Print Friendly, PDF & Email

[ ದೈನಂದಿನ ಪ್ರಚಲಿತ ಘಟನೆಗಳು ] ದಿನಾಂಕ – 24 ನವೆಂಬರ್ 2020

 

ಪರಿವಿಡಿ

ಸಾಮಾನ್ಯ ಅಧ್ಯಯನ ಪತ್ರಿಕೆ  – 1

1. ‘ನಿವಾರ್’ ಚಂಡಮಾರುತ

 

ಸಾಮಾನ್ಯ ಅಧ್ಯಯನ ಪತ್ರಿಕೆ  – 2

1. ಜಮ್ಮುಕಾಶ್ಮೀರದ ರೋಷಿನಿ ಕಾಯ್ದೆ

 

ಸಾಮಾನ್ಯ ಅಧ್ಯಯನ ಪತ್ರಿಕೆ  – 3

1. ಹೆಚ್ಚುವರಿ ಚಾಲ್ತಿ ಖಾತೆ

2. ನಿರ್ಲವನೀಕರಣದ ಸಸ್ಯಗಳು

3. ಇಸ್ರೋವಿನ ಶುಕ್ರಯಾನ್

4. ಚಾಂಗ್’ಇ-5 ಪ್ರೋಬ್

5. ಪಂಗ್ಡಾ ಗ್ರಾಮ

 

ಪೂರ್ವಭಾವಿ ಪರೀಕ್ಷಾ ಕೇಂದ್ರಿತ

1. ಅಭಯಂ ಅನ್ವಯಿಕ (Abhayam app)

2. ರಾಷ್ಟ್ರೀಯ ಬಿಕ್ಕಟ್ಟು ನಿರ್ವಹಣಾ ಸಮಿತಿ (National Crisis Management Committee)

3. ಅಟಲ್ ಶಿಕ್ಷಕ ಅಭಿವೃದ್ಧಿ ಯೋಜನೆ (FDP’s)

4. 15ನೇ ಜಿ20 ಸಮಾವೇಶ

 

ದಿನಕ್ಕೊಂದು ವಿಷಯ : ರಾಜ್ಯದ ಸ್ಪರ್ಧಾತ್ಮಕ ಪರೀಕ್ಷಾ ಕೇಂದ್ರಿತ

1. ಬೆಳಕು

 

ಸೂಚನೆ : ದಿನಕ್ಕೊಂದು ವಿಷಯ ಭಾಗವು ಸ್ಪರ್ಧಾತ್ಮಕ ಪರೀಕ್ಷೆಯ ಮೊದಲ ಹಂತ (ವಸ್ತುನಿಷ್ಠ) ಕೇಂದ್ರಿತವಾಗಿದೆ. ಪ್ರತಿನಿತ್ಯ ಒಂದು ವಿಷಯದ ನಿರ್ದಿಷ್ಟ ಅಂಶ ಕುರಿತು ಸಂಕ್ಷಿಪ್ತವಾಗಿ ಸಮಗ್ರ ಮಾಹಿತಿಯನ್ನು ನೀಡಲು ಪ್ರಯತ್ನಿಸಲಾಗುವುದು.

  1. ಸೋಮವಾರ – ರಾಜ್ಯಶಾಸ್ತ್ರ
  2. ಮಂಗಳವಾರ – ವಿಜ್ಞಾನ ಮತ್ತು ತಂತ್ರಜ್ಞಾನ
  3. ಬುಧವಾರ – ಭೂಗೋಳಶಾಸ್ತ್ರ ಮತ್ತು ಕೃಷಿ ವಲಯ
  4. ಗುರುವಾರ – ಅರ್ಥಶಾಸ್ತ್ರ ಮತ್ತು ಅಂತರರಾಷ್ಟ್ರೀಯ ಸಂಬಂಧ
  5. ಶುಕ್ರವಾರ – ಪರಿಸರ ಅಧ್ಯಯನ
  6. ಶನಿವಾರ – ಇತಿಹಾಸ

 


ಸಾಮಾನ್ಯ ಅಧ್ಯಯನ ಪತ್ರಿಕೆ – 1


 

ವಿಷಯ : ಭೂಕಂಪಗಳು, ಸುನಾಮಿ,ಜ್ವಾಲಾಮುಖಿ ಚಟುವಟಿಕೆ, ಚಂಡಮಾರುತ ಮುಂತಾದ ಪ್ರಮುಖ ಭೌಗೋಳಿಕ ವಿದ್ಯಮಾನಗಳು

‘ನಿವಾರ್’ ಚಂಡಮಾರುತ


ಸಂದರ್ಭ :

ಅಂಫಾನ್, ನಿಸರ್ಗಾ & ಗತಿ ಚಂಡಮಾರುತಗಳ ನಂತರ ‘ನಿವಾರ್’ ಪುದುಚೇರಿಯ ಕಾರೈಕಲ್ ಕಡೆಗೆ ಸಾಗುತ್ತಿದೆ. ನವೆಂಬರ್ 25ರಂದು ಭೂಕುಸಿತ ಸಂಭವಿಸುವ ನೀರಿಕ್ಷೆಯಿದೆ.

 1. ನಿವಾರ್ ಹೆಸರನ್ನು 2020ರಲ್ಲಿ ಬಿಡುಗಡೆಯಾದ ಉತ್ತರ ಹಿಂದೂ ಮಹಾಸಾಗರದ ಚಂಡಮಾರುತಗಳ ಪಟ್ಟಿಯಿಂದ ಬಳಸಲಾಗಿದೆ. ಇದನ್ನು ಇರಾನ್ ಸೂಚಿಸಿದೆ.
 2. ‘ಅಂಫಾನ್’ ಹೆಸರನ್ನು ಥೈಲ್ಯಾಂಡ್ ಸೂಚಿಸಿದ್ದು ಕಳೆದ ಬಾರಿ ಬಳಸಲಾಗಿತ್ತು.
 3. ಜೂನ್’ನಲ್ಲಿ ಮಹಾರಾಷ್ಟ್ರವನ್ನು ಅಪ್ಪಳಿಸಿದ ಚಂಡಮಾರುತದ ಹೆಸರನ್ನು ‘ನಿಸರ್ಗಾ’ ಎಂದು ಬಾಂಗ್ಲಾದೇಶ ನೀಡಿತ್ತು.
 4. ಭಾರತ ನೀಡಿದ ‘ಗತಿ’ ಹೆಸರಿನ ಚಂದ ಮಾರುತ ನವೆಂಬರ್ 22ರಂದು ಸೋಮಾಲಿಯಾದ ಮೇಲೆ ಭೂಕುಸಿತವನ್ನು ಕಂಡಿತು.

 

ಚಂಡಮಾರುತಗಳ ನಾಮಕರಣ

ಅರಬ್ಬಿ ಸಮುದ್ರ & ಬಂಗಾಳ ಕೊಲ್ಲಿಯಲ್ಲಿ ಉಷ್ಣವಲಯದ ಚಂಡಮಾರುತಗಳನ್ನು ಹೆಸರುಗಳಿಂದ ಸೂಚಿಸಲಾಗಿದೆ.

