID) ನಂತಹ ಕಣ್ಗಾವಲು ಕಾರ್ಯಕ್ರಮಗಳ ಅಡಿಯಲ್ಲಿ ಯಾವುದೇ ಸಂದೇಶಗಳು ಅಥವಾ ಮಾಹಿತಿಯನ್ನು ತಡೆಹಿಡಿಯಲು ಅಥವಾ ನಿರಂತರವಾಗಿ ಮೇಲ್ವಿಚಾರಣೆ ಮಾಡಲು ಅಥವಾ ಡಿಕ್ರಿಪ್ಟ್ ಮಾಡಲು ಯಾವುದೇ ಏಜೆನ್ಸಿಗೆ ಅನುಮತಿ ನೀಡಿಲ್ಲ ಎಂದು ಕೇಂದ್ರ ಸರ್ಕಾರವು ಇತ್ತೀಚೆಗೆ ದೆಹಲಿ ಹೈಕೋರ್ಟ್‌ಗೆ ತಿಳಿಸಿದೆ.

ಹಿನ್ನೆಲೆ:

ಕೆಲವು ಸಮಯದ ಹಿಂದೆ, ನ್ಯಾಯಾಲಯದಲ್ಲಿ ಸಲ್ಲಿಸಲಾದ ಅರ್ಜಿಯಲ್ಲಿ, ಭಾರತೀಯ ಟೆಲಿಗ್ರಾಫ್ ಕಾಯ್ದೆ ಮತ್ತು ಮಾಹಿತಿ ತಂತ್ರಜ್ಞಾನ ಕಾಯ್ದೆಯ ನಿಬಂಧನೆಗಳ ಅಡಿಯಲ್ಲಿ ಮಾನ್ಯ ಪ್ರತಿಬಂಧ ಮತ್ತು ಕಣ್ಗಾವಲು ಆದೇಶಗಳು ಅಥವಾ ವಾರಂಟ್‌ಗಳ ಪರಿಶೀಲನೆಗಾಗಿ ಶಾಶ್ವತ ಸ್ವತಂತ್ರ ತಪಾಸಣಾ ಸಂಸ್ಥೆಯನ್ನು ರಚಿಸಲು ಕೋರಿ ಸಲ್ಲಿಸಲಾದ ಮನವಿಗೆ ಪ್ರತಿಕ್ರಿಯೆಯಾಗಿ ಈ ಅಫಿಡವಿಟ್ ಅನ್ನು ಕೇಂದ್ರ ಸರ್ಕಾರ ಸಲ್ಲಿಸಿದೆ.

ಕಣ್ಗಾವಲು ಅಗತ್ಯತೆ:

“ಭಯೋತ್ಪಾದನೆ, ಧರ್ಮಾಂಧತೆ, ಗಡಿಯಾಚೆಗಿನ ಭಯೋತ್ಪಾದನೆ, ಸೈಬರ್ ಅಪರಾಧ, ಸಂಘಟಿತ ಅಪರಾಧ, ಡ್ರಗ್ ಕಾರ್ಟೆಲ್‌ಗಳು, ದೇಶಕ್ಕೆ ಒಡ್ಡುವ ಗಂಭೀರ ಬೆದರಿಕೆಯನ್ನು ಲಘುವಾಗಿ ಪರಿಗಣಿಸಲಾಗುವುದಿಲ್ಲ ಅಥವಾ ನಿರ್ಲಕ್ಷಿಸಲಾಗುವುದಿಲ್ಲ” ಎಂದು ಸರ್ಕಾರ ಹೇಳಿದೆ. ಆದ್ದರಿಂದ ಇದನ್ನು ನಿರ್ಲಕ್ಷಿಸಲಾಗುವುದಿಲ್ಲ ಮತ್ತು ರಾಷ್ಟ್ರೀಯ ಭದ್ರತೆಗೆ ಎದುರಾಗುವ ಬೆದರಿಕೆಗಳನ್ನು ಎದುರಿಸಲು “ಕ್ರಿಯಾತ್ಮಕ ಮಾಹಿತಿಯನ್ನು ತ್ವರಿತವಾಗಿ ಒಟ್ಟುಗೂಡಿಸಲು” ಬಲವಾದ ಮತ್ತು ಪರಿಣಾಮಕಾರಿ ಕಾರ್ಯವಿಧಾನವು ಕಡ್ಡಾಯವಾಗಿದೆ. ಹೀಗೆ ಸರ್ಕಾರವು CMS, NETRA ಮತ್ತು NATGRID ಕಣ್ಗಾವಲು ವ್ಯವಸ್ಥೆಗಳ ಅಗತ್ಯವನ್ನು ಸಮರ್ಥಿಸಿತು.

