Print Friendly, PDF & Email

[ ದೈನಂದಿನ ಪ್ರಚಲಿತ ಘಟನೆಗಳು ] ದಿನಾಂಕ – 9 ಜನವರಿ 2021

 

ಪರಿವಿಡಿ :

ಸಾಮಾನ್ಯ ಅಧ್ಯಯನ ಪತ್ರಿಕೆ 1:

1. ಸಲಿಂಗ ವಿವಾಹಗಳ ಕುರಿತು ತನ್ನ ಸ್ಪಷ್ಟವಾದ ನಿಲುವನ್ನು ಪ್ರಕಟಿಸಲು ಕೇಂದ್ರಕ್ಕೆ ಕೊನೆಯ ಅವಕಾಶ: ದೆಹಲಿ ಹೈಕೋರ್ಟ್.

2. ಪುರೋಹಿತರಲ್ಲಿ ತಪ್ಪೊಪ್ಪಿಗೆಯನ್ನು ಕೇಳುವುದರ ವಿರುದ್ಧದ ಮನವಿಯನ್ನು ಆಲಿಸಲಿರುವ ಸುಪ್ರೀಂ ಕೋರ್ಟ್.

 

ಸಾಮಾನ್ಯ ಅಧ್ಯಯನ ಪತ್ರಿಕೆ 2:

1. ಮತ್ತೆ ಮರು ಕಳಿಸಿದ ಹಕ್ಕಿ ಜ್ವರ.

2. ವಿದೇಶಗಳಲ್ಲಿ ಕ್ಯಾಂಪಸ್‌ಗಳನ್ನು ಸ್ಥಾಪಿಸಲಿರುವ ಶ್ರೇಷ್ಠತೆಯ ಸಂಸ್ಥೆಗಳು (IoEs).

 

ಸಾಮಾನ್ಯ ಅಧ್ಯಯನ ಪತ್ರಿಕೆ 3:

1. NCAVES ಇಂಡಿಯಾ ಫೋರಂ 2021.

2. ದಕ್ಷಿಣ ಏಷ್ಯಾದ ಮೂರನೇ ಬಹುಪಕ್ಷೀಯ ಸಮಾವೇಶವನ್ನು ಆಯೋಜಿಸಿದ ಚೀನಾ.

 

ಪೂರ್ವ ಭಾವಿ ಪರೀಕ್ಷೆಗೆ ಸಂಬಂಧಿಸಿದ ವಿದ್ಯಮಾನಗಳು:

1. ನ್ಯಾಷನಲ್ ಇಂಟರ್ನೆಟ್ ಎಕ್ಸ್ಚೇಂಜ್ ಆಫ್ ಇಂಡಿಯಾ (NIXI).

 


ಸಾಮಾನ್ಯ ಅಧ್ಯಯನ ಪತ್ರಿಕೆ – 1


 

ವಿಷಯಗಳು:ಮಹಿಳೆಯರು ಮತ್ತು ಮಹಿಳಾ ಸಂಘಟನೆಗಳ ಪಾತ್ರ ಜನಸಂಖ್ಯೆ ಮತ್ತು ಸಂಬಂಧಿತ ಸಮಸ್ಯೆಗಳು, ಬಡತನ ಮತ್ತು ಅಭಿವೃದ್ಧಿ ಸಮಸ್ಯೆಗಳು, ನಗರೀಕರಣ, ಅದರ ಸಮಸ್ಯೆಗಳು ಮತ್ತು ಪರಿಹಾರಗಳು.

ಸಲಿಂಗ ವಿವಾಹಗಳ ಕುರಿತು ತನ್ನ ಸ್ಪಷ್ಟವಾದ ನಿಲುವನ್ನು ಪ್ರಕಟಿಸಲು ಕೇಂದ್ರಕ್ಕೆ ಕೊನೆಯ ಅವಕಾಶ: ದೆಹಲಿ


ಹೈಕೋರ್ಟ್.

ಸಂದರ್ಭ:

   ಹಿಂದೂ ವಿವಾಹ ಕಾಯ್ದೆ, ವಿಶೇಷ ವಿವಾಹ ಕಾಯ್ದೆ ಮತ್ತು ವಿದೇಶಿ ವಿವಾಹ ಕಾಯ್ದೆಯಡಿ ಸಲಿಂಗ ವಿವಾಹಗಳಿಗೆ ಮಾನ್ಯತೆ ಮತ್ತು ನೋಂದಣಿ ಕೋರಿ ಸಲ್ಲಿಸಲಾದ ಅರ್ಜಿಗಳಿಗೆ ಪ್ರತಿಕ್ರಿಯೆ ಸಲ್ಲಿಸಲು ದೆಹಲಿ ಹೈಕೋರ್ಟ್ ಶುಕ್ರವಾರ ಕೇಂದ್ರ ಮತ್ತು ದೆಹಲಿ ಸರ್ಕಾರಕ್ಕೆ ಕೊನೆಯ ಅವಕಾಶವನ್ನು ನೀಡಿದೆ.

ಅಕ್ಟೋಬರ್ ಮತ್ತು ನವೆಂಬರ್‌ನಲ್ಲಿ ನೋಟಿಸ್ ನೀಡಲಾಗಿದ್ದರೂ, ಅಧಿಕಾರಿಗಳು/ಆಡಳಿತ ವ್ಯವಸ್ಥೆಯು

ಈ ಪ್ರಕರಣದ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ ಎಂದು ನ್ಯಾಯಾಲಯಕ್ಕೆ ತಿಳಿಸಲಾಯಿತು.

ಹಿನ್ನೆಲೆ:

ಸುಪ್ರೀಂ ಕೋರ್ಟ್ ಸಹಮತದ ಸಲಿಂಗಕಾಮಿ ಕೃತ್ಯಗಳನ್ನು ನಿರಪರಾಧಿಕರಣ ಗೊಳಿಸಿದರು ದೆಹಲಿ ಹೈಕೋರ್ಟ್‌ನಲ್ಲಿ ಸಲ್ಲಿಸಲಾದ ಅರ್ಜಿಗಳಲ್ಲಿ ಸಲಿಂಗ ಜೋಡಿಗಳ ನಡುವಿನ ಮದುವೆ ಸಾಧ್ಯವಿಲ್ಲ ಎಂದು ವಾದಿಸಲಾಯಿತು.

ಹಿಂದೂ ವಿವಾಹ ಕಾಯ್ದೆ (HMA) ಮತ್ತು ವಿಶೇಷ ವಿವಾಹ ಕಾಯ್ದೆ (SMA) ಅಡಿಯಲ್ಲಿ ಏಕರೂಪಿ ಲೈಂಗಿಕ (Same sex)  ವಿವಾಹಗಳನ್ನು ಮಾನ್ಯಮಾಡಿ  ಘೋಷಿಸುಂತೆ ಅರ್ಜಿದಾರರು ಕೋರಿದರು.

 • ಇತರ ಎರಡು ಮನವಿಗಳೆಂದರೆ – ಒಂದು, ಇಬ್ಬರು ಮಹಿಳೆಯರು SMA ಅಡಿಯಲ್ಲಿ ಮದುವೆಯಾಗಬೇಕೆಂದು ಕೋರಿ ಅರ್ಜಿಯನ್ನು ಸಲ್ಲಿಸಿರುವುದು ಮತ್ತು ಇನ್ನೊಂದು ಸಲಿಂಗ ವಿವಾಹಗಳಿಗೆ ಅವಕಾಶ ನೀಡದ ಮಟ್ಟಿಗಿನ ಕಾನೂನಿನ ನಿಬಂಧನೆಗಳನ್ನು ಪ್ರಶ್ನಿಸುವುದು.
 • ಅಮೇರಿಕಾದಲ್ಲಿ ವಿವಾಹವಾದ ಇಬ್ಬರು ಪುರುಷರ ಮದುವೆಯನ್ನು ವಿದೇಶಿ ವಿವಾಹ ಕಾಯ್ದೆ (FMA) ಅಡಿಯಲ್ಲಿ ಅವರ ಮದುವೆಯನ್ನು ನೋಂದಾಯಿಸಲು ನಿರಾಕರಿಸಲಾದ ಇನ್ನೊಂದು ಮನವಿ.