 1. ಬಾಂಗ್ಲಾದೇಶ, ಭಾರತ, ಮಾಲ್ಡಿವ್ಸ್, ಮಯಾನ್ಮಾರ್, ಓಮನ್, ಪಾಕೀಸ್ತಾನ, ಶ್ರೀಲಂಕ, ಥೈಲ್ಯಾಂಡ್, ಇರಾನ್, ಕತಾರ್, ಸೌದಿ ಅರೇಬಿಯಾ, ಯು.ಎ.ಇ ಮತ್ತು ಯೆಮೆನ್ ದೇಶಗಳು ಭಾಗಿದಾರರು.
 2. ಈ ರಾಷ್ಟ್ರಗಳು 2000ದಲ್ಲಿ ವಿಶ್ವ ಹವಾಮಾನ ಸಂಸ್ಥೆ & ಏಷ್ಯಾ ಮತ್ತು ಪೆಸಿಫಿಕ್ ಭಾಗದ ವಿಶ್ವ ಸಂಸ್ಥೆಯ ಆರ್ಥಿಕ ಮತ್ತು ಸಾಮಾಜಿಕ ಆಯೋಗದ 27ನೇ ಅಧಿವೇಶನದಲ್ಲಿ ನಾಮಕರಣ ಒಪ್ಪಂದವನ್ನು ಅಂಗೀಕರಿಸಿವೆ.
  1. ಪ್ರತಿ ರಾಷ್ಟ್ರ 13 ಹೆಸರುಗಳನ್ನು ಒದಗಿಸುತ್ತವೆ.
  2. ಭಾರತ ಪ್ರಸ್ತಾಪಿಸಿದ ಹೆಸರುಗಳು : ಗತಿ, ತೇಜ್, ಮರಸು, ಆಗ್, ನೀರ್
  3. 2020ರಲ್ಲಿ ಸದಸ್ಯ ರಾಷ್ಟ್ರಗಳು ನೀಡಿದ ಕೆಲವು ಹೆಸರುಗಳು – ಬುರೆವಿ (ಮಾಲ್ಡಿವ್ಸ್), ತೌಕ್ಟೆ (ಮಯನ್ಮಾರ್), ಯಾಸ್ (ಓಮನ್), ಗುಲಾಬ್ (ಪಾಕಿಸ್ತಾನ).

 

ಚಂಡಮಾರುತ (ಆವರ್ತ ಮಾರುತ) ಎಂದರೇನು?

ಉಷ್ಣವಲಯದ ಸಾಗರಗಳಲ್ಲಿ ಕಡಿಮೆ ಒತ್ತಡದ ಕೇಂದ್ರದ ಸುತ್ತ ಭೂ-ಅಕ್ಷಭ್ರಮಣೀಯ ಬಲದ ಪ್ರಭಾವದಿಂದಾಗಿ ಚಲಿಸುತ್ತಿರುವ ಮಾರುತಗಳು – ಆವರ್ತ ಮಾರುತಗಳು.

ಇದು ಭೂಮಿಯ ಸ್ಪರ್ಶವಾಗುತ್ತಿದ್ದಂತೆ ಅಂತ್ಯ ಕಾಣುವುದು.

tropical_storms

ಚಂಡಮಾರುತದ ಉಗಮಕ್ಕೆ ಕಾರಣೀಭೂತ ಅಂಶಗಳು

 1. ಸಾಗರದ ಜಲರಾಶಿಯ ಮೇಲ್ಮೈ ಉಷ್ಣಾಂಶ > 27 ಡಿಗ್ರಿ ಸೆಲ್ಸಿಯಸ್
  1. ಸಾಗರಿಕ ಪ್ರವಾಹಗಳು
  2. ಸಮುದ್ರದ ಗಾತ್ರ
  3. ಉಷ್ಣ ಜಲರಾಶಿಯ ಆಳ (50-70 ಮೀ)
 2. ದ್ವೀಪಗಳ ಸಮೂಹ
 3. ಭೂ-ಅಕ್ಷ ಭ್ರಮಣೀಯ ಬಲ (Corriolis Force)
 4. ಉನ್ನತ ಸ್ತರದಲ್ಲಿ ವಿಸರ್ಜನೆ
 5. ಪ್ರಚಲನೆ ವಾಯುವಿನ ವೇಗದಲ್ಲಿ ಕನಿಷ್ಠ ಬದಲಾವಣೆ

Sources: Indian Express.

 


ಸಾಮಾನ್ಯ ಅಧ್ಯಯನ ಪತ್ರಿಕೆ – 2


 

ವಿಷಯ : ವಿವಿಧ ವಲಯಗಳಲ್ಲಿ ಸರ್ಕಾರದ ನೀತಿಗಳು ಮತ್ತು ಅಭಿವೃದ್ಧಿಯ ಕ್ರಮಗಳು ಹಾಗೂ ಅನುಷ್ಟಾನದಿಂದಾಗುವ ಸಮಸ್ಯೆಗಳು

ಜಮ್ಮುಕಾಶ್ಮೀರದ ರೋಷಿನಿ ಕಾಯ್ದೆ


ಸಂದರ್ಭ

ಜೆ&ಕೆ ಸರ್ಕಾರವು ರೋಷಿನಿ ಕಾಯ್ದೆಯ ಫಲಾನುಭವಿಗಳ ಹೆಸರನ್ನು ಪ್ರಕಟಿಸಿತು.

 1. ಫಲಾನುಭವಿಗಳ ಪಟ್ಟಿ ಮಾಜಿ ಸಚಿವರು ಮತ್ತು ನಿವೃತ್ತ ಅಧಿಕಾರಿಗಳನ್ನು ಒಳಗೊಂಡಿದೆ
 2. ಸರ್ಕಾರ ಇತ್ತೀಚಿಗೆ ಈ ಕಾಯ್ದೆಯನ್ನು ಅನೂರ್ಜಿತವೆಂದು ನಿರಚನೆಗೊಳಿಸಿತು.

 

ಹಿನ್ನೆಲೆ

ಜಮ್ಮು & ಕಾಶ್ಮೀರ ರಾಜ್ಯಗಳ ಭೂಮಿ (ಮಾಲೀಕರಿಗೆ ಮಾಲೀಕತ್ವ ವಹಿಸುವ) ಕಾಯ್ದೆಯನ್ನು ರೋಷಿನಿ ಕಾಯ್ದೆ ಎನ್ನಲಾಗಿದೆ. ಕಾಯ್ದೆಯ  ಅನುಷ್ಠಾನದಲ್ಲಿ ಅಕ್ರಮ ಮತ್ತು ಅದಕ್ಷತೆ ಕುರಿತು ಆರೋಪಗಳಿರುವುದರಿಂದ ಇದನ್ನು ಅನೂರ್ಜಿತವೆಂದು  ಘೋಷಿಸಲಾಯಿತು.