ಏನಿದು ಸಮಸ್ಯೆ?

ಕಣ್ಗಾವಲು ವ್ಯವಸ್ಥೆಗಳ ಅನುಷ್ಠಾನ ಮತ್ತು ವಿಚಾರಣೆಯು ನಾಗರಿಕರ ಗೌಪ್ಯತೆಯ ಅಥವಾ ಖಾಸಗೀತನದ  ಹಕ್ಕಿನ ಮೇಲೆ ‘ಬಿಕ್ಕಟ್ಟನ್ನು’ ಹಾಕುತ್ತಿದೆ ಎಂದು ಹೇಳಲಾದ ಸಾರ್ವಜನಿಕ ಹಿತಾಸಕ್ತಿ ಅರ್ಜಿಗೆ ಸಂಬಂಧಿಸಿದಂತೆ, ದೆಹಲಿ ಹೈಕೋರ್ಟ್ ಕೇಂದ್ರದಿಂದ ಉತ್ತರವನ್ನು ಅಥವಾ ಪ್ರತಿಕ್ರಿಯೆಯನ್ನು ಕೋರಿತ್ತು.

 • ಈ ಕಣ್ಗಾವಲು ವ್ಯವಸ್ಥೆಗಳು ಕೇಂದ್ರ ಮತ್ತು ರಾಜ್ಯ ಕಾನೂನು ಜಾರಿ ಸಂಸ್ಥೆಗಳಿಗೆ ಎಲ್ಲಾ ದೂರಸಂಪರ್ಕ ಸಂವಹನವನ್ನು ಬೃಹತ್ ಪ್ರಮಾಣದಲ್ಲಿ ತಡೆಗಟ್ಟಲು ಮತ್ತು ಮೇಲ್ವಿಚಾರಣೆ ಮಾಡಲು ಅವಕಾಶ ನೀಡುತ್ತವೆ ಎಂದು ಸರ್ಕಾರೇತರ ಸಂಸ್ಥೆಯಾದ ಸೆಂಟರ್ ಫಾರ್ ಪಬ್ಲಿಕ್ ಇಂಟರೆಸ್ಟ್ ಲಿಟಿಗೇಷನ್ (CPIL) ಮನವಿ ಮಾಡಿದೆ. ಇದು ವ್ಯಕ್ತಿಗಳ ಗೌಪ್ಯತೆಯ ಮೂಲಭೂತ ಹಕ್ಕಿನ ಉಲ್ಲಂಘನೆಯಾಗಿದೆ.

 ಅರ್ಜಿದಾರರ ಪ್ರಮುಖ ಬೇಡಿಕೆಗಳು ಯಾವವು?

ಅರ್ಜಿದಾರರು, ಭಾರತೀಯ ಟೆಲಿಗ್ರಾಫ್ ಕಾಯ್ದೆ, 1885 ಮತ್ತು ಮಾಹಿತಿ ತಂತ್ರಜ್ಞಾನ ಕಾಯ್ದೆ, 2000 ರ ಸಮರ್ಥ ನಿಬಂಧನೆಗಳ ಅಡಿಯಲ್ಲಿ, ನ್ಯಾಯಸಮ್ಮತವಾದ ಪ್ರತಿಬಂಧ ಮತ್ತು ಕಣ್ಗಾವಲು ಆದೇಶಗಳು ಅಥವಾ ವಾರಂಟ್‌ಗಳನ್ನು ಪರಿಶೀಲಿಸಲು ನ್ಯಾಯಾಂಗ ಮತ್ತು ಸಂಸದೀಯ ಪ್ರತಿನಿಧಿಗಳ ಶಾಶ್ವತ ಸ್ವತಂತ್ರ ಮೇಲ್ವಿಚಾರಣಾ ಸಂಸ್ಥೆಯನ್ನು ರಚಿಸಲು ಕೋರಿದ್ದಾರೆ.