ಭಾರತದಲ್ಲಿ ಸಲಿಂಗ ವಿವಾಹಗಳ ಕಾನೂನುಬದ್ಧತೆ

ಭಾರತೀಯ ದಂಡ ಸಂಹಿತೆಯ ಸೆಕ್ಷನ್ 377 ಒಂದೇ ಲಿಂಗದ ವ್ಯಕ್ತಿಗಳೊಂದಿಗೆ ಲೈಂಗಿಕತೆ ಅಥವಾ ವಿವಾಹವನ್ನು ಕಾನೂನಿನ ಪ್ರಕಾರ ಶಿಕ್ಷಾರ್ಹವೆಂದು ಘೋಷಿಸುತ್ತದೆ.

 • ಆದಾಗ್ಯೂ, ಸೆಪ್ಟೆಂಬರ್ 6, 2018 ರಂದು ಭಾರತದ ಸುಪ್ರೀಂ ಕೋರ್ಟ್ ಸೆಕ್ಷನ್ 377 ಅನ್ನು ನಿರಪರಾಧಿಕರಣ ಗೊಳಿಸಿ ಸಲಿಂಗಕಾಮವನ್ನು ಕಾನೂನುಬದ್ಧಗೊಳಿಸಿತು.
 • 2 ಜುಲೈ 2009 ರಂದು, ನಾಜ್ ಫೌಂಡೇಶನ್ ವಿರುದ್ಧ ದೆಹಲಿNCT ಸರ್ಕಾರ ಪ್ರಕರಣದಲ್ಲಿ ದೆಹಲಿ ಹೈಕೋರ್ಟ್ ವಯಸ್ಕರ ನಡುವಿನ ಒಮ್ಮತದ ಲೈಂಗಿಕತೆಗೆ ಸಂಬಂಧಿಸಿದ ಅವಕಾಶವು ಅಸಂವಿಧಾನಿಕವಾಗಿದೆ ಎಂದು ತೀರ್ಪು ನೀಡಿತು, ಆದರೆ,11 ಡಿಸೆಂಬರ್ 2013 ರಂದು ಭಾರತದ ಸುಪ್ರೀಂ ಕೋರ್ಟ್ ಆ ತೀರ್ಪನ್ನು ಅಸಿಂಧು ಗೊಳಿಸಿತು.

 

ವಿಷಯಗಳು:ಮಹಿಳೆಯರು ಮತ್ತು ಮಹಿಳಾ ಸಂಘಟನೆಗಳ ಪಾತ್ರ ಜನಸಂಖ್ಯೆ ಮತ್ತು ಸಂಬಂಧಿತ ಸಮಸ್ಯೆಗಳು, ಬಡತನ ಮತ್ತು ಅಭಿವೃದ್ಧಿ ಸಮಸ್ಯೆಗಳು, ನಗರೀಕರಣ, ಅದರ ಸಮಸ್ಯೆಗಳು ಮತ್ತು ಪರಿಹಾರಗಳು.

ಪುರೋಹಿತರಲ್ಲಿ ತಪ್ಪೊಪ್ಪಿಗೆಯನ್ನು ಕೇಳುವುದರ ವಿರುದ್ಧದ ಮನವಿಯನ್ನು ಆಲಿಸಲಿರುವ ಸುಪ್ರೀಂ ಕೋರ್ಟ್.


ಸಂದರ್ಭ :

 • ಕ್ರಿಶ್ಚಿಯನ್ ಧರ್ಮದಲ್ಲಿ ಪುರೋಹಿತರಿಗೆ ಪವಿತ್ರ ತಪ್ಪೊಪ್ಪಿಗೆಯನ್ನು ಕೇಳುವುದರ ಕಡ್ಡಾಯ ಸ್ವರೂಪದ ವಿರುದ್ಧ ಮಹಿಳೆಯರ ಗುಂಪು ಸಲ್ಲಿಸಿದ ಅರ್ಜಿಯನ್ನು ಮೂರು ವಾರಗಳ ನಂತರ ಪರಿಗಣಿಸಲು ಸುಪ್ರೀಂ ಕೋರ್ಟ್ ಶುಕ್ರವಾರ ಒಪ್ಪಿಕೊಂಡಿತು.
 • ಅರ್ಜಿಯಲ್ಲಿನ ವಿಷಯಗಳು ನಂಬಿಕೆ,ವಿಶ್ವಾಸ, ಮಹಿಳಾ ಹಕ್ಕುಗಳು ಮತ್ತು ಸಮಾನತೆಯಂತಹ ಪ್ರಶ್ನೆಗಳ ವ್ಯಾಪ್ತಿಗೆ ಬಂದಿರುವುದರಿಂದ ನ್ಯಾಯಾಲಯವು ಅವುಗಳನ್ನು ಪರಿಶೀಲಿಸುತ್ತದೆ.

ಹಿನ್ನೆಲೆ:

ಕೇರಳದ ಕೆಲವು ಚರ್ಚುಗಳಲ್ಲಿ ಪವಿತ್ರ ತಪ್ಪೊಪ್ಪಿಗೆಯ ಕಡ್ಡಾಯ ಅಭ್ಯಾಸದ ವಿರುದ್ಧ ಐವರು ಮಹಿಳೆಯರು ಸುಪ್ರೀಂ ಕೋರ್ಟ್ ಗೆ ಮೊರೆ ಹೋಗಿದ್ದಾರೆ.

 • ಈ ಪದ್ಧತಿಯು ಸಂವಿಧಾನದ 25 ನೇ ವಿಧಿಯ ಅಡಿಯಲ್ಲಿ ನೀಡಿರುವ ಮೂಲಭೂತ ಹಕ್ಕಾದ ಧಾರ್ಮಿಕ ಸ್ವಾತಂತ್ರ್ಯವನ್ನು ಉಲ್ಲಂಘಿಸಿದೆ ಎಂದು ಅವರು ವಾದಿಸಿದ್ದಾರೆ.
 • ಅರ್ಜಿದಾರರು-ಚರ್ಚ್‌ನ ಸದಸ್ಯರು – ಈ ಅಭ್ಯಾಸವು ಮಹಿಳೆಯರ ಮೇಲಿನ ಲೈಂಗಿಕ ಶೋಷಣೆ ಮತ್ತು ಪುರುಷರು ಮತ್ತು ಮಹಿಳಾ ಅನುಯಾಯಿಗಳನ್ನು ಬ್ಲ್ಯಾಕ್‌ಮೇಲ್ ಮಾಡುವುದು ಸೇರಿದಂತೆ ಹಲವಾರು ಸಮಸ್ಯೆಗಳಿಗೆ ಕಾರಣವಾಗುತ್ತಿದೆ ಎಂದು ಆರೋಪಿಸಿದ್ದಾರೆ.

ಸಾಂಪ್ರದಾಯಿಕ ಅಭ್ಯಾಸಗಳು :

ಮಲಂಕರ ಆರ್ಥೊಡಾಕ್ಸ್ ಸಿರಿಯನ್ ಚರ್ಚ್ ಅನುಸರಿಸುತ್ತಿರುವ ಧಾರ್ಮಿಕ ಆಚರಣೆಯ ಪ್ರಕಾರ, ಸದಸ್ಯರು ತಮ್ಮ ಪಾಪಗಳಿಂದ ಪರಿಹಾರ ಪಡೆಯಲು ಪಾದ್ರಿಯ ಮುಂದೆ ‘ಸಂಸ್ಕಾರದ ತಪ್ಪೊಪ್ಪಿಗೆಯನ್ನು’

(Sacramental Confession) ಮಾಡಬೇಕಾಗುತ್ತದೆ.