 

ರೋಷಿನಿ ಕಾಯ್ದೆ (2001)

 1. ಅನಧಿಕೃತ ಭೂಮಿಯನ್ನು ಕ್ರಮಬದ್ಧಗೊಳಿಸಲು ಪ್ರಯತ್ನಿಸಿತು.
 2. ಸರ್ಕಾರ ಸೂಚಿಸಿದ ವೆಚ್ಚವನ್ನು ಪಾವತಿಸುವ ಮೂಲಕ ರಾಜ್ಯ ಭೂಮಿಯ ಒಡೆತನದ ಹಕ್ಕನ್ನು ಅದರ ನಿವಾಸಿಗಳಿಗೆ ವರ್ಗಾಯಿಸಲು ಈ ಕಾಯ್ದೆಯನ್ನು ಜಾರಿಗೆ ತರಲಾಗಿತ್ತು.
 3. ಇದರಿಂದ ಬಂದ ಆದಾಯವನ್ನು ಜಲವಿದ್ಯುತ್ ಯೋಜನೆಗಳಿಗೆ ವಿನಿಯೋಗಿಸುವ ಇಂಕಿತವನ್ನು ಸರ್ಕಾರ ಹೇಳಿದ್ದರಿಂದ ಈ ಕಾಯ್ದೆಯನ್ನು ‘ರೋಷ್ನಿ’ ಎನ್ನಲಾಗಿದೆ.
 4. ಅಲ್ಲದೆ, ತಿದ್ದುಪಡಿಗಳ ಮೂಲಕ ಸರ್ಕಾರವು ಕೃಷಿ ಭೂಮಿಯ ಒಡೆತನದ ಹಕ್ಕನ್ನು ಉಚಿತವಾಗಿ ಆಕ್ರಮಿಸಿಕೊಂಡ ರೊತರಿಗೆ ನೀಡಿತು ಮತ್ತು ಪ್ರತಿ ಕಾಲುವೆಗೆ 100 ರೂ ಶುಲ್ಕವನ್ನು ವಿಧಿಸಿತು.

 

ನಿರಚನೆಗೊಳಿಸಲು ಕಾರಣ

 1. ಕಾಯ್ದೆಯಡಿಯ ಮಾನದಂಡಗಳನ್ನು ಪೂರೈಸದ ವ್ಯಕ್ತಿಗಳಿಗೆ ಅಕ್ರಮವಾಗಿ ಭೂಮಿ ಒಡೆತನದ ಹಕ್ಕನ್ನು ನೀಡಿಲಾಗಿತ್ತು. ಈ ಕ್ರಿಮಿನಲ್ ಆರೋಪದ ಹಿನ್ನೆಲೆಯಲ್ಲಿ ರಾಜ್ಯ ಭ್ರಷ್ಟಾಚಾರ ನಿಗ್ರಹ (CVC) ಹಲವಾರು ಸರ್ಕಾರಿ ಅಧಿಕಾರಿಗಳ ಮೇಲೆ FIRನ್ನು ದಾಖಲಿಸಿತ್ತು.
 2. 2014ರ CAG ವರದಿಯ ಪ್ರಕಾರ ಉದ್ದೇಶಿತ 25 ಸಾವಿರ ಕೋಟಿ ರೂ ನಲ್ಲಿ 2007-2013ರ ನಡುವೆ ಕೇವಲ 76 ಕೋಟಿ ಮಾತ್ರ ಫಲಾನುಭವಿಗಳಿಗೆ ಲಭಿಸಿದ್ದು – ಕಾಯ್ದೆಯ ಮೂಲೋದ್ದೇಶಕ್ಕೆ ದಕ್ಕೆಯಾಗಿದೆ
 3. ವರದಿಯು “ಸ್ಥಾಯಿ ಸಮಿತಿಯ ನಿಗದಿಪಡಿಸಿದ್ದ ಬೆಲೆಯನ್ನು ಅನಿಯಂತ್ರಿತವಾಗಿ ಕಡಿತ ಮಾಡಲಾಗಿದೆ. ಅಲ್ಲದೆ, ಅಕ್ರಮವಾಗಿ ರಾಜಕಾರಣಿಗಳಿಗೆ ಮತ್ತು ಉಳ್ಳವರ ಪರವಾಗುವಂತೆ ತಿರುಚಲಾಗಿದೆ” ಎಂದಿದೆ.

Sources: the Hindu.

 


ಸಾಮಾನ್ಯ ಅಧ್ಯಯನ ಪತ್ರಿಕೆ – 3


 

ವಿಷಯ : ಭಾರತದ ಆರ್ಥಿಕತೆ, ಯೋಜನೆ, ಸಂಪನ್ಮೂಲಗಳ ಕ್ರೋಡೀಕರಣ, ಬೆಳವಣಿಗೆ, ಅಭಿವೃದ್ಧಿ ಮತ್ತು ಉದ್ಯೋಗಗಳಿಗೆ ಸಂಬಂಧಿಸಿದ ಸಮಸ್ಯೆಗಳು

ಹೆಚ್ಚುವರಿ ಚಾಲ್ತಿ ಖಾತೆ


ಸಂದರ್ಭ :

2021ರ ಆರ್ಥಿಕ ವರ್ಷದಲ್ಲಿ ಕೋವಿಡ್ -19 ಬಿಕ್ಕಟ್ಟು ಮತ್ತು ಆಮದುವಿನ ಇಳಿಕೆಯಿಂದಾಗಿ ಭಾರತ ಚಾಲ್ತಿ ಖಾತೆಯ ಹೆಚ್ಚುವರಿಯನ್ನು ದಾಖಲಿಸಲಿದೆ. ಈ ಬಿಕ್ಕಟ್ಟಿನ ಪರಿಣಾಮ Taper Tantrum ಸಂದರ್ಭದಲ್ಲಿ ವಿಶ್ವ ಎದುರಿಸಿದ ಬಿಕ್ಕಟ್ಟಿಗೆ ವ್ಯತಿರಿಕ್ತವಾಗಿದೆ.

 

Taper Tantrum ಎಂದರೇನು?

ಯಾವುದೇ ದೇಶದ ಆರ್ಥಿಕತೆಯಲ್ಲಿ ಕುಸಿತ ಉಂಟಾದಾಗ ಕೇಂದ್ರೀಯ ಬ್ಯಾಂಕ್ ಆರ್ಥಿಕತೆಯ ಸುಸ್ಥಿರತೆಯನ್ನು ನೆಲೆಗೊಳಿಸಲು ಉದಾರ ನೀತಿಯ (Quantitative Easing) ಕ್ರಮವನ್ನು ಜಾರಿಗೆ ತರುವುದು. ಆ ಮೂಲಕ ಮಾರುಕಟ್ಟೆಯಲ್ಲಿ ಹಣದ ಹರಿವನ್ನು ಉಂಟುಮಾಡುವುದು ಇದರ ಉದ್ದೇಶವಾಗಿದೆ.

ನಿರಂತರವಾಗಿ ಹಣದ ಹರಿವನ್ನು ಹೆಚ್ಚಿಸುವುದು ಅಭಿವೃದ್ಧಿಶೀಲ ಮತ್ತು ಪ್ರವರ್ಧಮಾನಕ್ಕೆ ಬರುತ್ತಿರುವ ರಾಷ್ಟ್ರಗಳ ಆರ್ಥಿಕತೆಗೆ ಪೂರಕವಾಗಿಲ್ಲ. ಹಾಗಾಗಿ, ಬ್ಯಾಂಕ್ ಕ್ರಮೇಣವಾಗಿ ಉದಾರ ನೀತಿಯ ದರವನ್ನು ಮಿತಗೊಳಿಸುವುದು. ಈ ಹಂತದಲ್ಲಿ ಬಾಂಡ್ ದರ ಕಡಿಮೆಯಾಗಿ, ಹಣದ ಹರಿವು ಇಳಿಮುಖವಾಗುವುದು. ಇದನ್ನು ‘ಉದಾರನೀತಿ ಇಳಿಕಾ ಹಂತ’ ಎನ್ನಲಾಗಿದೆ.  ಈ ಹಂತದ ನಂತರದ ಸ್ಥಿತಿಯನ್ನು ‘Taper Tantrum’ ಎನ್ನಲಾಗಿದೆ.