 


ಸಾಮಾನ್ಯ ಅಧ್ಯಯನ ಪತ್ರಿಕೆ – 4


 

ವಿಷಯಗಳು: ಭಾವನಾತ್ಮಕ ತಿಳುವಳಿಕೆ: ಪರಿಕಲ್ಪನೆಗಳು ಮತ್ತು ಆಡಳಿತ ಮತ್ತು ಆಡಳಿತದಲ್ಲಿ ಅವುಗಳ ಬಳಕೆ ಮತ್ತು ಉಪಯೋಗ.

ಸರ್ಕಾರದ ‘ವಿರೋಧಿ ವರ್ತನೆ’ಯ ಟೀಕೆ:


Govt. Draws flak for ‘adversarial’ stance:

 • ನಿವೃತ್ತ ಹಿರಿಯ ನಾಗರಿಕ ಸೇವಕರ ಗುಂಪೊಂದು ಬಹಿರಂಗ ಪತ್ರವೊಂದರಲ್ಲಿ ಈಗ ನಡೆಯುತ್ತಿರುವ ರೈತ ಪ್ರತಿಭಟನೆಗಳ ಬಗ್ಗೆ ಸರ್ಕಾರದ ಮನೋಭಾವವನ್ನು ಕುರಿತು ‘ವಿರೋಧಿ ಮತ್ತು ಸಂಘರ್ಷದಿಂದ ಕೂಡಿದೆ’ ಎಂದು ಕೇಂದ್ರ ಸರ್ಕಾರವನ್ನು ಟೀಕಿಸಿದೆ.
 • ಪತ್ರವನ್ನು ಬಿಡುಗಡೆ ಮಾಡಿದ ‘ಸಾಂವಿಧಾನಿಕ ನಡವಳಿಕೆ ಗುಂಪು’ ಅವರು ಭಾರತದ ಸಂವಿಧಾನದ ನ್ಯಾಯಸಮ್ಮತತೆ, ತಟಸ್ಥತೆ ಮತ್ತು ಬದ್ಧತೆಯನ್ನು ನಂಬುವುದಾಗಿ ಹೇಳಿದೆ.
 • ಪ್ರಾದೇಶಿಕತೆ, ಕೋಮುವಾದ ಮತ್ತು ಇತರ ಆಧಾರದ ಮೇಲೆ ಚಳುವಳಿಯನ್ನು ಧ್ರುವೀಕರಿಸುವ ಸರ್ಕಾರದ ಪ್ರಯತ್ನವನ್ನು ಈ ಗುಂಪು ಟೀಕಿಸಿದೆ. ಈ ರೀತಿಯ ವರ್ತನೆ ಎಂದಿಗೂ ಈ ಸಮಸ್ಯೆಯನ್ನು ಪರಿಹರಿಸುವುದಿಲ್ಲ ಎಂದು ಅದು ಹೇಳಿದೆ.

ಈ ಪತ್ರವು ಜನವರಿ 26 ರ ಘಟನೆಗಳಿಗೆ ಸಂಬಂಧಿಸಿದಂತೆ ಹಲವಾರು ಪ್ರಶ್ನೆಗಳನ್ನು ಎತ್ತಿದೆ:

 • ದೆಹಲಿ ಪೊಲೀಸರು ಈಗಾಗಲೇ ನಿಗದಿಪಡಿಸಿದ ಮಾರ್ಗಗಳಲ್ಲಿ ಬ್ಯಾರಿಕೇಡ್‌ಗಳನ್ನು ಏಕೆ ಇರಿಸಿದ್ದರು ಮತ್ತು ಅದು ರೈತರಿಗೆ ಮಾರ್ಗವನ್ನು ಬದಲಾಯಿಸುವಂತೆ ಪ್ರಚೋದಿಸಿತು.
 • ಕೆಂಪು ಕೋಟೆಯಲ್ಲಿ ಧ್ವಜ ಹಾರಿಸುವುದನ್ನು ತಡೆಯಲು ಪೊಲೀಸರು ಏಕೆ ವಿಫಲರಾಗಿದ್ದಾರೆ ಮತ್ತು ಅದರ ಭದ್ರತಾ ಕಟ್ಟುಪಾಡುಗಳನ್ನು ಪೂರೈಸುವಲ್ಲಿ ವಿಫಲರಾಗಿದ್ದಾರೆಯೇ, ದೆಹಲಿ ಪೊಲೀಸರು ಮತ್ತು ಗೃಹ ಮತ್ತು ರಕ್ಷಣಾ ಸಚಿವಾಲಯಗಳ ಸಿಬ್ಬಂದಿ ವಿರುದ್ಧ ಕ್ರಮ ಕೈಗೊಳ್ಳಲಾಗಿದೆಯೇ.
 • ಶಾಂತಿಯುತ ಮೆರವಣಿಗೆ ನಡೆಸಿದ ಹೆಚ್ಚಿನ ರೈತರನ್ನು ಕುರಿತು ಮಾಧ್ಯಮಗಳು ಏಕೆ ಸುದ್ದಿ ಪ್ರಸಾರ ಮಾಡಲಿಲ್ಲ.
 • ಸಿಂಗು ಗಡಿಯಲ್ಲಿ ಪ್ರತಿಭಟನಾ ನಿರತ ರೈತರ ಮೇಲೆ ‘ಕೆಲವು ಗೂಂಡಾಗಳು’ ಹಲ್ಲೆ ನಡೆಸಿದಾಗ ಪೊಲೀಸರು ತಕ್ಷಣ ಏಕೆ ಮಧ್ಯಪ್ರವೇಶಿಸಲಿಲ್ಲ.

 


ಪೂರ್ವಭಾವಿ ಪರೀಕ್ಷೆಗೆ ಸಂಬಂಧಿಸಿದ ವಿದ್ಯಮಾನಗಳು:


ಕುಟುಂಬ ಗುರುತಿನ ಚೀಟಿ ಯೋಜನೆ:

 • ಇದು ಹರಿಯಾಣ ಸರ್ಕಾರ ಪ್ರಾರಂಭಿಸಿದ ವಿಶಿಷ್ಟ ಗುರುತಿನ ಚೀಟಿ ಯೋಜನೆಯಾಗಿದೆ.
 • ಇದರ ಅಡಿಯಲ್ಲಿ, ಹರಿಯಾಣ ವಸತಿ ವಿಳಾಸ ಹೊಂದಿರುವ ಯಾವುದೇ ಕುಟುಂಬವು ಯೋಜನೆಯಡಿ ದಾಖಲಾಗಬಹುದು.
 • ಈ ಯೋಜನೆಯಡಿ, ಹರಿಯಾಣದಲ್ಲಿ ವಾಸಿಸುವ ಪ್ರತಿ ಕುಟುಂಬಕ್ಕೆ ಎಂಟು-ಅಂಕಿಯ ಆಲ್ಫಾ ಸಂಖ್ಯಾ ಐಡಿ ಹೊಂದಿರುವ (an eight-digit alpha numeric ID ) ‘ಕುಟುಂಬ ಗುರುತಿನ ಚೀಟಿ’ ಯನ್ನು (PPP) ನೀಡಲಾಗುವುದು.
 • ಹರಿಯಾಣದಲ್ಲಿ ವಾಸಿಸುವ ಆದರೆ ರೆಸಿಡೆನ್ಸಿಯ ಅವಶ್ಯಕತೆಗಳನ್ನು ಪೂರೈಸದವರಿಗೆ ‘ನೋಂದಣಿ ಗುರುತಿನ ಚೀಟಿ’ ಸಹ ನೀಡಲಾಗುವುದು.
 • ಇಲ್ಲಿಯವರೆಗೆ, ನಾಗರಿಕರಿಗೆ ಸರಲ್ ಪ್ಲಾಟ್‌ಫಾರ್ಮ್ ಮೂಲಕ ಒದಗಿಸುತ್ತಿರುವ ಸೇವೆಗಳ ಯೋಜನೆಗಳನ್ನು PPP ಯೋಜನೆಗೆ ಲಿಂಕ್ ಮಾಡಲಾಗಿದೆ.

 • Join our Official Telegram Channel HERE for Motivation and Fast Updates

 • Subscribe to our YouTube Channel HERE to watch Motivational and New analysis videos