 • ಸಂಪ್ರದಾಯದ ಪ್ರಕಾರ, ಕ್ರಿಶ್ಚಿಯನ್ನರ ತಾತ್ಕಾಲಿಕ ಮತ್ತು ಆಧ್ಯಾತ್ಮಿಕ ಅಗತ್ಯಗಳನ್ನು ಪೂರೈಸಲು ಇದು ಪೂರ್ವಾಪೇಕ್ಷಿತವಾಗಿದೆ.
 • ಹಾಗೆ ಮಾಡದವನಿಗೆ ಚರ್ಚ್‌ನಿಂದ ಅಂತಹ ಸೇವೆಗಳ ಪ್ರಯೋಜನವನ್ನು ನಿರಾಕರಿಸಲಾಗುತ್ತದೆ.

ಈ ಮೊದಲು ಸುಪ್ರೀಂ ಕೋರ್ಟ್ ನ ಮಧ್ಯಪ್ರವೇಶ.

 • ಈ ಮೊದಲು, ಚರ್ಚ್ ಅಡಿಯಲ್ಲಿ ಪ್ಯಾರಿಷ ಗಳನ್ನು ಆಳಲು ಮಲಂಕರ ಆರ್ಥೊಡಾಕ್ಸ್ ಸಿರಿಯನ್ ಚರ್ಚ್ ನ 1934 ರ ಸಂವಿಧಾನದ ಸಿಂಧುತ್ವವನ್ನು ಸುಪ್ರೀಂ ಕೋರ್ಟ್ ಎತ್ತಿಹಿಡಿದಿದೆ.

 


ಸಾಮಾನ್ಯ ಅಧ್ಯಯನ ಪತ್ರಿಕೆ – 2


 

ವಿಷಯಗಳುಃ ಆರೋಗ್ಯ, ಶಿಕ್ಷಣ ಮತ್ತು ಮಾನವ ಸಂಪನ್ಮೂಲಕ್ಕೆ ಸಂಬಂಧಿಸಿದ ಸಾಮಾಜಿಕ ವಲಯ/ ಸೇವೆಗಳ ಅಭಿವೃದ್ಧಿ ಮತ್ತು ನಿರ್ವಹಣೆಗೆ ಸಂಬಂಧಿಸಿದ ಸಮಸ್ಯೆಗಳು.

ಮತ್ತೆ ಮರು ಕಳಿಸಿದ ಹಕ್ಕಿ ಜ್ವರ.


ಸಂದರ್ಭ :

ಇತ್ತೀಚೆಗೆ ಗುಜರಾತ್‌ನಲ್ಲಿ ಹೊಸ ಪಕ್ಷಿ ಜ್ವರ (ಏವಿಯನ್ ಇನ್ಫ್ಲುಯೆನ್ಸ) (avian influenza) ಪ್ರಕರಣಗಳು ದೃಢಪಟ್ಟಿದೆ ಹಾಗೂ ಕೇರಳ, ರಾಜಸ್ಥಾನ, ಮಧ್ಯಪ್ರದೇಶ ಮತ್ತು ಹರಿಯಾಣಗಳಲ್ಲಿ ಈ ರೋಗವು ಈಗಾಗಲೇ ದೃಢಪಟ್ಟಿದ್ದು, ಅವುಗಳ ಜೊತೆಗೆ ಇದು ಹೊಸ ಸೇರ್ಪಡೆಯಾಗಿದೆ.

ಹಲವಾರು ರಾಜ್ಯಗಳು ಕಾಗೆಗಳು ಮತ್ತು ವಲಸೆ ಹಕ್ಕಿಗಳು ಸೇರಿದಂತೆ ಪಕ್ಷಿಗಳ ಸಾವನ್ನು ವರದಿ ಮಾಡುತ್ತಿದ್ದು ವೈರಸ್‌ನ ಮಾದರಿಗಳನ್ನು ಪರೀಕ್ಷಿಸಲು ಸ್ಕ್ರಾಂಬ್ಲಿಂಗ್  ಮಾಡುತ್ತಿವೆ.

ಸೋಂಕು:The infection:

 ಬರ್ಡ್ ಫ್ಲೂ (ಹಕ್ಕಿಜ್ವರ) ಅಥವಾ ಏವಿಯನ್ ಇನ್ಫ್ಲುಯೆನ್ಸವು ವೈರಲ್ ಸೋಂಕನ್ನು ವಿವರಿಸಲು ಬಳಸುವ ಹೆಸರಾಗಿದ್ದು, ಇದು ಹೆಚ್ಚಾಗಿ ಪಕ್ಷಿಗಳಲ್ಲಿ ಕಂಡು ಬಂದಿರುವುದು ವರದಿಯಾಗಿದೆ, ಆದರೆ ಇದು ಮಾನವರು ಮತ್ತು ಇತರ ಪ್ರಾಣಿಗಳ ಮೇಲೆ ಪರಿಣಾಮ ಬೀರುವ ಸಾಮರ್ಥ್ಯವನ್ನು ಹೊಂದಿದೆ.

 • ಇತ್ತೀಚೆಗೆ, ಮಾನವರಿಗೂ ಸೋಂಕಿದ ಎರಡು ತಳಿಗಳಾದ H5N1 ಮತ್ತು H7N9 ಸೇರಿದಂತೆ ಒಂದು ಡಜನ್‌ಗಿಂತಲೂ ಹೆಚ್ಚು ಪಕ್ಷಿ ಜ್ವರಗಳನ್ನು ಗುರುತಿಸಲಾಗಿದೆ. ಒಂದು ವೇಳೆಪಕ್ಷಿ ಜ್ವರವು ಮನುಷ್ಯರಿಗೆ ತಗುಲಿದರೆ,ಅದು ಮಾರಣಾಂತಿಕ ವಾಗಬಲ್ಲದು.
 • ಏಷ್ಯಾ, ಆಫ್ರಿಕಾ, ಉತ್ತರ ಅಮೆರಿಕಾ ಮತ್ತು ಯುರೋಪಿನ ಕೆಲವು ಭಾಗಗಳಲ್ಲಿ ಕೂಡ ಪಕ್ಷಿ ಜ್ವರವು ಹರಡಿದೆ.
 • ಈ ವೈರಸ್ 1996 ರಲ್ಲಿ ಮೊದಲ ಬಾರಿಗೆ ಚೀನಾದಲ್ಲಿ ಹೆಬ್ಬಾತುಗಳಲ್ಲಿ ವರದಿಯಾಗಿತ್ತು.
 • ಭಾರತದಲ್ಲಿ, ರಾಜಸ್ಥಾನ, ಮಧ್ಯಪ್ರದೇಶ ಮತ್ತು ಕೇರಳದ ಮಾದರಿಗಳ ಪರೀಕ್ಷಾ ಫಲಿತಾಂಶವು ಧನಾತ್ಮಕ (positive) ವಾಗಿದ್ದು ವೈರಸ್‌ನ ಟೈಪ್ A ತಳಿ (H5N8) ಇರುವುದು ಕಂಡು ಬಂದಿದೆ. ಇದೇ ವೇಳೆ

ಹಿಮಾಚಲ ಪ್ರದೇಶದ ಮಾದರಿಗಳು ಟೈಪ್ A ತಳಿಯ / ವರ್ಗದ (H5N1) ಇರುವಿಕೆಯನ್ನು ದೃಢಪಡಿಸಿವೆ.

ಬರ್ಡ್ ಫ್ಲೂಗೆ ಕಾರಣಗಳು :

 • ಸಾಮಾನ್ಯವಾಗಿ ಕಾಡಿನ ಜಲಪಕ್ಷಿಗಳು ಈ ವೈರಸ್ ನ ಪ್ರಸರಣಕ್ಕೆ ಕಾರಣವಾಗಿವೆ. ವಲಸೆ ಹಕ್ಕಿಗಳ ಮೂಲಕ ಇವು ಸುಲಭವಾಗಿ ಪ್ರಸರಣವಾಗುತ್ತವೆ ಮತ್ತು ಈ ವೈರಸ್ ಸ್ಥಳೀಯ ಕೋಳಿ ಸಾಕಣೆ ಕೇ೦ದ್ರಗಳಿಗೆ ಹರಡಿ

ಕೋಳಿ, ಬಾತುಕೋಳಿ, ಟರ್ಕಿ ಕೋಳಿ, ಹಿತ್ತಲು ಕೋಳಿ ಗಳಿಗೆ ಮಾರಕ ವಾಗಬಲ್ಲದ್ದಾಗಿದೆ.