 

ಚಾಲ್ತಿ ಖಾತೆ ಎಂದರೇನು?

ಸಾಮಾನ್ಯವಾಗಿ ವಾರ್ಷಿಕ ಅಥವಾ ತ್ರೈ-ಮಾಸಿಕವಾಗಿ ಸರಕು & ಸೇವೆ, ಹೂಡಿಕೆಗಳ ಮೇಲಿನ ನಿವ್ವಳ ಆದಾಯವನ್ನು ಅಳೆಯುವುದು ಚಾಲ್ತಿ ಖಾತೆಯಾಗಿದೆ. ಮುಖ್ಯವಾಗಿ ಸರಕು & ಸೇವೆಗಳಲ್ಲಿನ ನಿವ್ವಳ ಆದಾಯ ಚಾಲ್ತಿ ಖಾತೆಯ ಪ್ರಮುಖ ಅಂಶವಾಗಿದೆ.

 

ಪ್ರಸ್ತುತತೆ

 1. ಇದು ದೇಶದ ಆರ್ಥಿಕ ಸ್ಥಿತಿಯ ಬಗ್ಗೆ ಅವಶ್ಯವಿರುವ ಮಾಹಿತಿಯನ್ನು ನೀಡುವುದು.
 2. ಇದು ವಿದೇಶಿ ವಿನಿಮಯ ದರದ ಒಳ ಹರಿವಿನ ಪ್ರಮಾಣ ಸ್ಥಿತಿಯನ್ನು ಸೂಚಿಸುತ್ತದೆ.
 3. ಚಾಲ್ತಿ ಖಾತೆಯ ಸಮತೋಲನತೆಯು ಅಮದುಗಿಂತ ಹೆಚ್ಚಾಗಿ ರಫ್ತಿಗೆ ಅನುರೂಪವಾಗಿದೆ.

tropical_storms

 

ಭಾರತದ ಚಾಲ್ತಿ ಖಾತೆಯ ಸ್ಥಿತಿಗತಿ

 1. ರಫ್ತಿಗಿಂತ ಆಮದು ಅಧಿಕವಾಗಿರುವುದರಿಂದ ಭಾರತದ ಚಾಲ್ತಿ ಖಾತೆ ಕೊರತೆಯನ್ನು ಅನುಭವಿಸುತ್ತಿದೆ.
 2. ಭಾರತ ಕಚ್ಚಾ ತೈಲ, ಚಿನ್ನ, ಎಲೆಕ್ಟ್ರಾನಿಕ್ ವಸ್ತುಗಳ ಅಮದುವಿನ ಮೇಲೆ ಅಧಿಕವಾಗಿ ಅವಲಂಬಿತವಾಗಿದೆ.
 3. ದೇಶಿಯ ಉತ್ಪಾದನೆಯ ಸೀಮಿತತೆ, ಭೂಮಿ ಮತ್ತು ಕಾರ್ಮಿಕ ಕಾನೂನು, ಬಂಡವಾಳ ವೆಚ್ಚದ ಆಧಿಕ್ಯ, ಅಧಿಕ ತೆರಿಗೆ ಚೀನಾದಿಂದ ಬರುವ ಅಗ್ಗದ ಆಮದುವಿನಿಂದಾಗಿ ಮಾರುಕಟ್ಟೆಯಲ್ಲಿ ಸ್ಪರ್ಧಾತ್ಮಕತೆ ಉಂಟಾಗಿದೆ.
 4. ಇದರಿಂದಾಗಿ, ನಾವು ಅಂತಾರಾಷ್ಟ್ರೀಯ ವ್ಯಾಪಾರದಲ್ಲಿ ಕೊರತೆಯನ್ನು ಅನುಭವಿಸುತ್ತಿದ್ದು, ಚಾಲ್ತಿ ಖಾತೆಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದೆ.

 

ಚಾಲ್ತಿ ಖಾತೆಯ ಹೆಚ್ಚುವರಿ ಸದಾ ಉತ್ತಮ ಸೂಚನೆಯಲ್ಲ, ಆಗ ?

 1. ಚಾಲ್ತಿ ಖಾತೆಯ ಹೆಚ್ಚುವರಿ ವಿದೇಶಿ ವಿನಿಮಯದಲ್ಲಿ ಏರಿಕೆಯಾದ ಒಳಹರಿವನ್ನು ಸೂಚಿಸುತ್ತದೆ.
 2. ಹೆಚ್ಚುವರಿಯನ್ನು ಅಂತರಾರಾಷ್ಟ್ರೀಯ ವ್ಯವಹಾರದಲ್ಲಿ ಹಣಕಾಸಿನ ಸ್ಥಿರತೆಯನ್ನು ಉಂಟುಮಾಡಲು ಬಳಸಿಕೊಳ್ಳಲಾಗುವುದು.

Sources: the Hindu.

 

ವಿಷಯ : ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ಭಾರತೀಯರ ಸಾಧನೆಗಳು, ದೇಶಿಯ ತಂತ್ರಜ್ಞಾನ, ನವ ತಂತ್ರಜ್ಞಾನದ ಅಭಿವೃದ್ಧಿ

ನಿರ್ಲವಣೀಕರಣದ ಸ್ಥಾವರ


ಸಂದರ್ಭ

ಮೇ ಮತ್ತು ಜೂನ್’ನಲ್ಲಿ ಮುಂಬೈ ಎದುರಿಸುತ್ತಿರುವ ನೀರಿನ ಕೊರತೆಯನ್ನು ನೀಗಿಸಲು ಪ್ರತಿದಿನ 200 ಮಿ.ಲೀ. ನೀರನ್ನುಸಂಸ್ಕರಿಸುವ ಅಗತ್ಯವಿದೆ. ಇದನ್ನು ನೀಗಿಸಲು ಉದ್ಬವ್ ಠಾಕ್ರೆ ಮುಂಬೈನ ಮೊದಲ ನಿರ್ಲವಣೀಕರಣದ ಸ್ಥಾವರದವನ್ನು ತೆರವುಗೊಳಿಸಿದ್ದಾರೆ.

 

ಸ್ವಿಸ್ಸ್ ಚಾಲೆಂಜ್ ಮಾದರಿ

ಬೃಹತ್ ಮುಂಬೈ ಮುನ್ಸಿಪಾಲ್ ಕಾರ್ಪೋರೇಶನ್ ಈ ಯೋಜನೆಗಾಗಿ ‘ಸ್ವಿಸ್ಸ್ ಚಾಲೆಂಜ್ ಮಾದರಿ’ಯನ್ನು ಅನುಸರಿಸುತ್ತಿದೆ.

 1. ಇದರಡಿಯಲ್ಲಿ, ಖಾಸಗಿ ವ್ಯಕ್ತಿಯ ಪ್ರಸ್ತಾವನೆಯ ಮೇರೆಗೆ ಯೋಜನೆಯ ಜವಾಬ್ದಾರಿಯನ್ನು ವಹಿಸಬಹುದಾಗಿದೆ.
 2. ಮೊದಲು ಅರ್ಜಿ ಸಲ್ಲಿಸಿದ ಖಾಸಗಿ ಸಂಸ್ಥೆಯನ್ನು ನೇರವಾಗಿ ಮಾತುಕತೆಗಾಗಿ ಸಂಪರ್ಕಿಸ ಬಹುದಾಗಿದೆ. ಇವರು ಅಂಗೀಕರಿಸದಿದ್ದರೆ ಇತರರನ್ನು ಅರ್ಜಿ ಸಲ್ಲಿಕಾ ಸರದಿ ಪ್ರಕಾರ ಅವಕಾಶ ನೀಡಲಾಗುವುದು.

 

ನಿರ್ಲವನೀಕರಣ ಕೇಂದ್ರಗಳೆಂದರೇನು?

 1. ಇವುಗಳು ಕುಡಿಯಲು ಯೋಗ್ಯವಲ್ಲದ ಲವಣಯುಕ್ತ ನೀರನ್ನು ಕುಡಿಯಲು ಯೋಗ್ಯ ನೀರಾಗಿ ಪರಿವರ್ತಿಸುತ್ತದೆ.
 2. ಇಲ್ಲಿ ಬಾಹ್ಯ ಒತ್ತಡದ ಮೂಲಕ ಹೆಚ್ಚು ಸಾಂದ್ರತೆಯ ಪ್ರದೇಶದಿಂದ ದ್ರಾವಕವನ್ನು ಕಡಿಮೆ ಸಾಂದ್ರತೆಯ ಪ್ರದೇಶದ ಕಡೆಗೆ ಚಲಿಸುವಂತೆ ಮಾಡಲಾಗುವುದು. ಈ ತಂತ್ರಜ್ಞಾನವನ್ನು ‘ರಿವರ್ಸ್ ಆಸ್ಮೋಸಿಸ್’ ಎನ್ನಲಾಗಿದೆ.
 3. ಈ ಸ್ಥಾವರಗಳನ್ನು ಸಮುದ್ರದ ನೀರಿಗೆ ಸಾಮಿಪ್ಯವಿರುವ ಪ್ರದೇಶಗಳಲ್ಲಿ ಸ್ಥಾಪಿಸಲಾಗುವುದು.

 

ಭಾರತದಲ್ಲಿ ಈ ತಂತ್ರಜ್ಞಾನದ ಬಳಕೆಯ ಸಾಮರ್ಥ್ಯ

 1. ಈ ತಂತ್ರಜ್ಞಾನವನ್ನು ಮಧ್ಯಪ್ರಾಚ್ಯದ ಶ್ರೀಮಂತ ದೇಶಗಳಿಗೆ ಸೀಮಿತವಾಗಿದೆ
 2. ಇತ್ತೀಚೆಗೆ US & ಆಸ್ಟ್ರೇಲಿಯಾದ ಕೆಲವು ಭಾಗಗಳಲ್ಲಿ ಬಳಸಲು ಪ್ರಾರಂಭಿಸಲಾಗಿದೆ.
 3. ಭಾರತದಲ್ಲಿ ಈ ತಂತ್ರಜ್ಞಾನವನ್ನು ಬಳಸುವಲ್ಲಿ ತಮಿಳುನಾಡು ಪ್ರವರ್ತಕನಾಗಿದೆ. ಚೆನ್ನೈ ಬಳಿ 2010 ಮತ್ತು 2013ರಲ್ಲಿ ಎರಡು ನಿರ್ಲವನೀಕರಣ ಘಟಕಗಳನ್ನು ಸ್ಥಾಪಿಸಿದೆ.
 4. ಗುಜರಾತ್ ಮತ್ತು ಆಂಧ್ರ ಪ್ರದೇಶ ಕೂಡ ಈ ನಿಟ್ಟಿನಲ್ಲಿ ಹೆಜ್ಜೆ ಹಿಡುತ್ತಿದೆ.

 

ಸವಾಲುಗಳು

 1. ಘಟಕದ ಸ್ಥಾಪನೆ ಅಧಿಕ ವೆಚ್ಚದಿಂದ ಕೂಡಿದೆ
 2. ಈ ಪ್ರಕ್ರಿಯೆಯ ಉಪಉತ್ಪನ್ನ ಅತ್ಯಧಿಕ ಲವಣಯುಕ್ತವಾಗಿದ್ದು ತ್ಯಾಜ್ಯ ವಿಲೇವಾರಿ ಸಮಸ್ಯೆ ಉಂಟುಮಾಡಿದೆ.

Sources: Indian Express.

 

ವಿಷಯ : ಮಾಹಿತಿ ತಂತ್ರಜ್ಞಾನ, ಬಾಹ್ಯಾಕಾಶ. ಕಂಪ್ಯೂಟರ್, ರೊಬೋಟಿಕ್ಸ್, ನ್ಯಾನೋ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ ವಲಯ ಕುರಿತು ಅರಿವು

ಇಸ್ರೋವಿನ ಶುಕ್ರಯಾನ


ಸಂದರ್ಭ

ಇಸ್ರೋ ಉದ್ದೇಶಿತ ಶುಕ್ರ ಕಕ್ಷಾಗಾಮಿ ಯೋಜನೆ (ಶುಕ್ರಯಾನ) ಅಡಿಯಲ್ಲಿ 20 ಬಾಹ್ಯಾಕಾಶ ಕೇಂದ್ರಿತ ಪ್ರಯೋಗಗಳ ಪ್ರಸ್ತಾಪವನ್ನು ಮಾಡಿದೆ.

 

ಶುಕ್ರಯಾನ್ ಕುರಿತು :

 1. ಇದು ನಾಲ್ಕು ವರ್ಷಗಳ ಕಾಲ ಶುಕ್ರವನ್ನು ಅಧ್ಯಯನ ಮಾಡುವುದಾಗಿದೆ.
 2. ವೈಜ್ಞಾನಿಕ ಉದ್ದೇಶ :
  1. ಮೇಲ್ಮೈ ಪ್ರಕ್ರಿಯೆಗಳ ಅಧ್ಯಯನ
  2. ಶುಕ್ರ ಗ್ರಹದ ಅಯಾನಗೋಳದೊಂದಿಗೆ ಸೌರ ಮಾರುತದ ಸಂವಹನ
  3. ಶುಕ್ರ ಗ್ರಹದ ವಾತಾವರಣ ರಚನೆ, ಸಂಯೋಜನೆ ಮತ್ತು ಇತರೆ ವಿದ್ಯಾಮಾನಗಳ ಅಧ್ಯಯನ
 3. ಈ ಉಪಗ್ರಹವನ್ನು GSLV-MK II ರಾಕೆಟ್’ನಲ್ಲಿ ಉಡಾಯಿಸಲು ಯೋಜಿಸಲಾಗಿದೆ.