 • ಸೋಂಕಿಗೆ ಒಳಗಾದ ಹಕ್ಕಿಯ ಮಲ, ಮೂತ್ರ, ಸಿಂಬಳ, ಉಸಿರಿನಲ್ಲಿ ಈ ವೈರಾಣುವಿದ್ದು, ಇದರ ಸಂಪರ್ಕಕ್ಕೆ ಬರುವುದರಿಂದ ರೋಗ ಹರಡುತ್ತದೆ.
 • ಸೋಂಕಿತ ಪಕ್ಷಿಗಳ ಮೊಟ್ಟೆಗಳು ಮತ್ತು ಮಾಂಸವನ್ನು ಅರೆ-ಬರೆಯಾಗಿ ಬೇಯಿಸಿ ತಿಂದರೆ ಪಕ್ಷಿ ಜ್ವರವು ಹರಡುತ್ತದೆ.

ಮಾನವರಿಗೆ ಹರಡುವುದು

H5N1 ವೈರಸ್ ಸೋಂಕಿತ ಹಕ್ಕಿಯಿಂದ ಮನುಷ್ಯರಿಗೆ

ಹರಡುವ ಶಕ್ತಿ ಹೊಂದಿದೆ.

 • ಮಾನವರಲ್ಲಿ H5N1 ಸೋಂಕಿನ ಮೊದಲ ಪ್ರಕರಣ 1997 ರಲ್ಲಿ ಹಾಂಗ್ ಕಾಂಗ್‌ನಲ್ಲಿ ವರದಿಯಾಗಿತ್ತು. ಕೋಳಿ ಸಾಕಾಣಿಕಾ ಕೇಂದ್ರದ ವ್ಯಕ್ತಿಗೆ ಸೋಂಕಿತ ಪಕ್ಷಿಗಳಿಂದ ಸೋಂಕು ಹರಡಿತ್ತು.
 • ಅದರ ಪ್ರಸ್ತುತ ರೂಪದಲ್ಲಿ ಮಾನವರಿಂದ ಮಾನವರಿಗೆ ಹರಡಿದ ದಾಖಲೆಗಳಿಲ್ಲ ಆದರೆ ಸೋಂಕಿತ , ಸತ್ತ, ಕೋಳಿ/ಹಕ್ಕಿಗಳನ್ನು ಸಮರ್ಪಕವಾಗಿ ವಿಲೇವಾರಿ ಮಾಡದ ವ್ಯಕ್ತಿಗಳಲ್ಲಿ ಈ ಸೋಂಕು ಕಾಣಿಸಿಕೊಂಡಿದೆ.

ಪಕ್ಷಿ ಜ್ವರ ಮತ್ತು ಕೋಳಿ ಮಾಂಸ, ಮೊಟ್ಟೆಗಳ ಬಳಕೆ/ಸೇವನೆ.

ಆಗ್ನೇಯ ಏಷ್ಯಾದ ದೇಶಗಳಿಗೆ ಹೋಲಿಸಿದರೆ ಭಾರತದಲ್ಲಿ ಎಚ್ 5 ಎನ್ 1 ವೈರಸ್ ಸೋಂಕಿನ ಸಾಧ್ಯತೆಗಳು ತುಲನಾತ್ಮಕವಾಗಿ ಕಡಿಮೆ, ಏಕೆಂದರೆ ಮುಖ್ಯವಾಗಿ ಆಹಾರ ಕ್ರಮದಲ್ಲಿರುವ ವ್ಯತ್ಯಾಸ ಮತ್ತು ಉಷ್ಣ ಹವಾಗುಣ .

 • 70 ಡಿಗ್ರಿ ಸೆಲ್ಸಿಯಸ್‌ಗಿಂತ ಹೆಚ್ಚಿನ ತಾಪಮಾನಕ್ಕೆ ಒಡ್ಡಿದರೆ ವೈರಸ್‌ ತಕ್ಷಣ ಸಾಯುತ್ತದೆ.
 • ಆಗ್ನೇಯ ಏಷ್ಯಾದ ದೇಶಗಳಿಗಿಂತ ಭಾರತದಲ್ಲಿ ಮಾಂಸ ಮತ್ತು ಮೊಟ್ಟೆಗಳನ್ನು ಚೆನ್ನಾಗಿ ಬೇಯಿಸಿ ತಿನ್ನಲಾಗುತ್ತದೆ, ಇದು 100 ಡಿಗ್ರಿ ಸೆಲ್ಸಿಯಸ್‌ ವರೆಗೆ ತಲುಪಿರುತ್ತದೆ.
 • ಹೀಗಾಗಿ ಮಾನವರು ಕೋಳಿ ಮತ್ತು ಮೊಟ್ಟೆಗಳನ್ನು ತಿನ್ನುವುದರಿಂದ ವೈರಸ್‌ಗೆ ತುತ್ತಾಗುವ ಸಾಧ್ಯತೆಗಳು ತೀರಾ ವಿರಳ.
 • ಆದರೆ , ಕೋಳಿ ಮಾರುವವರು ಮತ್ತು ಸಾಕುವರಿಗೆ ಸೋಂಕು ತಗಲುವ ಅಪಾಯವಿದ್ದು ಅವರು ಸ್ವಚ್ಛತೆಗೆ ಆದ್ಯತೆ ನೀಡಬೇಕು.
 • WHO ಮತ್ತು ಕೇಂದ್ರ ಸರ್ಕಾರದ ಮಾರ್ಗಸೂಚಿ ಗಳನ್ನು ಕಡ್ಡಾಯವಾಗಿ ಪಾಲಿಸಬೇಕು.

 

ವಿಷಯಗಳುಃ ಆರೋಗ್ಯ, ಶಿಕ್ಷಣ ಮತ್ತು ಮಾನವ ಸಂಪನ್ಮೂಲಕ್ಕೆ ಸಂಬಂಧಿಸಿದ ಸಾಮಾಜಿಕ ವಲಯ/ ಸೇವೆಗಳ ಅಭಿವೃದ್ಧಿ ಮತ್ತು ನಿರ್ವಹಣೆಗೆ ಸಂಬಂಧಿಸಿದ ಸಮಸ್ಯೆಗಳು.

 ವಿದೇಶಗಳಲ್ಲಿ ಕ್ಯಾಂಪಸ್‌ಗಳನ್ನು ಸ್ಥಾಪಿಸಲಿರುವ  ಶ್ರೇಷ್ಠತೆಯ ಸಂಸ್ಥೆಗಳು (IoEs).


 Institutions of Eminence (IoEs) to set up campuses abroad :

ಸಂದರ್ಭ :

ವಿಶ್ವವಿದ್ಯಾನಿಲಯ ಧನಸಹಾಯ ಆಯೋಗ (ಯುಜಿಸಿ) ತನ್ನ ನಿಯಮಗಳನ್ನು ತಿದ್ದುಪಡಿ ಮಾಡಿದ್ದು, ವಿದೇಶಾಂಗ ಸಚಿವಾಲಯ ಮತ್ತು ಗೃಹ ವ್ಯವಹಾರಗಳ ಸಚಿವಾಲಯದಿಂದ  ನಿರಪೇಕ್ಷಣಾ ಪ್ರಮಾಣಪತ್ರಗಳನ್ನು ಪಡೆದ ನಂತರ ಇನ್ಸ್ಟಿಟ್ಯೂಶನ್ಸ್ ಆಫ್ ಎಮಿನೆನ್ಸ್ (IoEs) ವಿದೇಶದಲ್ಲಿ ಕ್ಯಾಂಪಸ್ಗಳನ್ನು ಸ್ಥಾಪಿಸಲು ಅವಕಾಶ ಮಾಡಿಕೊಟ್ಟಿದೆ.