ISRO_Shukrayaan

 

ಶುಕ್ರ ಗ್ರಹದ ಅಧ್ಯಯನದ ಉದ್ದೇಶ

 1. ಗಾತ್ರ, ದ್ರವ್ಯ ರಾಶಿ, ಸಾಂದ್ರತೆ, ಬೃಹತ್ ಸಂಯೋಜನೆ ಮತ್ತು ಗುರುತ್ವಾಕರ್ಷಣೆಯ ಸಾಮ್ಯತೆಯಿಂದಾಗಿ ಶುಕ್ರವನ್ನು ಸಾಮಾನ್ಯವಾಗಿ ಭೂಮಿಯ ‘ಅವಳಿ ಸಹೋದರಿ’ ಎನ್ನಲಾಗಿದೆ.
 2. ಎರಡು ಗ್ರಹಗಳು 4.5 ಶತಕೋಟಿ ವರ್ಷಗಳ ಹಿಂದೆ ಘನೀಕೃತವಾದ ನೀಹಾರಿಕೆಯಿಂದ ನಿರ್ಮಾಣವಾಗಿವೆ. ಅಲ್ಲದೆ, ಎರಡೂ ಗ್ರಹಗಳು ಏಕರೂಪದ ಸಂಯೋಜನೆ ಹೊಂದಿವೆ.
 3. ಭೂಮಿಗೆ ಹೋಲಿಸಿದರೆ ಶುಕ್ರ ಸೂರ್ಯನಿಗೆ ಶೇ 30ರಷ್ಟು ಹತ್ತಿರದಲ್ಲಿದೆ. ಇದರ ಪರಿಣಾಮವಾಗಿ ಹೆಚ್ಚಿನ ಸೌರ ಶಕ್ತಿಯನ್ನು ಪಡೆಯುತ್ತದೆ.

ISRO_Shukrayaan_1

 

Sources: Indian Express.

 

ವಿಷಯ : ಮಾಹಿತಿ ತಂತ್ರಜ್ಞಾನ, ಬಾಹ್ಯಾಕಾಶ. ಕಂಪ್ಯೂಟರ್, ರೊಬೋಟಿಕ್ಸ್, ನ್ಯಾನೋ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ ವಲಯ ಕುರಿತು

ಚಾಂಗ್’ಇ-5 ಪ್ರೋಬ್


ಸಂದರ್ಭ

ಇದು ಚೀನಾ ಇತ್ತೀಚಿಗೆ ಉಡಾಯಿಸಿದ ಮಾನವರಹಿತ ಬಾಹ್ಯಾಕಾಶ ನೌಕೆಯಾಗಿದೆ.

 

ಚಾಂಗ್’ಇ ಪ್ರೋಬ್ ಕುರಿತು

 1. ಇದಕ್ಕೆ ಚೀನಾದ ಪುರಾಣದಲ್ಲಿ ಬರುವ ಚಂದ್ರ ದೇವತೆಯ ಹೆಸರಿಡಲಾಗಿದೆ.
 2. ಈ ರಾಕೆಟ್ ನಾಲ್ಕು ಭಾಗಗಳನ್ನು ಒಳಗೊಂಡಿದೆ : ಆರ್ಬಿಟರ್, ರಿಟರ್ನರ್, ಆರೋಹಣ ಮತ್ತು ಲ್ಯಾಂಡರ್
 3. ಉದ್ದೇಶ : ಚಂದ್ರನಲ್ಲಿರುವ ಶಿಲೆಗಳನ್ನು ಮರಳಿ ತರುವುದು. ಕಳೆದ ನಾಲ್ಕು ದಶಕದಲ್ಲಿ ಶಿಲೆಯನ್ನು ಮರಳಿ ತರುವ ವಿಶ್ವದ ಮೊದಲ ಪ್ರಯತ್ನವಾಗಿದೆ.
 4. ಇದು ಯಶಸ್ವಿಯಾದರೆ 1960ರ ದಶಕ ಮತ್ತು 1970ರ ದಶಕದಲ್ಲಿ US & ಸೋವಿಯತ್ ಒಕ್ಕೂಟದ ನಂತರದ ಮೂರನೇ ಸ್ಥಾನ ಚೀನಾದಾಗುವುದು.
 5. ಇದು ವಿಜ್ಞಾನಿಗಳಿಗೆ ಚಂದ್ರನ ಮೇಲ್ಮೈಯಲ್ಲಿ ಮೂಲ, ರಚನೆ, ಜ್ವಾಲಾಮುಖಿ ಚಟುವಟಿಕೆಯ ಬಗ್ಗೆ ಅರಿಯಲು ಸಹಾಯವಾಗುವುದು.

 

ಮಾಹಿತಿ ಸಂಗ್ರಹಕ್ಕೆ ಗುರುತಿಸಲಾದ ತಾಣಗಳು

 1. ವಿಶಾಲವಾದ ಲಾವಾ ಮೇಲ್ಮೈಯನ್ನು ಹೊಂದಿರುವ ‘ಓಸಿಯನ್ ಆಫ್ ಸ್ಟ್ರೋಮ್ಸ್’ ನಿಂದ ಶಿಲೆಯನ್ನು ಮತ್ತು ಇತರೆ ಮಾಹಿತಿಯನ್ನು ಸಂಗ್ರಹಿಸಲಾಗುವುದು.
 2. ಇದು ಚೀನಾದ ಬಾಹ್ಯಾಕಾಶ ಇತಿಹಾಸದಲ್ಲಿ ನಾಲ್ಕು ‘ಪ್ರಥಮ’ಗಳನ್ನು ಸಾಧಿಸುವ ನಿರೀಕ್ಷೆಯಿದೆ.
  1. ಮೊದಲ ಬಾರಿಗೆ ಚಂದ್ರನ ಮೇಲ್ಮೈಯಿಂದ ಮಾಹಿತಿ ಪಡೆಯುತ್ತದೆ.
  2. ಮೊದಲ ಬಾರಿಗೆ ಚಂದ್ರನ ಮೇಲ್ಮೈಯಿಂದ ಮಾಹಿತಿ ಸಂಗ್ರಹವು ಸ್ವಯಂಚಾಲಿತಗೊಂಡಿದೆ
  3. ಮೊದಲ ಬಾರಿಗೆ ಚಂದ್ರನ ಕಕ್ಷೆಯಲ್ಲಿ ಮಾನವ ರಹಿತ ರೆಂಡೆಜ್ವಸ್ ಮತ್ತು ಡಾಕಿಂಗ್ ನಡೆಸಲಾಗುವುದು.
  4. ಮೊದಲ ಬಾರಿಗೆ ನಿರ್ಗಮನ ವೇಗದ ನೆಲೆಯಲ್ಲಿ ಚಂದ್ರನ ಮಣ್ಣನ್ನು ಭೂಮಿಗೆ ತರುವುದು

Sources: the Hindu.

 

ವಿಷಯ : ಸಂವಹನ ಜಾಲ, ಮಾಧ್ಯಮ ಮತ್ತು ಸಾಮಾಜಿಕ ಜಾಲ ತಾಣಗಳು ಆಂತರಿಕ ಭದ್ರತೆಗೆ ಒಡ್ಡುವ ಸವಾಲುಗಳು; ಸೈಬರ್ ಭದ್ರತೆಯ ಮೂಲಾಂಶಗಳು

ಪಂಗ್ಡಾ ಗ್ರಾಮ


ಸಂದರ್ಭ

ಇದು ಚೀನಾ ನಿರ್ಮಿಸಿದ ಹೊಸ ಗಡಿ ಗ್ರಾಮ. ಈ ಗ್ರಾಮವು ಚೀನಾ ಮತ್ತು ಭೂತಾನ್ ವಿವಾದಿತ ಭೂ-ಪ್ರದೇಶದಲ್ಲಿದೆ. ಈ ಪ್ರದೇಶವು ಡೋಕ್ಲಾಮ್ ಪ್ರಸ್ಥಭೂಮಿಯಲ್ಲಿರುವ ಭಾರತ-ಭೂತಾನ್-ಚೀನಾ ತ್ರಿ-ಸಂಗಮದ ಪೂರ್ವದಲ್ಲಿದೆ. ಇದು 2017ರಲ್ಲಿ 72 ದಿನಗಳ ನಿಲುಗಡೆಗೆ ಕಾರಣವಾಗಿದೆ.