 • ಈ ತಿದ್ದುಪಡಿಗಳು IoEs ಗಳಿಗೆ ಹೊಸ ಆಫ್ ಕ್ಯಾಂಪಸ್ ಕೇಂದ್ರಗಳನ್ನು ಐದು ವರ್ಷಗಳಲ್ಲಿ ಗರಿಷ್ಠ ಮೂರು ಮತ್ತು ಶೈಕ್ಷಣಿಕ ವರ್ಷದಲ್ಲಿ ಒಂದಕ್ಕಿಂತ ಹೆಚ್ಚು ಅಲ್ಲದಂತೆ ಪ್ರಾರಂಭಿಸಲು ಅನುಮತಿ ನೀಡುತ್ತವೆ.

ಶ್ರೇಷ್ಠತೆಯ ಸಂಸ್ಥೆಗಳು (IoEs) ಎಂದರೆ ಯಾವವು?

ಉನ್ನತ ಶಿಕ್ಷಣ ಸಂಸ್ಥೆಗಳಿಗೆ ಬಲ ತುಂಬುವ ಮೂಲಕ ವಿಶ್ವ ದರ್ಜೆಯ ಬೋಧನೆ ಮತ್ತು ಸಂಶೋಧನಾ ಸಂಸ್ಥೆಗಳಾಗಲು ಸಹಾಯ ಮಾಡುವ ಸರ್ಕಾರದ ಬದ್ಧತೆಯನ್ನು ಅನುಷ್ಠಾನಗೊಳಿಸುವ ಸಲುವಾಗಿ ಇನ್ಸ್ಟಿಟ್ಯೂಶನ್ಸ್ ಆಫ್ ಎಮಿನೆನ್ಸ್ ಯೋಜನೆಯನ್ನು ಪ್ರಾರಂಭಿಸಲಾಗಿದೆ.

 • ಈ ಯೋಜನೆಯನ್ನು ಹಣಕಾಸು ಸಚಿವರು ತಮ್ಮ 2016 ರ ಬಜೆಟ್ ಭಾಷಣದಲ್ಲಿ ಘೋಷಿಸಿದ್ದರು.
 • ಇದು ಸಾಮಾನ್ಯ ಭಾರತೀಯರಿಗೆ ಉತ್ತಮ ಗುಣಮಟ್ಟದ ಶಿಕ್ಷಣ ಕೈಗೆಟುಕುವ ಅವಕಾಶವನ್ನು ಹೆಚ್ಚಿಸುತ್ತದೆ.

ಶ್ರೇಷ್ಠತೆಯ ಸಂಸ್ಥೆಗಳು(IoEs)ಯೋಜನೆಯ ಬಗ್ಗೆ:

ಉನ್ನತ ಶಿಕ್ಷಣ ಸಂಸ್ಥೆಗಳಿಗೆ ಬಲ ತುಂಬುವ ಮೂಲಕ ವಿಶ್ವ ದರ್ಜೆಯ ಬೋಧನೆ ಮತ್ತು ಸಂಶೋಧನಾ ಸಂಸ್ಥೆಗಳಾಗಲು ಸಹಾಯ ಮಾಡಲು ಆರಂಭಿಸಲಾಗಿದೆ.

ಉದ್ದೇಶಗಳು :

ಉತ್ಕೃಷ್ಟತೆ ಮತ್ತು ಆವಿಷ್ಕಾರ /ನಾವೀನ್ಯತೆ: ಸ್ನಾತಕೋತ್ತರ, ಪದವಿ ಮತ್ತು ಸಂಶೋಧನಾ ಪದವಿ ಹಂತಗಳಲ್ಲಿ ಸೂಕ್ತವೆಂದು ಪರಿಗಣಿಸಬಹುದಾದ ಜ್ಞಾನದ ಶಾಖೆಗಳಲ್ಲಿ ಉತ್ಕೃಷ್ಟತೆ ಮತ್ತು ಆವಿಷ್ಕಾರಗಳಿಗೆ ಕಾರಣವಾಗುವ ಉನ್ನತ ಶಿಕ್ಷಣವನ್ನು ಒದಗಿಸುವುದು.

ವಿಶೇಷತೆ: ವಿಶ್ವವಿದ್ಯಾಲಯ ಶಿಕ್ಷಣ ವ್ಯವಸ್ಥೆಯ ಉದ್ದೇಶಗಳಿಗೆ ವಿಶಿಷ್ಟ ಕೊಡುಗೆ ನೀಡಲು ವಿಶೇಷ ಕ್ಷೇತ್ರಗಳಲ್ಲಿ ತೊಡಗಿಸಿಕೊಳ್ಳುವುದು.

ಜಾಗತಿಕ ರೇಟಿಂಗ್: ಅಂತರರಾಷ್ಟ್ರೀಯ ಮಟ್ಟದಲ್ಲಿ ತನ್ನ ಬೋಧನೆ ಮತ್ತು ಸಂಶೋಧನೆಗಾಗಿ ಕಾಲಾನಂತರದಲ್ಲಿ ವಿಶ್ವದ ಅಗ್ರ 100 ಸಂಸ್ಥೆ ಗಳೊಂದಲ್ಲಾಗುವ ಗುರಿ  ಹೊಂದಿರುವುದು.

ಗುಣಮಟ್ಟದ ಬೋಧನೆ ಮತ್ತು ಸಂಶೋಧನೆ:  ಉತ್ತಮ ಗುಣಮಟ್ಟದ ಬೋಧನೆ ಮತ್ತು ಸಂಶೋಧನೆಗಾಗಿ ಮತ್ತು ಜ್ಞಾನದ ಪ್ರಗತಿ ಮತ್ತು ಹರಡುವಿಕೆಗಾಗಿ.

ಯೋಜನೆಯ ಪ್ರೋತ್ಸಾಹ:

 • IoEs ಟ್ಯಾಗ್ ಹೊಂದಿರುವ ಸಂಸ್ಥೆಗಳಿಗೆ ಶುಲ್ಕಗಳು, ಕೋರ್ಸ್ ಅವಧಿಗಳು ಮತ್ತು ಆಡಳಿತ ವ್ಯವಸ್ಥೆಯನ್ನು ನಿರ್ಧರಿಸಲು ಹೆಚ್ಚಿನ ಸ್ವಾಯತ್ತತೆ ಮತ್ತು ಸ್ವಾತಂತ್ರ್ಯ ನೀಡಲಾಗುವುದು.
 • IoEs ಟ್ಯಾಗ್ ಅಡಿಯಲ್ಲಿರುವ ಸಾರ್ವಜನಿಕ ಸಂಸ್ಥೆಗಳು ಸರ್ಕಾರದಿಂದ ₹.1,000 ಕೋಟಿ ಅನುದಾನವನ್ನು ಪಡೆಯುತ್ತವೆ, ಆದರೆ ಖಾಸಗಿ ಸಂಸ್ಥೆಗಳಿಗೆ ಈ ಯೋಜನೆಯಡಿ ಯಾವುದೇ ಹಣ ದೊರೆಯುವುದಿಲ್ಲ.

ಅದು ಏಕೆ ಮುಖ್ಯವಾದುದಾಗಿದೆ ?

ಉನ್ನತ ಮಟ್ಟದ ಶಿಕ್ಷಣವನ್ನು ಒದಗಿಸಬಲ್ಲ, ಅತ್ಯಾಧುನಿಕ ಸಂಶೋಧನೆಗಳನ್ನು ಆವಿಷ್ಕರಿಸುವ ಮತ್ತು ವಿಶ್ವದಾದ್ಯಂತ ಉತ್ತಮ ಮತ್ತು ಬುದ್ಧಿವಂತ ಜನರನ್ನು ಆಕರ್ಷಿಸುವ ಶಿಕ್ಷಣ ಸಂಸ್ಥೆಗಳು ದೇಶಕ್ಕೆ ಅನೇಕಾನೇಕ ಅನುಕೂಲಗಳನ್ನು ಒದಗಿಸುತ್ತವೆ. ಆದ್ದರಿಂದ, ಸ್ವಾಯತ್ತತೆಯನ್ನು ಒದಗಿಸುವ ಮೂಲಕ ಒಂದು ಪ್ರದೇಶದ ಅತ್ಯುತ್ತಮ ಸಂಸ್ಥೆಯನ್ನು ಉನ್ನತ ಮಟ್ಟಕ್ಕೆ ಏರಿಸುವ ಆಲೋಚನೆ ಒಳ್ಳೆಯದೆ ಆಗಿದೆ.

 


ಸಾಮಾನ್ಯ ಅಧ್ಯಯನ ಪತ್ರಿಕೆ – 3


 

ವಿಷಯಗಳು: ಭಾರತವನ್ನು ಒಳಗೊಂಡ ದ್ವಿಪಕ್ಷೀಯ, ಪ್ರಾದೇಶಿಕ ಮತ್ತು ಜಾಗತಿಕ ಗುಂಪುಗಳು ಮತ್ತು ಒಪ್ಪಂದಗಳು ಅಥವಾ ಭಾರತದ ಹಿತಾಸಕ್ತಿಗಳ ಮೇಲೆ ಪರಿಣಾಮ ಬೀರುವ ಅಂಶಗಳು.

NCAVES ಇಂಡಿಯಾ ಫೋರಂ 2021:


The Natural Capital Accounting and Valuation of Ecosystem Services (NCAVES)

ಸಂದರ್ಭ:

ನ್ಯಾಚುರಲ್ ಕ್ಯಾಪಿಟಲ್ ಅಕೌಂಟಿಂಗ್ ಮತ್ತು ಪರಿಸರ ವ್ಯವಸ್ಥೆ ಸೇವೆಗಳ ಮೌಲ್ಯಮಾಪನ (NCAVES) ಇಂಡಿಯಾ ಫೋರಂ -2021 ಅನ್ನು ಅಂಕಿಅಂಶ ಮತ್ತು ಕಾರ್ಯಕ್ರಮ ಅನುಷ್ಠಾನ ಸಚಿವಾಲಯ (MoSPI) ಆಯೋಜಿಸುತ್ತಿದೆ.

ಭಾರತವು ಈ ಯೋಜನೆಯಲ್ಲಿ ಭಾಗವಹಿಸುವ ಐದು ದೇಶಗಳಲ್ಲಿ ಒಂದಾಗಿದ್ದು – ಇತರ ದೇಶಗಳು ಬ್ರೆಜಿಲ್, ಚೀನಾ, ದಕ್ಷಿಣ ಆಫ್ರಿಕಾ ಮತ್ತು ಮೆಕ್ಸಿಕೊ.

NCAVES ಯೋಜನೆ :

ನ್ಯಾಚುರಲ್ ಕ್ಯಾಪಿಟಲ್ ಅಕೌಂಟಿಂಗ್ ಮತ್ತು ಪರಿಸರ ವ್ಯವಸ್ಥೆ ಸೇವೆಗಳ ಮೌಲ್ಯಮಾಪನ (NCAVES) ಯೋಜನೆಯು  ಬ್ರೆಜಿಲ್, ಚೀನಾ, ಭಾರತ, ಮೆಕ್ಸಿಕೊ ಮತ್ತು ದಕ್ಷಿಣ ಆಫ್ರಿಕಾದಲ್ಲಿ ಪರಿಸರ ಮತ್ತು ಪರಿಸರ ವ್ಯವಸ್ಥೆಯ ಲೆಕ್ಕಪತ್ರದ ಸಿದ್ಧಾಂತ ಮತ್ತು ಅಭ್ಯಾಸವನ್ನು ಮುನ್ನಡೆಸುವ ಉದ್ದೇಶ ಹೊಂದಿದೆ.

ಈ ಯೋಜನೆಯನ್ನು ವಿಶ್ವಸಂಸ್ಥೆಯ ಅಂಕಿಅಂಶ ವಿಭಾಗ (UNSD), ವಿಶ್ವಸಂಸ್ಥೆಯ ಪರಿಸರ ಕಾರ್ಯಕ್ರಮ (UNEP) ಮತ್ತು ಜೈವಿಕ ವೈವಿಧ್ಯತೆಯ ಸಮಾವೇಶದ ಸಚಿವಾಲಯ ಗಳು (CBD) ಜಂಟಿಯಾಗಿ ಜಾರಿಗೆ ತಂದಿವೆ.

 • ಇದು ಪರಿಸರ-ಆರ್ಥಿಕ ಲೆಕ್ಕಪರಿಶೋಧನೆಯಲ್ಲಿ, ವಿಶೇಷವಾಗಿ ಪರಿಸರ ವ್ಯವಸ್ಥೆಯ ಲೆಕ್ಕಪರಿಶೋಧನೆಯಲ್ಲಿ ಜ್ಞಾನದ ಕಾರ್ಯಸೂಚಿಯನ್ನು ಮುನ್ನಡೆಸಲು ಭಾಗವಹಿಸುವ ಐದು ಪಾಲುದಾರ ರಾಷ್ಟ್ರಗಳಿಗೆ ಸಹಾಯ ಮಾಡುವ ಗುರಿ ಹೊಂದಿದೆ.
 • ಯೋಜನೆಯು 2021 ರ ಅಂತ್ಯದವರೆಗೆ ಕಾರ್ಯಾವಧಿಯನ್ನು ಹೊಂದಿರುತ್ತದೆ.

ಧನಸಹಾಯ: ಈ ಯೋಜನೆಗೆ  ಯುರೋಪಿಯನ್ ಯೂನಿಯನ್ ತನ್ನ ಪಾಲುದಾರಿಕೆ ಸಾಧನ (Partnership Instrument (PI) ಮೂಲಕ ಹಣವನ್ನು ಒದಗಿಸುತ್ತದೆ.

ಉದ್ದೇಶಗಳು:

ರಾಷ್ಟ್ರೀಯ ವೇದಿಕೆಯ ಉದ್ದೇಶಗಳು ಇಂತಿವೆ:

 • ನ್ಯಾಚುರಲ್ ಕ್ಯಾಪಿಟಲ್ ಅಕೌಂಟಿಂಗ್ (NCA) ಡೊಮೇನ್‌ನಲ್ಲಿ ಭಾರತದ ಸಾಧನೆಗಳನ್ನು ಪ್ರಸ್ತುತಪಡಿಸುವುದು ;
 • ಭಾರತದಲ್ಲಿ NCAಗೆ ಇರುವ ಉದಯೋನ್ಮುಖ ಅವಕಾಶಗಳಿಗೆ ಆದ್ಯತೆ ನೀಡುವುದು;
 • ಎನ್‌ಸಿಎ ಕ್ಷೇತ್ರದಲ್ಲಿ ವಿವಿಧ ಅಂತರರಾಷ್ಟ್ರೀಯ ಸಂಸ್ಥೆಗಳು ಮಾಡಿದ ಕೆಲಸಗಳೊಂದಿಗೆ ಪಾಲುದಾರರನ್ನು ಪರಿಚಯಿಸುವುದು; ಮತ್ತು
 • ಪರಿಸರ ವ್ಯವಸ್ಥೆಯ ಸೇವೆಗಳ ಮೌಲ್ಯಮಾಪನದಲ್ಲಿ ನಡೆಸಿದ ಸಂಶೋಧನೆಗಳನ್ನು ಪ್ರಸ್ತುತಪಡಿಸಲು ಆಯ್ದ ಸಂಶೋಧನಾ ಸಂಸ್ಥೆಗಳಿಗೆ ವೇದಿಕೆಯನ್ನು ಒದಗಿಸುವುದು.