 

ಇದೇ ರೀತಿಯ ಹಿಂದಿನ ನಿದರ್ಶನಗಳು

 1. ಈ ವರ್ಷದ ಜುಲೈನಲ್ಲಿ ಬೀಜಿಂಗ್ ಭೂತಾನ್ ಪೂರ್ವದಲ್ಲಿರುವ ಸಾಕ್ಟೆಂಗ್ ವನ್ಯಜೀವಿ ಅಭಯಾರಣ್ಯ ಚೀನಾಗೆ ಸೇರಿದೆ ಎಂದಿದೆ
 2. ಜಾಗತಿಕ ಪರಿಸರ ಮಂಡಳಿಯ (GEF) 58 ನೇ ಸಭೆಯಲ್ಲಿ ಚೀನಾ ಸಾಕ್ಟೆಂಗ್ ವನ್ಯಜೀವಿ ಅಭಯಾರಣ್ಯದಲ್ಲಿನ ಯೋಜನೆಗೆ ಮಾಡಿದ ಧನಸಹಾಯವನ್ನು ವಿರೋಧಿಸಿ, ಇದು ವಿವಾದಿತ ಸ್ಥಳವೆಂದಿತು.

focal_point

 

ದೊಕ್ಲಾಮ್’ನಲ್ಲಿ ಏನಾಯಿತು?

ಭಾರತದೊಂದಿಗೆ ಗಡಿ ಭದ್ರತಾ ಒಪ್ಪಂದ ಹೊಂದಿರುವ ಭೂತಾನ್’ಗೆ ಸೇರಿದ ದೊಕ್ಲಾಮ್’ನಲ್ಲಿ ಉಭಯ ರಾಷ್ಟ್ರಗಳು  ಮುಖಾಮುಖಿಯಾದವು.

ದೊಕ್ಲಾಮ್ ಭಾಗವು ಭಾರತದ ಈಶಾನ್ಯ ಭಾಗವನ್ನು ಸಂಪರ್ಕಿಸುವ ಸಿಲ್ಲಿಗುಡಿ ಹೆದ್ದಾರಿಗೆ ಸಾಮಿಪ್ಯವನ್ನು ಹೊಂದಿದೆ. ಈ ಹೆದ್ದಾರಿಯ ಮೇಲೆ ಹಿಡಿತವನ್ನು ಸಾಧಿಸುವ ಉದ್ದೆಶ ಹೊಂದಿದೆ.

jampheri_ridge

Sources: the Hindu.

 


ಪೂರ್ವಭಾವಿ ಪರೀಕ್ಷಾ ಕೇಂದ್ರಿತ


ಅಭಯಂ ಅನ್ವಯಿಕ (Abhayam app)

 1. ಆಂಧ್ರಪ್ರದೇಶ ಸರ್ಕಾರವು ‘ಅಭಯಂ’ ಅಪ್ಲಿಕೇಶನ್ ಪ್ರಾರಂಭಿಸಿದೆ.
 2. ಇದು ಟ್ಯಾಕ್ಸಿ, ಆಟೋರಿಕ್ಷಾ ಗಳಲ್ಲಿ ಪ್ರಯಾಣಿಸುವ ಮಹಿಳೆಯರು ಮತ್ತು ಮಕ್ಕಳಿಗೆ ತುರ್ತು ಸಂದರ್ಭದಲ್ಲಿ ಸಹಾಯ ಆಶಿಸಲು ಪೂರಕವಾಗಿದೆ.
 3. ಸಾರಿಗೆ ಇಲಾಖೆಯಿಂದ ನಿರ್ವಹಿಸಲ್ಪಡುವುದು.
 4. ಮಹಿಳೆಯರು ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಪ್ಯಾನಿಕ್ ಬಟನ್ ಮೂಲಕ ಪೋಲಿಸರನ್ನು ಎಚ್ಚರಿಸಬಹುದಾಗಿದೆ.

ರಾಷ್ಟ್ರೀಯ ಬಿಕ್ಕಟ್ಟು ನಿರ್ವಹಣಾ ಸಮಿತಿ (National Crisis Management Committee)

 1. ನೈಸರ್ಗಿಕ ವಿಪತ್ತುಗಳ ಸಂದರ್ಭದಲ್ಲಿ ಪರಿಹಾರ ಕ್ರಮಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಭಾರತ ಸರ್ಕಾರ ಈ ಸಮಿತಿಯನ್ನು ರಚಿಸಿದೆ.
 2. ಸಂಸದೀಯ ಕಾರ್ಯದರ್ಶಿ ಇದರ ಅಧ್ಯಕ್ಷರು
 3. ಇತರ ಸದಸ್ಯರು : ಸಂಬಂಧಪಟ್ಟ ಎಲ್ಲಾ ಸಚಿವಾಲಯಗಳ/ಇಲಾಖೆಗಳ ಮತ್ತು ಸಂಸ್ಥೆಗಳ ಕಾರ್ಯದರ್ಶಿಗಳು ಈ ಸಮಿತಿಯ ಸದಸ್ಯರು
 4. ಈ ಸಮಿತಿ ಅಗತ್ಯವಿದ್ದಾಗ ಬಿಕ್ಕಟ್ಟು ನಿರ್ವಹಣಾ ಸಂಘಕ್ಕೆ ನಿರ್ದೇಶನ ನೀಡುತ್ತದೆ.

ಅಟಲ್ ಶಿಕ್ಷಕ ಅಭಿವೃದ್ಧಿ ಯೋಜನೆ (FDP’s)

 1. 46 ಅಂತರ್ಜಾಲಾಧಾರಿತ (Online) AICTE ತರಬೇತಿ & ಕಲಿಕೆ (ATAL) ಅಕಾಡೆಮಿ ಶಿಕ್ಷಕ ಅಭಿವೃದ್ಧಿ ಯೋಜನೆಗಳು (FDP’s)
 2. ಉದ್ದೇಶ
  1. ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿಗೆ (AICTE) ಸಂಬಂಧಿಸಿದ ಉನ್ನತ ಶಿಕ್ಷಣ ಸಂಸ್ಥೆಗಳ ಶಿಕ್ಷಕರಿಗೆ ಉದಯೋನ್ಮುಕ ಕ್ಷೇತ್ರದಲ್ಲಿ ತರಬೇತಿ ನೀಡಲಾಗುವುದು.
  2. ದೇಶದಲ್ಲಿ ಗುಣಮಟ್ಟದ ತಾಂತ್ರಿಕ ಶಿಕ್ಷಣವನ್ನು ನೀಡುವುದು
  3. ವಿವಿಧ ಉದಯೋನ್ಮುಖ ಕ್ಷೇತ್ರಗಳಲ್ಲಿ ತರಬೇತಿಯ ಮೂಲಕ ಸಂಶೋಧನೆ ಮತ್ತು ಉದ್ಯಮಶೀಲತೆಯನ್ನು ಉತ್ತೇಜಿಸುವುದು
  4. ಅಟಲ್ ಎಫ್.ಡಿ.ಪಿ ಗಳನ್ನು ಐಐಟಿ, ಐಐಐಟಿ, ಎನ್‌ಐಟಿ & ಸಂಶೋಧನಾ ಪ್ರಯೋಗಾಲಯಗಳು ಅಯೋಗಿಸುತ್ತಿವೆ
 3. ಎಫ್ಡಿಪಿ ಅಡಿಯಲ್ಲಿ 1000 ಯೋಜನೆಗಳ ಮೂಲಕ 1 ಲಕ್ಷಕ್ಕೂ ಅಧಿಕ ಜನರಿಗೆ ತರಬೇತಿ ನೀಡುವುದು – ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್ ನಲ್ಲಿ ವಿಶ್ವ ದಾಖಲೆಯಾಗಿದೆ