NCAVES ಇಂಡಿಯಾ ಫೋರಂ 2021 ಕುರಿತು :

ಭಾರತದಲ್ಲಿ,NCAVES ಯೋಜನೆಯನ್ನು ಅಂಕಿಅಂಶ ಮತ್ತು ಕಾರ್ಯಕ್ರಮ ಅನುಷ್ಠಾನ ಸಚಿವಾಲಯವು (MoSPI), ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯ (MoEF & CC) ರಾಷ್ಟ್ರೀಯ ದೂರ ಸಂವೇದಿ ಕೇಂದ್ರ (NRSC),ಗಳ ಸಹಯೋಗ ದೊಂದಿಗೆ ಅನುಷ್ಠಾನಗೊಳಿಸುತ್ತಿದೆ.

NCAVES ಇಂಡಿಯಾ ಫೋರಂ 2021 ಅನ್ನು ವರ್ಚುವಲ್ ಸ್ವರೂಪದಲ್ಲಿ ಆಯೋಜಿಸಲಾಗುತ್ತಿದೆ.

ಗಮನ ಕೇಂದ್ರೀಕರಿಸುವ ಪ್ರಮುಖ ಅಂಶಗಳು:

ಪರಿಸರಕ್ಕೆ ವಿಭಿನ್ನ ವಿಧಾನಗಳ ಬಗ್ಗೆ ಬಲವಾದ ಅರಿವು ಮೂಡಿಸುವುದು ಮತ್ತು “ಉತ್ತಮ ಪರಿಸರ, ಉತ್ತಮ ನಾಳೆ” ಪರಿಕಲ್ಪನೆ ಯನ್ನು ಸಾಧಿಸಲು ನೈಸರ್ಗಿಕ ಬಂಡವಾಳದ ಕೊಡುಗೆಯನ್ನು ಅರಿತುಕೊಳ್ಳುವತ್ತ ಸಾಗುವ ಮಾರ್ಗವನ್ನು ತೋರಿಸುವುದು ಈ ವೇದಿಕೆಯ ಗುರಿಯಾಗಿದೆ.

ಮಹತ್ವ:

UN-SEEA  ಸಿಸ್ಟಮ್ ಆಫ್ ಎನ್ವಿರಾನ್ಮೆಂಟಲ್-ಎಕನಾಮಿಕ್ ಅಕೌಂಟಿಂಗ್ (SEEA) ಚೌಕಟ್ಟಿನ ಪ್ರಕಾರ ಪರಿಸರ ಖಾತೆಗಳ ಒಂದೆಡೆ ಜೋಡಣೆ/ಸಂಗ್ರಹಣೆಯನ್ನು ಪ್ರಾರಂಭಿಸಲು  ಯೋಜನೆಯಲ್ಲಿ ಭಾಗವಹಿಸುವಿಕೆಯು ಅಂಕಿಅಂಶ ಮತ್ತು ಕಾರ್ಯಕ್ರಮ ಅನುಷ್ಠಾನ ಸಚಿವಾಲಯ (MoSPI)ಕ್ಕೆ ಸಹಾಯ ಮಾಡಿದೆ.

 • MoSPI ತನ್ನ ಪ್ರಕಟಣೆಯಾದ ““EnviStats India” ದಲ್ಲಿ 2018 ರಿಂದ ವಾರ್ಷಿಕ ಆಧಾರದ ಮೇಲೆ ಪರಿಸರ ಖಾತೆಯ ಅಂಕಿ ಅಂಶಗಳನ್ನು ಬಿಡುಗಡೆ ಮಾಡಿದೆ.
 • ಈ ಖಾತೆಗಳಲ್ಲಿ ಹಲವು ಸಾಮಾಜಿಕ ಮತ್ತು ಆರ್ಥಿಕ ಗುಣಲಕ್ಷಣಗಳೊಂದಿಗೆ ನಿಕಟ ಸಂಬಂಧ ಹೊಂದಿವೆ, ಇದು ನೀತಿಗೆ ಉಪಯುಕ್ತ ಸಾಧನವಾಗಿದೆ.

 

ವಿಷಯಗಳು: ಭಾರತವನ್ನು ಒಳಗೊಂಡ ದ್ವಿಪಕ್ಷೀಯ, ಪ್ರಾದೇಶಿಕ ಮತ್ತು ಜಾಗತಿಕ ಗುಂಪುಗಳು ಮತ್ತು ಒಪ್ಪಂದಗಳು ಅಥವಾ ಭಾರತದ ಹಿತಾಸಕ್ತಿಗಳ ಮೇಲೆ ಪರಿಣಾಮ ಬೀರುವ ಅಂಶಗಳು.

ದಕ್ಷಿಣ ಏಷ್ಯಾದ ಮೂರನೇ ಬಹುಪಕ್ಷೀಯ ಸಮಾವೇಶವನ್ನು ಆಯೋಜಿಸಿದ ಚೀನಾ:


ಸಂದರ್ಭ:

COVID-19 ರ ವಿರುದ್ಧದ ಹೋರಾಟದಲ್ಲಿ ನಿಕಟ ಸಹಕಾರವನ್ನು ಮುಂದುವರೆಸಲು ಚೀನಾ ದಕ್ಷಿಣ ಏಷ್ಯಾದ ದೇಶಗಳೊಂದಿಗೆ ತನ್ನ ಮೂರನೇ ಬಹುಪಕ್ಷೀಯ ಮಾತುಕತೆಯನ್ನು ನಡೆಸಿದೆ.

ಇದು ಚೀನಾದ ಆರ್ಥಿಕ ಕಾರ್ಯಸೂಚಿಗಳನ್ನು ಸಮನ್ವಯಗೊಳಿಸಲು ಪ್ರಯತ್ನಿಸುತ್ತದೆ, ಆ ಮೂಲಕ ಈ ಪ್ರದೇಶಕ್ಕೆ ಬೀಜಿಂಗ್‌ನ ಹೊಸ ಕಾರ್ಯತಂತ್ರ ದ ನಿರೂಪಣೆಯನ್ನು ಪ್ರತಿಬಿಂಬಿಸುತ್ತದೆ.

ಮುಖ್ಯ ಅಂಶಗಳು:

 • ಜನವರಿ 6 ರಂದು ವರ್ಚುವಲ್ ಆಗಿ ನಡೆದ ಮೂರನೇ ಸಂವಾದವು ಭಾರತ, ಭೂತಾನ್ ಮತ್ತು ಮಾಲ್ಡೀವ್ಸ್ ಅನ್ನು ಹೊರತುಪಡಿಸಿ ಈ ಪ್ರದೇಶದ ಪ್ರತಿಯೊಂದು ದೇಶವನ್ನು ಒಟ್ಟುಗೂಡಿಸಿತು.
 • ಇದರ ಮುಖ್ಯಗುರಿ“ಸಾಂಕ್ರಾಮಿಕ ವಿರೋಧಿ ಸಹಕಾರ ಮತ್ತು ಬಡತನ ಕಡಿತ ಸಹಕಾರ”ವನ್ನು ಸಾಧಿಸುವುದಾಗಿತ್ತು.

ದಕ್ಷಿಣ ಏಷ್ಯಾ ಬಹುಪಕ್ಷೀಯ ಸಮಾವೇಶ:

ಚೀನಾದ ಪ್ರಾದೇಶಿಕ ಕಾರ್ಯತಂತ್ರದಲ್ಲಿ ಎರಡು ಲಿಂಚ್‌ಪಿನ್‌ (ಕೀಲುಮೊಳೆ) ಗಳಾಗಿ ಹೊರಹೊಮ್ಮುತ್ತಿರುವ ಪಾಕಿಸ್ತಾನ ಮತ್ತು ನೇಪಾಳ ಈ ಮೂರೂ ಸಂವಾದಗಳಲ್ಲಿ ಭಾಗವಹಿಸಿದ್ದವು.

 • ಅಂತಹ ಮೊದಲ ಸಭೆಯನ್ನು ಚೀನಾ ಜುಲೈನಲ್ಲಿ ಆಯೋಜಿಸಿದ್ದು, ಪಾಕಿಸ್ತಾನ, ನೇಪಾಳ ಮತ್ತು ಅಫ್ಘಾನಿಸ್ತಾನಗಳು ಭಾಗವಹಿಸಿದ್ದವು.
 • ಚೀನಾ, ಪಾಕಿಸ್ತಾನ, ನೇಪಾಳ, ಶ್ರೀಲಂಕಾ ಮತ್ತು ಬಾಂಗ್ಲಾದೇಶ ಭಾಗವಹಿಸಿದ್ದ ಐದು ಸದಸ್ಯರ ಗುಂಪಿನ ಎರಡನೇ ಸಭೆಯನ್ನು ನವೆಂಬರ್‌ನಲ್ಲಿ ನಡೆದಿತ್ತು.
 • ಮೊದಲಿನ ಸಂವಾದಗಳಲ್ಲಿ ಭಾಗವಹಿಸಿದ ಎಲ್ಲಾ ಐದು ದೇಶಗಳು ಪಾಕಿಸ್ತಾನ, ನೇಪಾಳ, ಅಫ್ಘಾನಿಸ್ತಾನ, ಶ್ರೀಲಂಕಾ ಮತ್ತು ಬಾಂಗ್ಲಾದೇಶಗಳು  ಮೂರನೇ ಮತ್ತು ಇತ್ತೀಚಿನ ಜನವರಿ 6 ರ ಸಭೆಯಲ್ಲಿ ಭಾಗವಹಿಸಿದ್ದವು.

 ಚೀನಾ-ಪಾಕಿಸ್ತಾನ ಆರ್ಥಿಕ ಕಾರಿಡಾರ್ (CPEC) ವಿಸ್ತರಣೆ:

 ಜುಲೈ ನಲ್ಲಿ ಅಫ್ಘಾನಿಸ್ತಾನ, ನೇಪಾಳ ಮತ್ತು ಪಾಕಿಸ್ತಾನದೊಂದಿಗೆ ನಡೆದ (quadrilateral dialogue) ಚತುರ್ಭುಜ ಸಂವಾದದಲ್ಲಿ, ಚೀನಾದ ವಿದೇಶಾಂಗ ಸಚಿವರು ಚೀನಾ-ಪಾಕಿಸ್ತಾನ ಆರ್ಥಿಕ ಕಾರಿಡಾರ್ (CPEC) ಅನ್ನು ಅಫ್ಘಾನಿಸ್ತಾನಕ್ಕೂ ವಿಸ್ತರಿಸಲು ಪ್ರಸ್ತಾಪಿಸಿದರು.

 • ಟ್ರಾನ್ಸ್-ಹಿಮಾಲಯನ್ ಮಲ್ಟಿ ಡೈಮೆನ್ಷನಲ್ ಕನೆಕ್ಟಿವಿಟಿ ನೆಟ್ವರ್ಕ್ ಎಂದು ಕರೆಯಲ್ಪಡುವ ಆರ್ಥಿಕ ಕಾರಿಡಾರ್ ಯೋಜನೆಯನ್ನು ನೇಪಾಳದೊಂದಿಗೆ ಮುಂದುವರೆಸುವ ಬಗ್ಗೆ ಚೀನಾ ಚರ್ಚಿಸಿತು.
 • ನಾಲ್ಕು ದೇಶಗಳು ಪರ್ವತಗಳು ಮತ್ತು ನದಿಗಳಿಂದ ಸಂಪರ್ಕ ಗೊಂಡಿವೆ”, ಮತ್ತು ಚೀನಾ ಸಹ COVID-19 ಲಸಿಕೆಯ ಬಗ್ಗೆ ಚೀನಾದ ಪರಿಣತಿ ಮತ್ತು ಸಾಮರ್ಥ್ಯಗಳನ್ನು ಹಂಚಿಕೊಳ್ಳಲು ಮುಂದಾಗಿದೆ.

ಸಮಾವೇಶದ ಮಹತ್ವ ಮತ್ತು ಪರಿಣಾಮಗಳು:

 • ಸಾಂಕ್ರಾಮಿಕ ಪ್ರತಿಕ್ರಿಯೆ ಮತ್ತು ಆರ್ಥಿಕ ಚೇತರಿಕೆಯಲ್ಲಿ ನಾಲ್ಕು ರಾಷ್ಟ್ರಗಳ ನಡುವೆ ಸಹಕಾರವನ್ನು ಬಲಪಡಿಸುವ ಪ್ರಯತ್ನವಾಗಿ ಈ ವರ್ಚುವಲ್ ಮೀಟ್ ಕಂಡುಬರುತ್ತದೆ.
 • ಜಾಗತಿಕ ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ಈ ಪ್ರದೇಶದಲ್ಲಿ ನಡೆದ ಎರಡು ವರ್ಚುವಲ್ ಮೀಟ್‌ಗಳು ಚೀನಾದ ಬೆಳೆಯುತ್ತಿರುವ ಬಾಂಧವ್ಯ ವೃದ್ಧಿಯ ಭಾಗವಾಗಿ ಕಂಡುಬರುತ್ತವೆ.

 


ಪೂರ್ವಭಾವಿ ಪರೀಕ್ಷೆಗೆ ಸಂಬಂಧಿಸಿದ ವಿದ್ಯಮಾನಗಳು:


ನ್ಯಾಷನಲ್ ಇಂಟರ್ನೆಟ್ ಎಕ್ಸ್ಚೇಂಜ್ ಆಫ್ ಇಂಡಿಯಾ (NIXI). ಭಾರತದ ರಾಷ್ಟ್ರೀಯ ಅಂತರ್ಜಾಲ ವಿನಿಮಯ .

ನ್ಯಾಷನಲ್ ಇಂಟರ್ನೆಟ್ ಎಕ್ಸ್ಚೇಂಜ್ ಆಫ್ ಇಂಡಿಯಾ (NIXI) ವು ತನ್ನ ಆದ್ಯತೆಯ 22 ಅಧಿಕೃತ ಭಾರತೀಯ ಭಾಷೆಯಲ್ಲಿ ಉಚಿತ IDN (Internationalized Domain Name) ನೀಡುವುದಾಗಿ ಘೋಷಿಸಿತು.

ನೋಂದಾಯಿಸಿದವರು ಬುಕ್ ಮಾಡಿದ ಪ್ರತಿ IN ಡೊಮೇನ್‌ನೊಂದಿಗೆ ಇದು ಲಭ್ಯವಿದೆ.

ಭಾರತ (IDN) ಡೊಮೇನ್ ಹೆಸರನ್ನು ಅಳವಡಿಸಿಕೊಳ್ಳಲು ಮತ್ತು ಸ್ಥಳೀಯ ಭಾಷೆಯ ವಿಷಯವನ್ನು ಪ್ರಸಾರ ಮಾಡಲು ಪ್ರೋತ್ಸಾಹಿಸಲು ಈ ಪ್ರಸ್ತಾಪವನ್ನು ಮಾಡಲಾಗಿದೆ.

NIXI ಕುರಿತು :

ನ್ಯಾಷನಲ್ ಇಂಟರ್ನೆಟ್ ಎಕ್ಸ್ಚೇಂಜ್ ಆಫ್ ಇಂಡಿಯಾ ವು (NIXI) ಭಾರತದ ನಾಗರಿಕರಿಗೆ ಇಂಟರ್ನೆಟ್ ತಂತ್ರಜ್ಞಾನವನ್ನು ಬದಗಿಸಲು 2003 ರಿಂದ ಕೆಲಸ ಮಾಡುತ್ತಿರುವ ಲಾಭೇತರ ಸಂಸ್ಥೆಯಾಗಿದೆ.


 • Join our Official Telegram Channel HERE for Motivation and Fast Updates
 • Subscribe to our YouTube Channel HERE to watch Motivational and New analysis videos