15ನೇ ಜಿ20 ಸಮಾವೇಶ

 1. ಸೌದಿ ಅರೇಬಿಯಾ ಸಂಪರ್ಕ ರಹಿತವಾಗಿ (ವರ್ಚುವಲ್) ಕರೆದಿದೆ
 2. ನ್ಯಾಯಕತ್ವದ ಘೋಷಣೆಯನ್ನು ಅಂಗೀಕರಿಸಿ ಮತ್ತು ಸೌದಿ ಅರೇಬಿಯಾ ಅಧ್ಯಕ್ಷ ಸ್ಥಾನವನ್ನು ಇಟಲಿಗೆ ವರ್ಗಾಯಿಸುವುದರೊಂದಿಗೆ ಸಭೆಯು ಅಂತ್ಯಗೊಂಡಿತು.
 3. 2023ರ ಶೃಂಗಸಭೆಯನ್ನು ಭಾರತ ಆಯೋಜಿಸುತ್ತದೆ ಎಂದು ಘೋಷಿಸಲಾಯಿತು – ಮೊದಲೇ ನಿರ್ಧರಿಸಿದ್ದಕ್ಕಿಂತ ಒಂದು ವರ್ಷದ ನಂತರ
 4. ಕಳೆದ ವರ್ಷ ಜಿ20 ರ ‘ಒಸಾಕಾ ಘೋಷಣೆ’ಯೊಂದಿಗೆ ಭಾರತವು 2022 ರಲ್ಲಿ ಶೃಂಗಸಭೆಯನ್ನು ಆಯೋಜಿಸಲು ನಿರ್ಧರಿಸಲಾಗಿತ್ತು , “ನಾವು 2020ರಲ್ಲಿ ಸೌದಿ ಅರೇಬಿಯಾ, 2021ರಲ್ಲಿ ಇಟಲಿ ಮತ್ತು 2022ರಲ್ಲಿ ಭಾರತದಲ್ಲಿ ಭೇಟಿಯಾಗಲು ಎದುರು ನೋಡುತ್ತಿದ್ದೇವೆ” ಎನ್ನಲಾಗಿತ್ತು.

 


ದಿನಕ್ಕೊಂದು ವಿಷಯ


ವಿದ್ಯುತ್ ಕಾಂತಿಯ ಅಲೆಗಳು

ಮೂಲಾಂಶಗಳು

electromagnetic_spectrum

 1. ಮೇಲಿನ ರೇಖಾಚಿತ್ರದಲ್ಲಿ ಎಡದಿಂದ ಬಲಕ್ಕೆ ಹೊಂದಂತೆಲ್ಲಾ
  1. ಅಲೆಗಳು ಕಿರಿದಾಗುವವು
  2. ಶಕ್ತಿ ಹೆಚ್ಚಾಗುವುದು

ಬೆಳಕು

ಲಕ್ಷಣಗಳು

 1. ವಿದ್ಯುತ್ ಕಾಂತೀಯ ಅಲೆಗಳು
 2. ಇದು ನೇರವಾಗಿ (ಸರಳ ರೇಖೆಯಲ್ಲಿ) ~3 ಲಕ್ಷ ಕಿ.ಮೀ/ಸೆ ವೇಗದಲ್ಲಿ ಚಲಿಸುವುದು
 3. ಇದು ನಿರ್ವಾತ (Vaccum) ದಲ್ಲಿಯೂ ಚಲಿಸಬಹುದು
 4. ಬೆಳಕಿನ ವೇಗವು ಒಂದು ಮಾಧ್ಯಮದಿಂದ ಮತ್ತೊಂದು ಮಾಧ್ಯಮಕ್ಕೆ ಚಲಿಸಿದಾಗ ಬದಲಾಗುವುದು. ಆದರೆ, ಆವರ್ತನೆ (Freqency) ಬದಲಾಗುವುದಿಲ್ಲ
 5. ಕನ್ನಡಿ, ಲೋಹದಂತಹ ನುಣುಪಾದ ಮೇಲ್ಮೈಯಿಂದ ಬೆಳಕು ಪ್ರತಿಫಲನಹೊಂದುವುದು

ಅನ್ವಯಿಕತೆ

 1. ಸಂಪೂರ್ಣ ಆಂತರಿಕ ಪ್ರತಿಫಲನ (Total Internal Reflection)
  1. ದ್ಯುತಿ ತಂತು (Optical Fiber) ಸಂವಹನ
  2. ಮರುಭೂಮಿಯ ಬಿಸಿಲುಗುದುರೆ
  3. ವಜ್ರ ಹೊಳೆಯುವ ಪರಿ
  4. ಬೈಸಿಕಲ್ ಹಿಂದಿರುವ ಪ್ರತಿಫಲಕ
 2. ಬೆಳಕಿನ ವ್ಯತಿಕರಣ (Dispersion)
  1. ಸಾಬೂನಿನ ನೊರೆಯ ಮೇಲೆ ಬೆಳಕು ಬಿದ್ದಾಗ ವರ್ಣಗಳು ಕಾಣುವುದು
  2. ರಸ್ತೆಯ ಮೇಲೆ ಪೆಟ್ರೋಲ್ ಚಲ್ಲಿದಾಗ ವರ್ಣಗಳು ಕಾಣುವುದು
  3. ಕಾಮನಬಿಲ್ಲು ಮೂಡುವುದು
 3. ಬೆಳಕಿನ ವಿವರ್ತನೆ (Scatering)
  1. ಸೂರ್ಯೋದಯ ಮತ್ತು ಸೂರ್ಯಾಸ್ತಮಾನದ ಸಮಯದಲ್ಲಿ ಕೆಂಪಾಗಿ ಕಾಣುವುದು
  2. ಮಧ್ಯಾನ ಆಗಸ ಬಿಳಿಯಾಗಿ ಕಾಣುವುದು
 4. ಬೆಳಕಿನ ವಕ್ರೀಭವನ (Refraction)
  1. ಮಸೂರಗಳಲ್ಲಿ (Lens) ಬಳಕೆ
  2. ಕ್ಯಾಮೆರಾ ಮತ್ತು ದೂರದರ್ಶಕದಲ್ಲಿ
  3. ನೀರಿರುವ ಲೋಟದ ತಳ ಭಾಗ ಮೇಲೆ ಬಂದಂತೆ ಭಾಸವಗಲು ಇತ್ಯಾದಿ

 • Join our Official Telegram Channel HERE for Motivation and Fast Updates
 • Subscribe to our YouTube Channel HERE to watch Motivational and New analysis videos